ರಾಷ್ಟ್ರಪತಿ ಆಗಮನದಿಂದಾಗಿ ವಾಹನ ಸಂಚಾರ, ನಿಲುಗಡೆಯಲ್ಲಿ ಬದಲಾವಣೆ
Team Udayavani, Jun 17, 2017, 12:41 PM IST
ಬೆಂಗಳೂರು: “ನಮ್ಮ ಮೆಟ್ರೋ’ ಉದ್ಘಾಟನೆ ಹಿನ್ನೆಲೆಯಲ್ಲಿ ವಿಧಾನಸೌಧ ಸುತ್ತ ಹಾಗೂ ಗಣ್ಯರು ಆಗಮಿಸುವ ಮಾರ್ಗದಲ್ಲಿ ವಾಹನಗಳ ಸಂಚಾರ ಮತ್ತು ನಿಲುಗಡೆಯನ್ನು ನಿರ್ಬಂಧಿಸಲಾಗಿದೆ.
ಎಲ್ಲೆಲ್ಲಿ ನಿಲುಗಡೆ ಇಲ್ಲ?: ಹಳೆಯ ವಿಮಾನ ನಿಲ್ದಾಣ ರಸ್ತೆಯ ಸುರಂಜನ್‌ದಾಸ್ ರಸ್ತೆ ಜಂಕ್ಷನ್‌ನಿಂದ ಎಎಸ್‌ಸಿ ಸೆಂಟರ್-ಟ್ರಿನಿಟಿ ಚರ್ಚ್- ಟ್ರಿನಿಟಿ ವೃತ್ತ-ವೆಬ್ಸ್ ಜಂಕ್ಷನ್-ಡಿಕೆನ್ಸನ್ ರಸ್ತೆ-ಮಣಿಪಾಲ್ ಸೆಂಟರ್-ಟಿಸಿಒ ವೃತ್ತ-ರಾಜಭವನ ಹಾಗೂ ಸಿಟಿಒ ವೃತ್ತದಿಂದ ರಾಜಭವನ ಜಂಕ್ಷನ್‌ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ವಾಹನ ನಿಲುಗಡೆ ಮಾಡುವಂತಿಲ್ಲ.
ರಾಜಭವನ ಜಂಕ್ಷನ್-ಇನ್‌ಫ್ಯಾಂಟ್ರಿ ರಸ್ತೆ ಜಂಕ್ಷನ್-ಟ್ರಾಫಿಕ್ ಹೆಡ್‌ಕಾÌರ್ಟರ್-ಸಿಟಿಒ ವೃತ್ತದವರೆಗೆ, ಕಾಫಿ ಬೋರ್ಡ್ ಜಂಕ್ಷನ್‌ನಿಂದ ಕೆ.ಆರ್. ವೃತ್ತ, ಬಸವೇಶ್ವರ ವೃತ್ತದಿಂದ ಎಂ.ಎಲ್. ಬಿಲ್ಡಿಂಗ್‌ವರೆಗೆ, ವಿಧಾನಸೌಧ ಪೂರ್ವದ್ವಾರದ ಬಳಿ ನಿರ್ಗಮನ ದ್ವಾರದಿಂದ ಗ್ರಾಂಡ್ ಸ್ಟೆಪ್ಸ್‌ವರೆಗೆ ವಾಹನಗಳ ನಿಲುಗಡೆ ನಿಷೇಧ.
ವಾಹನ ಸಂಚಾರ ನಿಷಿದ್ಧ: ಇನ್ನು ಎಜಿಎಸ್ ಜಂಕ್ಷನ್‌ನಿಂದ ಬಹುಮಹಡಿ ಕಟ್ಟಡದವರೆಗೆ ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ಸಂಜೆ 4ರಿಂದ ರಾತ್ರಿ 8ರವರೆಗೆ ನಿಷೇಧಿಸಲಾಗಿದೆ. ಅದೇ ರೀತಿ, ದೇವರಾಜ್ ಅರಸ್ ರಸ್ತೆಯಲ್ಲಿ ಬಹುಮಹಡಿ ಕಟ್ಟಡದಿಂದ ಎಜಿಎಸ್ ಜಂಕ್ಷನ್‌ವರೆಗೆ ವಾಹನಗಳ ಸಂಚಾರ ಇರುವುದಿಲ್ಲ.
ಇಲ್ಲಿ ನಿಲುಗಡೆಗೆ ಅವಕಾಶ: ಸಚಿವರು ಮತ್ತು ಶಾಸಕರ ವಾಹನಗಳ ನಿಲುಗಡೆ- ವಿಕಾಸಸೌಧ ನಿಲುಗಡೆ ಸ್ಥಳ ಸೆಲ್ಲರ್ 1 ಮತ್ತು 3ರಲ್ಲಿ ಹಾಗೂ ವಿಧಾನಸೌಧ ಪಶ್ಚಿಮ ದ್ವಾರದ ಕೆಂಗಲ್ ಹನುಮಂತಯ್ಯ ವೃತ್ತದಿಂದ ಡಿಸ್ಪೆನ್ಸರಿ ಹಾಗೂ ಡಿಸ್ಪೆನ್ಸರಿಯಿಂದ ನಿರ್ಗಮನ ದ್ವಾರದವರೆಗೆ ನಿಲುಗಡೆಗೆ ಅವಕಾಶ ಇದೆ. ಮಾಧ್ಯಮದ ವಾಹನಗಳು ಎಜಿಎಸ್ ಕಚೇರಿ ನಿಲುಗಡೆ ಸ್ಥಳದಲ್ಲಿ ವಾಹನ ನಿಲ್ಲಿಸಬಹುದು.
ಕಾರ್ಯಕ್ರಮದ ಆಹ್ವಾನಿತರು ಬಹುಮಹಡಿ ಕಟ್ಟಡದ ವಾಹನ ನಿಲುಗಡೆ ಸ್ಥಳ, ಹಳೆಯ ಕೆಜಿಐಡಿ ಮತ್ತು ಹೈಕೋರ್ಟ್ ನಿಲುಗಡೆ ಸ್ಥಳ, ಕಬ್ಬನ್ ಉದ್ಯಾನದ ಒಳಭಾಗ, ಸೆಂಟ್ರಲ್ ಸ್ಟ್ರೀಟ್, ಅನಿಲ್ ಕುಂಬ್ಳೆ ವೃತ್ತದಿಂದ ಬಿ.ಆರ್.ವಿ. ವೃತ್ತದವರೆಗೆ ರಸ್ತೆಯ ಪಶ್ಚಿಮ ಭಾಗದಲ್ಲಿ, ಸ್ವಾತಂತ್ರ್ಯ ಉದ್ಯಾನ ಆವರಣ, ಅರಮನೆ ರಸ್ತೆ, ಸಿಐಡಿ ವೃತ್ತದಿಂದ ಮಹಾರಾಣಿ ಕಾಲೇಜು ಬಳಿಯ ಸೇತುವೆಯ ತಿರುವಿನವರೆಗೆ,
-ಕಸ್ತೂರಬಾ ರಸ್ತೆ, ಹಡ್ಸನ್ ವೃತ್ತದಿಂದ ಸಿದ್ದಲಿಂಗಯ್ಯ ವೃತ್ತದವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಹಾಗೂ ಸಿದ್ದಲಿಂಗಯ್ಯ ವೃತ್ತದಿಂದ ಮ್ಯೂಸಿಯಂವರೆಗೆ ರಸ್ತೆಯ ಪಶ್ಚಿಮ ಭಾಗದಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಪೊಲೀಸ್ ಅಧಿಕಾರಿಗಳು/ ಸಿಬ್ಬಂದಿ ವಾಹನಗಳನ್ನು ಶಾಸಕರ ಭವನದ ವಾಹನ ನಿಲುಗಡೆ ಸ್ಥಳದಲ್ಲಿ ಪಾರ್ಕಿಂಗ್ ಮಾಡಬಹುದು ಎಂದು ಬಿಎಂಆರ್‌ಸಿ ಪ್ರಕಟಣೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಯುವತಿ ಜೊತೆ ಅಸಭ್ಯ ವರ್ತನೆ: ಮ್ಯಾನೇಜರ್, ಮತ್ತಿಬ್ಬರ ಮೇಲೆ ಕೇಸ್
Bengaluru: 3 ತಿಂಗಳ ಹಿಂದಷ್ಟೇ ವಿವಾಹ ಆಗಿದ್ದ ಚಿನ್ನಾಭರಣ ವ್ಯಾಪಾರಿ ಆತ್ಮಹತ್ಯೆ
Bengaluru: 40000 ರೂ. ಲಂಚ ಸ್ವೀಕರಿಸುವಾಗ ಎಎಸ್‌ಐ ಸೇರಿ ಇಬ್ಬರು ಲೋಕಾ ಬಲೆಗೆ
Bengaluru: ಸೆಂಟ್ರಿಂಗ್ ಮರಗಳು ಬಿದ್ದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಸಾವು
Bengaluru: ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಸಹೋದರಿಯರ ಬಲಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.