ಮಕ್ಕಳ ಹಬ್ಬದಲ್ಲಿ ಚಿಣ್ಣರ ಕಲರವ, ಗ್ರಾಮೀಣ ಆಟೋಟ ವೈಭವ
Team Udayavani, Nov 11, 2018, 12:18 PM IST
ಬೆಂಗಳೂರು: ಕಬ್ಬನ್ ಪಾರ್ಕ್‌ನಲ್ಲಿ ಶನಿವಾರ ಚಿಣ್ಣರದೇ ಸಾಮ್ರಾಜ್ಯ. ಮಕ್ಕಳ ದಿನಾಚರಣೆ ಅಂಗವಾಗಿ ಸರ್ಕಾರದ ವಿವಿಧ ಇಲಾಖೆಗಳು ಜತೆಗೂಡಿ ಆಯೋಜಿಸಿದ್ದ “ಮಕ್ಕಳ ಹಬ್ಬ’ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಚಿಣ್ಣರ ಪ್ರತಿಭೆ ಪ್ರದರ್ಶನಕ್ಕೆ ವೇದಿಕೆಯಾಯಿತು. ಚಿಣ್ಣರು ಪ್ರದರ್ಶಿಸಿದ ಡೊಳ್ಳು, ಕಂಸಾಳೆ, ಸಂಬಾಳ ವಾದನ, ವೀರಗಾಸೆ, ಕತ್ತಿವರಸೆಯಂತಹ ಜಾನಪದ ಕಲೆಗಳು ಕಳೆ ತಂದು ಕೊಟ್ಟಿತ್ತು.
ಗ್ರಾಮೀಣ ಆಟಗಳಾದ ಬುಗುರಿ, ಗೋಲಿ, ಚೌಕಾಬಾರ, ಲಗೋರಿ, ಹಗ್ಗ-ಜಗ್ಗಾಟ, ಅಣೆಕಲ್ಲು, ಕುಂಟೆಬಿಲ್ಲೆ, ಜೋಕಾಲಿ ಮತ್ತಿತರ ಆಟವಾಡಿ ಖುಷಿಪಟ್ಟರು. ಬಾಲ ಭವನ ಆವರಣದಲ್ಲಿ ಬೋಟಿಂಗ್, ರಾಕ್ ಕ್ಲೆಂಬಿಂಗ್, ಪರಿಸರ ನಡಿಗೆ, ಸಾಹನ ಕ್ರೀಡೆಗಳಾದ ಕುಸ್ತಿ, ಮಲ್ಲಗಂಬ ಕ್ರೀಡೆಗಳು ಜರುಗಿದವು.
ಎತ್ತಿನಗಾಡಿ, ದನಕರುಗಳು, ವ್ಯವಸಾಯ ಸಲಕರಣೆಗಳು, ಮಡಕೆ ತಯಾರಿಕೆ ಸಾಮಗ್ರಿಗಳು ಹಬ್ಬದಲ್ಲಿದ್ದವು. ಜತೆಗೆ ರಾಗಿ ಬೀಸುವವರು, ಭತ್ತ ಕುಟ್ಟುವವರು, ಕೋಳಿ ಕುರಿ ಮೇಯಿಸುವವರೂ ಇದ್ದು, ನಗರದ ಮಕ್ಕಳಿಗೆ ಗ್ರಾಮೀಣ ಸೋಬಗನ್ನು ಪರಿಚಯಿಸಿದರು. ಚಿಕ್ಕಮ್ಮ ಎಂಬಾಕೆ ಮಕ್ಕಳಿಗೆ ಹೂ ಕಟ್ಟುವುದು ಕಲಿಸಿದರೆ, ಎಡೆಯೂರು ಮೂಲದ ಅಜ್ಜಿ ಗಂಗಾ ಹುಚ್ಚಮ್ಮ ಕತೆ ಹೇಳಿ ರಂಜಿಸಿದರು.
ರಕ್ಷಣಾ ಇಲಾಖೆಯಿಂದ ಪ್ರದರ್ಶನಕ್ಕೆ ಇರಿಸಿದ್ದ ಬಂದೂಕು ಮತ್ತಿತರ ಶಸ್ತ್ರಾಸ್ತ್ರಗಳನ್ನು ಮಕ್ಕಳು ಕೈಯಲ್ಲಿಡಿದು ಸಂಭ್ರಮಿಸಿದರು. 2 ದಿನಗಳ ಹಬ್ಬದಲ್ಲಿ ತೋಟಗಾರಿಕೆ ಇಲಾಖೆಯಿಂದ ಅಂಗನವಾಡಿ ಕೇಂದ್ರ, ಮಾತೃಪೂರ್ಣ ಯೋಜನೆ, ಮಮತೆಯ ತೊಟ್ಟಿಲು ಹಾಗೂ ಫಲಪುಷ್ಪ ಪ್ರದರ್ಶನ, ಮೀನುಗಾರಿಕೆ ಇಲಾಕೆಯಿಂದ ವಿವಿಧ ಬಣ್ಣ, ಆಕಾರಗಳ ಮೀನುಗಳನ್ನು ಪ್ರದರ್ಶನ ಏರ್ಪಡಿಸಲಾಗಿದೆ.
ಕನ್ನಡ ಮತ್ತು ಸಂಸ್ಕೃತ ಇಲಾಖೆ ವ್ಯಾಪ್ತಿಯ ನಾಟಕ ಅಕಾಡೆಮಿ, ಶಿಲ್ಪಕಲಾ ಅಕಾಡೆಮಿ, ಯಕ್ಷಗಾನ, ಜಾನಪದ ಅಕಾಡೆಮಿಗಳ ಮಳಿಗೆಗಳಲ್ಲಿ ಅವುಗಳ ಹಿನ್ನಲೆ, ಮಾಹಿತಿ, ಪರಿಕರ, ವಸ್ತ್ರಗಳನ್ನು ಪ್ರದರ್ಶನಕ್ಕಿಡಲಾಗಿದೆ. ಸ್ತ್ರೀಶಕ್ತಿ ಸಂಘಗಳು ಸಿದ್ಧಪಡಿಸಿದ ಉತ್ಪನ್ನಗಳು, ಚನ್ನಪಟ್ಟಣದ ಗೊಂಬೆಗಳು, ಕರಕುಶಲ ಸಾಮಗ್ರಿಗಳ ಪ್ರದರ್ಶನ ಮತ್ತು ಆಹಾರ ಉತ್ಪನ್ನಗಳ ಮಾರಾಟ ಮಳಿಗೆ ತೆರೆಯಲಾಗಿದೆ. ಎಚ್‌ಎಎಲ್, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಂದ ಮಕ್ಕಳಿಗೆ ಪ್ರಾತ್ಯಕ್ಷಿಕೆಯೂ ಇತ್ತು.
ಜಯಮಾಲಾ ಚಾಲನೆ: ಮಕ್ಕಳ ಹಬ್ಬಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಜಯಮಾಲಾ ಚಾಲನೆ ನೀಡಿ, ಆರೋಗ್ಯವಂತ ಮಕ್ಕಳು ದೇಶದ ಸಂಪತ್ತು . ಹೀಗಾಗಿ, ಮಕ್ಕಳು ಆರೋಗ್ಯವಂತರಾಗಿರಲು ಜಾನಪದ ಸಾಂಸ್ಕೃತಿಕ ವಾತಾವರಣ ಅಗತ್ಯ ಎಂದರು.
ಜಾನಪದ ಅಕಾಡೆಮಿ ಅಧ್ಯಕ್ಷ ಟಾಕಪ್ಪ ಕಣ್ಣೂರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾ, ನಿರ್ದೇಶಕಿ ಡಾ.ಅರುಂಧತಿ ಇತರರಿದ್ದರು. ಇದೇ ವೇಳೆ ಅಂಚೆ ಇಲಾಖೆಯಿಂದ ಮಕ್ಕಳ ಲಾಂಚನವಿರುವ ವಿಶೇಷ ಅಂಚೆ ಲಕೋಟೆ ಹಾಗೂ ಬಾಲಮಂದಿರ ಮಕ್ಕಳ ಸೃಜನಾತ್ಮಕ ಬರವಣಿಗೆಗಳನ್ನು ಒಳಗೊಂಡ “ಸಂಕಲ್ಪ’ ಪುಸ್ತಕ ಬಿಡುಗಡೆ ಮಾಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
NH Highway Works: ಬಿ.ಸಿ.ರೋಡು: ಟ್ರಾಫಿಕ್ ಜಾಮ್
Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.