3 ವರ್ಷದಲ್ಲಿ 63 ಕೋಮು ಸಂಘರ್ಷ ಪ್ರಕರಣ : 14 ಪ್ರಕರಣದ ಚಾರ್ಜ್‌ಶೀಟ್, 36 ತನಿಖಾ ಹಂತದಲ್ಲಿ
Team Udayavani, Jul 28, 2022, 7:40 AM IST
ಬೆಂಗಳೂರು : ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ 63 ಕೋಮು ಸಂಘರ್ಷ ಪ್ರಕರಣಗಳು ನಡೆದಿದ್ದು, ಕೋಮು ಸಂಘರ್ಷ ಪ್ರಕರಣಗಳ ಸಂಖ್ಯೆಯಲ್ಲಿ ದೇಶದಲ್ಲೇ 9ನೇ ಸ್ಥಾನ ಪಡೆದುಕೊಂಡಿದೆ.
ರಾಜ್ಯದಲ್ಲಿ ಕಳೆದ 3 ವರ್ಷಗಳಲ್ಲಿ ನಡೆದಿರುವ ಕೋಮು ಗಲಭೆ ಪ್ರಕರಣಗಳಲ್ಲಿ 36 ಕೇಸ್‌ಗಳು ಇನ್ನೂ ತನಿಖಾ ಹಂತದಲ್ಲಿದ್ದರೆ, 14 ಪ್ರಕರಣಗಳಲ್ಲಿ ಚಾರ್ಜ್‌ಶೀಟ್ ಸಲ್ಲಿಕೆಯಾಗಿ ಕೋರ್ಟ್‌ನಲ್ಲಿ ವಿಚಾರಣ ಹಂತದಲ್ಲಿದೆ.
ರಾಜ್ಯದಲ್ಲಿ ಕೋಮು ಗಲಭೆಗಳಿಗೆ ಸಂಬಂಧಿಸಿ 2019ರಲ್ಲಿ 12 ಪ್ರಕರಣ ದಾಖಲಾದರೆ, 2020ರಲ್ಲಿ 21 ಕೇಸ್ ಠಾಣೆ ಮೆಟ್ಟಿಲೇರಿವೆ. 2021ರಲ್ಲಿ ಇದರ ಪ್ರಮಾಣ 23ಕ್ಕೆ ಏರಿಕೆಯಾಗಿದೆ.
ಈ ವರ್ಷ (ಜನವರಿ, ಫೆಬ್ರುವರಿ) 2 ತಿಂಗಳಿನಲ್ಲಿ 7 ಎಫ್ಐಆರ್ ದಾಖಲಾಗಿದೆ. ದಕ್ಷಿಣ ಕನ್ನಡದ ವಿಟ್ಲ ಪೊಲೀಸ್ ಠಾಣೆಯಲ್ಲಿ 2020ರಲ್ಲಿ ಹಾಗೂ ಹಿರೇಕೆರೂರು ಠಾಣೆಯಲ್ಲಿ 2019ರಲ್ಲಿ ದಾಖಲಾಗಿದ್ದ 2 ಕೇಸ್‌ಗಳಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದ ಬಿ’ ವರದಿ ಸಲ್ಲಿಸಲಾಗಿದೆ. ವಿಟ್ಲ ಪೊಲೀಸ್ ಠಾಣೆಯಲ್ಲಿ 2020ರಲ್ಲಿ ದಾಖಲಾಗಿದ್ದ ಮತ್ತೂಂದು ಕೇಸ್‌ನಲ್ಲಿ ಪೊಲೀಸರು ಕೋರ್ಟ್‌ಗೆ “ಸಿ’ ವರದಿ ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾಕ್ಷ್ಯಗಳ ಕೊರತೆ
ತನಿಖಾಧಿಕಾರಿಗಳ ನಿರ್ಲಕ್ಷ್ಯ ಹಾಗೂ ಸಾಕ್ಷ éಗಳ ಕೊರತೆಯಿಂದ ಶೇ. 65ರಷ್ಟು ಕೇಸ್‌ಗಳು ವಜಾ ಆಗುತ್ತಿವೆ. ಆರೋಪಿಗಳು ಬೇರೆ ವ್ಯಕ್ತಿಯಿಂದ ತಮ್ಮ ಪರ ಸಾಕ್ಷ್ಯ ಹೇಳಿಸಿ ಗೊಂದಲ ಸೃಷ್ಟಿಸುವುದು. ಸಾಕ್ಷಿದಾರರು ನ್ಯಾಯಾಲಯದಲ್ಲಿ ಸೂಕ್ತ ರೀತಿಯಲ್ಲಿ ಸಾಕ್ಷಿ ನುಡಿಯದಿರುವುದು. ವಿಳಾಸ ಪೂರ್ಣವಾಗಿಲ್ಲದ ಕಾರಣ ಆರೋಪಿತರ ಮೇಲೆ ಸಮನ್ಸ್ ಜಾರಿಯಾಗುತ್ತಿಲ್ಲ ಎನ್ನುವ ವರದಿ ಆಧರಿಸಿ ಕೇಸ್ ಖುಲಾಸೆ ಆಗುತ್ತಿದೆ ಎಂದು ಹೇಳಲಾಗಿದೆ.
ಮಂಗಳೂರು 2ನೇ ಸ್ಥಾನದಲ್ಲಿ
ರಾಜ್ಯದಲ್ಲಿ ಮೂರು ವರ್ಷಗಳಲ್ಲಿ ನಡೆದಿರುವ ಕೋಮು ಸಂಘರ್ಷಕ್ಕೆ ಸಂಬಂಧಿಸಿ ಶಿವಮೊಗ್ಗದಲ್ಲಿ 12 ಕೇಸ್ ದಾಖಲಾಗಿದ್ದು, ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ದಕ್ಷಿಣ ಕನ್ನಡದಲ್ಲಿ 11 ಪ್ರಕರಣ ದಾಖಲಾಗಿದ್ದು, 2ನೇ ಸ್ಥಾನದಲ್ಲಿದೆ. ಹಾವೇರಿ, ಬಾಗಲಕೋಟೆಯಲ್ಲಿ ತಲಾ 10 ಕೇಸ್ ದಾಖಲಾಗಿದ್ದು, ಅನಂತರದ ಸ್ಥಾನದಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.