![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Apr 20, 2024, 11:03 AM IST
ಬೆಂಗಳೂರು: ಒಂಟಿಯಾಗಿ ಓಡಾಡುವ ಮಹಿಳೆಯರನ್ನು ಗುರುತಿಸಿ ಸರಗಳವು ಮಾಡುತ್ತಿದ್ದ ಐವರು ಕುಖ್ಯಾತ ಸರಗಳ್ಳರನ್ನು ಬಂಧಿಸಿದ ಪುಟ್ಟೇನಹಳ್ಳಿ ಠಾಣೆ ಪೊಲೀಸರು, ಚಿನ್ನಾಭರಣ, ನಗದುಇ ಸೇರಿ 10.82 ಲಕ್ಷ ರೂ. ಮೌಲ್ಯದ ವಸ್ತು ಜಪ್ತಿ ಮಾಡಿದ್ದಾರೆ.
ಪುನೀತ್, ನಾಗೇಶ್, ಶಿವಲಿಂಗೇಗೌಡ, ಪ್ರತಾಪ್, ಆಕಾಶ್ ಬಂಧಿತರು. ಕಳೆದ ಮಾ.5ರಂದು ಪುಟ್ಟೇನಹಳ್ಳಿಯ 17ನೇ ಕ್ರಾಸ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ತಾಳಿಯಿದ್ದ ಉಮಾ ಗೋಲ್ಡ್ ಸರವನ್ನು ಆರೋಪಿಗಳ ಪೈಕಿ ಇಬ್ಬರು ಬೈಕ್‌ನಲ್ಲಿ ಹಿಂದಿನಿಂದ ಬಂದು ಕಸಿದುಕೊಂಡು ಕೊಂಡು ಪರಾರಿಯಾಗಿದ್ದರು. ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ಮುಂದುವರಿಸಿದ ಪೊಲೀಸರು, ಇಬ್ಬರನ್ನು ಉತ್ತರಹಳ್ಳಿ ಸರ್ಕಲ್ ಹತ್ತಿರ ಬಂಧಿಸಿದ್ದರು. ಇವರು ಕೊಟ್ಟ ಮಾಹಿತಿ ಮೇರೆಗೆ ಸರಗಳ್ಳತನ ನಡೆಸುತ್ತಿದ್ದ ಮತ್ತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನಲ್ಲಿ ನಿರ್ಜನ ಪ್ರದೇಶಗಳಲ್ಲಿ ಒಂಟಿಯಾಗಿ ಓಡಾಡುವ ಮಹಿಳೆಯರನ್ನೇ ಆರೋಪಿಗಳು ಟಾರ್ಗೆಟ್ ಮಾಡುತ್ತಿದ್ದರು. ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದು ಸರ ಕಸಿದು ಎಸ್ಕೇಪ್ ಆಗುತ್ತಿದ್ದರು. ಕದ್ದ ಚಿನ್ನದ ಸರ ಮಾರಾಟ ಮಾಡಿ ಬಂದ ದುಡ್ಡಿನಲ್ಲಿ ಮೋಜು-ಮಸ್ತಿ ಮಾಡುತ್ತಿದ್ದರು.
You seem to have an Ad Blocker on.
To continue reading, please turn it off or whitelist Udayavani.