ಡೇಟಿಂಗ್ ಆ್ಯಪ್‌ನಲ್ಲಿ ಯುವತಿಗೆ ವಂಚನೆ
Team Udayavani, Jun 11, 2023, 12:38 PM IST
ಬೆಂಗಳೂರು: ಡೇಟಿಂಗ್ ಆ್ಯಪ್‌ನಲ್ಲಿ ಹೆಸರು ಬದಲಿಸಿಕೊಂಡು ನಕಲಿ ಪ್ರೊಫೈಲ್ ಸೃಷ್ಟಿಸಿ ಮಹಿಳಾ ಟೆಕಿಗೆ ವಂಚಿಸಿದ ಜಮ್ಮು-ಕಾಶ್ಮೀರ ಮೂಲದ ಆರೋಪಿಯನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಾಗಲೂರು ನಿವಾಸಿ ಮುದಾಸಿರ್ (41) ಬಂಧಿತ. 33 ವರ್ಷದ ಮಹಿಳಾ ಟೆಕಿಗೆ ಆರೋಪಿ ವಂಚಿಸಿದ್ದು, ಆಕೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ.
ಜಮ್ಮು-ಕಾಶ್ಮೀರ ಮೂಲದ ಆರೋಪಿ ಮುದಾಸಿರ್‌ಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳು ಇದ್ದಾರೆ. ಎಂಬಿಎ ಪದವೀಧರನಾಗಿದ್ದು ರಿಯಲ್ ಎಸ್ಟೇಟ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದಾನೆ. ಈ ನಡುವೆ ಬಂಬಲ್ ಎಂಬ ಡೇಟಿಂಗ್ ಆ್ಯಪ್‌ನಲ್ಲಿ ನಕಲಿ ಪ್ರೊಫೈಲ್ ಸೃಷ್ಟಿಸಿ, ಯುವತಿಯರಿಗಾಗಿ ಶೋಧಿಸುತ್ತಿದ್ದ. ಇದೇ ವೇಳೆ ಅದೇ ಆ್ಯಪ್‌ನಲ್ಲಿದ್ದ ಯುವತಿ, ಮದುವೆಗಾಗಿ ಸಂಗಾತಿ ಹುಡುಕಾಡುತ್ತಿದ್ದರು. ಆಗ ಆರೋಪಿ ಆಕೆ ಜತೆ ಚಾಟಿಂಗ್ ಆರಂಭಿಸಿದ್ದು, ತನ್ನನ್ನು ಅನಿರುದ್ಧ/ ಅಭಿಷೇಕ್ ಎಂದು ಪರಿಚಯಿಸಿಕೊಂಡಿದ್ದಾನೆ. ಅಲ್ಲದೆ, ಲಕ್ಷಾಂತರ ರೂ. ವೇತನದ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾನೆ.
ಹೀಗಾಗಿ ಆಕೆ ಕೂಡ ಆತನೊಂದಿಗೆ ಸಂಪರ್ಕ ಮುಂದುವರಿಸಿದ್ದರು. ಬಳಿಕ ಇಬ್ಬರು ಪರಸ್ಪರ ವಾಟ್ಸ್‌ಆ್ಯಪ್ ಮತ್ತು ಕರೆಗಳು ಹಾಗೂ ವಿಡಿಯೋ ಕರೆಗಳನ್ನು ಮಾಡುತ್ತ ಆತ್ಮೀಯರಾಗಿದ್ದರು. ಈ ನಡುವೆ ಒಮ್ಮೆ ಯುವತಿಯನ್ನು ಭೇಟಿಯಾದ ಆರೋಪಿ, ಮದುವೆ ಆಗುವುದಾಗಿ ನಂಬಿಸಿ ಆಕೆ ಜತೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಅಲ್ಲದೆ, ಕೆಲ ದಿನಗಳ ಬಳಿಕ ತನ್ನ ತಾಯಿಗೆ ಅನಾರೋಗ್ಯವಾಗಿದೆ ಎಂದು ಒಂದು ಲಕ್ಷ ರೂ. ಪಡೆದುಕೊಂಡಿದ್ದ. ಆ ನಂತರ ತಾಯಿ ಮೃತಪಟ್ಟಿದ್ದಾರೆ ಎಂದು ಮತ್ತೆ ಸುಳ್ಳು ಹೇಳಿ, ಆಗಲು ಒಂದಷ್ಟು ಹಣ ಪಡೆದುಕೊಂಡಿದ್ದಾನೆ ಎಂದು ಪೊಲೀಸರು ಹೇಳಿದರು.
ದುಬೈಗೆ ಹೋಗುವುದಾಗಿ ಹೇಳಿದ್ದ!: ಕೆಲ ತಿಂಗಳ ಹಿಂದೆ ಆರೋಪಿ ಕರೆ ಮಾಡಿ, ತನ್ನ ಸಹೋದರ ದುಬೈನಲ್ಲಿದ್ದಾನೆ. ಆತನ ಭೇಟಿಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದಾನೆ. ಆ ಬಳಿಕ ಆತನ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ. ಅದರಿಂದ ಅನುಮಾನಗೊಂಡ ಯುವತಿ, ಆತನ ಪ್ರೊಫೈಲ್ ಪರಿಶೀಲಿಸಿದಾಗ, ಆತ ಅನ್ಯ ಕೋಮಿನ ಯುವಕ ಎಂಬುದು ಗೊತ್ತಾಗಿದೆ. ಅಲ್ಲದೆ, ಯುವತಿಯರಿಗೆ ವಂಚಿಸುವುದೇ ಈತನ ಕಾಯಕವಾಗಿದೆ ಎಂಬುದು ತಿಳಿದು, ಕೂಡಲೇ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಸಂಬಂಧ ಮೊಬೈಲ್ ನೆಟ್‌ವರ್ಕ್ ಹಾಗೂ ಇತರೆ ತಾಂತ್ರಿಕ ತನಿಖೆ ಮೂಲಕ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್
Ujire: ಕಥನ ಸೃಜನಶೀಲತೆಯಿಂದ ಪ್ರಾದೇಶಿಕ ಸಂವೇದನೆಯ ಅಭಿವ್ಯಕ್ತಿ; ಅನುಪಮಾ ಪ್ರಸಾದ್
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.