ಸಹಬಾಳ್ವೆ ನಿರ್ಮಾಣವೇ ನಿಜವಾದ ಧರ್ಮ
Team Udayavani, Jan 10, 2018, 12:02 PM IST
ಕೆಂಗೇರಿ: ಶಾಂತಿ ಸಂದೇಶ, ಭಾತೃತ್ವ ಹಾಗೂ ಸಹಬಾಳ್ವೆ ನಿರ್ಮಾಣ ಮಾಡುವುದೇ ನಿಜವಾದ ಧರ್ಮದ ಸಾರ ಎಂದು ಆರ್ಚ್ ಬಿಷಪ್‌ನ ಮಹಾಧರ್ಮಾಧ್ಯಕ್ಷ ಬರ್ನಾರ್ಡ್ ಮೊರಾಸ್ ಹೇಳಿದರು.
ಕುಂಬಳಗೋಡು ಗ್ರಾಪಂ ವ್ಯಾಪ್ತಿಯ ಅಂಚೆಪಾಳ್ಯ ಸಮೀಪ ನೂತನವಾಗಿ ಸಂತ ಬೆನಡಿಕ್ಟ್ ದೇವಾಲಯ ಮತ್ತು ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಒತ್ತಡ ಜೀವನ ಶೈಲಿಯ ಪರಿಣಾಮ ಮಾನಸಿಕವಾಗಿ ಕುಗ್ಗಿರುವ ಮನಸ್ಸುಗಳಿಗೆ ಒಂದಷ್ಟು ಶಾಂತಿ ಸಂತೋಷ ದೊರಕಲು ಇಂತಹ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಸಹಕಾರಿಯಾಗುತ್ತವೆ ಎಂದರು.
ಶಾಸಕ ಎಸ್.ಟಿ.ಸೋಮಶೇಖರ್ ಮಾತನಾಡಿ, ವೈವಿಧ್ಯಮಯ ಬಹು ಸಂಸ್ಕೃತಿ ಹೊಂದಿರುವ ದೇಶದಲ್ಲಿ ಎಲ್ಲಾ ಜಾತಿ, ವರ್ಗ, ಧರ್ಮಗಳು ಸಮಾನತೆ ಸಾರುವ ಉತ್ತಮ ಸಂದೇಶಗಳನ್ನು ಪಾಲಿಸುವ ಪರಿಣಾಮ ದೇಶದಲ್ಲಿ ಸಮಾಜದ ವಿವಿಧ ವರ್ಗಗಳ ನಡುವೆ ಭಾತೃತ್ವ, ಸ್ನೇಹ, ವಿಶ್ವಾಸದಿಂದ ಬಾಳುವ ವಾತಾವರಣ ನಿರ್ಮಾಣವಾಗಿರುವುದು ದೇಶದ ಪ್ರಜಾಸತಾತ್ಮಕ ಪ್ರಜಾಪ್ರಭುತ್ವದ ವ್ಯವಸ್ಥೆಗೆ ಹೆಚ್ಚಿನ ಮನ್ನಣೆ ದೊರೆತು ದೇಶದ ಏಕತೆ ಹಾಗೂ ಐಕ್ಯತೆಗೆ ಸಹಕಾರಿಯಾಗಿವೆ ಎಂದು ತಿಳಿಸಿದರು.
ತಾಪಂ ಸದಸ್ಯ ಅಲ್ಲಾ ಬಕಾಷ್, ಕುಂಬಳಗೋಡು ಗ್ರಾಪಂ ಅಧ್ಯಕ್ಷ ಚಿಕ್ಕರಾಜು, ಯಶವಂತಪುರ ವಿಧಾನಸಭಾ ಕ್ಷೇತ್ರ ಆರಾಧನಾ ಸಮಿತಿ ಅಧ್ಯಕ್ಷ ನಾರಾಯಣಪ್ಪ, ಬೆಂಗಳೂರು ದಕ್ಷಿಣ ತಾಲೂಕು ಮಾಜಿ ಅಧ್ಯಕ್ಷ ಬಿ.ಕೃಷ್ಣಪ್ಪ, ಫಾದರ್‌ಗಳಾದ ಜೆರೋಮ್, ಪೀಟರ್, ಗ್ರಾಪಂ ಸದಸ್ಯರಾದ ಇಲಿಯಾಸ್, ರಾಮಣ್ಣ, ಅನೀಸ್ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್ ಹೂಡಾ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.