Arrested: ನಕಲಿ ಶ್ಯೂರಿಟಿ ನೀಡಿ ಕೋರ್ಟಿಗೆ ವಂಚನೆ: 13 ಜನ ಬಂಧನ


Team Udayavani, Dec 14, 2024, 10:57 AM IST

Arrested: ನಕಲಿ ಶ್ಯೂರಿಟಿ ನೀಡಿ ಕೋರ್ಟಿಗೆ ವಂಚನೆ: 13 ಜನ ಬಂಧನ

ಬೆಂಗಳೂರು: ನಕಲಿ ಶ್ಯೂರಿಟಿ ನೀಡಿ ನ್ಯಾಯಾಲಯಕ್ಕೆ ಹಾಗೂ ಆಸ್ತಿಯ ಮಾಲಿಕರಿಗೆ ಮೋಸ ಮಾಡುತ್ತಿದ್ದ ಜಾಲ ಬೇಧಿಸಿರುವ ಹಲಸೂರು ಗೇಟ್‌ ಠಾಣೆ ಪೊಲೀಸರು 13 ಮಂದಿಯನ್ನು ಬಂಧಿಸಿದ್ದಾರೆ.

ಮಂಜುನಾಥ್‌, ಆನಂದ್‌, ಇಂದ್ರೇಶ್‌, ದೊಡ್ಡಯ್ಯ, ಚಂದ್ರಶೇಖರ್‌, ಸಂತೋಷ್‌ ಕುಮಾರ್‌, ದಾದಾ ಹಯಾತ್‌ ಖಲಂದರ್‌, ಸ್ವರೂಪ್‌, ಮನೋಜ್‌, ಆನಂದ್‌ ಕುಮಾರ್‌, ಕೆಂಪೇಗೌಡ ಹಾಗೂ ವಿನಾಯಕ್‌ ಬಂಧಿತರು. ಆರೋಪಿಗಳಿಂದ ಕೃತ್ಯಕ್ಕೆ ಬಳಸುತ್ತಿದ್ದ 139 ವಿವಿಧ ಹೆಸರು ಮತ್ತು ನಂಬರ್‌ಗಳ ನಕಲಿ ಆಧಾರ್‌ ಕಾರ್ಡ್‌ಗಳು, 43 ನಕಲಿ ರೇಷನ್‌ ಕಾರ್ಡ್‌ಗಳು, 16 ನಕಲಿ ಪ್ಯಾನ್‌ ಕಾರ್ಡ್‌ಗಳು, ವಿವಿಧ ಹೆಸರುಗಳಿರುವ ವ್ಯಕ್ತಿಗಳ 35 ಜಮೀನಿನ ಆರ್‌.ಟಿ.ಸಿ ಮತ್ತು ಮ್ಯುಟೇಷನ್‌ ಪ್ರತಿಗಳು, ನಕಲಿ ಕಾರ್ಡ್‌ಗಳನ್ನು ತಯಾರಿಸಲು ಉಪಯೋಗಿಸುತ್ತಿದ್ದ 1 ಕಂಪ್ಯೂಟರ್‌, ಒಂದು ಪ್ರಿಂಟರ್‌, ಲ್ಯಾಮಿನೇಷನ್‌ ಯಂತ್ರ ಹಾಗೂ 12 ಮೊಬೈಲ್‌ ವಶಪಡಿಸಿಕೊಳ್ಳಲಾಗಿದೆ.

ಜೈಲಿನಲ್ಲಿರುವವರ ಕಡೆಯವರಿಂದ 15 ರಿಂದ 20 ಸಾವಿರ ರೂ. ಹಣ ಪಡೆಯುತ್ತಿದ್ದ ಆರೋಪಿಗಳ ಗ್ಯಾಂಗ್‌, ನಕಲಿ ಶ್ಯೂರಿಟಿ ನೀಡಿ ಅವರನ್ನು ಜಾಮೀನಿನ ಮೇಲೆ ಹೊರ ಬರಲು ಸಹಕರಿಸುತ್ತಿದ್ದರು.

ಭೂಮಿ ಜಾಲತಾಣದಿಂದ ಮಾಹಿತಿ ಪಡೆಯು ತ್ತಿದ್ದರು: ಅಸಲಿ ಆಸ್ತಿ ಮಾಲಿಕರ ವಿವರವನ್ನು ಕಂದಾಯ ಇಲಾಖೆಯ ಭೂಮಿ ಜಾಲತಾಣದಲ್ಲಿ ಪಡೆಯುತ್ತಿದ್ದ ಆರೋಪಿಗಳು, ಸರ್ವೇ ನಂಬರ್‌, ಮನೆ ವಿಳಾಸ ಸೇರಿ ಅಗತ್ಯ ಮಾಹಿತಿ ಪಡೆಯುತ್ತಿದ್ದರು. ನಕಲಿ ಆಧಾರ್‌ ಕಾರ್ಡ್‌ನಲ್ಲಿ ಆರೋಪಿಯ ಭಾವಚಿತ್ರ, ನಕಲಿ ಸಂಖ್ಯೆ ಹಾಗೂ ಅಸಲಿ ಮಾಲಿಕರ ವಿಳಾಸ ಅಳವಡಿಸುತ್ತಿದ್ದರು. ಬ್ಯಾಂಕ್‌ ಲೋನ್‌ ತೆಗೆದುಕೊಳ್ಳದ ಆಸ್ತಿ ಮಾಲಿಕರ ಪಹಣಿ ಪತ್ರವನ್ನು ಇದೇ ರೀತಿ ನಕಲಿಸುತ್ತಿದ್ದರು.

ವಿವಿಧ ಅಪರಾಧ ಪ್ರಕರಣಗಳಲ್ಲಿ ಜೈಲು ಸೇರುವ ಆರೋಪಿಗಳಿಗೆ ನ್ಯಾಯಾಲಯ ಜಾಮೀನು ನೀಡಿದಾಗ ಶ್ಯೂರಿಟಿ ಒದಗಿಸ ಬೇಕಾಗಿದೆ. ಆರೋಪಿಗಳಿಗೆ ಶ್ಯೂರಿಟಿ ನೀಡಲು ಯಾರೂ ಮುಂದೆ ಬರದಿರುವವರನ್ನು ಗುರಿಯಾಗಿಸಿ ಅವರ ಕುಟುಂಬಸ್ಥರನ್ನು ಆರೋಪಿಗಳು ಸಂಪರ್ಕಿಸುತ್ತಿದ್ದರು. ಗಾಂಧಿ ನಗರದ ಕಚೇರಿಯಲ್ಲಿ ವ್ಯವಸ್ಥಿತವಾಗಿ ದಂಧೆ ನಡೆಸುತ್ತಿದ್ದರು. 40ಕ್ಕಿಂತ ಹೆಚ್ಚು ಆರೋಪಿಗಳಿಗೆ ನಕಲಿ ಜಾಮೀನು ನೀಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಆರೋಪಿಗಳು ಸಿಕ್ಕಿ ಬಿದ್ದಿದ್ದು ಹೇಗೆ?:

ಇತ್ತೀಚೆಗೆ ನೃಪತುಂಗ ರಸ್ತೆಯಲ್ಲಿರುವ ಸಿ.ಎಂ.ಎಂ. ಕೋರ್ಟ್‌(ಮ್ಯಾಜೆಸ್ಟ್ರೇಟ್‌ ಕೋರ್ಟ್‌)ನ ಮುಂಭಾ ಗದ ಫ‌ುಟ್‌ಪಾತ್‌ನಲ್ಲಿ 5 ರಿಂದ 6 ಜನ ಅಪರಿಚಿತ ವ್ಯಕ್ತಿಗಳು ನಕಲಿ ಆಧಾರ್‌ ಕಾರ್ಡ್‌, ಪಹಣಿ, ಮ್ಯೂಟೇಷನ್‌ಗಳನ್ನು ಇಟ್ಟುಕೊಂಡು ನ್ಯಾಯಾಲಯ ದಲ್ಲಿ ಆರೋಪಿಗಳ ಜಾಮೀನಿಗಾಗಿ ನಕಲಿ ದಾಖ ಲಾತಿಗಳನ್ನು ಸಲ್ಲಿಸಿ ಶ್ಯೂರಿಟಿ ನೀಡಿ ನ್ಯಾಯಾಲಯಕ್ಕೆ ಹಾಗೂ ನಿಜವಾದ ಆಸ್ತಿಯ ಮಾಲಿಕರಿಗೆ ಮೋಸ ಮಾಡುತ್ತಿರುವ ಬಗ್ಗೆ ಹಲಸೂರು ಗೇಟ್‌ ಠಾಣೆ ಪೊಲೀಸರಿಗೆ ಸುಳಿವು ಸಿಕ್ಕಿತ್ತು. ಈ ಮಾಹಿತಿ ಆಧರಿಸಿ ಕಾರ್ಯಾಚರಣೆಗೆ ಇಳಿದ ಪೊಲೀಸರು ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇವರು ಕೊಟ್ಟ ಮಾಹಿತಿ ಆಧರಿಸಿ ಮೈಸೂರು ಬ್ಯಾಂಕ್‌ ಸರ್ಕಲ್‌ನಲ್ಲಿ ನಾಲ್ವರು, ಮೆಜೆಸ್ಟಿಕ್‌ ಸೈಬರ್‌ ಸೆಂಟರ್‌ವೊಂದರಲ್ಲಿ ಓರ್ವನನ್ನು ಹಾಗೂ ಇತರ ಆರೋಪಿಗಳನ್ನು ಬಂಧಿಸಲಾಗಿದೆ.

ಟಾಪ್ ನ್ಯೂಸ್

2-saif

Saif Ali Khan: ಬಾಲಿವುಡ್ ನಟ ಸೈಫ್ ಅಲಿಖಾನ್ ಗೆ ಚಾಕು ಇರಿತ; ಆಸ್ಪತ್ರೆಗೆ ದಾಖಲು

Sathish-jarakhoili

Congress: ಪಕ್ಷಕ್ಕೆ ಪೂರ್ಣ ಪ್ರಮಾಣ ಅಧ್ಯಕ್ಷರು ಬೇಕು: ಸಚಿವ ಸತೀಶ್‌ ಜಾರಕಿಹೊಳಿ

UDp-Nagarasabhe

Proposal: ಮಹಾನಗರ ಪಾಲಿಕೆ ಆಗಿ ಉಡುಪಿ ನಗರಸಭೆ: ಪ್ರಸ್ತಾವನೆಗೆ ಸೂಚನೆ

Ramesh-BYV

BJP Politics: ಮಗನ ಪರ ನಿಲ್ಲಬೇಡಿ: ಬಿಎಸ್‌ವೈಗೆ ರಮೇಶ್‌ ಜಾರಕಿಹೊಳಿ; ಬಿವೈವಿ ಆಕ್ರೋಶ

money-Currency

Micro Finance: ಮೀಟರ್‌ ಬಡ್ಡಿ ಕಿರುಕುಳ: ಊರೇ ತೊರೆದ 100ಕ್ಕೂ ಹೆಚ್ಚು ಕುಟುಂಬ

High–Gov-logo

Rule of Safety: ಖಾಸಗಿ ಅಷ್ಟೇ ಅಲ್ಲ, ಸರಕಾರಿ ಶಾಲೆಗಳಿಗೂ ʼಅಗ್ನಿ ಸುರಕ್ಷೆʼ ಬಿಸಿ

Rajbhavana-gehlot

Land Grab: ಖಾಸಗಿ ಸಂಸ್ಥೆಗೆ ಗೋಮಾಳ: ಕಂದಾಯ ಸಚಿವರ ವಿರುದ್ಧ ರಾಜ್ಯಪಾಲರಿಗೆ ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJp-pro-cow2

Chamarajpete: ಕೆಚ್ಚಲು ಕೊಯ್ದ ಪ್ರಕರಣ: ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ

Cow-zammer

Chamarajpete: ಕೆಚ್ಚಲು ಕೊಯ್ದ ಕೇಸ್‌; 3 ಲಕ್ಷ ರೂ.ಮೌಲ್ಯದ 3 ಹಸು ಕೊಡಿಸಿದ ಸಚಿವ ಜಮೀರ್‌

Surya-jaiShankar

US Consulate: ಬೆಂಗಳೂರಲ್ಲಿ ಜ.17ಕ್ಕೆ ಅಮೆರಿಕ ದೂತಾವಾಸ ಕಚೇರಿ ಆರಂಭ

Bengaluru: ಬಿಬಿಸಿಯಲ್ಲಿ ಬೆಂಕಿ ಅವಘಡ: 152 ಕೋಟಿ ನಷ್ಟ

Bengaluru: ಬಿಬಿಸಿಯಲ್ಲಿ ಬೆಂಕಿ ಅವಘಡ: 152 ಕೋಟಿ ನಷ್ಟ

2

Bengaluru: ಮಗು ಮೇಲೆ ಲೈಂಗಿಕ ದೌರ್ಜನ್ಯ, ಹ*ತ್ಯೆ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

2-saif

Saif Ali Khan: ಬಾಲಿವುಡ್ ನಟ ಸೈಫ್ ಅಲಿಖಾನ್ ಗೆ ಚಾಕು ಇರಿತ; ಆಸ್ಪತ್ರೆಗೆ ದಾಖಲು

Sathish-jarakhoili

Congress: ಪಕ್ಷಕ್ಕೆ ಪೂರ್ಣ ಪ್ರಮಾಣ ಅಧ್ಯಕ್ಷರು ಬೇಕು: ಸಚಿವ ಸತೀಶ್‌ ಜಾರಕಿಹೊಳಿ

UDp-Nagarasabhe

Proposal: ಮಹಾನಗರ ಪಾಲಿಕೆ ಆಗಿ ಉಡುಪಿ ನಗರಸಭೆ: ಪ್ರಸ್ತಾವನೆಗೆ ಸೂಚನೆ

Ramesh-BYV

BJP Politics: ಮಗನ ಪರ ನಿಲ್ಲಬೇಡಿ: ಬಿಎಸ್‌ವೈಗೆ ರಮೇಶ್‌ ಜಾರಕಿಹೊಳಿ; ಬಿವೈವಿ ಆಕ್ರೋಶ

money-Currency

Micro Finance: ಮೀಟರ್‌ ಬಡ್ಡಿ ಕಿರುಕುಳ: ಊರೇ ತೊರೆದ 100ಕ್ಕೂ ಹೆಚ್ಚು ಕುಟುಂಬ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.