ಹುಕ್ಕಾಬಾರ್‌ಗಳ ಮೇಲೆ ಸಿಸಿಬಿ ದಾಳಿ: 9 ಮಂದಿ ಬಂಧನ

Team Udayavani, Oct 14, 2018, 12:36 PM IST

hukka-bar2.jpg

ಬೆಂಗಳೂರು: ನಗರದ ವಿವಿಧ ಭಾಗಗಳಲ್ಲಿ ಕಾನೂನು ಬಾಹಿರಾಗಿ ನಡೆಸಲಾಗುತ್ತಿದ್ದ 7 ಹುಕ್ಕಾ ಬಾರ್‌ ಗಳ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು 9 ಮಂದಿಯನ್ನು ಬಂಧಿಸಿ 73,870 ರೂ. ಗಳನ್ನು ವಶಪಡಿಸಿಕೊಂಡಿದ್ದಾರೆ.

ಸಕ್ಷಮ ಪ್ರಾಧಿಕಾರಗಳಿಂದ ಲೈಸೆನ್ಸ್‌ ಪಡೆಯದೆ, ನಿಯಮಾವಳಿಗಳನ್ನು ಉಲ್ಲಂ ಸಿ ಕಾಲೇಜು ವಿದ್ಯಾರ್ಥಿಗಳಿಗೆ ಹುಕ್ಕಾ ಸೇವೆನೆಗೆ ಅವಕಾಶ ಮಾಡಿಕೊಟ್ಟಿದ್ದ ಮಾಹಿತಿ ಮೇರೆಗೆ ಹುಕ್ಕಾ ಬಾರ್‌ಗಳ ಮೇಲೆ ಸಿಸಿಬಿಯ ವಿಶೇಷ ತಂಡಗಳು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ಕಬ್ಬನ್‌ಪಾರ್ಕ್‌ನ ಅಲ್ಲಾವುದೀನ್‌ ಕೆಫೆ ಮೇಲೆ ದಾಳಿ ನಡೆಸಿ ಮಾಲೀಕರಾದ ನೂರುವುಲ್ಲಾ ಸದ್ದಾಂ ಮತ್ತು ಮೊಹಮ್ಮದ್‌ ಕೋನೆನ್‌ರನ್ನು ಬಂಧಿಸಿದ್ದು, 1830 ರೂ. ನಗದು 3ಹುಕ್ಕಾ ಪೈಪ್‌ 3 ಹುಕ್ಕಾ ಸ್ಟಾಂಡ್‌ಗಳು, ಅದೇ ರೀತಿ ಅಜರ್‌ ಕೆಫೆಯಲ್ಲಿ ಹಸನ್‌ ಹಾಗೂ ಅಶ್ರಪ್‌ ಎಂಬುವವರನ್ನು ಬಂಧಿಸಿ 50,890 ರೂ. ಹಣ ಹಾಗೂ ಹುಕ್ಕಾ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕೋರಮಂಗಲದ ಅರೇಬಿಸಿ ಕ್ಯೂ ಕೆಫೆ ಹುಕ್ಕಾ ಬಾರ್‌ನ ದಾಳಿಯ ವೇಳೆ ಮ್ಯಾನೇಜರ್‌ ಅರುಣ್‌ ಎಂಬಾತನನ್ನು ಬಂಧಿಸಿ 19,500 ರೂ, 23 ಹುಕ್ಕಾ ಪಾಟ್‌, 29 ಪ್ಲೇವರ್‌, 500 ಫಿಲ್ಟರ್, 15 ಹುಕ್ಕಾ ಪೈಪ್‌ಗ್ಳನ್ನು ವಶಪಡಿಸಿಕೊಂಡಿದ್ದಾರೆ. ಕೋರಮಂಗಲ ಠಾಣಾ ವ್ಯಾಪ್ತಿಯ ಎನ್‌ಟ್ರೋಪಿ ಕೆಫೆ ಸಿಬ್ಬಂದಿ ಸರ್ಜಯ್‌ ಸರ್ಕಾರ್‌ ಬಂಧನ 1,650, ರೂ. ಹಣ 7 ಹುಕ್ಕಾ ಪಾಟ್‌, 04 ಪ್ಲೇವರ್‌ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅದೇ ರೀತಿ ಸುಬ್ರಮಣ್ಯನಗರದ ಐ ಅಲ್ಟ್ರಾ ಲಾಂಚ್‌ನ ಸಿಬ್ಬಂದಿ ಪ್ರಶಾಂತ್‌ ನಂದ ಬಂಧನ ಹಾಗೂ ಹುಕ್ಕಾ ಪರಿಕರಗಳ ಜಪ್ತಿ, ಎಚ್‌ಎಸ್‌ಆರ್‌ ಲೇಔಟ್‌ನ ಕೆನೋಪಿ ಫ್ಲೇವರ್‌ ದಾಳಿಯಲ್ಲಿ ವಿನಯ್‌ ಎಂಬಾತನನ್ನು ಬಂಧಿಸಿ 5,200 ರೂ ಹಾಗೂ ಹುಕ್ಕಾ ಪರಿಕರಗಳು, ಬಾಣಸವಾಡಿಯ 18 ಐಸ್‌ ಕೆಫೆಯ ದಾಳಿಯಲ್ಲಿ ಕೆಫೆಯ ಮಾಲೀಕರಾದ ಕಾರ್ತಿಕ್‌ನನ್ನು ಬಂಧಿಸಿ 4 ಹುಕ್ಕಾ ಪಾಟ್‌ ಮತ್ತು 4 ಫ್ಲೇವರ್‌ ವಶಕ್ಕೆ ಪಡೆಯಲಾಗಿದೆ. ಆಯಾ ವಿಭಾಗದ  ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ಟಾಪ್ ನ್ಯೂಸ್

Chikkamagaluru: ಹಣ ಪಡೆದ ಆರೋಪ… ಪ್ರಾಂಶುಪಾಲ, ಪ್ರಥಮ ದರ್ಜೆ ಸಹಾಯಕ ಲೋಕಾಯುಕ್ತ ಬಲೆಗೆ

Chikkamagaluru: ಹಣ ಪಡೆದ ಆರೋಪ… ಪ್ರಾಂಶುಪಾಲ, ಪ್ರಥಮ ದರ್ಜೆ ಸಹಾಯಕ ಲೋಕಾಯುಕ್ತ ಬಲೆಗೆ

1-darshan

Darshan ಭೇಟಿಗೆ ಮಾಹಿತಿ‌ ಇಲ್ಲದೇ ಮತ್ತೊಮ್ಮೆ ಜೈಲಿಗೆ ಬಂದ ವಕೀಲರು

MUDA Case: ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ತನಿಖೆಗೆ ವಿಶೇಷ ಕೋರ್ಟ್‌ ಆದೇಶ

MUDA Case: ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ತನಿಖೆಗೆ ವಿಶೇಷ ಕೋರ್ಟ್‌ ಆದೇಶ

8-uv-fusion

School Memories: ತರಗತಿಯಲ್ಲಿ ಉಪ್ಪುಖಾರ

Veer Savarkar ಚಿತ್ರ ಆಸ್ಕರ್‌ ಗೆ ಸಲ್ಲಿಕೆಯಾಗಿದೆಯೇ? ಫಿಲ್ಮ್ ಫೆಡರೇಶನ್‌ ಹೇಳಿದ್ದೇನು…

Veer Savarkar ಚಿತ್ರ ಆಸ್ಕರ್‌ ಗೆ ಸಲ್ಲಿಕೆಯಾಗಿದೆಯೇ? ಫಿಲ್ಮ್ ಫೆಡರೇಶನ್‌ ಹೇಳಿದ್ದೇನು…

High court: ಕಲಿಯುಗ ಬಂದಂತೆ ತೋರುತ್ತಿದೆ…ವೃದ್ಧ ದಂಪತಿಯ ಜೀವನಾಂಶ ಕಾನೂನು ಹೋರಾಟ!

High court: ಕಲಿಯುಗ ಬಂದಂತೆ ತೋರುತ್ತಿದೆ…ವೃದ್ಧ ದಂಪತಿಯ ಜೀವನಾಂಶ ಕಾನೂನು ಹೋರಾಟ!

6-belthanagdy

ಬೆಳ್ತಂಗಡಿ:ಅತ್ಯುತ್ತಮ ಸಾಹಸಿಕ ಪ್ರವಾಸಿ ತಾಣ ‘ಕುತ್ಲೂರು ಗ್ರಾಮ’ ರಾಷ್ಟ್ರಪ್ರಶಸ್ತಿಗೆ ಆಯ್ಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6

Bengaluru: ಬಾಲಕ ಸಾವು; ನಾಲ್ವರು ಎಂಜಿನಿಯರ್‌ ಅಮಾನತು

5

Arrested: ಪ್ರೇಯಸಿಗಾಗಿ ಬಾಲ್ಯ ಗೆಳೆಯನ ಕೊಂದಿದ್ದ ಉಡುಪಿ ಮೂಲದ ಆರೋಪಿ ಸೆರೆ

Mahalakshmi Case: ಮಹಿಳೆಯ ತಲೆ ಬೇರ್ಪಡಿಸಿ ಬಳಿಕ ಇತರೆ ಭಾಗಗಳು ತುಂಡು ತುಂಡು!

Mahalakshmi Case: ಮಹಿಳೆಯ ತಲೆ ಬೇರ್ಪಡಿಸಿ ಬಳಿಕ ಇತರೆ ಭಾಗಗಳು ತುಂಡು ತುಂಡು!

3

Crime: ಬುಲೆಟ್‌ ಖರೀದಿಸಲು ಸಾಧ್ಯವಾಗದ್ದಕ್ಕೆ ಹತಾಶೆ; 3 ಬೈಕ್‌ಗಳಿಗೆ ಬೆಂಕಿ ಹಚ್ಚಿದವ ಸೆರೆ

Lokayukta: 62 ಅಬಕಾರಿ ಕಚೇರಿಗಳ ಮೇಲೆ ಲೋಕಾ ದಾಳಿ

Lokayukta: 62 ಅಬಕಾರಿ ಕಚೇರಿಗಳ ಮೇಲೆ ಲೋಕಾ ದಾಳಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Chikkamagaluru: ಹಣ ಪಡೆದ ಆರೋಪ… ಪ್ರಾಂಶುಪಾಲ, ಪ್ರಥಮ ದರ್ಜೆ ಸಹಾಯಕ ಲೋಕಾಯುಕ್ತ ಬಲೆಗೆ

Chikkamagaluru: ಹಣ ಪಡೆದ ಆರೋಪ… ಪ್ರಾಂಶುಪಾಲ, ಪ್ರಥಮ ದರ್ಜೆ ಸಹಾಯಕ ಲೋಕಾಯುಕ್ತ ಬಲೆಗೆ

1-darshan

Darshan ಭೇಟಿಗೆ ಮಾಹಿತಿ‌ ಇಲ್ಲದೇ ಮತ್ತೊಮ್ಮೆ ಜೈಲಿಗೆ ಬಂದ ವಕೀಲರು

9-koratagere

Koratagere: ನರೇಗಾ ಕಾಮಗಾರಿ ಹಣ ದುರುಪಯೋಗ, ಗ್ರಾ.ಪಂ. ಪಿಡಿಓ ಅಮಾನತು

karajola

Siddaramaiah ಭಂಡತನದನದಿಂದ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ: ಗೋವಿಂದ ಕಾರಜೋಳ

MUDA Case: ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ತನಿಖೆಗೆ ವಿಶೇಷ ಕೋರ್ಟ್‌ ಆದೇಶ

MUDA Case: ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ತನಿಖೆಗೆ ವಿಶೇಷ ಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.