ಸ್ವಚ್ಛತೆ ಕಳಪೆ ಕಳಂಕ ತೊಳೆಯಲು ಈಗಲೇ ಸಿದ್ಧತೆ
Team Udayavani, Oct 17, 2022, 11:29 AM IST
ಬೆಂಗಳೂರು: ಸ್ವಚ್ಛ ಸರ್ವೇಕ್ಷಣಾ ಅಭಿಯಾನದ ರ್‍ಯಾಂಕಿಂಗ್ ಪಟ್ಟಿಯಲ್ಲಿ ಬೆಂಗಳೂರು ಕಳಪೆ ಸ್ಥಾನ ಪಡೆದಿದೆ. 2023ನೇ ಸಾಲಿನ ಸ್ವಚ್ಛ ಸರ್ವೇಕ್ಷಣ ಅಭಿಯಾನಕ್ಕೆ ಈಗಿನಿಂದಲೇ ಸಿದ್ಧತೆ ನಡೆಸಲಾಗುತ್ತಿದ್ದು, ತ್ಯಾಜ್ಯ ಮತ್ತು ತ್ಯಾಜ್ಯ ನೀರು (ಲಿಚೆಟ್) ನಿರ್ವಹಣೆಗೆ ಹೆಚ್ಚಿನ ಒತ್ತು ನೀಡಲು ನಿರ್ಧರಿಸಲಾಗಿದೆ.
ನಗರಗಳ ನಡುವೆ ಸ್ವಚ್ಛತೆ ಕುರಿತಂತೆ ಸ್ಪರ್ಧೆ ಏರ್ಪಡಿಸಿ ಸ್ವಚ್ಛ ನಗರಗಳನ್ನು ಸೃಷ್ಟಿಸುವ ಸ್ವಚ್ಛ ಸರ್ವೇಕ್ಷಣಾ ಅಭಿಯಾನ ದಲ್ಲಿ ಈವರೆಗೆ ಬೆಂಗಳೂರು ಕಳಪೆ ಪ್ರದರ್ಶನ ನೀಡಿದೆ. 2016ರಿಂದ ನಡೆಯು ತ್ತಿರುವ ಅಭಿಯಾನದಲ್ಲಿ ಬೆಂಗಳೂರು ಈವ ರೆಗೂ ಉತ್ತಮ ಸ್ಥಾನ ಪಡೆದಿಲ್ಲ. ಅದ ರಲ್ಲೂ ಈ ಬಾರಿ ಬೆಂಗಳೂರು ಸ್ಪರ್ಧಿ ಸಿದ್ದ ವಿಭಾಗ ದಲ್ಲಿದ್ದ 45 ನಗರಗಳ ಪೈಕಿ 43ನೇ ರ್‍ಯಾಂಕ್ ಪಡೆದಿದೆ.
ತ್ಯಾಜ್ಯ ನಿರ್ವಹಣೆ ಗಾಗಿ ವಾರ್ಷಿಕ 1 ಸಾವಿರ ಕೋಟಿ ರೂ. ವ್ಯಯಿಸಿದರೂ, ಸ್ವಚ್ಛ ನಗರವನ್ನಾಗಿಸುವ ನಿಟ್ಟಿನಲ್ಲಿ ಬಿಬಿ ಎಂಪಿ ನಿರ್ಲಕ್ಷ್ಯವಹಿಸಿದೆ ಎಂಬ ಆರೋಪ ಗಳು ಕೇಳಿಬರುತ್ತಿವೆ. ಹೀಗಾಗಿ 2023ರಲ್ಲಾ ದರೂ ಉತ್ತಮ ರ್‍ಯಾಂಕ್ ಪಡೆಯುವ ದೃಷ್ಟಿಯಿಂದ ಸಾರ್ವಜನಿಕವಾಗಿ ತ್ಯಾಜ್ಯ ಕಾಣಿಸುವುದನ್ನು ತಡೆ ಯಲು ಕ್ರಮ ಕೈಗೊಳ್ಳುವ ಕುರಿತು ಯೋಜನೆ ರೂಪಿಸಲಾಗುತ್ತಿದೆ. ಅದರ ಜತೆಗೆ ಲಿಚೆಟ್ ಸಂಸ್ಕರಣೆಗೆ ಹೆಚ್ಚಿನ ಒತ್ತು ನೀಡುವ ಬಗ್ಗೆಯೂ ಚಿಂತಿಸ ಲಾಗುತ್ತಿದೆ.
ನವೆಂಬರ್‌ನಿಂದ ಆರಂಭ: 2023ರ ಸ್ವಚ್ಛ ಸರ್ವೇಕ್ಷಣಾ ಅಭಿ ಯಾನದ ಸ್ಪರ್ಧೆಗಳು ನವೆಂಬರ್‌ನಿಂದ ಆರಂಭ ವಾಗಲಿದೆ. ಅದರ ಹಿನ್ನೆಲೆಯಲ್ಲಿ ಕೇಂದ್ರ ನಿಯೋಜಿಸುವ ತಂಡ ನಗರಕ್ಕಾ ಗಮಿಸಿ ಇಲ್ಲಿನ ಪರಿಸರ ವನ್ನು ಅವಲೋಕಿಸಲಿದ್ದಾರೆ. ಜತೆಗೆ ನಗರದ ರಸ್ತೆ ಬದಿ ತ್ಯಾಜ್ಯ ಶೇಖರಣೆಯಾಗುವ ಬ್ಲ್ಯಾಕ್ ಸ್ಪಾಟ್, ತ್ಯಾಜ್ಯ ಸಂಗ್ರಹ ಮತ್ತು ಸಂಸ್ಕರಣೆ ಸೇರಿ ಇನ್ನಿತರ ವಿಷಯಗಳನ್ನು ಪರಿಶೀಲಿಸಿ ಅದನ್ನಾಧರಿಸಿ ಅಂಕಗಳನ್ನು ನೀಡಲಾಗುತ್ತದೆ. ಜತೆಗೆ ಲಿಚೆಟ್ ನಿರ್ವಹಣೆಯ ಪ್ರಮಾಣ ಮತ್ತು ಅದನ್ನು ಸಂಸ್ಕರಿಸಿದ ನಂತರ ಸಿಗುವ ನೀರಿನ ಮರುಬಳಕೆ ವಿಧಾನವನ್ನೂ ಗಮನಿಸಲಾಗು ತ್ತದೆ. ಈ ಎಲ್ಲದಕ್ಕೂ ಬಿಬಿಎಂಪಿ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕಿದೆ.
ಹೊಸ ಗುತ್ತಿಗೆಯಲ್ಲಿ ಈ ಅಂಶಗಳ ಅಳವಡಿಕೆ: ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಬಿಬಿಎಂಪಿ ಹೊಸದಾಗಿ ಟೆಂಡರ್ ಪ್ರಕ್ರಿಯೆ ನಡೆಸಿದೆ. ಅದರಲ್ಲಿ ಸ್ವಚ್ಛ ಸರ್ವೇಕ್ಷಣ ಅಭಿಯಾನಕ್ಕೆ ಪೂರಕವಾಗುವಂತಹ ಅಂಶಗಳನ್ನು ಸೇರಿಸಲಾಗಿದೆ. ಪ್ರಮುಖವಾಗಿ ಬ್ಲ್ಯಾಕ್ ಸ್ಪಾಟ್‌ಗಳನ್ನು ಕಡಿಮೆ ಮಾಡುವುದು, ತ್ಯಾಜ್ಯ ವಿಲೇವಾರಿ ಮಾಡುವ ಸಂದರ್ಭದಲ್ಲಿ ತ್ಯಾಜ್ಯ ನೀರು ಸಾರ್ವಜನಿಕ ಸ್ಥಳಗಳಲ್ಲಿ ಸೋರಿಕೆಯಾಗುವುದನ್ನು ತಡೆಯುವ ಅಂಶಗಳನ್ನು ಸೇರಿಸಲಾಗಿದೆ. ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿಯ ಜತೆಗೆ ಸಂಸ್ಕರಣಾ ಘಟಕಗಳ ಸಮರ್ಪಕ ಬಳಕೆ ಬಗ್ಗೆಯೂ ಬಿಬಿಎಂಪಿ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.
ಸದ್ಯ ಇರುವ 7 ಸಂಸ್ಕರಣಾ ಘಟಕಗಳ ಪೈಕಿ 5 ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳಿಂದ 1 ಸಾವಿರ ಟನ್‌ಗೂ ಹೆಚ್ಚಿನ ತ್ಯಾಜ್ಯ ಸಂಸ್ಕರಿಸಲಾ ಗುತ್ತಿದೆ. ಉಳಿದ ಎರಡು ಘಟಕಗಳನ್ನೂ ಕಾರ್ಯನಿರ್ವಹಣೆ ಮಾಡುವಂತೆ ಮಾಡಿ 1,500 ಟನ್‌ಗೂ ಹೆಚ್ಚಿನ ಹಸಿ ತ್ಯಾಜ್ಯ ಸಂಸ್ಕರಣೆಯಾಗುವಂತೆ ಮಾಡುವ ಬಗ್ಗೆ ಚರ್ಚಿಸಲಾಗಿದೆ. ಅದರ ಜತೆಗೆ ವಾರ್ಡ್ ಮಟ್ಟದಲ್ಲಿಯೇ ತ್ಯಾಜ್ಯ ಸಂಸ್ಕರಿಸುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ.
ಜಾಗೃತಿ ಮೂಡಿಸಲು 10 ಕೋಟಿ ರೂ. ವೆಚ್ಚ: ಬಿಬಿಎಂಪಿ ಕ್ರಮಗಳ ಜತೆಗೆ ಜನರಿಂದ ವ್ಯಕ್ತವಾಗುವ ಅಭಿಪ್ರಾಯವೂ ಮುಖ್ಯವಾದದ್ದಾಗಿದೆ. ಪ್ರತಿಬಾರಿಯೂ ಜನರು ಬೆಂಗಳೂರಿನ ಸ್ವಚ್ಛತೆ ಬಗ್ಗೆ ಸೂಚಿಸುವ ಅಭಿಪ್ರಾಯದಿಂದ ಕಡಿಮೆ ಅಂಕಗಳು ಬರುತ್ತಿವೆ. ಆದ್ದರಿಂದ ಈ ಬಾರಿ ಜನರಲ್ಲಿ ಜಾಗೃತಿ ಮೂಡಿಸಲು ಹಲವು ವಿಧಾನಗಳನ್ನು ಅಳವಡಿಸಲು ಬಿಬಿಎಂಪಿ ಮುಂದಾಗಿದೆ. ಪ್ರಮುಖವಾಗಿ ಬಿಎಂಟಿಸಿ ಬಸ್ ಸೆರಿ ಇನ್ನಿತರ ಕಡೆ ಪ್ರಚಾರ ಮಾಡುವುದು, ಬೀದಿ ನಾಟಕ ಪ್ರದರ್ಶನ, ಬಿಬಿಎಂಪಿ ಟವರ್‌ಗಳಲ್ಲಿ ಲೈಟಿಂಗ್ ಅಳವಡಿಕೆ, ಶಾಲೆಗಳಲ್ಲಿ ಕಾರ್ಯಾಗಾರ ಆಯೋಜನೆ, ಎಫ್ಎಂ, ಮುದ್ರಣ, ದೃಶ್ಯ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಕೈಗೊಳ್ಳಲು ನಿರ್ಧರಿಸಲಾಗಿದೆ. ಈ ಎಲ್ಲ ಕಾರ್ಯಗಳಿಗಾಗಿ 10 ಕೋಟಿ ರೂ. ವ್ಯಯಿಸಲಾಗುತ್ತಿದೆ.
43ನೇ ರ್‍ಯಾಂಕ್ ಪಡೆದ ಸಿಲಿಕಾನ್ ಸಿಟಿ : 2022ರ ಸ್ವಚ್ಛ ಸರ್ವೇಕ್ಷಣ ಅಭಿಯಾನದಲ್ಲಿ 10 ಲಕ್ಷಕ್ಕಿಂತ ಹೆಚ್ಚಿನ ಜನರು ವಾಸಿಸುವ 45 ನಗರಗಳ ಪೈಕಿ ಬೆಂಗಳೂರು 43ನೇ ಸ್ಥಾನ ಪಡೆದಿದೆ. 2021ರಲ್ಲಿ 28ನೇ ರ್‍ಯಾಂಕ್ ಪಡೆದಿದ್ದ ನಗರ ಈ ಬಾರಿ 15 ಸ್ಥಾನ ಕುಸಿತ ಕಂಡಿತ್ತು. 2023ರ ಸ್ವಚ್ಛ ಸರ್ವೇಕ್ಷಣ ಅಭಿಯಾನಕ್ಕೆ ಈಗಿನಿಂದಲೇ ಸಿದ್ಧತೆ ನಡೆಸಲಾಗುತ್ತಿದೆ. ಪ್ರಮುಖವಾಗಿ ತ್ಯಾಜ್ಯ ಹಾಗೂ ಲಿಚೆಟ್ ಸಂಸ್ಕರಣೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಈ ಬಗ್ಗೆ ಅಧಿಕಾರಿಗಳ ಜತೆ ಚರ್ಚೆಯನ್ನೂ ನಡೆಸಲಾಗಿದೆ. ಶೀಘ್ರದಲ್ಲಿ ರೂಪುರೇಷೆ ರೂಪಿಸಿ ಸ್ವಚ್ಛ ನಗರ ಪಟ್ಟ ಪಡೆಯಲು ಎಲ್ಲ ಕ್ರಮ ಕೈಗೊಳ್ಳಲಾಗುವುದು. -ತುಷಾರ್ ಗಿರಿನಾಥ್, ಬಿಬಿಎಂಪಿ ಮುಖ್ಯ ಆಯುಕ್ತ
-ಗಿರೀಶ್ ಗರಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.