BBMP ನಿರ್ಲಕ್ಷ್ಯಕ್ಕೆ ಪಾರ್ಕ್‌ನಲ್ಲಿ ಬಾಲಕಿ ಬಲಿ
Team Udayavani, Aug 13, 2017, 10:24 AM IST
ಕೆ.ಆರ್.ಪುರ: ಕೆ.ಆರ್.ಪುರದ ಆಕಾಶ್ ನಗರದ ಎಂವಿಜೆ ಬಡಾವಣೆಯ ಪಾರ್ಕ್‌ನಲ್ಲಿ ಬಿಬಿಎಂಪಿ ತಂದಿಟ್ಟ ಕಬ್ಬಿಣದ ರಾಡ್ ಗಳಿಗೆ 13 ವರ್ಷದ ಬಾಲಕಿ ಬಲಿಯಾಗಿದ್ದಾಳೆ. ಆಟವಾಡಲೆಂದು ಉದ್ಯಾನಕ್ಕೆ ತೆರಳಿದ್ದ ಬಾಲಕಿಯ ತಲೆಯ ಮೇಲೆ ರಾಡ್ ಬಿದ್ದು ದುರ್ಘಟನೆ ಸಂಭವಿಸಿದೆ.
ಕೆ.ಆರ್.ಪುರ ಸಮೀಪದ ಎಂಟಿಬಿ ಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಪ್ರಿಯಾಂಕ(13) ಮೃತ ಬಾಲಕಿ. ಕೃಷ್ಣಪ್ಪ ಲೇಔಟ್ ವಾಸಿಗಳಾದ ರಿಯಲ್ ಎಸ್ಟೇಟ್ ಉದ್ಯಮಿ ಸುಬ್ರಮಣ್ಯಂ ಹಾಗೂ ವಿಜಯ್ ಕುಮಾರಿ ದಂಪತಿಯ ಪುತ್ರಿಯಾದ ಪ್ರಿಯಾಂಕ. ಎಂವಿಜೆ ಪಾರ್ಕ್‌ನಲ್ಲಿ ನವೀಕರಣ ಕಾಮಗಾರಿ ಕೈಗೊಂಡಿರುವ ಬಿಬಿಎಂಪಿ, ಪಾರ್ಕ್‌ಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧಿಸಿತ್ತಾದರೂ, ಈ ಬಗ್ಗೆ ಯಾವುದೇ ಕಠಿಣ ಕ್ರಮ ಕೈಗೊಂಡಿ ರಲಿಲ್ಲ. ಹೀಗಾಗಿಯೇ ಶನಿವಾರ ಸಂಜೆ 4ಗಂಟೆ ಸಮಯದಲ್ಲಿ ಪ್ರಿಯಾಂಕ ಉದ್ಯಾನ ವನಕ್ಕೆ ಆಟವಾಡಲು ತೆರಳಿದ್ದಳು. ಅಲ್ಲಿ ಉಯ್ಯಾಲೆ ನಿರ್ಮಿಸಲೆಂದು ತಂದಿಟ್ಟಿದ್ದ ಕಬ್ಬಿಣದ ರಾಡ್‌ಗಳ ಬಳಿ ಪ್ರಿಯಾಂಕ್ ಆಟವಾಡುತ್ತಿದ್ದಳು ಎನ್ನಲಾಗಿದೆ. ಆಗ ರಾಡ್‌ವೊಂದು ತಲೆ ಮೇಲೆ ಜೋರಾಗಿ ಬಿದ್ದಿದೆ.
ಗಂಭೀರ ಗಾಯಗೊಂಡ ಬಾಲಕಿಗೆ ತೀವ್ರ ರಕ್ತ ಸ್ರಾವವಾಗಿದೆ. ರಕ್ತದ ಮಡುವಲ್ಲಿ ಬಿದ್ದಿದ್ದ ಬಾಲಕಿಯನ್ನು ಸ್ಥಳೀಯರು ಬೈಯ್ಯಪ್ಪನಹಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಕೊಂಡೊಯ್ದಿದ್ದಾರೆ. ಆದರೆ, ಅಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಪ್ರಿಯಾಂಕ ಕೊನೆಯುಸಿರೆಳೆದಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಮಹದೇವಪುರ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
Atul Subhash Case: ಮೊಮ್ಮಗನನ್ನು ಟೆಕಿ ಅತುಲ್ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ
illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್ ಕಚೇರಿ ಮೇಲೆ ಇ.ಡಿ. ದಾಳಿ
MUST WATCH
ಹೊಸ ಸೇರ್ಪಡೆ
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.