ಬಾಲಕಿ ಅಪಹರಣ: ಜೈಲು ಸೇರಿದ ಚಾಲಕ
Team Udayavani, Apr 19, 2019, 12:48 PM IST
ಬೆಂಗಳೂರು: ಹೆಣ್ಣುಮಗುವಿದೆ ಎಂದು ಸಂಬಂಧಿಕರಿಗೆ ಹೇಳಿದ್ದ ಒಂದು ಸುಳ್ಳು! ಈ ಸುಳ್ಳನ್ನು ನಿಜ ಎಂದು ನಂಬಿಸಲು ಬಾಲಕಿ ಅಪಹರಣ!! ಆ ತಪ್ಪಿಗೆ ಲಾರಿಚಾಲಕ ಜೈಲುಪಾಲಾಗಿರುವ ಘಟನೆ ಸಂಪಿಗೆಹಳ್ಳಿಯಲ್ಲಿ ನಡೆದಿದೆ. ವರ್ತೂರಿನ ನಿವಾಸಿ ಎಚ್.ರಮೇಶ್ ಜೈಲು ಸೇರಿದವ.
ಏ.10ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಡಾ. ಎಸ್. ಆರ್ ಕೆ ನಗರದಲ್ಲಿ ಅಂಗಡಿಗೆ ತಿನಿಸು ತರಲು ಹೋದ ಮೂರು ವರ್ಷದ ಬಾಲಕಿ ಅಪಹರಣ ಕ್ಕೊಳಗಾದ ಪ್ರಕರಣದ ಬೆನ್ನತ್ತಿದ್ದ ಸಂಪಿಗೆಹಳ್ಳಿ ಪೊಲೀಸರು ಕಡೆಗೂ ಬಾಲಕಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಆರು ದಿನಗಳ ಕಾಲ ಪೋಷಕರಿಂದ ದೂರವಾಗಿದ್ದ ಬಾಲಕಿ ಮಮತಾ (3) ಳನ್ನು ಅವರ ಮಡಿಲಿಗೆ ಒಪ್ಪಿಸಿದ್ದಾರೆ. ಬಾಲಕಿ ಮಮತಾಳನ್ನು ಅಪಹರಿಸಿದ್ದ ಆರೋಪಿಗಳಾದ ವರ್ತೂರಿನ ನಿವಾಸಿ ಎಚ್.ರಮೇಶ್, ಮಾರತ್‌ಹಳ್ಳಿ ಬ್ರಿಡ್ಜ್ ಸಮೀಪದ ನಿವಾಸಿ ಮಂಜುನಾಥ್ ರನ್ನು ಬಂಧಿಸಿ ವಿಚಾರಣೆಗೊಳಪಡಿಸಿ ದಾಗ, ಮಕ್ಕಳಿಲ್ಲದ ಕಾರಣಕ್ಕೆ ಬಾಲಕಿಯನ್ನು ಅಪಹರಿಸಿದ್ದಾಗಿ ಬಾಯ್ಬಿಟ್ಟಿದ್ದಾರೆ.
ಸುಳ್ಳು ತಂದ ಸಂಕಷ್ಟ: ಕೊಪ್ಪಳ ಮೂಲದ ಆರೋಪಿ ರಮೇಶ್ ಕ್ಯಾಬ್ ಚಾಲಕನಾಗಿದ್ದು ಪತ್ನಿಯ ಜತೆ ವಾಸವಿದ್ದಾನೆ. ಕಳೆದ ವರ್ಷ ಗರ್ಭಿಣಿ ಪತ್ನಿಯ ಅನಾರೋಗ್ಯದಿಂದ ಮಗು ಹೊಟ್ಟೆಯಲ್ಲಿಯೇ
ಮೃತಪಟ್ಟಿತ್ತು. ಹೀಗಿದ್ದರೂ, ತನಗೆ ಹೆಣ್ಣು ಮಗುವಿದೆ ಎಂದು ಸಂಬಂಧಿಕರ ಬಳಿ ರಮೇಶ್ ಸುಳ್ಳು ಹೇಳಿಕೊಂಡಿದ್ದ.
ಕೆಲದಿನಗಳ ಹಿಂದೆ ಕೊಪ್ಪಳದ ತನ್ನ ಹತ್ತಿರದ ಸಂಬಂಧಿಕರ ಮನೆಗೆ ಕಾರ್ಯಕ್ರಮವೊಂದಕ್ಕೆ ಹೋಗಲು ದಂಪತಿ ನಿರ್ಧರಿಸಿದ್ದರು. ಆದರೆ, ಮಗುವಿದೆ ಎಂದು ಹೇಳಿಕೊಂಡಿದ್ದರು.
ಹೀಗಾಗಿ, ನಗರದ ಕೂಲಿ ಕಾರ್ಮಿಕ ಹೆಣ್ಣುಮಗುವೊಂದನ್ನು ಅಪಹರಿಸಿ ಸಾಕಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದ.ಈ ಯೋಜನೆಯನ್ನು ಸ್ನೇಹಿತ ಮಂಜುನಾಥ್‌ಗೆ ತಿಳಿಸಿದ್ದು, 50 ಸಾವಿರ ರೂ. ನೀಡಿದರೆ ಮಗುವನ್ನು ಕಳವು ಮಾಡಿಕೊಂಡು ಬಂದು ಕೊಡುವುದಾಗಿ ಹೇಳಿದ್ದ.
ಅದರಂತೆ ಏ.10ರಂದು ಮಗುವನ್ನು ಅಪಹರಣ ಮಾಡಲು ಬೈಕ್‌ನಲ್ಲಿ ನಗರದ ಹಲವೆಡೆ ತಿರುಗಾಡಿದ್ದರು. ಬಳಿಕ ಮಧ್ಯಾಹ್ನ 1 ಗಂಟೆ ಸುಮಾರಿಗೆ ಸಂಪಿಗೆಹಳ್ಳಿಯ ಎಸ್‌ಆರ್‌ಕೆ ನಗರದಲ್ಲಿ ಅಂಗಡಿಗೆ ಹೋಗುತ್ತಿದ್ದ ಬಾಲಕಿ ಮಮತಾಳನ್ನು ಅಪಹರಿಸಿದ್ದರು.
ಹೆತ್ತವರ ಪರದಾಟ- ಸಿಸಿಟಿವಿ ನೀಡಿದ ಸುಳಿವು!:
ಅಂಗಡಿಗೆ ತಿಂಡಿತರಲು ಹೋಗಿದ್ದ ಮಗಳು ಎಷ್ಟೊತ್ತಾದರೂ ಬರದಿದ್ದಕ್ಕೆ ಕಂಗಾಲದ ಬಾಲಕಿ ಮಮತಾ
ತಂದೆ ಶರಣಪ್ಪ ದಂಪತಿ ಮನೆಯಿಂದ ಹೊರಗಡೆ ಬಂದು ಸುತ್ತಮುತ್ತಲು ಹುಡುಕಾಡಿದ್ದರು ಸುಳಿವು ಸಿಕ್ಕಿರಲಿಲ್ಲ. ಅಂತಿಮವಾಗಿ ಸಂಪಿಗೆಹಳ್ಳಿ ಠಾಣೆಗೆ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ ಇನ್ಸ್‌ಪೆಕ್ಟರ್ ಎಚ್.ಬಿ ರಮೇಶ್‌ಕುಮಾರ್ ನೇತೃತ್ವದ ತಂಡ, ಬಾಲಕಿ ಮಮತಾ ಮನೆಯ ಸಮೀಪದ ಅಂಗಡಿಗಳು ಸಮೀಪದ ಮನೆಗಳಲ್ಲಿ ಅಳವಡಿಸಿದ್ದ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಒಂದು ಸಿಸಿಟಿವಿ ಕ್ಯಾಮೆರಾದಲ್ಲಿ ಇಬ್ಬರು ಮಗುವನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಹೋಗುತ್ತಿರುವುದು ಅಸ್ಪಷ್ಟವಾಗಿ ಹಾಗೂ ಬೈಕ್ ನಂಬರ್ ಕಾಣಿಸಿತ್ತು. ಇದನ್ನು ಆದರಿಸಿ ಏ. 16ರಂದು ವರ್ತೂರಿನಲ್ಲಿರುವ ರಮೇಶ್ ನಿವಾಸದ ಮೇಲೆ ಕಾರ್ಯಾಚರಣೆ ನಡೆಸಿ ಬಾಲಕಿಯನ್ನು ರಕ್ಷಿಸಿ ಪೋಷಕರಿಗೆ ಒಪ್ಪಿಸಿದ್ದಾರೆ. ರಮೇಶ್, ಮಂಜುನಾಥ್‌ನನ್ನು ಬಂಧಿಸಲಾಗಿದೆ.
ಮಕ್ಕಳಿಲ್ಲದ ಕೊರಗು ಕೃತ್ಯಕ್ಕೆ ಕಾರಣ
“ಮಕ್ಕಳಿಲ್ಲ ಎಂಬ ಕೊರಗು ಕಾಡುತ್ತಿತ್ತು. ಸಂಬಂಧಿಕರಿಗೆ ಬೇರೆ ಮಗುವಿದೆ ಎಂದು ಸುಳ್ಳು ಹೇಳಿದ್ದೆವು. ಹೀಗಾಗಿ ಸಾಕಿಕೊಳ್ಳುವ ಉದ್ದೇಶದಿಂದ ಮಮತಾಳನ್ನು ಅಪಹರಣ ಮಾಡಿದ್ದೆವು ” ಎಂದು ಆರೋಪಿ ರಮೇಶ್ ವಿಚಾರಣೆ ವೇಳೆ ಹೇಳಿದ್ದಾನೆ. ಮಗು ಮಮತಾಳನ್ನು ಆರು ದಿನಗಳು ನೋಡಿಕೊಂಡಿದ್ದು ಸಂಬಂಧಿಕರು ಎಂದೇ ನಂಬಿಸಿದ್ದರು. ಹೀಗಾಗಿ ಅವರ ಜತೆ ಬೆರೆತಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ
Udupi: ಗೀತಾರ್ಥ ಚಿಂತನೆ-106; ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ
Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.