Check theft case: ಚೆಕ್ ಕಳವು ಕೇಸ್; ಬ್ಯಾಂಕ್‌ಗೆ 35000 ರೂ. ದಂಡ
Team Udayavani, Oct 30, 2024, 1:20 PM IST
ಬೆಂಗಳೂರು: ಚೆಕ್ ನೀಡುವಲ್ಲಿ ನಿರ್ಲಕ್ಷ್ಯ ವಹಿಸಿದ ಕೊರಿಯರ್ ಸಂಸ್ಥೆ ಹಾಗೂ ಗ್ರಾಹಕ ಚೆಕ್ ಕಳೆದುಕೊಂಡಿರುವುದಾಗಿ ದೂರು ನೀಡಿದ ಬಳಿಕವೂ ಚೆಕ್ ನಗದೀಕರಣ ಮಾಡಿ ಗ್ರಾಹಕ ಸೇವೆಯಲ್ಲಿ ವ್ಯತ್ಯಯ ಮಾಡಿದ ಬ್ಯಾಂಕ್‌ಗೆ ಗ್ರಾಹಕ ವ್ಯಾಜ್ಯಗಳ ನ್ಯಾಯಾಲಯ 40,100 ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಬೆಂಗಳೂರು ಆರ್.ಟಿ. ನಗರದ ನಿವಾಸಿ ಅಭಿಮನ್ಯು ಉದ್ಯಮಿಯಾಗಿದ್ದು, ಇವರು 2014ರ ಫೆಬ್ರವರಿ 13ರಂದು 8 ಚೆಕ್‌ಗಳನ್ನು ವಿವಿಧ ಸ್ಥಳಗಳಿಗೆ ಕೊರಿಯರ್ ಮೂಲಕ ಡೀಲರ್‌ಗಳ ವಿಳಾಸಕ್ಕೆ ಕಳುಹಿಸಿದ್ದಾರೆ. ಆದರೆ ಕೊರಿಯರ್ ಸಂಸ್ಥೆಯು ನಿಗದಿತ ಸಂಖ್ಯೆಯ ಒಂದು ಚೆಕ್ ಕಳೆದು ಹೋಗಿರುವುದಾಗಿ ಅಭಿಮನ್ಯು ಸಿಂಗ್‌ಗೆ ತಿಳಿಸಿ, ಆರ್.ಟಿ. ನಗರದ ಪೊಲೀಸ್ ಠಾಣೆಯಲ್ಲಿ ಚೆಕ್ ಕಳೆದು ಹೋಗಿರುವುದಾಗಿ ದೂರು ನೀಡಿದ್ದರು. ಇದೇ ವೇಳೆ ಅಭಿಮನ್ಯು ಅವರು ಬ್ಯಾಂಕ್‌ಗೆ ಕರೆ ಮಾಡಿ, ನಿಗದಿತ ಸಂಖ್ಯೆಯ 35,100 ರೂ. ಮೌಲ್ಯದ ಚೆಕ್ ನಗದೀಕರಣ ಮಾಡದಂತೆ ಮನವಿ ಮಾಡಿದ್ದರು. ಕಳೆದು ಹೋದ ಚೆಕ್ ಫೆ.15ರಂದು ಡೀಲರ್ ನಗದೀಕರಣ ಮಾಡಿರುವುದು ಕಂಡು ಬಂದಿದೆ. ಈ ಕುರಿತು ಕೊರಿಯರ್ ಸಂಸ್ಥೆಯನ್ನು ಸಂಪರ್ಕಿಸಿದಾಗ, ಸಂಸ್ಥೆಯು ಬೇರೆ ಸಿಬ್ಬಂದಿಯೊಬ್ಬರು ಆಪ್‌ಡೇಟ್ ಮಾಡದೇ ನಿಯಮ ಬಾಹಿರವಾಗಿ ವಿಳಾಸದಲ್ಲಿ ಉಲ್ಲೇಖೀಸಿದ ಸ್ಥಳಕ್ಕೆ ಡೆಲಿವರಿ ಮಾಡಿರುವುದು ಮಾಹಿತಿ ನೀಡಿದ್ದರು. ಇದೇ ವೇಳೆ ಬ್ಯಾಂಕ್ ಗ್ರಾಹಕ ಚೆಕ್ ನಗದೀಕರಣ ತಡೆ ಹಿಡಿಯುವಂತೆ ದೂರು ನೀಡಿದ್ದರೂ, ಚೆಕ್ ನಗದೀಕರಣ ಮಾಡಿ ಗ್ರಾಹಕ ಸೇವೆಯಲ್ಲಿ ವ್ಯತ್ಯಯ ಎಸಗಿದೆ ಎನ್ನುವುದಾಗಿ ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ.
ವಾದವೇನು?: ದೂರುದಾರರು ತಮ್ಮ ಚೆಕ್‌ನ್ನು ಡೆಲಿವರಿ ಮಾಡುವಲ್ಲಿ ನಿರ್ಲಕ್ಷ್ಯ ವಹಿಸಿದ ಕೊರಿ ಯರ್ ಸಂಸ್ಥೆ ಹಾಗೂ ಕಳೆದುಹೋದ ಚೆಕ್ ನಗದೀಕರಿ ಸದಂತೆ ದೂರು ನೀಡಿದರೂ ರಾಷ್ಟ್ರೀಕೃತ ಬ್ಯಾಂಕ್ 35,100 ರೂ. ಮೌಲ್ಯದ ಚೆಕ್ ನಗದೀಕರಣ ಮಾಡಿದೆ. ಗ್ರಾಹಕ ಸೇವೆಯಲ್ಲಿ ವ್ಯತ್ಯಯ ಮಾಡಿದ ಕೊರಿಯರ್ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ನಿಂದ 35,100 ಚೆಕ್ ಮೊತ್ತ ಹಾಗೂ 10 ಸಾವಿರ ರೂ.ಪರಿಹಾರ ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಎರಡು ಕಡೆಯ ವಾದ ವಿವಾದ ಆಲಿಸಿದ ಬೆಂಗಳೂರು ಒಂದನೇ ಹೆಚ್ಚುವರಿ ಗ್ರಾಹಕ ವ್ಯಾಜ್ಯಗಳ ನ್ಯಾಯಾಲಯದ ಬ್ಯಾಂಕ್ ಹಾಗೂ ಕೊರಿಯರ್ ಸಂಸ್ಥೆಯಿಂದ ಗ್ರಾಹಕ ಸೇವೆಯಲ್ಲಿ ವ್ಯತ್ಯಯವಾಗಿದೆ. ಇದರಿಂದಾಗಿ ಕೊರಿಯರ್ ಸಂಸ್ಥೆಯು 5 ಸಾವಿರ ಹಾಗೂ ಬ್ಯಾಂಕ್, ಚೆಕ್ ಮೊತ್ತ 35,100 ರೂ.ವನ್ನು ದೂರುದಾರರಿಗೆ 2015ರಿಂದ ಸೆ.29ರ ವರೆಗೆ ಶೇ.6ಬಡ್ಡಿ ದರದಲ್ಲಿ ಪಾವತಿ ಮಾಡುವಂತೆ ಸೂಚನೆ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Havyaka Mahasabha: ಡಿ.27ರಿಂದ ಬೆಂಗಳೂರಿನಲ್ಲಿ ತೃತೀಯ ವಿಶ್ವ ಹವ್ಯಕ ಸಮ್ಮೇಳನ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mumbai; ಚುನಾವಣೆಗೆ ಏಕಾಂಗಿ ಸ್ಪರ್ಧೆ: ಉದ್ಧವ್ ಶಿವಸೇನೆ ಇಂಗಿತ!
Kota; ಮತ್ತೊಬ್ಬ ವಿದ್ಯಾರ್ಥಿ ಆತ್ಮಹ*ತ್ಯೆ: ವರ್ಷದ 17ನೇ ಕೇಸು
C.T. Ravi ಗೈರು; ಸಾಹಿತ್ಯ ಕ್ಷೇತ್ರದಲ್ಲಿ ರಾಜಕೀಯ ಮಾಡಬಾರದು: ಎಚ್.ಕೆ.ಪಾಟೀಲ್
ಮಮ್ತಾಜ್ ಅಲಿ ಆತ್ಮಹತ್ಯೆಗೆ ಪ್ರಚೋದನೆ ಆರೋಪ: ಜಾಮೀನು ವಿಚಾರಣೆ ಅರ್ಜಿ ಮುಂದೂಡಿಕೆ
Kannada; ಬಳ್ಳಾರಿಯಲ್ಲಿ 88ನೇ ಕನ್ನಡ ಸಾಹಿತ್ಯ ಸಮ್ಮೇಳನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.