ಬಿಳಿ ಅನ್ನ ನೋಡಿದ್ದೀರಿ.. ನಿಮಗೆ ಕಪ್ಪು ಅಕ್ಕಿ-ಅನ್ನದ ಬಗ್ಗೆ ಗೊತ್ತಾ?
ಮೇಳದಲ್ಲಿ ರೈತರನ್ನು ಆಕರ್ಷಿಸಿದ ಕಪ್ಪು ಭತ್ತ 325ಕ್ಕೂ ಅಧಿಕ ಪ್ರಾಚೀನ ಭತ್ತದ ತಳಿ ಸಂರಕ್ಷಣೆ ಐದರಿಂದ ಐದೂವರೆ ಅಡಿ ಎತ್ತರ ಬೆಳೆಯುವ ಈ ಭತ್ತ
Team Udayavani, Nov 14, 2021, 9:42 AM IST
ಬೆಂಗಳೂರು: ಇದುವರೆಗೂ ನಾವು ಬಿಳಿಅಕ್ಕಿ, ಬಿಳಿಅನ್ನ ನೋಡಿದ್ದೇವು, ಆದರೆ ಈಗ ಕಪ್ಪು ಭತ್ತ ಮತ್ತು ಕಪ್ಪುಅಕ್ಕಿ ನೋಡೋ ಸುಯೋಗ. ಸಿರಿಧಾನ್ಯಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಬೆಳೆ ಅಭಿವೃದ್ಧಿ ವಿಭಾಗ ಕೃಷಿ ಮೇಳದಲ್ಲಿ ಪ್ರದರ್ಶನಕ್ಕೆ ಇರಿಸಿದ್ದು ರೈತರನ್ನು ಆಕರ್ಷಿಸುತ್ತಿದೆ.
ಈಗಾಗಲೇ ಬೆಂಗಳೂರು ಕೃಷಿ ವಿವಿಯ ಬೆಳೆ ಅಭಿವೃದ್ಧಿ ವಿಭಾಗ ಪ್ರಾಚೀಲ ಕಾಲದ ಭತ್ತದ ತಳಿಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಭಿನ್ನತಳಿಯ ಸಂರಕ್ಷಣೆ ಜತೆಗೆ ರೈತರ ಪರಿಚಯಿಸಬೇಕು ಎಂಬ ಉದ್ದೇಶ ಕೂಡ ಇದರಲ್ಲಿದೆ. ಹೀಗಾಗಿ 325ಕ್ಕೂ ಅಧಿಕ ಪ್ರಾಚೀನ ಭತ್ತದ ತಳಿಗಳನ್ನು ಸಂರಕ್ಷಣೆ ಮಾಡಿದ್ದು ಅವುಗಳಲ್ಲಿ ಕೆಲವು ತಳಿಗಳನ್ನು ಕೃಷಿ ಮೇಳದ ಪ್ರದರ್ಶನ ವಿಭಾಗದಲ್ಲಿ ಇರಿಸಿದೆ.
ಇದರಲ್ಲಿ ಕಪ್ಪು ಭತ್ತ ಮತ್ತು ಕಪ್ಪು ಅಕ್ಕಿ ಹೊಂದಿರುವ ಬಿದಿಗಿ ಕಣ್ಣಪ್ಪ ಭತ್ತದ ತಳಿ ಕೂಡ ಸೇರಿದೆ. ಬಿದಿಗಿ ಕಣ್ಣಪ್ಪ ಭತ್ತ ಮೂಲತಃ ಕಾಸರಗೋಡು ಮೂಲ ದ್ದಾಗಿದೆ. ಕಾಸರಗೋಡಿನ ರೈತ ಬಿಳೇರಿ ಸತ್ಯನಾರಾಯಣ ಎಂಬುವವರು ಈ ಅಪರೂಪದ ತಳಿಯನ್ನು ಬೆಳೆದಿದ್ದರು. ಈ ಭತ್ತದ ಬೀಜವನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾ ನಿಲಯದ ಬೆಳೆ ಅಭಿವೃದ್ಧಿ ವಿಭಾಗದ ಡಾ.ಪ್ರಕಾಶ್ ಅವರು ತಂದು ಮತ್ತಷ್ಟು ಅಭಿವೃದ್ಧಿ ಪಡಿಸಿದ್ದಾರೆ.
ಸುಮಾರು ಐದರಿಂದ ಐದೂವರೆ ಅಡಿ ಎತ್ತರ ಬೆಳೆ ಯುವ ಈ ಭತ್ತ ಒಂದು ಎಕರೆಗೆ ಸಾವಯವ ಕೃಷಿ ಮಾಡಿ ದರೆ ಸುಮಾರು 14-16 ಕ್ವಿಂಟಲ್ ಬೆಳೆಯಬಹುದಾಗಿದೆ. ಐದು ತಿಂಗಳ ಬೆಳೆಯಿದಾಗಿದ್ದು 150 ದಿನದ ನಂತರ ಬೆಳೆ ಕಟಾವಿಗೆ ಬರಲಿದೆ. ಜೂನ್ ಅಥವಾ ಜುಲೈ ತಿಂಗಳಲ್ಲಿ ಭತ್ತ ನಾಟಿ ಮಾಡಿದರೆ ಉತ್ತಮ. ಬೇಸಿಗೆಯಲ್ಲಿ ಈ ಬೆಲೆಯನ್ನು ಬೆಳೆಯಲು ಆಗುವುದಿಲ್ಲ. ನಾಟಿ ಮಾಡಿದರೂ ಇಳುವರಿ ಬರುವುದಿಲ್ಲ.
ಈ ಭತ್ತದಲ್ಲಿದೆ ರೋಗ ನಿರೋಧಕ ಶಕ್ತಿ: ಕಪ್ಪು ಭತ್ತದಲ್ಲಿ ಜೀವರೋಗ ನಿರೋಧಕ ಶಕ್ತಿ ಅಧಿಕವಾಗಿರಲಿದೆ. ಭತ್ತದ ಹೊಳಪಿನಲ್ಲಿ ಕಪ್ಪಿದ್ದರೂ ಅದನ್ನು ಸವಿದರೆ ಆರೋಗ್ಯಕ್ಕೆ ಸಂಜೀವಿನಿ ಇದ್ದಂತೆ. ಅತಿಸಾರ, ಅತಿಬೇಧಿ, ಕೆಮ್ಮು ಸೇರಿ ಇನ್ನಿತರ ಸಮಸ್ಯೆಗಳಿಗೆ ಕಪ್ಪು ಅಕ್ಕಿ ರಾಮ ಬಾಣವಾಗಲಿದೆ. ಎದೆಯ ಹಾಲು ಹೆಚ್ಚಳಕ್ಕೂ ಈ ಅಕ್ಕಿಯ ಸೇವೆ ಉತ್ತಮ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಯದ ಬೆಳೆ ಅಭಿವೃದ್ಧಿ ವಿಭಾಗದ ಅಧ್ಯಾಪಕರು ಮಾಹಿತಿ ನೀಡುತ್ತಾರೆ.
ಈಗಾಗಲೇ ಬೆಂಗಳೂರು ಕೃಷಿ ವಿವಿಯು ರಾಜಮುಡಿ, ಬಿಳಿ ಮದುಡಿ, ಜಿರಿಗೆ ಭತ್ತ ಸೇರಿದಂತೆ ಸ್ಥಳೀಯ ತಳಿಗಳನ್ನು ಸಂರಕ್ಷಿಸುವುದರ ಜತೆಗೆ ಅವುಗಳ ತಳಿಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಹೆಜ್ಜೆಯಿರಿಸಿದೆ. ಸ್ಥಳೀಯ ತಳಿಗಳಲ್ಲಿ ಒಂದೊಂದು ರೀತಿ ಪೋಷಕಾಂಶಗಳು ಇರುತ್ತವೆ. ಇಂತಹ ತಳಿಯ ಅಕ್ಕಿಗಳನ್ನು ಜನರು ಸೇವಿಸಿದಾಗ ಉತ್ತಮ ಪೋಷಕಾಂಶಗಳು ದೊರೆಯಲಿ ಎಂಬುವುದು ವಿವಿಯ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:- ಪ್ರಧಾನಿ ಮೋದಿ ದೇಶವನ್ನು ರಕ್ಷಿಸಲು ಅಸಮರ್ಥ ಎಂದು ಮಣಿಪುರ ದಾಳಿ ತೋರಿಸುತ್ತದೆ: ರಾಹುಲ್
ಭತ್ತಕ್ಕಾ ಗಿ ರೈತರು ಸಂಪರ್ಕಿಸಬಹುದು “ಬಿದಿಗಿ ಕಣ್ಣಪ್ಪ ಭತ್ತದ ತಳಿಯ ಬೀಜವನ್ನು ಪ್ರಾಯೋಗಿಕವಾಗಿ ರೈತರಿಗೆ ನೀಡುವ ಉದ್ದೇಶ ಕೂಡ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಬೆಳೆ ಅಭಿವೃದ್ಧಿ ವಿಭಾಗಕ್ಕೆ ಇದೆ. ಈಗಾಗಲೇ ಬೇರೆ ಬೇರೆ ಜಿಲ್ಲೆಯ ಸುಮಾರು 10ಕ್ಕೂ ಅಧಿಕ ರೈತರು ಕೃಷಿ ಮೇಳಕ್ಕೆ ಭೇಟಿ ನೀಡಿದ ವೇಳೆ ಈ ಭತ್ತದ ಬೀಜಕ್ಕಾಗಿ ಬೇಡಿಕೆ ಸಲ್ಲಿಸಿದ್ದಾರೆ. ಬೇಡಿಕೆ ಸಲ್ಲಿಸಿರುವ ರೈತರಿಗೆ 1 ಕೆ.ಜಿ. ಭತ್ತ ನೀಡುವ ಆಲೋಚನೆ ಕೃಷಿ ವಿವಿಯ ಬೆಳೆ ಅಭಿವೃದ್ಧಿ ವಿಭಾಗಕ್ಕೆ ಇದೆ. ರೈತರು ಕೂಡ ಬೆಂಗಳೂರು ವಿವಿಯ ಬೆಳೆ ಅಭಿವೃದ್ಧಿ ವಿಭಾಗವನ್ನು ಸಂಪರ್ಕಿಸಬಹುದಾಗಿದೆ.
“ಬಿಳಿಭತ್ತದಲ್ಲಿ ಅಥವಾ ಅಕ್ಕಿಯಲ್ಲಿ ಜೀವನಿರೋಧಕ ಅಂಶಗಳು ಹೆಚ್ಚು ಇರುವುದಿಲ್ಲ. ರಾಗಿ ಕೂಡ ಕಪ್ಪು ಇರುತ್ತದೆ. ಆದರೆ ಅದನ್ನು ಸೇವನೆ ಮಾಡಿವುದು ಆರೋಗ್ಯಕ್ಕೆ ಉತ್ತಮ ಇದೇ ರೀತಿಯಲ್ಲಿ ಈ ಭತ್ತ ಕೂಡ. ಸಿರಿಧಾನ್ಯಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಭತ್ತದ ತಳಿ ಪ್ರದರ್ಶನಕ್ಕೆ ಇರಿಸಲಾಗಿದೆ.” – ಡಾ.ಪ್ರಕಾಶ್, ಪ್ರಾಧ್ಯಾಪಕರು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಬೆಳೆ ಅಭಿವೃದ್ಧಿ ವಿಭಾಗ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.