Chamarajpete: ಕೆಚ್ಚಲು ಕೊಯ್ದ ಕೇಸ್; 3 ಲಕ್ಷ ರೂ.ಮೌಲ್ಯದ 3 ಹಸು ಕೊಡಿಸಿದ ಸಚಿವ ಜಮೀರ್
ಹಸುಗಳ ಪಡೆಯಲು ನಿರಾಕರಿಸಿದ ಕರ್ಣ, ಬಳಿಕ ತಾಯಿ, ಸಹೋದರಿಯಿಂದ ಸ್ವೀಕಾರ
Team Udayavani, Jan 16, 2025, 12:56 AM IST
ಬೆಂಗಳೂರು: ಚಾಮರಾಜಪೇಟೆಯ ವಿನಾಯಕ ನಗರದಲ್ಲಿ ಹಸುವಿನ ಕೆಚ್ಚಲು ಕೊಯ್ದ ಅಮಾನವೀಯ ಘಟನೆಗೆ ವ್ಯಾಪಕ ಖಂಡನೆ ವ್ಯಕ್ತವಾದ ಬೆನ್ನಲ್ಲೇ ಇದೀಗ ಸ್ಥಳೀಯ ಶಾಸಕ ಹಾಗೂ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು ಹಸುವಿನ ಮಾಲಕ ಕರ್ಣ ಕುಟುಂಬದವರಿಗೆ ತಲಾ 1 ಲಕ್ಷ ರೂ. ಬೆಲೆಬಾಳುವ 3 ಹಸುಗಳನ್ನು ಕೊಡಿಸಿದ್ದಾರೆ.
ಕರ್ಣ ಅವರು ಆರಂಭದಲ್ಲಿ ಹಸುಗಳನ್ನು ಪಡೆಯಲು ಒಪ್ಪಿಕೊಂಡು ಅನಂತರ ನಿರಾಕರಿಸಿದ್ದರು. ಆದರೆ ಅವರ ತಾಯಿ ಸವರಿ ಅಮ್ಮಳ್, ಸಹೋದರಿ ಅಮುದಾ ಹಸುಗಳನ್ನು ಪಡೆಯಲು ಒಪ್ಪಿದ್ದರಿಂದ 3 ಲಕ್ಷ ರೂ. ಬೆಲೆಬಾಳುವ 3 ಹಸುಗಳನ್ನು ಖರೀದಿಸಿ ಬುಧವಾರ ಸಚಿವ ಜಮೀರ್ ಹಸ್ತಾಂತರಿಸಿದರು.
ಹಸುವಿನ ಕೆಚ್ಚಲು ಕೊಯ್ದು ಕೌರ್ಯ ಮೆರೆದಿದ್ದ ಪ್ರಕರಣ ರಾಜಕೀಯ ಸ್ವರೂಪ ಪಡೆದು ರಾಜ್ಯವ್ಯಾಪಿ ಕೋಲಾಹಲಕ್ಕೆ ಕಾರಣವಾಗಿತ್ತು. ಸಚಿವ ಜಮೀರ್ ಖಾನ್ ಸ್ವಂತ ಖರ್ಚಿನಲ್ಲಿ ಹಸುಗಳನ್ನು ಕೊಡಿಸುವುದಾಗಿ ಭರವಸೆ ನೀಡಿದ್ದರು. ಇದೀಗ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ.
ಈ ವೇಳೆ ಅಮುದಾ ಮಾತನಾಡಿ, ಹಸು ನಿರಾಕರಿಸಿದ ನನ್ನ ಸಹೋದರನ ಪರವಾಗಿ ನಾನು ಕ್ಷಮೆ ಕೋರುತ್ತೇನೆ. ಜಮೀರಣ್ಣ ಅವರು ಒಳ್ಳೆಯ ಮನಸ್ಸಿನಿಂದ ಹಸು ಕೊಡಿಸಿದ್ದಾರೆ. ಕೆಲವರು ಇದರಲ್ಲಿ ರಾಜಕಾರಣ ಮಾಡುತ್ತಿದ್ದು, ನಾವು ಶಾಸಕರ ಜತೆ ಇದ್ದೇವೆ ಎಂದು ಹೇಳಿದರು.
— B Z Zameer Ahmed Khan (@BZZameerAhmedK) January 15, 2025
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chamarajpete: ಕೆಚ್ಚಲು ಕೊಯ್ದ ಪ್ರಕರಣ: ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ
ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್ ಚಿರತೆ ಸೆರೆ ಕಾರ್ಯಾಚರಣೆ ಸ್ಥಗಿತ
Hubballi: ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕಕ್ಕೆ ವಿಧ್ಯುಕ್ತ ಚಾಲನೆ
Chikkaballapura: “ಈಶ’ದಲ್ಲಿ 54 ಅಡಿ ಎತ್ತರದ ತ್ರಿಶೂಲ ಲೋಕಾರ್ಪಣೆ
Chamarajpete: ಕೆಚ್ಚಲು ಕೊಯ್ದ ಕೇಸ್; 3 ಲಕ್ಷ ರೂ.ಮೌಲ್ಯದ 3 ಹಸು ಕೊಡಿಸಿದ ಸಚಿವ ಜಮೀರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.