ಹೋರಾಡಿಕೊಂಡೇ ಬೆಳೆದ ಚಾಚಾ
Team Udayavani, Nov 26, 2018, 6:25 AM IST
ಬೆಂಗಳೂರು: ಚಿತ್ರದುರ್ಗ ಜಿಲ್ಲೆಯ ಬಡ ಮುಸ್ಲಿಂ ಕುಟುಂಬದಲ್ಲಿ ಜನಿಸಿ, ಬಾಲ್ಯದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿ, ಕಾಂಗ್ರೆಸ್ ಸಖ್ಯ ಬೆಳೆಸಿಕೊಂಡು, ತಿಂಗಳಿಗೆ ನೂರು ರೂ.ಸಂಬಳಕ್ಕೆ ಸೇರಿಕೊಂಡು ಅದೇ ಪಕ್ಷದಲ್ಲಿ ಕೇಂದ್ರದಲ್ಲಿ ಮಹತ್ವದ ರೈಲ್ವೆ ಖಾತೆಯನ್ನು ಪಡೆಯುವಷ್ಟರ ಮಟ್ಟಿಗೆ ಬೆಳೆದು ನಿಂತವರು ಸಿ.ಕೆ.ಜಾಫರ್ ಷರೀಫ್!
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ 1933ರ ನವೆಂಬರ್ 3ರಂದು ಬಡ ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಜಾಫರ್ ಷರೀಫ್ 10ನೇ ವಯಸ್ಸಿನಲ್ಲಿಯೇ ಕ್ವಿಟ್ ಇಂಡಿಯಾ ಚಳವಳಿಗೆ ಧುಮುಕಿದರು. ಪ್ರಾಥಮಿಕ ಶಾಲೆಯ ಗುರುಗಳ ಮಾರ್ಗದರ್ಶನದಂತೆ ಸ್ವಾತಂತ್ರ್ಯ ಹೋರಾಟದಲ್ಲಿಯೂ ಭಾಗವಹಿಸಿದ್ದರು. ಚಿಕ್ಕವಯಸ್ಸಿನಲ್ಲಿಯೇ ತಿಂಗಳಿಗೆ 100 ರೂ.ಕೆಲಸಕ್ಕೆ ಕಾಂಗ್ರೆಸ್ ಕಚೇರಿಯನ್ನು ಸೇರಿದ ಅವರು ಬಳಿಕ ಅದನ್ನೇ ಮನೆಯನ್ನಾಗಿ ಮಾಡಿಕೊಂಡಿದ್ದರು. ನಂತರ ಕಾಂಗ್ರೆಸ್ ಸೇರ್ಪಡೆಯಾಗಿ ಯುವ ಕಾಂಗ್ರೆಸ್ ಘಟಕದಲ್ಲಿ ಗುರುತಿಸಿಕೊಂಡರು.
ನಂತರ ಎಸ್. ನಿಜಲಿಂಗಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವರ ಶಿಷ್ಯರಾಗಿ ಗುರುತಿಸಿಕೊಂಡು ಸೇವಾದಳದ ಸದಸ್ಯರಾದರು. 1969ರಲ್ಲಿ ಕಾಂಗ್ರೆಸ್ ಇಬ್ಭಾಗವಾದ ವೇಳೆ ಷರೀಫ್ ಅವರು ಇಂದಿರಾ ಕಾಂಗ್ರೆಸ್ ಸೇರ್ಪಡೆಯಾದರು. ಬಳಿಕ ರಾಜ್ಯದಲ್ಲಿ ದೇವರಾಜ ಅರಸು ಅವರಿಗೆ ಹತ್ತಿರವಾದರು. ಆ ಕಾರಣಕ್ಕಾಗಿ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು, ಲಾಲ್ ಬಹದ್ದೂರ್ ಶಾಸಿŒ ಹಾಗೂ ಇಂದಿರಾ ಗಾಂಧಿಯವರನ್ನು ಹತ್ತಿರದಿಂದ ನೋಡುವಂತಾಯಿತು. ಅಲ್ಲದೇ ಅರಸು ಅವರ ಒಡನಾಟ ಹಾಗೂ ಅಜೀಜ್ ಸೇs… ಅವರ ಬೆಂಬಲದಿಂದ 1971ರ ಲೋಕಸಭಾ ಚುನಾವಣೆಯಲ್ಲಿ ಕನಕಪುರದಿಂದ ಸ್ಪರ್ಧಿಸಿ ಗೆದ್ದು, ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದರು.
ಮೊದಲ ಚುನಾವಣೆಯಲ್ಲಿ ಎಸ್.ನಿಜಲಿಂಗಪ್ಪ ಅವರ ಅಳಿಯ ಎಂ.ವಿ.ರಾಜಶೇಖರನ್ ವಿರುದ್ಧ ಸ್ಪರ್ಧಿಸಿದ್ದರಿಂದ ವಿಶೇಷವಾಗಿ ಒಕ್ಕಲಿಗರ ಪ್ರಾಬಲ್ಯವಿರುವ ಕ್ಷೇತ್ರವಾಗಿದ್ದರಿಂದ ಗೆಲುವು ಸುಲಭವಾಗಿರಲಿಲ್ಲ. ಚುನಾವಣೆ ಖರ್ಚಿಗೆ ಹಣ ಇಲ್ಲದ ಕಾರಣ ಪಕ್ಷದ ನಾಯಕರಾಗಿದ್ದ ದೇವರಾಜ ಅರಸು, ಕೆಂಗಲ್ ಹನುಮಂತಯ್ಯ, ಕೊಲ್ಲೂರು ಮಲ್ಲಪ್ಪ, ಅಜೀಜ್ ಸೇs… ಸೇರಿ ಒಂದು ಲಕ್ಷ ರೂ. ನೀಡಿದ್ದರು. ಆ ಹಣದಲ್ಲಿಯೇ ಸ್ವಲ್ಪ ಉಳಿಸಿಕೊಂಡು ಚುನಾವಣೆಯಲ್ಲಿ ಜಯ ಗಳಿಸಿದರು.
ನಂತರ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಏಳು ಬಾರಿ ಸಂಸದರಾಗಿ ಆಯ್ಕೆಯಾದರು. 1980ರಲ್ಲಿ ಮೊದಲ ಬಾರಿ ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವರಾಗಿ, ನಂತರ ನೀರಾವರಿ, ಕಲ್ಲಿದ್ದಲು ಸಚಿವರಾಗಿ ಕಾರ್ಯ ನಿರ್ವಹಿಸಿದರು. 1991ರಿಂದ 1995ರವರೆಗೆ ಪಿ.ವಿ.ನರಸಿಂಹರಾವ್ ಸಂಪುಟದಲ್ಲಿ ಸಂಪುಟ ದರ್ಜೆಯ ರೈಲ್ವೆ ಸಚಿವರಾಗಿ ಕಾರ್ಯ ನಿರ್ವಹಿಸಿದರು.
ಗೇಜ್ ಪರಿವರ್ತಕ:
ರೈಲ್ವೆ ಸಚಿವರಾಗಿದ್ದಾಗ ಜಾಫರ್ ಷರೀಫ್ ರೈಲ್ವೆ ಹಳಿಗಳನ್ನು ಗೇಜ್ ಪರಿವರ್ತನೆ ಮಾಡಿ ರೈಲ್ವೆ ಗೇಜ್ ಮಂತ್ರಿ ಎಂದೇ ಪ್ರಖ್ಯಾತರಾಗಿದ್ದರು. ನ್ಯಾರೋ ಗೇಜ್, ಮೀಟರ್‌ಗೆàಜ್‌ಗಳನ್ನು ಬ್ರಾಡ್‌ಗೆàಜ್‌ಗೆ ಪರಿವರ್ತಿಸಿ ದೇಶದಲ್ಲಿ ರೈಲ್ವೆ ಕ್ರಾಂತಿಯನ್ನೇ ಮಾಡಿದರು. ಬೆಂಗಳೂರಿನಲ್ಲಿ ರೈಲ್ವೆ ಗಾಲಿ ಮತ್ತು ಅಚ್ಚು ಕಾರ್ಖಾನೆ ಆರಂಭವಾಗುವಲ್ಲಿ ಜಾಫರ್ ಷರೀಫ್ ಅತ್ಯಂತ ಮಹತ್ವದ ಪಾತ್ರ ವಹಿಸಿದ್ದರು. ಬೆಂಗಳೂರು-ಹಾಸನ ರೈಲು ಮಾರ್ಗ ಮತ್ತು ರಾಜ್ಯಕ್ಕೆ ಕೊಂಕಣ ರೈಲ್ವೆ ಆರಂಭಿಸುವಲ್ಲಿಯೂ ಜಾಫರ್ ಪಾತ್ರ ಮುಖ್ಯವಾಗಿತ್ತು.
ಸಂಸದರ ನಿಧಿ ಬಳಕೆ:
ಜಾಫರ್ ಷರೀಫ್ ಸಂಸದರಾಗಿ ತಮಗೆ ಬರುವ ಸಂಸದರ ನಿಧಿ ಹಣವನ್ನು ಶಾಲೆ, ಕಾಲೇಜುಗಳ ತರಗತಿ ನವೀಕರಣ, ಅನಾಥ ಮಕ್ಕಳಿಗೆ ಕಂಪ್ಯೂಟರ್ ಕೇಂದ್ರಗಳ ಸ್ಥಾಪನೆ ಮಾಡುವ ಮೂಲಕ ಸಂಸದರ ನಿಧಿ ಸದ್ಭಳಕೆ ಮಾಡಿ, ಇತರ ಸಂಸದರಿಗೆ ಮಾದರಿಯಾಗಿದ್ದರು.
ಭ್ರಷ್ಟಾಚಾರದ ಆರೋಪ:
1995ರಲ್ಲಿ ಜಾಫರ್ ಷರೀಫ್ ರೈಲ್ವೆ ಸಚಿವರಾಗಿದ್ದಾಗ ಹೃದಯ ರೋಗ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಲಂಡನ್‌ಗೆ ತೆರಳಿದಾಗ ತಮ್ಮೊಂದಿಗೆ ಇಬ್ಬರು ಸಹಾಯಕರನ್ನು ಕರೆದುಕೊಂಡು ಹೋಗಿದ್ದು, ಇದರಿಂದ ಸರ್ಕಾರಕ್ಕೆ 7.5 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅವರ ವಿರುದ್ಧ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಸಿಬಿಐ ತನಿಖೆ ಕೂಡ ನಡೆಸಲಾಗಿತ್ತು. ಈ ಬಗ್ಗೆ ಇಲಾಖಾ ತನಿಖೆ ನಡೆಸುವಂತೆ ಸಿಬಿಐ ಕೋರ್ಟ್ ಸೂಚಿಸಿ ಅವರ ವಿರುದ್ಧದ ಪ್ರಕರಣ ಕೈ ಬಿಟ್ಟಿತ್ತು.
ವರ್ಗಾವಣೆಗೆ ಕೇಳಿ ಬೈಸಿಕೊಂಡಿದ್ದರು
1972ರಲ್ಲಿ ಡಿ.ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಾಫರ್ ಷರೀಫ್ ಕನಕಪುರ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದರು. ಈ ವೇಳೆ ಕೋಲಾರ ಸಂಸದ ಜಿ.ವೈ. ಕೃಷ್ಣನ್ ಅವರ ಅಳಿಯನ ವರ್ಗಾವಣೆ ಮಾಡುವಂತೆ ಬಾಲಬ್ರೂಯಿ ಅತಿಥಿ ಗೃಹಕ್ಕೆ ತೆರಳಿ ಅರಸು ಅವರ ಬಳಿ ಮನವಿ ಮಾಡಿಕೊಂಡಿದ್ದರು. ಇಬ್ಬರೂ ಕಾಂಗ್ರೆಸ್ ಪಕ್ಷದ ಸಂಸದರಾಗಿದ್ದರಿಂದ ದೇವರಾಜ ಅರಸು ಅವರು, ತಮ್ಮ ಬೇಡಿಕೆಗೆ ಸ್ಪಂದಿಸುತ್ತಾರೆಂದು ಮನವಿ ಮಾಡಿದ್ದರು. ಆದರೆ, ಅರಸು ಅವರು, ಇಬ್ಬರೂ ಸಂಸದರನ್ನು ತಾಕೀತು ಮಾಡಿದ್ದರು. ಜತೆಗೆ ಅಧಿಕಾರಿಗಳನ್ನೂ ತರಾಟೆಗೆ ತೆಗೆದುಕೊಂಡಿದ್ದರು. ಇದರಿಂದ ಬೇಸರಗೊಂಡ ಜಾಫರ್ ಷರೀಫ್ ಅವರನ್ನು ಕರೆದು ಸಮಾಧಾನ ಮಾಡಿ ತಿಂಡಿ ನೀಡಿ ಕಳುಹಿಸಿದ್ದರಂತೆ.
– ಶಂಕರ ಪಾಗೋಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Racial Remark: ಕುಮಾರಸ್ವಾಮಿಯವರ “ಕರಿಯ” ಎಂದದ್ದು ತಪ್ಪು: ಡಿ.ಕೆ.ಶಿವಕುಮಾರ್
Illegal Property Case: ಸಚಿವ ಜಮೀರ್ ಅಹ್ಮದ್‌ಖಾನ್‌ಗೆ ಲೋಕಾಯುಕ್ತದಿಂದ ನೋಟಿಸ್
Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ
GKVK Research; ಇನ್ನು ಜೇನು ಗೂಡು ಕಟ್ಟಬೇಕಿಲ್ಲ: 3ಡಿ ಗೂಡು ಆವಿಷ್ಕಾರ!
Ration Card: ರಾಜ್ಯದಲ್ಲಿ ಪಡಿತರ ನೀಡಲು ಹಣದ ಕೊರತೆ ಇಲ್ಲ: ಸಚಿವ ಮುನಿಯಪ್ಪ
MUST WATCH
ಹೊಸ ಸೇರ್ಪಡೆ
Re Release: ದರ್ಶನ್ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.