ಕ್ಯಾಂಟೀನ್ ನಿರ್ವಹಣೆಗೆ ಕೋಶ
Team Udayavani, Sep 16, 2017, 12:50 PM IST
ಬೆಂಗಳೂರು: ಇಂದಿರಾ ಕ್ಯಾಂಟೀನ್ ಯೋಜನೆಯ ಪರಿಣಾಮಕಾರಿ ಜಾರಿ ಹಾಗೂ ವ್ಯವಸ್ಥಿತ ನಿರ್ವಹಣೆಗಾಗಿ ಪ್ರತ್ಯೇಕ “ಇಂದಿರಾ ಕ್ಯಾಂಟೀನ್ ಕೋಶ’ ರಚನೆ ಹಾಗೂ ಸಮಗ್ರ ಯೋಜನೆಯ ವರದಿಗಾಗಿ ಪ್ರತಿ ಅಡುಗೆಮನೆಗೆ ಒಬ್ಬರಂತೆ ಜೂನಿಯರ್ ಕಮಿಷನರ್ ನೇಮಿಸಿಕೊಳ್ಳಲು ಬಿಬಿಎಂಪಿ ತೀರ್ಮಾನಿಸಿದೆ.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಇಂದಿರಾ ಕ್ಯಾಂಟೀನ್ ಯೋಜನೆಯ ಅನಷ್ಠಾನ ಜವಾಬ್ದಾರಿಯನ್ನು ಸರ್ಕಾರ ಬಿಬಿಎಂಪಿಗೆ ವಹಿಸಿದ್ದು, ಈಗಾಗಲೇ 101 ವಾರ್ಡ್‌ಗಳಲ್ಲಿ ಕ್ಯಾಂಟೀನ್‌ಗಳ ನಿರ್ಮಾಣ ಪೂರ್ಣಗೊಂಡಿದೆ. ಉಳಿದ 97 ಕಡೆ ಕ್ಯಾಂಟೀನ್ ನಿರ್ಮಾಣಕ್ಕೆ ಪಾಲಿಕೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ.
ಯೋಜನೆ ಜಾರಿಯಾದ ಬಳಿಕ ಕ್ಯಾಂಟೀನ್‌ಗಳ ನಿರ್ವಹಣೆಯನ್ನು ಪಾಲಿಕೆಯ ವಿವಿಧ ಹಂತಗಳ ಅಧಿಕಾರಿಗಳಿಗೆ ನೀಡಿ ಅವರಿಂದ ಮೇಲ್ವಿಚಾರಣೆ ಹಾಗೂ ಆ ಕುರಿತ ವರದಿ ಪಡೆಯಲಾಗುತ್ತಿದೆ. ಇದರಿಂದಾಗಿ ಪಾಲಿಕೆಯಲ್ಲಿನ ದೈನಂದಿನ ಹಾಗೂ ಪ್ರಮುಖ ಕೆಲಸಗಳು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಕ್ಯಾಂಟೀನ್‌ನ ಮೇಲ್ವಿಚಾರಣೆ ಹಾಗೂ ದೈನಂದಿನ ನಿರ್ವಹಣೆಗೆ ಪ್ರತ್ಯೇಕ ಕೋಶ ಸ್ಥಾಪಿಸಲು ಪಾಲಿಕೆ ನಿರ್ಧರಿಸಿದೆ.
ಯಾರ್ಯಾರಿಗೆ ಹೊಣೆ?
ಇಂದಿರಾ ಅಡುಗೆಮನೆಗಳಿಂದ ಕ್ಯಾಂಟೀನ್‌ಗಳಿಗೆ ಸರಬರಾಜು ಮತ್ತು ಕ್ಯಾಂಟೀನ್‌ಗಳಲ್ಲಿ ವಿತರಣೆಯಾಗುವ ಆಹಾರ ಪದಾರ್ಥಗಳ ದೈನಂದಿನ ಪ್ರಕ್ರಿಯೆಗಳ ಪರಿಶೀಲನೆ ಮತ್ತು ವ್ಯವಸ್ಥಿತ ಮೇಲ್ವಿಚಾರಣೆ ಜವಾಬ್ದಾರಿಯನ್ನು ಜಂಟಿ ಆಯುಕ್ತರು (ಹಣಕಾಸು) ನೋಡಿಕೊಳ್ಳಲಿದ್ದಾರೆ. ಇಂದಿರಾ ಕ್ಯಾಂಟೀನ್ ಕೋಶವನ್ನು ಕೇಂದ್ರ ಕಚೇರಿಯ ಹೆಚ್ಚುವರಿ/ಜಂಟಿ ಆಯುಕ್ತರು (ಹಣಕಾಸು) ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದು, ಇವರು ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಅಡುಗೆ ಮನೆಗೆ ಒಬ್ಬರಂತೆ ನಿವೃತ್ತ ಸೇನಾಧಿಕಾರಿಯನ್ನು ನೇಮಿಸಿಕೊಳ್ಳಬಹುದಾಗಿದೆ.
ಪ್ರತಿ ಕಿಚನ್‌ಗೆ ಕಿರಿಯ ಸೇನಾ ಆಯುಕ್ತ
ನಗರದಲ್ಲಿನ 27 ವಿಧಾನಸಭೆ ಕ್ಷೇತ್ರಗಳಲ್ಲಿ ನಿರ್ಮಾಣವಾಗುವ ಒಂದು ಅಡುಗೆಮನೆಗೆ ಒಬ್ಬರಂತೆ ಒಟ್ಟು 27 ನಿವೃತ್ತ ಕಿರಿಯ ಸೇನಾ ಆಯುಕ್ತರನ್ನು ಹಂತ ಹಂತವಾಗಿ ನೇಮಿಸಿಕೊಳ್ಳಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಅವರು ಅಡುಗೆ ಮನೆಯಿಂದ ಸರಬರಾಜಾಗುವ ಮತ್ತು ಇಂದಿರಾ ಕ್ಯಾಂಟೀನ್‌ನಲ್ಲಿ ವಿತರಣೆಯಾಗುವ ಆಹಾರದ ಬಗ್ಗೆ ನಿಗಾವಹಿಸಲಿದ್ದು, ಕ್ಯಾಂಟೀನ್‌ನ ನೋಡಲ್ ಅಧಿಕಾರಿಗಳಿಂದ ಮಾಹಿತಿ ಪಡೆದು ಪಾಲಿಕೆಯ ಕೇಂದ್ರ ಕಚೇರಿಗೆ ಸಲ್ಲಿಸಲಿದ್ದಾರೆ.
ತಿಂಗಳಿಗೊಂದು ಸಭೆ
ಹೆಚ್ಚುವರಿ/ಜಂಟಿ ಆಯುಕ್ತರ(ಹಣಕಾಸು) ಅಧ್ಯಕ್ಷತೆಯಲ್ಲಿ ಪ್ರತಿ ತಿಂಗಳು ಕನಿಷ್ಠ ಒಂದು ಬಾರಿ ಸಭೆ ನಡೆಸುವುದರೊಂದಿಗೆ ಜಂಟಿ ಆಯುಕ್ತರು, ವಲಯದ ಮುಖ್ಯ ಎಂಜಿನಿಯರ್ ಹಾಗೂ ಮುಖ್ಯ ಆರೋಗ್ಯಾಧಿಕಾರಿಗಳ ಜೊತೆಗೆ ಚರ್ಚಿಸಿ ಇಂದಿರಾ ಕ್ಯಾಂಟೀನ್‌ನಲ್ಲಿ ವಿತರಣೆಯಾಗುವ ಆಹಾರ ಸಂಖ್ಯೆ ಹಾಗೂ ಇತರೆ ಸುಧಾರಣಾ ಕ್ರಮಗಳ ಕುರಿತು ಕ್ರಮಕೈಗೊಳ್ಳುವಂತೆ ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.
ಸೇನಾ ಆಯುಕ್ತರಿಗೆ ವೇತನ ನಿಗದಿ
ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿನ ಅಡುಗೆ ಮನೆಯ ಮೇಲ್ವಿಚಾರಣೆ ನೋಡಿಕೊಳ್ಳಲು ಕರ್ನಾಟಕ ಸೈನಿಕ ಕಲ್ಯಾಣ ಉದ್ಯೋಗ ಸಂಸ್ಥೆಯಿಂದ 27 ನಿವೃತ್ತ ಕಿರಿಯ ಸೇನಾ ಆಯುಕ್ತರು ಹಾಗೂ ಅವರ ಮೇಲ್ವಿಚಾರಣೆಗಾಗಿ ಒಬ್ಬರು ಮುಖ್ಯ ಅಧಿಕಾರಿಯನ್ನು ನೇಮಿಸಿಕೊಳ್ಳಲಾಗುತ್ತದೆ. ಅದರಂತೆ ಕಿರಿಯ ಸೇನಾ ಆಯುಕ್ತರಿಗೆ ಮಾಸಿಕ 40 ಸಾವಿರ ರೂ. ವೇತನ, 4500 ರೂ. ವಾಹನ ಭತ್ಯೆ, 475ರೂ ಸಮವಸ್ತ್ರ ನಿರ್ವಹಣೆಗಾಗಿ ನೀಡಲಾಗುತ್ತದೆ.
ಅದೇ ರೀತಿ ಮುಖ್ಯ ಅಧಿಕಾರಿಗಳಿಗೆ ಮಾಸಿಕ 90 ಸಾವಿರ ರೂ. ವೇತನ, 9375 ವಾಹನ ಭತ್ಯೆ ಮತ್ತು 475 ರೂ. ಸಮವಸ್ತ್ರ ಭತ್ಯೆ ನಿಗದಿಪಡಿಸಲಾಗಿದೆ. ಅವರನ್ನು ನೇಮಿಸಿಕೊಳ್ಳುವ ಮತ್ತು ರದ್ದುಪಡಿಸುವ ಅಧಿಕಾರವನ್ನು ವಿಶೇಷ ಆಯುಕ್ತ (ಆಡಳಿತ)ರಿಗೆ ನೀಡಲಾಗಿದೆ.
ಕ್ಯಾಂಟೀನ್ ಕೋಶದ ಕಾರ್ಯವೇನು?
-ಕೋಶವು ನಿತ್ಯ ಅಡುಗೆಮನೆಗಳಿಂದ ಕ್ಯಾಂಟೀನ್‌ಗಳಿಗೆ ಆಹಾರ ಸರಬರಾಜು ಮತ್ತು ವಿತರಣೆ ಪ್ರಕ್ರಿಯೆಯ ಮೇಲೆ ನಿಗಾ ವಹಿಸಲಿದೆ
-ಆಹಾರ ಪದಾರ್ಥಗಳ ಸುರಕ್ಷತೆ ಮತ್ತು ಸ್ವತ್ಛತೆಯ ಮೇಲ್ವಿಚಾರಣೆ
-ಆಹಾರದ ಗುಣಮಟ್ಟ ಮತ್ತು ಪ್ರಮಾಣ ಖಚಿತಪಡಿಸುವುದು
-ಜಂಟಿ ಆಯುಕ್ತರಿಂದ ಪಡೆದ ಬಿಲ್ಲುಗಳ ಪರಿಶೀಲನೆ ಮತ್ತು ಪಾವತಿಯಾದ ಬಿಲ್ಲುಗಳ ದಾಖಲೆಗಳ ಸುರಕ್ಷಿತವಾಗಿಡುವುದು
-ಆಹಾರ ವಿತರಕರ ಸಿಬ್ಬಂದಿಯ ನಡವಳಿಕೆ ಹಾಗೂ ಸ್ವತ್ಛತೆ ಗುಣಾತ್ಮಕ ಸೇವೆ ಒದಗಿಸುತ್ತಿರುವ ಬಗ್ಗೆ ಖಾತ್ರಿಪಡಿಸುವುದು
-ಪಾಲಿಕೆಯ ಆದೇಶಗಳ ಅನುಷ್ಠಾನದ ಬಗ್ಗೆ ಮೇಲ್ವಿಚಾರಣೆ
-ನಿತ್ಯ ಅಡುಗೆ ಮನೆ ಹಾಗೂ ಕ್ಯಾಂಟೀನ್‌ಗಳಲ್ಲಿ ನಡೆಯುವ ಎಲ್ಲ ಚಟುವಟಿಕೆಗಳ ಕುರಿತು ಪಾಲಿಕೆಗೆ ಸಮಗ್ರ ವರದಿ ನೀಡುವುದು
ಕ್ಯಾಂಟೀನ್‌ಗಳ ನಿರ್ವಹಣೆ ಹಾಗೂ ಮೇಲ್ವಿಚಾರಣೆ ಹೊಣೆಯನ್ನು ಪಾಲಿಕೆ ಅಧಿಕಾರಿಗಳಿಗೆ ನೀಡಿರುವುದರಿಂದ ಇತರ ಕೆಲಸಗಳು ವಿಳಂಬವಾಗುವುದು ಕಂಡುಬಂದಿದೆ. ಹೀಗಾಗಿ ಪ್ರತ್ಯೇಕ ಕೋಶ ರಚಿಸಿ, ಪ್ರತಿ ಅಡುಗೆ ಮನೆಗೆ ಒಬ್ಬರಂತೆ ಕಿರಿಯ ಸೇನಾ ಆಯುಕ್ತರು ಮತ್ತು ಮುಖ್ಯ ಅಧಿಕಾರಿಯನ್ನು ನೇಮಿಸಲು ಆದೇಶಿಸಲಾಗಿದೆ.
-ಎನ್.ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯಕ್ತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cold Weather: ಬೀದರ್, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
MUST WATCH
ಹೊಸ ಸೇರ್ಪಡೆ
ಬಿಜೆಪಿ ಸಭೆಯಲ್ಲಿ ಭಿನ್ನರ ವಿರುದ್ಧ ಕಿಡಿ; ಯತ್ನಾಳ್ ಬಣದ ವಿರುದ್ಧ ಮಾಜಿ ಶಾಸಕರು ಅಸಮಾಧಾನ
Naxal Surrender: ನಕ್ಸಲ್ ಶರಣಾಗತಿ ಪೂರ್ವಯೋಜಿತ ಸ್ಟೇಜ್ ಶೋ ಅಲ್ಲವೇ?
Finance Debt: ಫೈನಾನ್ಸ್ ಸಾಲ ವಸೂಲಿಗೆ ಹೆದರಿ ಊರನ್ನೇ ಬಿಟ್ಟರು!
Naxal Surrender: ರಾಜ್ಯ ಸರಕಾರವೇ ನಕ್ಸಲರಿಗೆ ಶರಣಾಗಿದೆಯೋ?: ಸಿ.ಟಿ. ರವಿ
Manipal: ನಾಲ್ವರು ಅನುಪಮ ಸಾಧಕರಿಗೆ ಇಂದು ಹೊಸ ವರ್ಷದ ಪ್ರಶಸ್ತಿ ಪ್ರದಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.