ಗ್ರಾಮೀಣ ಭಾಗದ ಪಿಯು ವಿದ್ಯಾರ್ಥಿಗಳಿಗೆ ಸಿಇಟಿ ಕೋಚಿಂಗ್
Team Udayavani, Aug 21, 2018, 6:55 AM IST
ಬೆಂಗಳೂರು: ಗ್ರಾಮೀಣ ಭಾಗದ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆ 250 ಕಾಲೇಜುಗಳಲ್ಲಿ ಸಿಇಟಿ, ನೀಟ್ ಕೋಚಿಂಗ್ ತರಬೇತಿ ಆರಂಭಿಸಿದೆ.
ಗ್ರಾಮೀಣ ಪ್ರದೇಶದ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿಗಳಿಗೆ ಸಿಇಟಿ ಮತ್ತು ನೀಟ್ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಯ ಮನೆಪಾಠ(ಟ್ಯೂಷನ್) ಪಡೆಯುವುದು ಕಷ್ಟ ಸಾಧ್ಯ ಎಂಬುದನ್ನು ಅರಿತ ಇಲಾಖೆ ಪ್ರಸಕ್ತ ಸಾಲಿನಿಂದ ಟಿಎಎಲ್‌ಪಿ ಯೋಜನೆಯಡಿ ಈ ಕಾರ್ಯಕ್ರಮ ಹಮ್ಮಿಕೊಂಡಿದೆ.
ಟಿಎಎಲ್‌ಪಿ(ಭಾಷಾ ಕೌಶಲ್ಯ ವೃದ್ಧಿ ತರಬೇತಿ) ಯೋಜನೆಯಡಿ ಆಯ್ಕೆಯಾಗಿರುವ ಎಲ್ಲ ಕಾಲೇಜುಗಳಿಗೂ ಈಗಾಗಲೇ ಲ್ಯಾಪ್‌ಟಾಪ್ ಮತ್ತು ಪ್ರೊಜೆಕ್ಟರ್ ನೀಡಲಾಗಿದೆ. ಗಣಿತ, ರಸಾಯನಶಾಸ್ತ್ರ, ಜೀವಶಾಸ್ತ್ರ ಹಾಗೂ ಭೌತಶಾಸ್ತ್ರ ವಿಷಯ ತಜ್ಞರ ಮೂಲಕ ತರಬೇತಿ ನೀಡಲಾಗುತ್ತದೆ. ಪ್ರತಿ ಮಂಗಳವಾರ, ಬುಧವಾರ, ಗುರುವಾರ ಹಾಗೂ ಶುಕ್ರವಾರ ತರಬೇತಿ ಇರುತ್ತದೆ. ಶನಿವಾರ ಬಹು ಆಯ್ಕೆಯ ಪ್ರಶ್ನೆ(ಎಂಸಿಕ್ಯೂ) ಮಾದರಿಯಲ್ಲಿ ಪರೀಕ್ಷೆ ನಡೆಸಲಾಗುತ್ತದೆ.
ಇಂಗ್ಲಿಷ್ ಮತ್ತು ಕನ್ನಡ ಭಾಷೆಯಲ್ಲಿ ತರಬೇತಿ ಇರುತ್ತದೆ. ಸಿಇಟಿ ಮತ್ತು ನೀಟ್‌ಗೆ ಬೇಕಾದ ಎಲ್ಲ ರೀತಿಯ ಕೋಚಿಂಗ್ ಈ ಮೂಲಕ ನೀಡಲಾಗುತ್ತದೆ. ವಿಷಯ ತಜ್ಞರು ಪಾಠ ಮಾಡುವ ವಿಡಿಯೋಗಳನ್ನು ಯುಟ್ಯೂಬ್ ಹಾಗೂ ಪಿಯು ಇಲಾಖೆ ವೆಬ್‌ಸೈಟ್‌ನಲ್ಲೂ ಪ್ರಕಟಿಸಲಾಗಿದೆ. ವಿದ್ಯಾರ್ಥಿಗಳು ಯಾವಾಗ ಬೇಕಾದರೂ ಅದನ್ನು ನೋಡಿಕೊಳ್ಳಬಹುದಾದ ವ್ಯವಸ್ಥೆ ಮಾಡಲಾಗಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.