ಕಾಂಗ್ರೆಸ್ ಪಕ್ಷದ ಸ್ವಚ್ಛತೆ ಬಗ್ಗೆ ಸ್ಪಷ್ಟಪಡಿಸಿ
Team Udayavani, Mar 27, 2018, 6:15 AM IST
ಬೆಂಗಳೂರು: ದೇಶದ ರಾಜಕೀಯ ಇತಿಹಾಸ ಗೊತ್ತಿಲ್ಲದೆ ರಾಜ್ಯಕ್ಕೆ ಬಂದು ಯಾರೋ ಬರೆದುಕೊಟ್ಟಿದ್ದನ್ನು ಓದುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಬಿಜೆಪಿಗೆ ಬೆಂಬಲ ವಿಚಾರದಲ್ಲಿ ಜೆಡಿಎಸ್ ಸ್ವತ್ಛವಾಗಿ ಬರಬೇಕು ಎಂದು ಕೇಳುವ ಮುನ್ನ ಕಾಂಗ್ರೆಸ್ ಪಕ್ಷದ ಸ್ವತ್ಛತೆ ಬಗ್ಗೆ ಸ್ಪಷ್ಟಪಡಿಸಲಿ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸವಾಲು ಹಾಕಿದ್ದಾರೆ.
ಅಲ್ಲದೆ, ಈ ಹಿಂದೆ ವಾಜಪೇಯಿ ನೇತೃತ್ವದ ಎನ್ ಡಿಎ ಸರ್ಕಾರಕ್ಕೆ ಬೆಂಬಲ ನೀಡಿದ್ದ ತಮಿಳುನಾಡಿನ ಡಿಎಂಕೆ ನಾಯಕ ಕರುಣಾನಿಧಿ ಮುಂದೆ 2004 ಮತ್ತು 2009ರ ಚುನಾವಣೆಯಲ್ಲಿ ಬೆಂಬಲ ಭಿಕ್ಷೆ ಕೋರಿದ್ದ ಕಾಂಗ್ರೆಸ್‌ಗೆ ಡಿಎಂಕೆ ಸ್ವತ್ಛವಾಗಿ ಕಂಡಿತ್ತೇ? ಆ ಸ್ವತ್ಛತೆಗೆ ಕಾಂಗ್ರೆಸ್ ಯಾವ ಸೋಪು ಬಳಸಿತ್ತೆಂದು ಹೇಳಲಿ. ಆ ಸೋಪಿನಲ್ಲೇ ತೊಳೆದುಕೊಳ್ಳುತ್ತೇವೆ ಎಂದು ತೀಕ್ಷ್ಮವಾಗಿ ತಿರುಗೇಟು ನೀಡಿದ್ದಾರೆ.
ಒಬ್ಬ ಮಾಜಿ ಪ್ರಧಾನಿ ನೇತೃತ್ವದ ಪಕ್ಷ ಎಂಬ ತಿಳಿವಳಿಕೆಯೂ ಇಲ್ಲದೆ ಮಾತನಾಡುವ ರಾಹುಲ್ ಅದಕ್ಕೆ ಮುನ್ನ ನನ್ನ ರಾಜಕೀಯ ಇತಿಹಾಸ ತಿಳಿದುಕೊಳ್ಳಲಿ ಎಂದು ಕಿಡಿ ಕಾರಿದ್ದಾರೆ. ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರು ಜೆಡಿಎಸ್ ಅನ್ನು ಬಿಜೆಪಿಯ ಬಿ ಟೀಂ, ಜನತಾ ದಳ ಸಂಘ ಪರಿವಾರ ಎಂದು ಹೇಳಿದ್ದಲ್ಲದೆ, ಬಿಜೆಪಿ ಬೆಂಬಲಿಸುವ ವಿಚಾರದಲ್ಲಿ ಜೆಡಿಎಸ್ ಸ್ವತ್ಛವಾಗಿ ಹೊರಬರಲಿ ಎಂದೆಲ್ಲ ಹೇಳಿದ್ದಾರೆ.
ಯುವ ನಾಯಕರಾಗಿರುವ ಅವರು ರಾಜ್ಯದಲ್ಲಿ ಈಗಿರುವ ಕಾಂಗ್ರೆಸ್ ಇಂದಿರಾ ಕಾಂಗ್ರೆಸೊ, ಸೋನಿಯಾ ಕಾಂಗ್ರೆಸೊ ಅಥವಾ ಸಿದ್ದರಾಮಯ್ಯ ಕಾಂಗ್ರೆಸೊ ಎಂಬುದನ್ನು ಮೊದಲು ತೀರ್ಮಾನ ಮಾಡಲಿ.ಸಿದ್ದರಾಮಯ್ಯ ಅವರನ್ನು ಮುಂದಿಟ್ಟುಕೊಂಡು ಶಕ್ತಿ ಪ್ರದರ್ಶನ ಮಾಡುತ್ತಿರುವ ರಾಹುಲ್‌ಗೆ ಸಿದ್ದರಾಮಯ್ಯ ಅವರು ಜೆಡಿಎಸ್‌ನಿಂದ ಕಾಂಗ್ರೆಸ್ ಸೇರಿದ ಕೂಡಲೇ ಪರಿಶುದ್ಧರಾಗಿಬಿಟ್ಟರೇ? ಇಂತಹ ಕನಿಷ್ಠ ಪ್ರಬುದ್ಧತೆ ಇಲ್ಲದೆ ನಮ್ಮನ್ನು ಸ್ವತ್ಛವಾಗಿ ಬನ್ನಿ ಎಂದು ಹೇಳಲು ಅವರ್ಯಾರು? ನಮ್ಮ ಜಾತ್ಯತೀತ ಸಿದ್ದಾಂತದ ವಿಚಾರದಲ್ಲಿ ನಾವು ಯಾರ ಆದೇಶವನ್ನೂ ಪಾಲಿಸಬೇಕಾದ ಅಗತ್ಯವಿಲ್ಲ ಎಂದರು.
ಎಚ್‌ಡಿಡಿ ವಾಗ್ಧಾಳಿ
– 2004ರಲ್ಲಿ ಸೋನಿಯಾ ಗಾಂಧಿ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕರಾಗಿ ಆಯ್ಕೆಯಾಗುವ ವೇಳೆ ಅವರು ದೇಶದ ಪ್ರಜೆಯೇ ಅಲ್ಲ ಎಂಬ ಮಾತು ಕೇಳಿಬಂತು. ಆಗ ಪ್ರತಿಪಕ್ಷ ನಾಯಕಿಯಾಗಿದ್ದ ಸೋನಿಯಾ ಆಡಳಿತ ಪಕ್ಷದ ನಾಯಕಿ ಆಗಬಹುದು ಎಂದು ನಾನು ಹೇಳಿದ್ದೆ.
– 3 ಮತಗಳ ಕೊರತೆಯಿಂದ ಮನಮೋಹನ್ ಸಿಂಗ್ ಸರ್ಕಾರ ಉರುಳುವ ಸಂದರ್ಭ ಎದುರಾದಾಗ ಬೆಂಬಲ ಸೂಚಿಸಿ ಸರ್ಕಾರ
ಉರುಳದಂತೆ ನೋಡಿಕೊಂಡೆ. ಈ ಕೃತಜ್ಞತೆಯೂ ಇಲ್ಲದೆ ರಾಹುಲ್ ನಮ್ಮ ಪಕ್ಷದ ಬಗ್ಗೆ ಮಾತನಾಡುತ್ತಿರುವುದು ಬೆಳೆಯುವ ಯುವ ನಾಯಕನಿಗೆ ತಕ್ಕುದಲ್ಲ.
– ಯಾರೋ ಚೀಟಿಯಲ್ಲಿ ಬರೆದುಕೊಟ್ಟಿದ್ದನ್ನು ಓದುವುದಲ್ಲ. ಈ ದೇವೇಗೌಡ ಅಂದರೆ ಏನೆಂದು ತಿಳಿದುಕೊಂಡಿದ್ದೀರಿ? ಬಾಬರಿ ಮಸೀದಿ ಕೆಡವಿದಾಗ ದೇಶದಲ್ಲಿ ಯಾರ ಸರ್ಕಾರವಿತ್ತು? ಈ ದೇಶ ಇಷ್ಟು ಕೆಟ್ಟ ಸ್ಥಿತಿಗೆ ಬರಲು ಕಾರಣರಾರು? ದೇಶದ ಇತಿಹಾಸ ಗೊತ್ತಿದೆಯಾ? ನನ್ನ ತಾಳ್ಮೆಗೂ ಮಿತಿಯಿದೆ. 85ನೇ ವಯಸ್ಸಿನಲ್ಲೂ ಹೋರಾಡುತ್ತಿದ್ದೇನೆ. ಅದರ ಉದ್ದೇಶ ಅರ್ಥಮಾಡಿಕೊಂಡು ಮಾತನಾಡಿ.
– ರಾಹುಲ್ 5ನೇ ಸುತ್ತಿನ ರಾಜ್ಯ ಪ್ರವಾಸಕ್ಕೆ ಬರುತ್ತಿದ್ದಾರಂತೆ. ಐದಲ್ಲ, 20 ಬಾರಿ ಬೇಕಾದರೂ ಕರ್ನಾಟಕಕ್ಕೆ ಬರಲಿ. ನಾನೂ ನೋಡಿಯೇ ಬಿಡುತ್ತೇನೆ. ಅಧಿಕಾರ ದುರ್ಬಳಗೆ ಮಾಡಿಕೊಂಡು ಜೆಡಿಎಸ್ ಕಾರ್ಯಕರ್ತರನ್ನು ರೌಡಿ ಪಟ್ಟಿಗೆ ಸೇರಿಸಿದ ಕೂಡಲೇ ಜೆಡಿಎಸ್ ನಾಶವಾಗುತ್ತದೆ ಎಂದು ಭಾವಿಸಿದ್ದೀರಾ? ಈ ಸವಾಲನ್ನು ನಾನು ಸ್ವೀಕರಿಸುತ್ತೇನೆ. ಅಖಾಡದಲ್ಲಿ ನೋಡಿಯೇ ಬಿಡೋಣ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Liquor: ಮದ್ಯ ಬಂದ್ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ
Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ
Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.