Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್‌ಐಸಿ ಏಜೆಂಟ್‌ಗೆ ಜೈಲು
Team Udayavani, Apr 29, 2024, 11:49 AM IST
ಬೆಂಗಳೂರು: ಅಧಿಕಾರ ದುರುಪಯೋಗ ಪಡಿಸಿಕೊಂಡು ಬ್ಯಾಂಕ್‌ನ ಚೆಕ್‌ಗಳನ್ನು ದುರ್ಬಳಕೆ ಮಾಡಿಕೊಂಡ ಆರೋಪದ ಮೇರೆಗೆ ರಾಷ್ಟ್ರೀಕೃತ ಬ್ಯಾಂಕ್‌ನ ಮುಖ್ಯ ಕ್ಯಾಷಿಯರ್ ಹಾಗೂ ಎಲ್‌ಐಸಿ ಏಜೆಂಟ್‌ಗೆ ನಗರದ ಸಿಬಿಐ ವಿಶೇಷ ನ್ಯಾಯಾಲಯದ ಜೈಲು ಶಿಕ್ಷೆ, ಲಕ್ಷಾಂತರ ರೂ. ದಂಡ ವಿಧಿಸಿದೆ.
ಬಳ್ಳಾರಿಯ ಹೊಸಪೇಟೆ ತಾಲೂಕಿನ ಅಣೆಕಟ್ಟು ರಸ್ತೆ ಶಾಖೆಯ ರಾಷ್ಟ್ರೀಕೃತ ಬ್ಯಾಂಕ್‌ನ ಮುಖ್ಯ ಕ್ಯಾಷಿಯರ್ ಎಸ್.ಗೋಪಾಲಕೃಷ್ಣ ಮತ್ತು ಎಲ್‌ಐಸಿ ಏಜೆಂಟ್ ಕೆ.ರಾಘವೇಂದ್ರಗೆ 4 ವರ್ಷ ಜೈಲು ಶಿಕ್ಷೆ ವಿಧಿಸಿರುವ ಸಿಬಿಐ ಕೋರ್ಟ್, ಕ್ಯಾಷಿಯರ್ ಗೋಪಾಲಕೃಷ್ಣನಿಗೆ 2,10 ಲಕ್ಷ ರೂ. ದಂಡ ಹಾಗೂ ಎಲ್‌ಐಸಿ ಏಜೆಂಟ್ ರಾಘವೇಂದ್ರಗೆ 1.60 ಲಕ್ಷ ರೂ. ದಂಡ ವಿಧಿಸಿದೆ.
ಆರೋಪಿಗಳ ಪೈಕಿ ಗೋಪಾಲಕೃಷ್ಣ ತನ್ನ ಅಧಿಕಾರ ದುರುಪಯೋಗ ಪಡಿಸಿಕೊಂಡು 2016ರ ಅಪನಗದೀಕರಣ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿ ಆರ್‌ಬಿಐ ನಿಯಮಾವಳಿಗಳನ್ನು ಉಲ್ಲಂ ಸಿ ಬ್ಯಾಂಕ್‌ಗೆ ಸೇರಿದ 101 ಚೆಕ್‌ಗಳನ್ನು ಯಾವುದೇ ದಾಖಲೆಗಳನ್ನು ಪಡೆಯದೆ, ರಾಘವೇಂದ್ರ ನಿಗೆ ನೀಡಿದ್ದ. ಈತ ಈ ಚೆಕ್‌ಗಳನ್ನು ಬೇರೆ ಬೇರೆ ಹೆಸರಿನಲ್ಲಿ ಅದೇ ಬ್ಯಾಂಕ್‌ಗೆ ನೀಡಿ ಲಕ್ಷಾಂತರ ರೂ. ವಂಚಿಸಲು ಪ್ರಯತ್ನಿಸಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಆರೋಪಿಗಳ ವಂಚನೆ ಬಯಲಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Manipur: ಸಿಎಂ ಬಿರೇನ್ ಸಿಂಗ್ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ
Racial Remark: ಕುಮಾರಸ್ವಾಮಿಯವರ “ಕರಿಯ” ಎಂದದ್ದು ತಪ್ಪು: ಡಿ.ಕೆ.ಶಿವಕುಮಾರ್
Illegal Property Case: ಸಚಿವ ಜಮೀರ್ ಅಹ್ಮದ್‌ಖಾನ್‌ಗೆ ಲೋಕಾಯುಕ್ತದಿಂದ ನೋಟಿಸ್
Mangaluru: ವೆನ್ಲಾಕ್ ಆಸ್ಪತ್ರೆ 10 ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣ: ಸಚಿವ ದಿನೇಶ್
Space Science: ಸ್ಪೇಸ್‌ಎಕ್ಸ್‌ನಿಂದ ಮೊದಲ ಬಾರಿ ಇಸ್ರೋ ಉಪಗ್ರಹ ನಭಕ್ಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.