ನಿರ್ಮಾಪಕ ದಂಪತಿ, ಉದ್ಯಮಿ ವಿಚಾರಣೆ

Team Udayavani, Oct 22, 2020, 11:55 AM IST

bng-tdy-3

ಬೆಂಗಳೂರು: ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ಜಗದೀಶ್‌ ಮತ್ತು ಅವರ ಪತ್ನಿ ಸೌಂದರ್ಯ ಹಾಗೂ ಕಾಂಗ್ರೆಸ್‌ ವಿಧಾನಪರಿಷತ್‌ ಸದಸ್ಯ ಯು.ಬಿ.ವೆಂಕಟೇಶ್‌ ಪುತ್ರ ಮತ್ತು ರಾಯಲ್‌ ಮೀನಾಕ್ಷಿ ಮಾಲ್‌ಮಾಲೀಕ ವಿ.ಗಣೇಶ್‌ರಾವ್‌ ಅವರನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಬುಧವಾರ ವಿಚಾರಣೆ ನಡೆಸಿದ್ದಾರೆ.

ಪ್ರಕರಣದಲ್ಲಿ ಬಂಧನವಾಗಿರುವ ನಟಿ ಸಂಜನಾ ಗಲ್ರಾನಿ ಜತೆ ಮೂವರು ಸಂಪರ್ಕ ಹೊಂದಿದ್ದರು ಎಂಬ ಆರೋಪದ ಮೇಲೆ ಕೆಲ ದಿನಗಳಹಿಂದೆ ನೋಟಿಸ್‌ ನೀಡಲಾಗಿತ್ತು.ಈ ಹಿನ್ನೆಲೆಯಲ್ಲಿವಿಚಾರಣೆಗೆ ಹಾಜರಾಗಿದ್ದಾರೆ. ಮೂವರಿಂದ ಲಿಖೀತ ರೂಪದಲ್ಲಿ ಮಾಹಿತಿ ಪಡೆಯಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ. ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಅಪರಾಹ್ನ 12 ಗಂಟೆ ಸುಮಾರಿಗೆ ಆಗಮಿಸಿದ ನಿರ್ಮಾಪಕ ಜಗದೀಶ್‌ ಮತ್ತು ಅವರ ಪತ್ನಿ ಸೌಂದರ್ಯ ಜಗದೀಶ್‌ ಅವರನ್ನುಮಧ್ಯಾಹ್ನ ಮೂರು ಗಂಟೆವರೆಗೆ ವಿಚಾರಣೆ ನಡೆಸಲಾಗಿದೆ. ದಂಪತಿ ರಾಮ್‌ಲೀಲಾ, ಅಪ್ಪ-ಪಪ್ಪು ಸೇರಿ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.

ಅಲ್ಲದೆ, ಯಶವಂತಪುರ ಬಳಿ ಜೆಟ್‌ಲಾಗ್‌ ಎಂಬ ಪಬ್‌ ಮಾಲೀಕರಾಗಿದ್ದಾರೆ. ಈ ಪಬ್‌ನಲ್ಲಿ ಸೆಲೆಬ್ರಿಟಿಗಳ ದೊಡ್ಡ-ದೊಡ್ಡ ಪಾರ್ಟಿಗಳು ನಡೆಯುತ್ತಿದ್ದು, ಪ್ರಕರಣದಲ್ಲಿ ಬಂಧನವಾಗಿರುವ ದೆಹಲಿಯ ವಿರೇನ್‌ ಖನ್ನಾ, ವೈಭವ್‌ ಜೈನ್‌, ಶ್ರೀ ಅಲಿಯಾಸ್‌ ಶ್ರೀಸುಬ್ರಹ್ಮಣ್ಯ, ನಟಿ ಸಂಜನಾ ಗಲ್ರಾನಿ, ರಾಗಿಣಿ ಪಾಲ್ಗೊಳ್ಳುತ್ತಿದ್ದರು. ಅಲ್ಲದೆ, ವಿರೇನ್‌ ಖನ್ನಾ, ವೈಭವ್‌ ಜೈನ್‌ ಪಾರ್ಟಿ ಆಯೋಜಿಸುತ್ತಿದ್ದರು ಎಂದು ಹೇಳಲಾಗಿತ್ತು. ಜತೆಗೆ ಅವರ ನಿರ್ಮಾಣದ ರಾಮ್‌ಲೀಲಾ ಸಿನಿಮಾದಲ್ಲಿ ನಟಿ ಸಂಜನಾ ಗಲಾÅನಿ ನಟಿಸಿದ್ದರು. ಈ ಎಲ್ಲ ವಿಚಾರಗಳ ಕುರಿತಿ ಮಾಹಿತಿ ಪಡೆಯಲಾಗಿದೆ.

ವಿಚಾರಣೆ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಸೌಂದರ್ಯ ಜಗದೀಶ್‌, ಡ್ರಗ್ಸ್‌ ಪ್ರಕರಣಕ್ಕೂ ನಮಗೂ ಸಂಬಂಧವಿಲ್ಲ. ಪತಿ ನಿರ್ಮಾಣದ ರಾಮ್‌ಲೀಲಾ ಚಿತ್ರದಲ್ಲಿ ಸಂಜನಾ ನಟಿಸಿದ್ದರು. ಈ ಸಿನಿಮಾ ಹಾಗೂ ಆಕೆಗೆ ನೀಡಿದ ಸಂಭಾವನೆ ಬಗ್ಗೆ ಮಾಹಿತಿ ಕೇಳಿದರು. ಜತೆಗೆ ತಮ್ಮ ಪಬ್‌ನಲ್ಲಿ ನಡೆಯುತ್ತಿದ್ದ ಪಾರ್ಟಿಗಳು, ಆಯೋಜಕರ ಬಗ್ಗೆ ಮಾಹಿತಿ ಕೇಳಿದರು. ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇವೆ ಎಂದು ಹೇಳಿದರು.

ಸಿಸಿಬಿಯಿಂದ ರ್ಯಾಪಿಡ್‌ ಫೈರ್‌ :  ತಮ್ಮ ಪಬ್‌ನಲ್ಲಿ ನಡೆಯುತ್ತಿದ್ದ ಪಾರ್ಟಿಗಳಿಗೆ ಯಾರೆಲ್ಲ ಬರುತ್ತಿದ್ದರು? ಪಾರ್ಟಿ ಆಯೋಜನೆ ಯಾರು ಮಾಡುತ್ತಿದ್ದರು? ವಿರೇನ್‌ ಖನ್ನಾ ಹಾಗೂ ಇತರೆ ಆರೋಪಿಗಳು ತಮ್ಮ ಕ್ಲಬ್‌ನಲ್ಲಿ ಪಾರ್ಟಿ ಆಯೋಜಿಸುತ್ತಿದ್ದರಾ? ಸಂಜನಾ ಗಲ್ರಾನಿಗೆ ಚೆಕ್‌ ಅಥವಾ ನಗದು ರೂಪದಲ್ಲಿ ಸಂಭಾವನೆ ನೀಡಿದ್ದಿರಾ? ಎಂಬೆಲ್ಲ ಪ್ರಶ್ನೆಗಳನ್ನು ನಿರ್ಮಾಪಕ ಜಗದೀಶ್‌ ಮತ್ತು ಅವರ ಪತ್ನಿ ಸೌಂದರ್ಯ ಜಗದೀಶ್‌ಗೆ ಕೇಳಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಸಂಜನಾ ಜತೆ ವ್ಯಾವಹಾರಿಕ ಸಂಬಂಧವೇನು? :  ಕಾಂಗ್ರೆಸ್‌ ವಿಧಾನಸಪರಿಷತ್‌ ಸದಸ್ಯ ಯು.ಬಿ.ವೆಂಕಟೇಶ್‌ ಪುತ್ರ ವಿ.ಗಣೇಶ್‌ರಾವ್‌ ಕೂಡ ವಿಚಾರಣೆ ನಡೆಸಲಾಗಿದೆ. ಗಣೇಶ್‌ರಾವ್‌ ಬನ್ನೇರುಘಟ್ಟ ರಸ್ತೆಯಲ್ಲಿ ರಾಯಲ್‌ ಮಿನಾಕ್ಷಿ ಮಾಲ್‌ ನಡೆಸುತ್ತಿದ್ದು, ರೆಸ್ಟೋರೆಂಟ್‌ ಹೊಂದಿದ್ದಾರೆ. ಈ ರೆಸ್ಟೋರೆಂಟ್‌ನಲ್ಲಿ ನಡೆಯುತ್ತಿದ್ದ ಪಾರ್ಟಿಗಳಲ್ಲಿ ಪ್ರಕರಣದ ಆರೋಪಿಗಳು ಭಾಗಿಯಾಗುತ್ತಿದ್ದರು ಎಂದು ಹೇಳಲಾಗಿತ್ತು.ಅಲ್ಲದೆ, ನಟಿ ಸಂಜನಾ ಗಲ್ರಾನಿ ಖಾತೆಯಿಂದ ಗಣೇಶ್‌ರಾವ್‌ ಖಾತೆಗೆ ಲಕ್ಷಾಂತರ ರೂ. ಹಣ ವರ್ಗಾವಣೆ ಯಾಗಿರುವ ಮಾಹಿತಿಇತ್ತು.ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲಾಗಿದ್ದು,ಯಾವ ಕಾರಣಕ್ಕೆ ಸಂಜನಾ  ಖಾತೆಯಿಂದ ನಿಮ್ಮ ಖಾತೆಗೆ ಲಕ್ಷಾಂತರ ರೂ.ವರ್ಗಾವಣೆಯಾಗಿದೆ? ಅವರ ಜತೆಗಿನ ವ್ಯವಹಾರಿಕ ಸಂಬಂಧ ಏನು? ಪ್ರಶ್ನಿಸಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಟಾಪ್ ನ್ಯೂಸ್

1-kanaka

Kanakadasa Jayanthi ಇಂದು; ಕನಕದಾಸರ ತಣ್ತೀಗಳು ಹಿಂದೆಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Agriculture: ಏಕಕಾಲದಲ್ಲಿ ಮೀನು, ತರಕಾರಿ ಬೆಳೆಯುವ ಅಕ್ವಾಫೋನಿಕ್ಸ್‌ ಕೃಷಿ

Agriculture: ಏಕಕಾಲದಲ್ಲಿ ಮೀನು, ತರಕಾರಿ ಬೆಳೆಯುವ ಅಕ್ವಾಫೋನಿಕ್ಸ್‌ ಕೃಷಿ

Agricultural fair: ಕೃಷಿ ಮೇಳಕ್ಕೆ ನಿನ್ನೆ ಸುಮಾರು 10.25 ಲಕ್ಷ ಜನರ ಭೇಟಿ!

Agricultural fair: ಕೃಷಿ ಮೇಳಕ್ಕೆ ನಿನ್ನೆ ಸುಮಾರು 10.25 ಲಕ್ಷ ಜನರ ಭೇಟಿ!

Arrested: 15 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಫ‌ರ್ಹಾನ್‌ ಸೆರೆ

Arrested: 15 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಫ‌ರ್ಹಾನ್‌ ಸೆರೆ

Bengaluru Airport: ಏರ್ ಪೋರ್ಟ್‌ನಲ್ಲಿ ಆಮೆ, ಮೊಸಳೆ ಸಾಗಣೆ ಯತ್ನ

Bengaluru Airport: ಏರ್ ಪೋರ್ಟ್‌ನಲ್ಲಿ ಆಮೆ, ಮೊಸಳೆ ಸಾಗಣೆ ಯತ್ನ

Crime: ಮೊಬೈಲ್‌ಗಾಗಿ ಜಗಳ; ಪುತ್ರನ ಕೊಂದ ಅಪ್ಪ!

Crime: ಮೊಬೈಲ್‌ಗಾಗಿ ಜಗಳ; ಪುತ್ರನ ಕೊಂದ ಅಪ್ಪ!

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

1-kanaka

Kanakadasa Jayanthi ಇಂದು; ಕನಕದಾಸರ ತಣ್ತೀಗಳು ಹಿಂದೆಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.