ರಾಜಕೀಯ ರಂಪಾಟಕ್ಕೆ ಕಾರಣವಾದ ಚಂಪಾ ಭಾಷಣ
Team Udayavani, Nov 28, 2017, 6:40 AM IST
ಬೆಂಗಳೂರು: ಮೈಸೂರಿನಲ್ಲಿ ನಡೆದ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಪ್ರೊ.
ಚಂದ್ರಶೇಖರ ಪಾಟೀಲ (ಚಂಪಾ)ರ ಭಾಷಣಕ್ಕೆ ಬಿಜೆಪಿ ನಾಯಕರಿಂದ ವ್ಯಾಪಕ ಪ್ರತಿರೋಧ ವ್ಯಕ್ತವಾಗಿದೆ.
ಸಾಹಿತ್ಯ ಸಮ್ಮೇಳನದ ಉದ್ಘಾಟನೆ ವೇಳೆ ರಾಜಕೀಯ ವಿಚಾರಗಳನ್ನು ಪ್ರಸ್ತಾಪಿಸಿದ್ದಕ್ಕೆ ಆಕ್ಷೇಪಿಸಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಸಂಸದೆ ಶೋಭಾ ಕರಂದ್ಲಾಜೆ, “ಕನ್ನಡವನ್ನು ಪಕ್ಷಾತೀತ, ಜಾತ್ಯತೀತವಾಗಿ ಬೆಳೆಸಲು ಕೇಂದ್ರ ಸಚಿವ ಅನಂತಕುಮಾರ್ ಅವರು ಸಲಹೆ ನೀಡಿದರೆ ಅವರ ಬಗ್ಗೆ ಕೀಳು ಭಾಷೆಗಳನ್ನು ಬಳಸಿ ಟೀಕೆ ಮಾಡಿರುವ ಪ್ರೊ.ಚಂದ್ರಶೇಖರ ಪಾಟೀಲ ಕ್ಷಮೆಯಾಚಿಸಬೇಕು’ ಎಂದೂ ಆಗ್ರಹಿಸಿದ್ದಾರೆ.
ಕರ್ನಾಟಕವನ್ನು ಪ್ರತ್ಯೇಕಿಸುವ ರೀತಿ ಸಮ್ಮೇಳನ: ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಆಯೋಜಕರು ಮತ್ತು ಮುಖ್ಯಮಂತ್ರಿಗಳ ವಿರುದಟಛಿ ಕಿಡಿ ಕಾರಿರುವ ಸಂಸದೆ ಶೋಭಾ ಕರಂದ್ಲಾಜೆ, “ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ನಡೆಯಬೇಕಿದ್ದ ಸಮ್ಮೇಳನ ಕರ್ನಾಟಕವನ್ನು ಭಾರತದಿಂದ ಪ್ರತ್ಯೇಕಿಸುವ ರೀತಿಯಲ್ಲಿ ನಡೆದಿರುವುದು ದುರಂತ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಅಷ್ಟೇ ಅಲ್ಲ, ಸಾಹಿತ್ಯ ಸಮ್ಮೇಳನ ಮತ್ತು ಕನ್ನಡ ಸಾಹಿತ್ಯ ಪರಿಷತ್ ಆರಂಭಿಸಿದ ಮೈಸೂರು ಅರಸರಾದ
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕುಟುಂಬವನ್ನು ಸೌಜನ್ಯಕ್ಕಾದರೂ ಸಮ್ಮೇಳನಕ್ಕೆ ಆಹ್ವಾನಿಸದೆ ಇರುವ
ಮೂಲಕ ಮೈಸೂರು ರಾಜವಶಂಸ್ಥರ ಕೊಡುಗೆಗೆ ಉಪಕಾರ ಸ್ಮರಣೆ ಮಾಡುವ ಕೆಲಸವನ್ನೂ ಸಾಹಿತ್ಯ ಪರಿಷತ್ ಅಧ್ಯಕ್ಷರು, ಸಮ್ಮೇಳನಾಧ್ಯಕ್ಷರು ಮತ್ತು ಸಿಎಂ ಸಿದ್ದರಾಮಯ್ಯ ತೋರಿಸದಿರುವುದು ದುರಂತ ಎಂದು ಆಪಾದಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡ ಭಾಷೆ ಎಂಬುದು ಒಂದು ಪಕ್ಷ, ಸರ್ಕಾರಕ್ಕಿಂತ ದೊಡ್ಡದು. ಜಾತಿ, ಧರ್ಮ ಮೀರಿದ್ದು. ಆದರೆ, ಯಾರು ತಾಯಿ ಭುವನೇಶ್ವರಿಯನ್ನು ಪೂಜಿಸುವುದಿಲ್ಲವೋ ಅಂಥವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಲಾಗಿದೆ. ಇದರಿಂದಾಗಿಯೇ ಸಾಹಿತ್ಯ ಸಮ್ಮೇ ಳನ ತನ್ನ ದಾರಿ ತಪ್ಪಿದಂತಾಯಿತು ಎಂದು ಆರೋಪಿಸಿದರು.
ಕಾಂಗ್ರೆಸ್ ಪಕ್ಷದ ಚಮಚಾ: ಇನ್ನು, ಧಾರವಾಡದಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಂಸದ ಪ್ರಹ್ಲಾದ ಜೋಶಿ,”
ರಾಜ್ಯದ ನಾಡು-ನುಡಿ ಕುರಿತಂತೆ ಚರ್ಚೆ ಯಾಗಬೇಕಾದ ಕನ್ನಡ ಸಾಹಿತ್ಯ ಸಮ್ಮೇಳನ ವೇದಿಕೆಯಲ್ಲಿ ರಾಜಕೀಯ ಭಾಷಣ ಮಾಡಿರುವ ಸಮ್ಮೇಳನಾಧ್ಯಕ್ಷ ಸಾಹಿತಿ ಚಂಪಾ ಅವರು ಕಾಂಗ್ರೆಸ್ ಪಕ್ಷದ ಚಮಚಾ’ ಎಂದು ಟೀಕಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ಗೆ ಮತ ಹಾಕಿ ಅನ್ನುವ ಚಂಪಾ ಅವರ ವಿಚಾರ ನೋಡಿದರೆ ಅವರು ಆ ಪಕ್ಷದ ಚಮಚಾ ಎಂಬುದು ಗೊತ್ತಾಗುತ್ತದೆ. ಚಂಪಾ ಕಾಂಗ್ರೆಸ್ ಕಾರ್ಯಕರ್ತನಂತೆ ವರ್ತಿ ಸು ತ್ತಿದ್ದು,ಅದರಲ್ಲೂ ಸಮ್ಮೇಳನದಲ್ಲಿ ರಾಜಕೀಯ ಮಾತನಾಡಿದ್ದು ಸರಿಯಲ್ಲ.ಚಂಪಾ ಎಷ್ಟೇ ಚಮಚಾ ಗಿರಿ ಮಾಡಿದರೂ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ಅವರು ರಾಜಾಶ್ರಯವನ್ನೂ ಕಳೆದುಕೊಳ್ಳಲಿದ್ದಾರೆ ಎಂದರು.
ಚಂಪಾ ಅವರ ಮಗಳು ಸಹ ಆಂಗ್ಲ ಮಾಧ್ಯಮದಲ್ಲಿ ಕಲಿತಿದ್ದಾರೆ. ಕನ್ನಡ ಎಂಬುದು ಇವರ ಉಪಜೀವನದ
ವಸ್ತುವಾಗಿದೆ. ಈ ಕುರಿತು ಚಂಪಾ ಅವರು ಸ್ಪಷ್ಟನೆ ನೀಡಲಿ ಎಂದು ಆಗ್ರಹಿಸಿದ್ದಾರೆ.
ಎಡಬಿಡಂಗಿ ಸಾಹಿತಿಗಳ ಮೂಲಕ
ಸಿಎಂ ರಾಜಕೀಯ: ಸಚಿವ ಅನಂತ್
ಮಹಾಲಿಂಗಪುರ: ಸಿಎಂ ಸಿದ್ದರಾಮಯ್ಯ, ಬಿಜೆಪಿ ವಿರುದಟಛಿ ನೇರವಾಗಿ ರಾಜಕೀಯ ಮಾಡಲಾಗದೆ ಎಡಬಿಡಂಗಿ ಸಾಹಿತಿಗಳ ಮೂಲಕ ರಾಜಕೀಯ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ ಏಕ ವಚನದಲ್ಲಿಯೇ ವಾಗ್ಧಾಳಿ ನಡೆಸಿದರು. ಪಟ್ಟಣದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ತಮ್ಮ ಇಡೀ ಭಾಷಣದುದ್ದಕ್ಕೂ ಸಿಎಂ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ವಿರುದಟಛಿ ಏಕ ವಚನದಲ್ಲೇ ಮಾತನಾಡಿದರು. ಇಂದಿನ ಜನಸಾಗರ ನೋಡಿದರೆ ಸಿದ್ದಣ್ಣ ಮನೆಗೆ ಹೋಗೋದು ಗ್ಯಾರಂಟಿ. ತಿರುಪತಿಗೆ ಹೋಗಿ ಬಂದ್ರೂ ಮತ್ತೆ ಆ ಮನುಷ್ಯ ಅಧಿಕಾರಕ್ಕೆ ಬರಲ್ಲ. ಸಾಹಿತಿಗಳನ್ನು ಬಳಸಿಕೊಂಡು ವೋಟ್ ಕೇಳಿ ರಾಜಕೀಯ ಮಾಡುತ್ತಿದ್ದಾರೆ. ಸಿದ್ದಣ್ಣ ಸಿಎಂ ಆದಾಗಿನಿಂದ ರಾಜ್ಯಕ್ಕೆ ದರಿದ್ರ ಬಂದಿದೆ. ನಮಗೆ ಗುಂಡಿನ ಸಿದ್ದಣ್ಣ ಬೇಡ, ನಮಗೆ ಗಂಡು ಬಿಎಸ್‌ವೈ ಬೇಕು ಎಂದರು.
ಸಭ್ಯತೆಯ ಎಲ್ಲೆ ಮೀರಿರುವ ಚಂಪಾ
ಮೈಸೂರು: ಸಮ್ಮೇಳನಾಧ್ಯಕ್ಷ ಪೊ›.ಚಂದ್ರಶೇಖರ ಪಾಟೀಲ ಅವರು ಸಭ್ಯತೆಯ ಗೆರೆ ದಾಟಿ ಬಾಣ ಬಿಟ್ಟಿರಬಹುದು, ನಾವು ಅವರ ವಿರುದಟಛಿ ಕಾಪೆìಟ್ ಬಾಂಬಿಂಗ್ (ವ್ಯಾಪಕ ಖಂಡನೆ) ಮಾಡುತ್ತೇವೆ ಎಂದು ಸಂಸದ ಪ್ರತಾಪ ಸಿಂಹ, ಪೊ›. ಚಂಪಾ ವಿರುದಟಛಿ ತೀವ್ರ ವಾಗ್ಧಾಳಿ ನಡೆಸಿದರು.
ಸೋಮವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ, ಕೇಂದ್ರ ಸಚಿವ ಅನಂತ ಕುಮಾರ್ ಸೆಕ್ಯುಲರ್ ಪದ ಕೇಳಿದರೆ ನಿದ್ದೆ
ಯಲ್ಲಿ ಉಚ್ಚೆ ಹುಯ್ದುಕೊಳ್ಳುತ್ತಾರೆ ಎಂಬ ಪದ ಬಳಕೆ ಮಾಡಿದ್ದಾರೆ. ಸೆಕ್ಯುಲರ್ ಅಂದ ಕೂಡಲೇ ಅನಂತಕುಮಾರ್‌ಗೆ ಉಚ್ಚೆ ಬರುತ್ತೋ ಇಲ್ಲವೋ, ನೀವು ಬಾಯಿ ಬಿಟ್ಟರೆ ಉಚ್ಚೆ ವಾಸನೆ ಬರುತ್ತದೆ. ಸಾಹಿತ್ಯ ಸಮ್ಮೇಳನದ ವೇದಿಕೆಯನ್ನು ರಾಜಕಾರಣ ಮಾಡಲು ಬಳಸಿಕೊಂಡು ಅವರು ಮಾಡಿದ ಉದ್ಘಾಟನಾ ಮತ್ತು ಸಮಾರೋಪ ಭಾಷಣ ಗಬ್ಬೆದ್ದು ನಾರುತ್ತಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಾಲಬಡುಕನಾಗಿ ಇಂದಿರಾ ಸೆಕ್ಯುಲರಿಸಂ ಬಗ್ಗೆ ಮಾತನಾಡುತ್ತಿದ್ದೀರಿ ಎಂದು ಪ್ರತಾಪ ಸಿಂಹ ಜರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
KPS ಹೆಚ್ಚುವರಿ ಎಲ್‌ಕೆಜಿ, 1ನೇ ತರಗತಿ ತೆರೆಯಲು ಅವಕಾಶ
Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್
Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್ ಗೆಲುವು: ಬೊಮ್ಮಾಯಿ ಆರೋಪ
By Election Result: ನಾನು ದಂತದ ಗೋಪುರದಲ್ಲಿ ಕೂತವನಲ್ಲ,ಜನರೊಂದಿಗೆ ಸದಾ ಒಡನಾಟವಿದೆ: ಸಿಎಂ
ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ
Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ
Manya: ಭಜನ ಮಂದಿರದಿಂದ ಕಳವು ಆರೋಪಿಗಳಿಂದ ಮಾಹಿತಿ ಸಂಗ್ರಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.