ಕಸಾಯಿಖಾನೆಗೆ ಗೋವುಗಳ ಅಕ್ರಮ ಸಾಗಾಟದ ಆರೋಪ
Team Udayavani, Sep 1, 2017, 11:51 AM IST
ಬೆಂಗಳೂರು: ಬಕ್ರೀದ್ ಹಬ್ಬದ ನಿಮಿತ್ತ ಶಿವಾಜಿ ನಗರದಲ್ಲಿರುವ ಕಸಾಯಿಖಾನೆಗಳಗೆ ಅಕ್ರಮವಾಗಿ 3 ಸಾವಿರಕ್ಕೂ ಅಧಿಕ ಗೋವುಗಳು ರವಾನೆಯಾಗಿವೆ ಎಂದು ಗುರುವಾರ ಗೋ ಗ್ಯಾನ್ ಫೌಂಡೇಶನ್ ಆರೋಪಿಸಿದೆ.
ನಗರದಲ್ಲಿ ಅಕ್ರಮ ದನ ಸಾಗಣೆ ಜಾಲ ಹೆಚ್ಚುತ್ತಿದ್ದು, ಕೆಲವು ದಿನಗಳ ಹಿಂದೆ ಲಾರಿಗಳಲ್ಲಿ 20ಕ್ಕೂ ಅಧಿಕ ದನಗಳನ್ನು ಅಕ್ರಮವಾಗಿ ಸಾಗಿಸಲಾಗುತಿತ್ತು. ಈ ವಿಚಾರವನ್ನು ಶಿವಾಜಿ ನಗರ ಪೊಲೀಸರ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ. ಆರೋಪಿಗಳನ್ನು ಹಿಡಿಯುವ ಬದಲು ಬೇಜವಾಬ್ದಾರಿ ಹೇಳಿಕೆಗಳನ್ನು ಪೊಲೀಸರು ನೀಡುತ್ತಿದ್ದಾರೆ ಎಂದು ಫೌಂಡೇಷನ್ ಸದಸ್ಯೆ ಜೋಶಿನ್ ಆ್ಯಂಟೋನಿ ಸುದ್ದಿಗೋಷ್ಠಿಯಲ್ಲಿ ಗುರುವಾರ ದೂರಿದರು.
ಗೋವುಗಳ ಅಕ್ರಮ ಸಾಗಾಣಿಕೆ ಕುರಿತು ಬಿಬಿಎಂಪಿಗೆ ಸಹ ದೂರು ನೀಡಲಾಗಿದೆ. ಭಾವೈಕ್ಯತೆಯನ್ನುಂಟು ಮಾಡುವ ಹಬ್ಬಗಳಲ್ಲಿ ಯಾವುದೇ ಧರ್ಮದವರು ಜಾನುವಾರುಗಳು ಸೇರಿದಂತೆ ಪ್ರಾಣಿಗಳನ್ನು ಬಲಿ ನೀಡಬಾರದು. ಅದನ್ನು ದೇವರುಗಳು ಕೂಡ ಒಪ್ಪುವುದಿಲ್ಲ ಎಂದರು.
ಸುಪ್ರೀಂ ಕೋರ್ಟ್ ವಕೀಲ ಶಿರಾಜ್ ಖುರೇಶಿ ಮಾತನಾಡಿ, ಬಕ್ರೀದ್ ಸೇರಿದಂತೆ ಯಾವುದೇ ಹಬ್ಬದಲ್ಲಿ ಪ್ರಾಣಿ ಹತ್ಯೆ ಮಾಡಕೂಡದು. ಪ್ರಾಣಿಗಳಿಗೆ ನೋವನ್ನುಂಟು ಮಾಡಿದರೆ ಅಲ್ಲಾ ಕೂಡ ಒಪ್ಪುವುದಿಲ್ಲ. ಪ್ರತಿಯೊಂದು ಧರ್ಮವನ್ನು ಗೌರವಿಸುವ ಜತೆಗೆ ಅವರ ಭಾವನೆಗಳಿಗೆ ಭಂಗ ತರಬಾರದು. ಅಕ್ರಮವಾಗಿ ಪ್ರಾಣಿಗಳ ಬಲಿಯನ್ನು ಪೊಲೀಸರು ತಡೆದು ರಕ್ಷಿಸಬೇಕು ಎಂದು ಮನವಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.