ಲೈವ್ ಬ್ಯಾಂಡ್ ಮೇಲೆ ಸಿಸಿಬಿ ದಾಳಿ
Team Udayavani, Sep 30, 2018, 12:29 PM IST
ಬೆಂಗಳೂರು: ಕಾನೂನು ನಿಯಮಾವಳಿಗಳನ್ನು ಗಾಳಿಗೆ ತೂರಿ ಬಾರ್ ಡ್ಯಾನ್ಸ್‌ರ್‌ಗಳಿಂದ ಅಶ್ಲೀಲ ನೃತ್ಯ ಮಾಡಿಸುತ್ತಿದ್ದ ನಗರದ ಲೈವ್‌ಬ್ಯಾಂಡ್ ಮತ್ತು ಡ್ಯಾನ್ಸ್ ಬಾರ್‌ಗಳ ಮಾಲೀಕರಿಗೆ ಸಿಸಿಬಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಹಾಗೂ ಡಿಸಿಪಿ ಗಿರೀಶ್ ನೇತೃತ್ವದಲ್ಲಿ ವಿಶೇಷ ತಂಡಗಳು ಶನಿವಾರ ರಾತ್ರಿ ರೆಸಿಡೆನ್ಸಿ ರಸ್ತೆಯಲ್ಲಿರುವ ಮೆಹಂದಿ ಬಾರ್, ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ಲೇಸ್ ಬಾರ್, ಇಂದಿರಾನಗರದ ಲಾಪ್c 38 ಹೆಸರಿನ ಡ್ಯಾನ್ಸ್ ಬಾರ್ ಹಾಗೂ ವೇಪರ್ ಬಾರ್ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ಮಾನವ ಕಳ್ಳಸಾಗಾಣಿಕೆ ಮೂಲಕ ಕರೆತಂದಿದ್ದ ಮಹಿಳೆಯರನ್ನು ರಕ್ಷಿಸಿದ್ದಾರೆ.
ಕಾನೂನು ಬಾಹಿರ ಕೆಲಸಗಳಿಗೆ ನೇಮಕ ಮಾಡಿಕೊಂಡಿದ್ದ ನೇಪಾಳ ಮೂಲದ ಯುವತಿ ಸೇರಿ 39 ಮಹಿಳೆಯರನ್ನು ಕಾರ್ಯಾಚರಣೆ ವೇಳೆ ರಕ್ಷಿಸಲಾಗಿದ್ದು, ಎಲ್ಲರನ್ನೂ ಬಿಡುಗಡೆಗೊಳಿಸಲಾಗಿದೆ. ಜತೆಗೆ, ಡಿಸ್ಕೋ ಜಾಕಿಗಳು ಸೇರಿದಂತೆ 11 ಜನರನ್ನು ಬಂಧಿಸಿದ್ದು, 8 ಲಕ್ಷ ರೂ. ನಗದು, ನೋಟು ಎಣಿಸುವ ಯಂತ್ರಗಳು, ಕಾಂರ್ಡ್ ಸ್ವೆ„ಪಿಂಗ್ ಮಷೀನ್, ಸಂಗೀತ ಪರಿಕರಗಳನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.
ನಾಲ್ಕು ಬಾರ್‌ಗಳಲ್ಲಿ ನಡೆದ ಕಾರ್ಯಚರಣೆ ಸಂಬಂಧ ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಜತೆಗೆ, ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳು: ಕಾರ್ಯಾಚರಣೆ ವೇಳೆ ಇಂದಿರಾನಗರದ 100 ಅಡಿ ರಸ್ತೆಯಲ್ಲಿರುವ “ಲಾಪ್c 38′ ಹೆಸರಿನ ಡ್ಯಾನ್ಸ್ ಬಾರ್‌ನ ಮ್ಯಾನೇಜರ್‌ಗಳಾದ ಅಸ್ಮಿತ್ ಶೆಟ್ಟಿ, ಜಯಕುಮಾರ್ ಮತ್ತು ಡಿ.ಜೆಗಳಾದ ಪಾಸ್ಕಲ್ ಲೆಫc ಮತ್ತು ಜಾಲ್ ಎಂಬುವರನ್ನು ಬಂಧಿಸಲಾಗಿದೆ.
ಹಾಗೇ, ವೇಪರ್ಸ್ ಡ್ಯಾನ್ಸ್ ಬಾರ್‌ನ ಮ್ಯಾನೇಜರ್‌ಗಳಾದ ನವೀನ್ ಕುಮಾರ್, ದಿಲೀಪ್ ಸಾಹು ಮತ್ತು ಸಂಜಯ್ ಎಂಬುವರನ್ನು ಬಂಧಿಸಿದ್ದು, ಮಾಲೀಕ ಅಕ್ಷತ್ ಪ್ರಸಾದ್ ತಲೆ ಮರೆಸಿಕೊಂಡಿದ್ದಾರೆ. ಮೆಹಂದಿ ಬಾರ್‌ನ ಬೌನ್ಸರ್‌ಗಳಾದ ಸೂರಜ್, ಅರ್ಜುನ್, ಸಂತೋಷ್ ಶೆಟ್ಟಿ ಸೇರಿದಂತೆ 6 ಜನರನ್ನು ದಾಳಿ ವೇಳೆ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ಸಂದರ್ಭದಲ್ಲಿ ಬಾರ್‌ನಲ್ಲಿ ಕೆಲಸಕ್ಕಿದ್ದ 9 ಮಹಿಳೆಯರನ್ನು ರಕ್ಷಿಸಲಾಗಿದೆ.
ಜತೆಗೆ 2.09 ಲಕ್ಷ ರೂ. ನಗದು, 150 ಟೋಕನ್‌ಗಳು, 6 ಡಿವಿಆರ್, ಕಾರ್ಡ್ ಸ್ವೆ„ಪಿಂಗ್ ಮಷೀನ್ ಮತ್ತು ಸಂಗೀತ ಪರಿಕರಗಳನ್ನು ಜಪ್ತಿ ಮಾಡಲಾಗಿದೆ. ಅದೇ ರೀತಿ ಲೇಸ್ ಬಾರ್‌ನ ಸಿಬ್ಬಂದಿ ನಬಿಲ್ ಮತ್ತು ಆನಂದ ಎಂಬುವರನ್ನು ಬಂಧಿಸಲಾಗಿದ್ದು, ಬಾರ್‌ನಲ್ಲಿ ಬಲವಂತವಾಗಿ ದುಡಿಯುತ್ತಿದ್ದ 27 ಮಹಿಳೆಯರನ್ನು ರಕ್ಷಿಸಲಾಗಿದೆ. ಮಾಲೀಕ ನಹೀಮ್, ಅಬ್ದುಲ್ ಹ್ಯಾರಿಸ್, ಪರಮಾನಂದ, ಬ್ಯಾಂಡ್ ಲೀಡರ್ ರಮೇಶ್ ಎಂಬುವವರು ತಲೆ ಮರೆಸಿಕೊಂಡಿದ್ದಾರೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.