ವಂಚನೆ ಕಂಪನಿಯ ಲೆಕ್ಕ ಪರಿಶೋಧನೆಗೆ ಆರಂಭ


Team Udayavani, Mar 14, 2018, 12:08 PM IST

vanchane.jpg

ಬೆಂಗಳೂರು: ಆಕರ್ಷಕ ಲಾಭ ನೀಡುವುದಾಗಿ ಪುಸಲಾಯಿಸಿ ಬಹುಕೋಟಿ ರೂ. ವಂಚಿಸಿದ ಆರೋಪ ಎದುರಿಸುತ್ತಿರುವ ವಿಕ್ರಂ ಇನ್ವೆಸ್ಟ್‌ ಮೆಂಟ್‌ ಕಂಪನಿಯ ಲೆಕ್ಕಪರಿಶೋಧನೆಯನ್ನು ಆರಂಭಿಸಲಾಗಿದೆ.

2 ಲಕ್ಷದಿಂದ 25 ಕೋಟಿ ರೂ.ವರೆಗೆ ಹೂಡಿಕೆ ಮಾಡಿರುವವರು 700ಕ್ಕೂ ಅಧಿಕ ಮಂದಿ ಇರುವುದು ಗೊತ್ತಾಗಿದೆ. ಆದರೆ, ಸದ್ಯ 90 ದೂರುಗಳು ಮಾತ್ರ ಬಂದಿದ್ದು, ಇನ್ನಷ್ಟು ಬರುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೂಡಿಕೆದಾರರು ಮೌಖೀಕವಾಗಿ ಹೇಳುತ್ತಿರುವ ಪ್ರಕಾರ ವಂಚನೆ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆ. ಅಂದಾಜು 900 ಕೋಟಿ ರೂ. ಗಡಿ ದಾಟುತ್ತಿದೆ. ಆದರೆ, ಇಷ್ಟೇ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಹೀಗಾಗಿ ಲೆಕ್ಕಪರಿಶೋಧನೆ ಮಾಡಿಸಲಾಗುತ್ತಿದೆ. ಕಂಪೆನಿಗೆ ಬಂದಿರುವ ಮೊತ್ತ ಎಷ್ಟು? ಹೂಡಿಕೆದಾರರು ಎಷ್ಟು, ಎಷ್ಟು ಹೂಡಿಕೆ ಮಾಡಿದ್ದಾರೆ. ಇದರಲ್ಲಿ ಕಂಪೆನಿ ಎಷ್ಟು ಲಾಭ ಪಡೆಯುತ್ತಿದೆ.

ಬಡ್ಡಿ ರೂಪದಲ್ಲಿ ಗ್ರಾಹಕರಿಗೆ ವಾಪಸ್‌ ಕೊಟ್ಟಿರುವ ಮೊತ್ತ ಎಷ್ಟು? ಹೂಡಿಕೆಯನ್ನು ಒಟ್ಟಾರಿಯಾಗಿ ವಾಪಸ್‌ ಪಡೆದುಕೊಂಡಿರುವ ಮಂದಿ ಎಷ್ಟು ಅದರ ಮೊತ್ತ ಎಷ್ಟು? ಇನ್ನುಳಿದ ಬಾಕಿ ಮೊತ್ತವನ್ನು ಎಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ತಿಳಿಯಲು ಲೆಕ್ಕಪರಿಶೋಧನೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.

ಠಾಣೆ ಮುಂದೆ ಗೋಳು: ಕೋಟ್ಯಂತರ ರೂ. ಹಣ ಹೂಡಿಕೆ ಮಾಡಿಸಿದ್ದ ರಾಘವೇಂದ್ರ ಶ್ರೀನಾಥ್‌ ಬಂಧನದಿಂದ ಆತಂಕಗೊಂಡಿರುವ ಹೂಡಿಕೆದಾರರು ಬನಶಂಕರಿ ಠಾಣೆ ಎದುರು ನೀಡುವ ವೇಳೆ ಪೊಲೀಸರ ಮುಂದೆ ತಮ್ಮ ಗೋಳು ತೋಡಿಕೊಳ್ಳುತ್ತಿದ್ದಾರೆ.

ತಾವು ಹೂಡಿಕೆ ಮಾಡಿರುವ ದಾಖಲೆಗಳ ಜತೆಗೆ ಠಾಣೆ ಎದುರು ಜಮಾಯಿಸುತ್ತಿರುವ ಹೂಡಿಕೆದಾರರು ಕಂಪನಿ ವಿರುದ್ಧ ದೂರು ನೀಡಿ ಮೌಖೀಕವಾಗಿಯೂ ಲೆಕ್ಕ ಹೇಳುತ್ತಿದ್ದಾರೆ. ಅಲ್ಲದೇ, ಕಂಪೆನಿ ವಿರುದ್ದ ದೂರು ನೀಡಿದರೆ ಹಣ ವಾಪಸ್‌ ಬರುತ್ತದೆಯೇ? ಇಲ್ಲವೇ? ಅಥವಾ ನೇರವಾಗಿ ನ್ಯಾಯಾಲಯದ ಮೊರೆ ಹೋಗಬಹುದಾ ಎಂದು ಠಾಣೆ ಎದುರು ಚರ್ಚಿಸುತ್ತಿದ್ದ ದೃಶ್ಯ ಮಂಗಳವಾರ ಕಂಡು ಬಂತು.

150 ಮಂದಿ ದೂರು: ಸೋಮವಾರ ಒಂದೇ ದಿನ ಸುಮಾರು 65 ಮಂದಿ ಹೂಡಿಕೆದಾರರು ಬನಶಂಕರಿ ಠಾಣೆಗೆ ದೂರು ನೀಡಿದ್ದರು. ಮಂಗಳವಾರ ಇದರ ಸಂಖ್ಯೆ 150ಕ್ಕೆ ಏರಿಕೆಯಾಗಿದೆ. ಕಂಪನಿ ಹೂಡಿಕೆ ಮಾಡಿಸಿಕೊಂಡಿರುವ ಪ್ರಮಾಣ ಮತ್ತು ವಂಚನೆಯ ಪ್ರಮಾಣ ಎಷ್ಟು ಎಂದು ಸರಿಯಾದ ಲೆಕ್ಕ ಸಿಗುತ್ತಿಲ್ಲ. ಮತ್ತೂಂದೆಡೆ ಆರೋಪಿಗಳು ಸರಿಯಾದ ಮಾಹಿತಿ ನೀಡುತ್ತಿಲ್ಲ.

ಇನ್ನು ದೂರುದಾರರು ಹೂಡಿಕೆ ಮಾಡಿದ ಹಣದ ಲೆಕ್ಕ ಹೇಳುತ್ತಿದ್ದಾರೆಯೇ ಹೊರತು ವಾಪಸ್‌ ಪಡೆದ ಹಣದ ಲೆಕ್ಕ ಹೇಳುತ್ತಿಲ್ಲ. ಹೆಚ್ಚಿನದಾಗಿ ಮೌಖೀಕ ಮೊತ್ತ ಹೇಳುತ್ತಿದ್ದಾರೆ. ಗೊಂದಲ ಮೂಡುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಯಾ ಠಾಣೆ ವ್ಯಾಪ್ತಿಯಲ್ಲೇ ದೂರು: ಬೆಂಗಳೂರು ಸೇರಿದಂತೆ ಹೊರ ಜಿಲ್ಲೆಗಳಲ್ಲಿ ನೆಲೆಸಿರುವ ಹೂಡಿಕೆದಾರರೂ ಬನಶಂಕರಿ ಠಾಣೆಗೆ ದೌಡಾಯಿಸುತ್ತಿದ್ದಾರೆ. ಆದರೆ, ಎಲ್ಲಾ ಭಾಗದವರ ದೂರುಗಳನ್ನು ದಾಖಲಿಸಿಕೊಳ್ಳಲು, ತನಿಖೆ ನಡೆಸಲು ತಾಂತ್ರಿಕವಾಗಿ ಕೆಲವೊಂದು ತೊಂದರೆಯಾಗುತ್ತದೆ. ಹೀಗಾಗಿ ದೂರುದಾರರು ನೆಲೆಸಿರುವ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸುವಂತೆ ಸೂಚಿಸಲಾಗಿದೆ.

ವಿದೇಶದಲ್ಲೂ ವಂಚನೆ: ಆರೋಪಿಗಳು ಬೆಂಗಳೂರು ಮಾತ್ರವಲ್ಲದೇ, ಮೈಸೂರು, ಉತ್ತರ ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ವಿದೇಶದಲ್ಲಿ ನೆಲೆಸಿರುವ ಭಾರತೀಯರಿಂದಲೂ ಕೋಟಿಗಟ್ಟಲೇ ಹೂಡಿಕೆ ಮಾಡಿಸಿರುವ ವಿಚಾರ ಬೆಳಕಿಗೆ ಬಂದಿದೆ. ಮೈಸೂರು ಮೂಲದ ಶೆಟ್ಟಿ ಎಂಬುವವರು ಅಮೆರಿಕಾದಲ್ಲಿ ನೆಲೆಸಿದ್ದಾರೆ.

ಇವರಿಗೆ ಪರಿಚಯವಿದ್ದ ನರಸಿಂಹಮೂರ್ತಿ ಹೂಡಿಕೆ ಮಾಡುವಂತೆ ದುಂಬಾಲು ಬಿದ್ದಿದ್ದ. ಇದಕ್ಕೆ ಮಣಿದ ಶೆಟ್ಟಿ ಅವರು ತಮ್ಮ ಸಹೋದರ ಜನಾರ್ದನ ಶೆಟ್ಟಿ ಜತೆ ಸೇರಿಕೊಂಡು 1.18 ಕೋಟಿ ರೂ. ಅನ್ನು ಜುಲೈನಲ್ಲಿ ಹೂಡಿಕೆ ಮಾಡಿದ್ದಾರೆ. ಆದರೆ, ಇದುವರೆಗೂ ಹಣ ವಾಪಸ್‌ ಬಂದಿಲ್ಲ.

ಬ್ಯಾಂಕ್‌ ಲೋನ್‌ ತೆಗೆದು ಕೊಟ್ಟೆ: 13 ವರ್ಷಗಳಿಂದ ನರಸಿಂಹಮೂರ್ತಿ ಪರಿಚಯವಿತ್ತು. ವಿಮೆ ಮಾಡಿಸಿದ್ದೇವು. 10 ವರ್ಷಗಳಿಂದ ವಿಕ್ರಂ ಕಂಪೆನಿಗೆ ಹೂಡಿಕೆ ಮಾಡುವಂತೆ ನಿರಂತರವಾಗಿ ಸಂದೇಶ ಕಳುಹಿಸಿದ್ದ. ಆದರೆ, ಮಣಿದಿರಲಿಲ್ಲ. ಕೆಲ ವರ್ಷಗಳ ಹಿಂದೆ ಹೂಡಿಕೆ ಒಂದೆರಡು ಲಕ್ಷ ಹೂಡಿಕೆ ಮಾಡಿದ್ದೆ. ಆದರೆ, ಮನೆ ಕಟ್ಟುವ ಸಂದರ್ಭದಲ್ಲಿ ಬಡ್ಡಿ ಅಸಲು ಸಮೇತ ಹಣ ವಾಪಸ್‌ ನೀಡಿದ್ದರು.

ಮನೆ ಕಟ್ಟಿದ ಬಳಿಕ ಮತ್ತೂಮ್ಮೆ ನರಸಿಂಹಮೂರ್ತಿ ಒತ್ತಾಯಿಸಲು ಆರಂಭಿಸಿದ. ಅಲ್ಲದೇ ವಿದೇಶದಲ್ಲಿದ್ದ ನನ್ನ ಸಹೋದರನಿಗೂ ಒತ್ತಾಯಸಿದ್ದ. ಕೊನೆಗೆ ಸಹೋದರನ ಹಣದ ಜತೆಗೆ ಬ್ಯಾಂಕ್‌ನಿಂದ 35 ಲಕ್ಷ ರೂ. ಸಾಲ ಪಡೆದು 1.18 ಕೋಟಿ ಹೂಡಿಕೆ ಮಾಡಿದ್ದೇವೆ ಎಂದು ತಮ್ಮ ಅಳಲು ತೋಡಿಕೊಂಡರು ಮೈಸೂರಿನ ಜನಾರ್ದನಶೆಟ್ಟಿ.

ಸಂದೇಶಗಳ ಮೂಲಕ ಆಮಿಷ: ಒಮ್ಮೆ ಹೂಡಿಕೆ ಮಾಡಿದರೆ 6 ತಿಂಗಳ ಅಥವಾ ಒಂದು ವರ್ಷದವರಗೆ ಹಣ ಹಿಂದಿರುಗಿಸುವುದಿಲ್ಲ. ಬಳಿಕವೇ ಹಣ ವಾಪಸ್‌ ಕೊಡುತ್ತಾರೆ.  ಇನ್ನು ಪರಿಚಯಸ್ಥ ಗ್ರಾಹಕರಿಗೆ ಸಂದೇಶಗಳ ಮೂಲಕ ಷೇರು ಖರೀದಿಗೆ ಒತ್ತಾಯಿಸುತ್ತಿದ್ದರು.

ಹೊಸ ಸ್ಕೀಂಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು. ಉದಾಹರಣೆಗೆ ಆಯಿಲ್‌ ಅಥಲಾ ಚಿನ್ನ ಖರೀದಿ ಮಾಡಿ ಅಲ್ಲಿಯೇ ಬಿಡಬಹುದು. ಅಗತ್ಯಬಿದ್ದಾಗ ಮಾರಾಟ ಮಾಡಬಹುದು. ಹೀಗೆ ಹತ್ತಾರು ಸ್ಕೀಂಗಳ ಬಗ್ಗೆ ಸಂದೇಶಗಳಲ್ಲಿ ಮಾಹಿತಿ ನೀಡಿ ಹೂಡಿಕೆ ಮಾಡಿಸುತ್ತಿದ್ದರು ಎಂಬುದು ಗೊತ್ತಾಗಿದೆ ಎಂದು ಅಧಿಕಾರಿ ವಿವರಿಸಿದರು.

ಟಾಪ್ ನ್ಯೂಸ್

musk

Elon Musk ಮಾನಸಿಕ ಸ್ಥಿತಿ ಸರಿಯಿಲ್ಲ: ಲೇಖಕ ಅಬ್ರಾಮ್‌ಸನ್‌

Hardeep Singh Puri: ಕಲ್ಲಿದ್ದಲು ಆಧಾರಿತ ವಿದ್ಯುತ್‌ ಸ್ಥಾವರಗಳಿಗೆ ನೈಸರ್ಗಿಕ ಅನಿಲ

Hardeep Singh Puri: ಕಲ್ಲಿದ್ದಲು ಆಧಾರಿತ ವಿದ್ಯುತ್‌ ಸ್ಥಾವರಗಳಿಗೆ ನೈಸರ್ಗಿಕ ಅನಿಲ

Bantwal: ಬೋಳಂತೂರಿನ ದರೋಡೆ ಪ್ರಕರಣ: ವಾರ ಕಳೆದರೂ ಸಿಗದ ಮಹತ್ವದ ಸುಳಿವು

Bantwal: ಬೋಳಂತೂರಿನ ದರೋಡೆ ಪ್ರಕರಣ: ವಾರ ಕಳೆದರೂ ಸಿಗದ ಮಹತ್ವದ ಸುಳಿವು

DK-DC-Mullai-mugilan

National Highway ಕಾಮಗಾರಿ ಪರಿಶೀಲನೆ: ಮಾರ್ಚ್‌ ಅಂತ್ಯಕ್ಕೆ ಶೇ. 95 ಕಾಮಗಾರಿ ಪೂರ್ಣ: ಡಿಸಿ

Suratkal: ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗ ಕಾರ್ಮಿಕನ ಸೆರೆ

Suratkal: ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗ ಕಾರ್ಮಿಕನ ಸೆರೆ

ಕರಾವಳಿಯ ವಿವಿಧೆಡೆ ಸಂಭ್ರಮದ ವೈಕುಂಠ ಏಕಾದಶಿ

ಕರಾವಳಿಯ ವಿವಿಧೆಡೆ ಸಂಭ್ರಮದ ವೈಕುಂಠ ಏಕಾದಶಿ

Mangaluru: ಡೊಂಗರಕೇರಿ ಶ್ರೀ ವೆಂಕಟರಮಣ ದೇಗುಲ: ಪುಷ್ಪಯಾಗ, ಅಷ್ಟಾವಧಾನ ಸೇವೆ ಸಂಪನ್ನ

Mangaluru: ಡೊಂಗರಕೇರಿ ಶ್ರೀ ವೆಂಕಟರಮಣ ದೇಗುಲ: ಪುಷ್ಪಯಾಗ, ಅಷ್ಟಾವಧಾನ ಸೇವೆ ಸಂಪನ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-bng

Cold Weather: ಬೀದರ್‌, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?

13-bng

Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!

9-kishor

BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್‌ ರಾಯಭಾರಿ

8-ather

EV ದ್ವಿಚಕ್ರ ವಾಹನ ಮಾರಾಟ: ಏಥರ್‌ ಸಂಸ್ಥೆ ಪಾಲು ಶೇ.25

7-aishwarya

Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್‌ ಸೂಚನೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

musk

Elon Musk ಮಾನಸಿಕ ಸ್ಥಿತಿ ಸರಿಯಿಲ್ಲ: ಲೇಖಕ ಅಬ್ರಾಮ್‌ಸನ್‌

Hardeep Singh Puri: ಕಲ್ಲಿದ್ದಲು ಆಧಾರಿತ ವಿದ್ಯುತ್‌ ಸ್ಥಾವರಗಳಿಗೆ ನೈಸರ್ಗಿಕ ಅನಿಲ

Hardeep Singh Puri: ಕಲ್ಲಿದ್ದಲು ಆಧಾರಿತ ವಿದ್ಯುತ್‌ ಸ್ಥಾವರಗಳಿಗೆ ನೈಸರ್ಗಿಕ ಅನಿಲ

Bantwal: ಬೋಳಂತೂರಿನ ದರೋಡೆ ಪ್ರಕರಣ: ವಾರ ಕಳೆದರೂ ಸಿಗದ ಮಹತ್ವದ ಸುಳಿವು

Bantwal: ಬೋಳಂತೂರಿನ ದರೋಡೆ ಪ್ರಕರಣ: ವಾರ ಕಳೆದರೂ ಸಿಗದ ಮಹತ್ವದ ಸುಳಿವು

DK-DC-Mullai-mugilan

National Highway ಕಾಮಗಾರಿ ಪರಿಶೀಲನೆ: ಮಾರ್ಚ್‌ ಅಂತ್ಯಕ್ಕೆ ಶೇ. 95 ಕಾಮಗಾರಿ ಪೂರ್ಣ: ಡಿಸಿ

Suratkal: ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗ ಕಾರ್ಮಿಕನ ಸೆರೆ

Suratkal: ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗ ಕಾರ್ಮಿಕನ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.