ನಗರದಲ್ಲಿ ಚರ್ಚ್ ಸ್ಟ್ರೀಟ್ ಮಾದರಿ ಸ್ವಚ್ಛತೆಗೆ ಆದ್ಯತೆ
Team Udayavani, Feb 15, 2021, 2:06 PM IST
ಬೆಂಗಳೂರು: ನಗರದಲ್ಲಿರುವ ಎಲ್ಲ ರಸ್ತೆ ಗಳಲ್ಲೂ ಚರ್ಚ್‌ಸ್ಟ್ರೀಟ್ ಮಾದರಿಯ ಸ್ವಚ್ಛತೆ ಕಾಪಾಡಿಕೊಳ್ಳಲು ಪಾಲಿಕೆ ಶ್ರಮಿಸುತ್ತಿದ್ದು, ಸಾರ್ವಜನಿಕರು ಸಹ ಸಹಕಾರ ನೀಡ ಬೇಕು ಎಂದು ಬಿಬಿ ಎಂಪಿ ವಿಶೇಷ ಆಯುಕ್ತ (ಘ ನ ತ್ಯಾಜ್ಯ ನಿರ್ವಹಣೆ )ಡಿ.ರಂದೀ ಪ್ ಹೇಳಿದರು.
ಸ್ವಚ್ಛ ಸರ್ವೇ ಕ್ಷಣ 2021ರ ಭಾಗವಾಗಿ ನಗರದ ಚರ್ಚ್ ಸ್ಟ್ರೀ ಟ್ ನಲ್ಲಿ ಬಿಬಿ ಎಂಪಿ ಹಾಗೂ ಐಟಿಸಿ ಸಂಸ್ಥೆ ಜಂಟಿಯಾಗಿ ಆಯೋಜಿಸಿದ್ದ ಬೀದಿ ನಾಟಕ ಹಾಗೂ ಜಾಗೃತಿ ನೃತ್ಯ (ಸ್ಟ್ರೀಟ್ ಪ್ಲೇ ಹಾಗೂ ಪ್ಲಾಶ್ ಮೊಬ್) ಕಾರ್ಯ ಕ್ರ ಮ ಉದ್ಘಾಟಿಸಿ ಮಾತನಾಡಿದರು. ಚರ್ಚ್ ಸ್ಟ್ರೀಟಿ ನಗ ರದ ಉಳಿದ ರಸ್ತೆ ಗಳಿಗೆ ಮಾದರಿಯಾಗಿ ಬದಲಾಗಿದೆ. ಈ ರಸ್ತೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲು ಕಸದ ಡಬ್ಬಿಗಳನ್ನು ಇರಿಸಲಾಗಿದೆ. ಜನ ಚರ್ಚ್ ಸ್ಟ್ರೀಟ್‌ನಲ್ಲಿ ಈಗ ಎಲ್ಲೆಂದರಲ್ಲಿ ಕಸ ಎಸೆಯುತ್ತಿಲ್ಲ. ಇದೇ ರೀತಿ ಸ್ವಚ್ಛತೆಯನ್ನು ನಗರದೆಲ್ಲಡೆ ಕಾಪಾಡಿ ಕೊಳ್ಳುವುದು ಪಾಲಿಕೆಯ ಆಶಯ ಎಂದರು.
ಸ್ವಚ್ಛ ಸರ್ವೇ ಕ್ಷಣ -2021ರ ಬಗ್ಗೆ ಸಾರ್ವ ಜನಿಕರಿಗೆ ಹಾಗೂ ಮುಖ್ಯವಾಗಿ ಯುವಕರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಶೇಷ ಕಾರ್ಯ ಕ್ರಮಗಳನ್ನು ಪಾಲಿಕೆ ರೂಪಿಸಿಕೊಂಡಿ ದೆ. ಪ್ರೇಮಿಗಳ ದಿನಾಚರಣೆಯಂದು ಚರ್ಚ್ ಸ್ಟ್ರೀ ಟ್ ನಲ್ಲಿ ಹೆಚ್ಚು ಜನ ಸೇರು ತ್ತಾರೆ. ಹೀಗಾಗಿ, ಸ್ವಚ್ಛ ತೆಯ ಸಂದೇಶ ಹೆಚ್ಚು ಜನರಿಗೆ ತಲುಪಿಸಬಹುದು ಎನ್ನುವ ಉದ್ದೇಶದಿಂದ ಬೀದಿ ನಾಟಕ ಕಾರ್ಯ ಕ್ರಮ ರೂಪಿಸಲಾ ಗಿತ್ತು ಎಂದು ಹೇಳಿದರು.
ಬೆಂಗಳೂರು ಕಳೆದ ಬಾರಿ ಸ್ವಚ್ಛ ಸರ್ವೇ ಕ್ಷಣನಲ್ಲಿ 214ನೇ ರ್‍ಯಾಂಕ್ ಗಳಿಸಿತ್ತು. ಈ ಬಾರಿ ಅದ ಕ್ಕಿಂತ ಉತ್ತಮ ರ್‍ಯಾಂಕ್ ಬರು ವ ಎಲ್ಲ ಅವ ಕಾಶ ಇದ್ದು, ಉತ್ತಮ ರ್‍ಯಾಂಕ್ ಬರುವ ನಿರೀಕ್ಷೆ ಇದೆ.
ನಗರದಲ್ಲಿ ಹಸಿ ಕಸ ಪ್ರತ್ಯೇಕ ಸಂಗ್ರಹ ಮಾಡುವ ಯೋಜನೆ ಜಾರಿ ಯಾದ ಮೇಲೆ ನಗರದಲ್ಲಿ ಗಣನೀಯ ಪ್ರಮಾಣದಲ್ಲಿ ಕಸ ವಿಂಗ ಡ ಣೆ ಹೆಚ್ಚಾ ಗಿದ್ದು, 20 ಪ್ರತಿ ಶತ ಇದ್ದ ಕಸ ವಿಂಗ ಡಣೆ ಪ್ರಮಾಣ ಇದೀಗ ಶೇ.40 ಪ್ರತಿ ಶತಕ್ಕೆ ಹೆಚ್ಚಳವಾಗಿದೆ.ಅಲ್ಲದೆ, ಈ ಬಾರಿ ಸಾರ್ವ ಜನಿಕರು ಸ್ವಚ್ಛ ಸರ್ವೇ ಕ್ಷಣ ಜನಾಭಿಪ್ರಾಯಕ್ಕೂ ಉತ್ತಮ ರೀತಿ ಯಲ್ಲಿ ಸ್ಪಂದಿಸಿದ್ದಾರೆ. ಈ ಬಾರಿ ಒಂದು ಲಕ್ಷಕ್ಕೂ ಹೆಚ್ಚು ಜನಾಭಿಪ್ರಾಯ ಸಂಗ್ರಹಿಸುವ ನಿರೀಕ್ಷೆ ಇದೆ. ಪಾಲಿಕೆ ಸ್ವಚ್ಛ ಸರ್ವೇ ಕ್ಷಣದ ಜನಾಭಿಪ್ರಾಯ ವಿಭಾಗದಲ್ಲಿ ಉತ್ತಮ ರ್‍ಯಾಂಕ್ ಗಳಿಸಲು ಸಾರ್ವ ಜನಿಕರು https://swachhsurvekshan2021.org/Citizen Feedback ಲಿಂಕ್‌ನ ಮೂಲಕ ಅಭಿ ಯಾನದಲ್ಲಿ ಪಾಲ್ಗೊ ಳ್ಳಬೇಕು ಎಂದು ಮನವಿ ಮಾಡಿದರು. ಬಿಬಿಎಂಪಿ ಘನ ತ್ಯಾಜ್ಯ ನಿರ್ವ ಹಣೆ ವಿಭಾಗದ ಮುಖ್ಯ ಎಂಜಿನಿ ಯರ್ ವಿಶ್ವನಾಥ್, ಅಧೀ ಕ್ಷಕ ಎಂಜಿನಿಯರ್ ಬಸವರಾಜ್ ಕಬಾಡೆ ಹಾಗೂ ಚೀಫ್ ಮಾರ್ಷಲ್ ರಾಜ್ಬೀರ್ ಸಿಂಗ್ ಸೇರಿದಂತೆ ಮತ್ತಿತರರು ಹಾಜರಿದ್ದರು.
ಬ್ಲಾಕ್ ಸ್ಪಾಟ್ ಸಮಸ್ಯೆಗಳ ಬಗ್ಗೆ ಜಾಗೃತಿ :
ನಗರದಲ್ಲಿ ಬ್ಲಾಕ್ ಸ್ಪಾಟ್ (ಎ ಲ್ಲೆಂದ ರಲ್ಲಿ ಕಸ)ನಿಂದ ಆಗುವ ಸಮ ಸ್ಯೆಗಳ ಬಗ್ಗೆ ನಾಟಕದ ಮೂಲಕ ಜಾಗೃತಿ ಮೂಡಿಸಲಾಯಿತು. ಹಸಿ, ಒಣ ಹಾಗೂ ಅಪಾಯಕಾರಿ ತ್ಯಾಜ್ಯ ವನ್ನು ವಿಂಗಡಿಸಿ ಕೊಡುವಂತೆ ಮನವಿ ಮಾಡಲಾಯಿತು. ನಗರದಲ್ಲಿ ಬ್ಲಾಕ್‌ಸ್ಪಾಟ್ ಗಳು ಸೃಷ್ಟಿಯಾಗುವುದರಿಂದ ಸಾಂಕ್ರಾಮಿಕ ಕಾಯಿಲೆಗಳು ಹೆಚ್ಚಾ
ಗುತ್ತವೆ. ಇದನ್ನು ತಪ್ಪಿಸುವ ನಿಟ್ಟಿ ನಲ್ಲಿ ಎಲ್ಲರೂ ಪಾಲಿಕೆಯ ಕಸದ ವಾಹನ ಮನೆಬಾಗಿಲಿಗೆ ಬಂದ ವೇಳೆ ಹಸಿ , ಒಣ ಹಾಗೂ ಅಪಾಯಕಾರಿ ತ್ಯಾಜ್ಯ ವನ್ನು ವಿಂಗಡಣೆ ಮಾಡಿ ಕೊ ಡ ಬೇಕು ಎಂದು ಬೀದಿ ನಾಟಕದಲ್ಲಿ ಪ್ರಾತ್ಯ ಕ್ಷಿಕೆ ತೋರಿಸಲಾಯಿತು. “ನಮ್ಮ ಕಸ ನಮ್ಮ ಜವಾಬ್ದಾರಿ, ನಮ್ಮ ಬೆಂಗ ಳೂರು ಸ್ವತ್ಛ ಬೆಂಗ ಳೂರು’ ಎಂಬ ಘೋಷ ವಾ ಕ್ಯ ದೊಂದಿಗೆ ಜಾಗೃತಿ ಮೂಡಿ ಸಲಾಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.