ಆಯುಕ್ತರ ಕಚೇರಿಯಲ್ಲಿ ಮಕ್ಕಳ ಜಾತ್ರೆ

Team Udayavani, Nov 15, 2019, 10:22 AM IST

bng-tdy-1

ಬೆಂಗಳೂರು: ಸದಾ ಪೊಲೀಸ್‌ ಬೂಟುಗಳ ಸದ್ದು ಕೇಳಿ ಬರುತ್ತಿದ್ದ ಸ್ಥಳದಲ್ಲಿ ಮಕ್ಕಳ ಕಲರವ… ಖಾಕಿಯ ಭಯವಿಲ್ಲದೆ ನಾನಾ ವೇಷದಲ್ಲಿ ಕುಣಿದು ಕಪ್ಪಳಿಸಿದ ಮಕ್ಕಳು… ಪುಟಾಣಿ ಪೊಲೀಸ್‌ ಅಧಿಕಾರಿಯಿಂದ ನಗರ ಪೊಲೀಸ್‌ ಆಯುಕ್ತರಿಗೆ ಸೆಲ್ಯೂಟ್‌… ಇವೆಲ್ಲ ಕಂಡು ಬಂದಿದ್ದು ನಗರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ. ಮಕ್ಕಳ ದಿನಾಚರಣೆ ಅಂಗವಾಗಿ ಗುರುವಾರ ನಗರ ಪೊಲೀಸ್‌ ಮತ್ತು ಪರಿಹಾರ ತಂಡದ ಸಹಯೋಗದಲ್ಲಿ ಪೊಲೀಸ್‌ ಆಯುಕ್ತರ ಕಚೇರಿ ಆವರಣದಲ್ಲಿ “ಮಕ್ಕಳ ಜಾತ್ರೆ’ ಆಯೋಜಿಸಲಾಗಿತ್ತು.

ಜಾತ್ರೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಶಾಲೆಯ ಮಕ್ಕಳು, ಟಿಪ್ಪು, ಗಾಂಧೀಜಿ, ಭಗತ್‌ ಸಿಂಗ್‌, ಸ್ವಾಮಿ ವಿವೇಕಾನಂದ, ರಾಣಿ ಚೆನ್ನಮ್ಮ, ಪೊಲೀಸ್‌ ಅಧಿಕಾರಿ, ಸೈನಿಕನ ವೇಷಧರಿಸಿ ಪೊಲೀಸ್‌ ಸಿಬ್ಬಂದಿಯಿಂದ ಮೆಚ್ಚುಗೆಗಳಿಸಿದರು. ಸ್ಕೆಟಿಂಗ್‌, ಜಾರುಬಂಡೆ ಸೇರಿ ನಾನಾ ಆಟಗಳಲ್ಲಿ ಪಾಲ್ಗೊಂಡು ಎಲ್ಲರನ್ನು ನಗಿಸಿದರು.

ಗ್ರಾಮೀಣ ಸೊಗಡು: ಪೊಲೀಸ್‌ ಆಯುಕ್ತರ ಕಚೇರಿ ಆವರಣವೇ ಗ್ರಾಮೀಣ ಸೊಗಡು ಹಾಗೂ ಜಾನಪದ ಕಲೆಗಳಿಂದ ತುಂಬಿಕೊಂಡಿತ್ತು. ಪರಿಹಾರ ಕೇಂದ್ರ ಹಾಗೂ ಆಯುಕ್ತರ ಕಚೇರಿ ಕಟ್ಟಡದ ಮುಂಭಾಗ ಹಸಿರು ತೋರಣಗಳಿಂದ ಕಂಗೊಳಿಸಿತ್ತು. ಕಾರ್ಯಕ್ರಮ ದಲ್ಲಿ ಜಾನಪದ ಕಲೆಗಳಿಗೂ ಆದ್ಯತೆ ನೀಡಲಾಗಿತ್ತು. ಮಕ್ಕಳೇ ವೀರಗಾಸೆ, ಬೊಂಬೆ ಕುಣಿತ ಸೇರಿ ನಾನಾ ಜಾನಪದ ಪ್ರಕಾರಗಳಿಗೆ ಹೆಜ್ಜೆ ಹಾಕಿ ಖುಷಿ  ಪಟ್ಟರು. ಅಲ್ಲದೇ, ಪೋಷಕರ ಜತೆ ಬಳೆ ವ್ಯಾಪಾರ,ರಾಗಿ ಕಣ ಹಾಗೂ ಮಿಠಾಯಿ ಅಂಗಡಿಗಳಿಗೆ ಹೋಗಿ ವ್ಯಾಪಾರ ಮಾಡಿದರು. ಐಸ್‌ ಕ್ಯಾಂಡಿ, ಬಾಂಬೆ ಮಿಠಾಯಿ ಸೇರಿ ಮುಂತಾದ ಸಿಹಿ ತಿನಿಸು ಸವಿದರು. ಗ್ರಾಮೀಣ ಸೊಗಡಿನ ಸೂಚಕವೆಂಬಂತೆ ನಾಲ್ಕೈದು ಗುಡಿಸಲು ಕೂಡ ಹಾಕಲಾಗಿತ್ತು.

ನಟ ಯಶ್‌ರಿಂದ ಚಾಲನೆ: ಮುಖ್ಯ ಅತಿಥಿಯಾಗಿ ಆಗಮಿಸಿದ ನಟ ಯಶ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕೆಲ ಹೊತ್ತು ಮಕ್ಕಳ ಜತೆ ನಲಿದರು. ನಂತರ ಒಳಾಂಗಣ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೊಲೀಸರನ್ನು ಕಂಡರೆ ಮಕ್ಕಳು ಭಯ ಬೀಳುವಂತ ಸ್ಥಿತಿಯನ್ನು ಪೋಷಕರೇ ನಿರ್ಮಾಣ ಮಾಡುತ್ತಿದ್ದಾರೆ. ಮಕ್ಕಳು ಊಟ ಮಾಡದಿದ್ದರೆ ಪೊಲೀಸರನ್ನು ಕರೆಸುವುದಾಗಿ ಬೆದರಿಸುತ್ತಾರೆ. ಮಕ್ಕಳಿಗೆ ಪೊಲೀಸರ ಧೈರ್ಯ, ಸಾಹಸ ಗಾಥೆಗಳನ್ನು ಹೇಳಬೇಕು. ಅದರಿಂದ ಮಕ್ಕಳಲ್ಲಿ ಧೈರ್ಯ ಹೆಚ್ಚಾಗಿ, ಆತ್ಮವಿಶ್ವಾಸ ಮೂಡುತ್ತದೆ. ಎಲ್ಲ ಸಮಸ್ಯೆ ಗಳಿಗೆ ಕಾನೂನಿನ ಅಡಿಯಲ್ಲಿ ಪರಿಹಾರ ಸಿಗುವುದಿಲ್ಲ. ಒಡೆದ ಮನಸ್ಸುಗಳನ್ನು ಒಗ್ಗೂಡಿಸಿ ಬದುಕು ಕಟ್ಟಿಕೊಡುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಪರಿಹಾರ ಸಹಾಯವಾಣಿ ಕೇಂದ್ರ ಕೆಲಸ ಮಾಡುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಸಂಚಾರ ನಿಯಮ ಪಾಲಿಸಿ: ಸಂಚಾರ ನಿಯಮ ಕಟ್ಟುನಿಟ್ಟಿನ ಪಾಲನೆ ಯಾಗ ಬೇಕು. ಮಾದಕ ವಸ್ತು ಸೇವನೆ, ಬಾಲ ಕಾರ್ಮಿಕ ಪದ್ಧತಿ ಸೇರಿ ಮುಂತಾದ ಗಂಭೀರ ಸ್ವರೂ ಪದ ಸಮಸ್ಯೆಗಳನ್ನು ಕೊನೆಗಾಣಿಸಬೇಕು. ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಅಗತ್ಯ ಬಿದ್ದರೆ ಕೈ ಜೋಡಿಸುವುದಾಗಿ ಪೊಲೀಸರಿಗೆ ಯಶ್‌ ಭರವಸೆ ನೀಡಿದರು.

ಕಾರ್ಯಕ್ರಮ ದಲ್ಲಿ ನಗರ ಪೊಲೀಸ್ಆ ಯುಕ್ತ ಭಾಸ್ಕರ್‌ರಾವ್‌, ಹೆಚ್ಚುವರಿ ಪೊಲೀಸ್‌ ಆಯುಕ್ತ ಉಮೇಶ್‌, ಸಿಸಿಬಿ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌, ಸಂಚಾರ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ ರವಿ ಕಾಂತೇ ಗೌಡ, ಪರಿಹಾರ ಸಹಾಯವಾಣಿ ಮುಖ್ಯಸ್ಥೆ ರಾಣಿ ಶೆಟ್ಟಿ, ಹಿರಿಯ ಮಕ್ಕಳ ತಜ್ಞೆ ಡಾ. ಚಂದ್ರಿಕಾ ರಾವ್‌, ಡಿಸಿಪಿ ಈಶಾ ಪಂತ್‌ ಸೇರಿ ಹಲವು ಗಣ್ಯರು ಇದ್ದರು

ಟಾಪ್ ನ್ಯೂಸ್

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ

ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ

9

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ

Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ

Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ

Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು

Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು

Ayurvedic Doctor: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದ ಆಯುರ್ವೇದಿಕ್‌ ವೈದ್ಯ…

Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್‌ ವೈದ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

crime

Kasaragod: ಘರ್ಷಣೆಯಿಂದ ಮೂವರಿಗೆ ಗಾಯ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.