ಕಾಲುಬಾಯಿ ರೋಗ: ಲಸಿಕೆ ಖರೀದಿಗೆ ಚವಾಣ್ ಸೂಚನೆ
Team Udayavani, Jun 7, 2021, 5:13 PM IST
ಬೆಂಗಳೂರು: ರಾಜ್ಯದಲ್ಲಿ ಕಾಲುಬಾಯಿ ರೋಗಕಂಡುಬಂದ ತಕ್ಷಣ ಸಭೆ ನಡೆಸಿ, ಖಾಸಗಿ ಲಸಿಕಾ ಸಂಸ್ಥೆಗಳಿಂದ ಲಸಿಕೆ ಖರೀದಿಸಿ ಜಾನುವಾ ರು ಗಳಿಗೆನೀಡುವಂತೆ ಪಶುಸಂಗೋಪನಾ ಸಚಿವ ಪ್ರಭುಚವ್ಹಾಣ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಪ್ರತಿ ವರ್ಷ ನವೆಂಬರ್-ಡಿಸೆಂಬರ್‌ನಲ್ಲಿಕೇಂದ್ರ ಮತ್ತು ರಾಜ್ಯ ಸರ್ಕಾರದ 60:40ರ ಅನುಪಾತದಲ್ಲಿ ಕಾಲುಬಾಯಿ ಲಸಿಕಾ ಅಭಿಯಾನನಡೆಸಲಾಗುತ್ತದೆ. ಕಳೆದ ವರ್ಷದಿಂದಕಾಲುಬಾಯಿ ರೋಗದ ಲಸಿಕಾ ಅಭಿಯಾನ ಸಂಪೂರ್ಣಕೇಂದ್ರದ ಯೋಜನೆಯಾಗಿ ನಡೆಯುತ್ತಿತ್ತು.
ಆದರೆ,ಕೊರೊನಾ ಹಾವಳಿಯಿಂದ ಈ ಸಲ ಲಸಿಕಾ ವೇಳಾಪಟ್ಟಿನೀಡುವುದು ವಿಳಂಬ ವಾಗಿದೆ. ಸದ್ಯ ಕೇಂದ್ರಸರ್ಕಾರದೊಂದಿಗೆ ಎಲ್ಲ ಅಗತ್ಯ ಸಂವಹನ ನಡೆಸಲಾಗಿತ್ತು,ಜುಲೈನಲ್ಲಿ ಸಾಮೂಹಿಕ ಲಸಿಕಾಅಭಿಯಾನ ನಡೆಯುವ ನಿರೀಕ್ಷೆ ಇದೆ.ಈ ಮಧ್ಯೆ ರೋಗೋದ್ರೇಕ ಕಂಡುಬಂದಲ್ಲಿ ಸ್ಥಳೀಯವಾಗಿ ಅಗತ್ಯತೆಗೆ ಅನುಗುಣವಾಗಿ ಆಯಾ ಜಿಲ್ಲೆಗಳಲ್ಲಿ ಲಸಿಕೆಖರೀದಿಗೆ ತಾಂತ್ರಿಕ ಅನುಮೋ ದನೆನೀಡಲಾಗಿದೆ.
ರಾಸುಗಳ ಆರೋಗ್ಯದ ದೃಷ್ಟಿಯಿಂದ ಕ್ಷಿಪ್ರ ಕಾರ್ಯಾಚರಣೆ ನಡೆಸಲೂ ಅಧಿಕಾರಿ ಗಳಿಗೆಸೂಚಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಈ ನಡುವೆ ಚಿಕ್ಕಬಳ್ಳಾಪುರದಲ್ಲಿ 2,100, ಆನೇಕಲ್‌ನಲ್ಲಿ1,450 ಮತ್ತು ರಾಮನಗರದ 70 ಜಾನುವಾರು ಗಳಿಗೆಲಸಿಕೆ ನೀಡಲಾಗಿದೆ. ರಾಮನಗರದಲ್ಲಿ 5 ರಾಸುಗಳಲ್ಲಿರೋಗ ಕಾಣಿಸಿಕೊಂಡಿತ್ತು. ಅದರಲ್ಲಿ ನಾಲ್ಕು ರಾಸುಗಳಆರೋಗ್ಯ ಸ್ಥಿರವಾಗಿದ್ದು, ಒಂದಕ್ಕೆ ಚಿಕಿತ್ಸೆ ನೀಡ ಲಾಗುತ್ತಿದೆ.
ಈ ಯಾವುದೇ ಜಿಲ್ಲೆಗಳಲ್ಲಿ ಕಾಲುಬಾಯಿ ರೋಗದಿಂದರಾಸುಗಳ ಸಾವು ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕಾಲುಬಾಯಿ ರೋಗಕ್ಕೆ ಲಸಿಕಾ ಅಭಿಯಾನ ನಡೆಸುತ್ತಿಲ್ಲ ಎಂದು ಆರೋಪಿಸಿದ ಬೆನ್ನಲ್ಲೇ ಈ ಸ್ಪಷ್ಟೀಕರಣನೀಡಿರುವ ಸಚಿವ ಪ್ರಭು ಚವ್ಹಾಣ್, ಮಾಜಿಮುಖ್ಯಮಂತ್ರಿಗಳ ಈ ಗೋವುಗಳ ಕಾಳಜಿಗೆಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.