![kambala2](https://www.udayavani.com/wp-content/uploads/2025/02/kambala2-1-415x249.jpg)
![kambala2](https://www.udayavani.com/wp-content/uploads/2025/02/kambala2-1-415x249.jpg)
Team Udayavani, Jan 29, 2025, 10:52 AM IST
ಬೆಂಗಳೂರು: ಸಿಸಿಬಿ, ಸಂಘಟಿತ ಅಪರಾಧ ದಳದಿಂದ ಕಳೆದ 15 ದಿನಗಳಿಂದ, ಮುಂಜಾನೆ ವೇಳೆಯಲ್ಲಿ ಬೆಂಗಳೂರಿನ ಪೂರ್ವ, ಈಶಾನ್ಯ, ಆಗ್ನೇಯ ಮತ್ತು ವೈಟ್‌ಫೀಲ್ಡ್ ವಿಭಾಗಗಳಲ್ಲಿನ ರೌಡಿ ವ್ಯಕ್ತಿಗಳ ಮನೆಗಳ ಮೇಲೆ ದಾಳಿ ಮಾಡಿದೆ. ಒಟ್ಟು 75 ರೌಡಿ ವ್ಯಕ್ತಿಗಳ ಮನೆಗಳನ್ನು ಶೋಧನೆ ಮಾಡಿ 7 ರೌಡಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗಿದೆ.
ರೌಡಿ ವ್ಯಕ್ತಿಗಳ ಮನೆಗಳನ್ನು ಶೋಧನೆ ಮಾಡಿದ ಸಮಯದಲ್ಲಿ ಪೂರ್ವ ವಿಭಾಗದ ಡಿ.ಜೆ ಹಳ್ಳಿ ರೌಡಿ ವ್ಯಕ್ತಿಯೊರ್ವನಿಗೆ ಗಡಿ ಪಾರು ಆದೇಶವಾಗಿರುತ್ತದೆ. ಈ ಗಡಿಪಾರು ಅದೇಶದಂತೆ ಆಂಧ್ರಪ್ರದೇಶದ ಹಿಂದೂ ಪುರದಲ್ಲಿರದೆ, ಗಡಿ ಪಾರು ಆದೇಶವನ್ನು ಉಲ್ಲಂಘನೆ ಮಾಡಿ, ಡಿ.ಜೆ ಹಳ್ಳಿಯಲ್ಲಿರುವ ತನ್ನ ಸ್ವಂತ ಮನೆಯಲ್ಲಿ ವಾಸವಾಗಿರುವುದು ಪತ್ತೆಯಾಗಿತ್ತು.
ಡಿಜೆ ಹಳ್ಳಿ, ಗಿರಿನಗರ, ಕೊಡಿಗೇಹಳ್ಳಿ, ಯಲಹಂಕ ನ್ಯೂಟೌನ್, ವಿಲ್ಸನ್ ಗಾರ್ಡನ್, ಅನ್ನಪೂರ್ಣೇಶ್ವರಿ ನಗರದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿ ಕೊಂಡಿದ್ದ ಹಾಗೂ ಶಾಂತಿ,ನೆಮ್ಮದಿಗೆ ಭಂಗ ಉಂಟು ಮಾಡುತ್ತಿದ್ದವರನ್ನು ವಶಕ್ಕೆ ಪಡೆದು ಕಾನೂನು ಕ್ರಮಕೈಗೊಳ್ಳಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.