ಕೊಕೇನ್‌ ಮಾರಾಟ ಮಾಡುತ್ತಿದ್ದ ನೈಜೀರಿಯಾ, ಘಾನಾ ಪ್ರಜೆಗಳ ಸೆರೆ

Team Udayavani, Feb 13, 2017, 11:33 AM IST

arrest.jpg

ಬೆಂಗಳೂರು: ಹೆಣ್ಣೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಕೊಕೇನ್‌ ಮಾರಾಟ ಮಾಡುತ್ತಿದ್ದ ನೈಜೀರಿಯಾ ಮತ್ತು ಘಾನಾ ದೇಶದ ಮೂವರು ಪ್ರಜೆಗಳನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.

ಘಾನಾ ದೇಶದ ಎರ್ನೆಸ್ಟ್‌ (38), ನೈಜೀರಿಯಾ ಪ್ರಜೆಗಳಾದ ಫ‌ರ್ನೆಂಡ್‌ ಉಬ್‌  (36) ಹಾಗೂ ನೈಜೀರಿಯಾದ ಮದು ಅಬುಕುÌ ಉಬಾಕ್‌ (28) ಬಂಧಿತರು. ಆರೋಪಿಗಳಿಂದ 20 ಗ್ರಾಂ ಕೊಕೇನ್‌,  180 ಎಲ್‌ಎಸ್‌ಡಿ ಪೇಪರ್‌ ಮತ್ತು 19 ಎಂಡಿಎಂಎ ಮಾತ್ರೆಗಳನ್ನು ಜಪ್ತಿ ಮಾಡಲಾಗಿದೆ ಎಂದು ಸಿಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಾನಾದ ಎರ್ನೆಸ್ಟ್‌ ಮತ್ತು ನೈಜೀರಿಯಾದ ಫ‌ರ್ನೆಂಡ್‌ 2016ರಲ್ಲಿ ವ್ಯಾಪಾರ ವೀಸಾದಡಿ ಭಾರತಕ್ಕೆ ಬಂದಿದ್ದು, ಅವಧಿ ಮುಗಿದಿದ್ದರೂ ತಮ್ಮ ದೇಶಗಳಿಗೆ ವಾಪಾಸಾಗದೆ ನರಗದಲ್ಲೇ ಉಳಿದು ಮಾದಕ ವಸ್ತು ಮಾರಾಟ ದಂಧೆಯಲ್ಲಿ ತೊಡಗಿದ್ದರು. ಇಬ್ಬರು ಹೆಣ್ಣೂರು ಠಾಣಾ ವ್ಯಾಪ್ತಿಯ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಅಲ್ಲದೆ, ತಾವು ತಮಿಳುನಾಡಿನಿಂದ ಬಟ್ಟೆಗಳನ್ನು ತಂದು ನಗರದಲ್ಲಿ ವ್ಯಾಪಾರ ಮಾಡುತ್ತಿರುವುದಾಗಿ ಹೇಳುತ್ತಿದ್ದರು.

ಆದರೆ, ಬಟ್ಟೆ ವ್ಯಾಪಾರದ ಹೆಸರಿನಲ್ಲಿ ನಗರಕ್ಕೆ ಕೊಕೇನ್‌ ತಂದು ಗ್ರಾಂಗೆ ಐದು ಸಾವಿರದಿಂದ ಹತ್ತು ಸಾವಿರ ರೂ. ತನಕ ಮಾರಾಟ ಮಾಡುತ್ತಿದ್ದರು. ದ್ವಿಚಕ್ರ ವಾಹನದಲ್ಲಿ ಕೊಕೇನ್‌ ಇಟ್ಟುಕೊಂಡು ಶಾಲಾ-ಕಾಲೇಜು ಬಳಿ ಗ್ರಾಹಕರಿಗಾಗಿ ಹುಡುಕಾಟ ನಡೆಸಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದರು. ಬಂದ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದರು ಎಂದು ಸಿಸಿಬಿ ಅಧಿಕಾರಿ ಹೇಳಿದ್ದಾರೆ. 

ಆರೋಪಿಗಳಿಬ್ಬರೂ ಅಗರ ಮುಖ್ಯರಸ್ತೆಯ ರೈಲ್ವೆಗೇಟ್‌ ಬಳಿ ಮಾದಕ ವಸ್ತು ಕೊಕೇನ್‌ ಮಾರಾಟ ಮಾಡಲು ಯತ್ನಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇಲೆ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಸಿಸಿಬಿ ಎಸಿಪಿ ಸಿದ್ದಲಿಂಗಪ್ಪ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್‌ ಕೆ.ಎನ್‌.ಯಶವಂತಕುಮಾರ್‌ ಮತ್ತು ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು.

ಮತ್ತೂಂದು ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಆರೋಪಿ ನೈಜೀರಿಯಾ ಮೂಲದ ಮದು ಅಬುಕು ಉಬಾಕ್‌ ಎಂಬಾತನನ್ನು ಬಂಧಿಸಿದ್ದು, ಆತ ಮಾದಕ ವಸ್ತುಗಳಾದ ಎಲ್‌ಎಸ್‌ಡಿ ಮತ್ತು ಎಂಡಿಎಂಎಗಳನ್ನು ಮಾರಾಟ ಮಾಡುತ್ತಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.

ಟಾಪ್ ನ್ಯೂಸ್

Road Mishap: ತೆಕ್ಕಟ್ಟೆ: ಇನ್ನೋವಾ, ಮೀನಿನ ಲಾರಿ ನಡುವೆ ಭೀಕರ ಅಪಘಾತ… ಇಬ್ಬರು ಗಂಭೀರ

Road Mishap: ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ… ಇಬ್ಬರು ಗಂಭೀರ

police crime

UP bypolls; ನಿಯಮ ಉಲ್ಲಂಘನೆ: 7 ಪೊಲೀಸರನ್ನು ಅಮಾನತುಗೊಳಿಸಿದ ಚುನಾವಣ ಆಯೋಗ

Terror 2

Pakistan;ಬಲೂಚಿಸ್ಥಾನದಲ್ಲಿ ಉಗ್ರರ ವಿರುದ್ಧ ಸಮಗ್ರ ಕಾರ್ಯಾಚರಣೆಗೆ ಮುಂದಾದ ಪಾಕ್

Bagheera OTT Release: ಭರ್ಜರಿ ಸಕ್ಸಸ್‌ ಕಂಡ ʼಬಘೀರʼ ಓಟಿಟಿ ಎಂಟ್ರಿಗೆ ಡೇಟ್‌ ಫಿಕ್ಸ್

Bagheera OTT Release: ಭರ್ಜರಿ ಸಕ್ಸಸ್‌ ಕಂಡ ʼಬಘೀರʼ ಓಟಿಟಿ ಎಂಟ್ರಿಗೆ ಡೇಟ್‌ ಫಿಕ್ಸ್

1-eeqweqweqwe

India Gate; ಅಸಹ್ಯ ಟವೆಲ್ ಡ್ಯಾನ್ಸ್ ಮಾಡಿದ ಮಾಡೆಲ್: ಆಕ್ರೋಶ

court

Kallakurichi ಕಳ್ಳಭಟ್ಟಿ ದುರಂತ: ಪ್ರಕರಣ ಸಿಬಿಐಗೆ ನೀಡಿದ ಮದ್ರಾಸ್ ಹೈಕೋರ್ಟ್

Ram Charan: ಅಯ್ಯಪ್ಪನ ಮಾಲೆ ಧರಿಸಿ ದರ್ಗಾಕ್ಕೆ ಭೇಟಿ ಕೊಟ್ಟ ರಾಮ್ ಚರಣ್; ಭಾರೀ ಟೀಕೆ

Ram Charan: ಅಯ್ಯಪ್ಪನ ಮಾಲೆ ಧರಿಸಿ ದರ್ಗಾಕ್ಕೆ ಭೇಟಿ ಕೊಟ್ಟ ರಾಮ್ ಚರಣ್; ಭಾರೀ ಟೀಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್‌!

Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್‌!

Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್‌ 

Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್‌ 

Theft Case: ಕೆಲಸಕ್ಕಿದ್ದ ಆಸ್ಪತ್ರೆಯಲ್ಲೇ ಕಳ್ಳತನ

Theft Case: ಕೆಲಸಕ್ಕಿದ್ದ ಆಸ್ಪತ್ರೆಯಲ್ಲೇ ಕಳ್ಳತನ

Arrested: ನಕಲಿ ಕಂಪನಿಗಳನ್ನು ತೆರೆದು ಇಎಸ್‌ಐ ಕಾರ್ಡ್‌ ವಿತರಣೆ ಧಂಧೆ!

Arrested: ನಕಲಿ ಕಂಪನಿಗಳನ್ನು ತೆರೆದು ಇಎಸ್‌ಐ ಕಾರ್ಡ್‌ ವಿತರಣೆ ಧಂಧೆ!

6

Accident: ಆರೋಪಿ ಸೆರೆಗೆ 200 ಕ್ಯಾಮೆರಾ ಪರಿಶೀಲನೆ

MUST WATCH

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

ಹೊಸ ಸೇರ್ಪಡೆ

13–uv-fusion

UV Fusion: ಹೃದಯದಲ್ಲಿ ಬಾಲ್ಯದ ಮಿಡಿತ

Road Mishap: ತೆಕ್ಕಟ್ಟೆ: ಇನ್ನೋವಾ, ಮೀನಿನ ಲಾರಿ ನಡುವೆ ಭೀಕರ ಅಪಘಾತ… ಇಬ್ಬರು ಗಂಭೀರ

Road Mishap: ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ… ಇಬ್ಬರು ಗಂಭೀರ

12-uv-fusion

UV Fusion: ಇನ್ನಾದರು ಎಚ್ಚೆತ್ತುಕೊಂಡು ಕನ್ನಡ ಶಾಲೆ ರಕ್ಷಿಸಿ

11-uv-fusion

UV Fusion: ಕುಟುಂಬ ಎಂಬ ಬೆಚ್ಚಗಿನ ರಕ್ಷಾ ಕವಚ

police crime

UP bypolls; ನಿಯಮ ಉಲ್ಲಂಘನೆ: 7 ಪೊಲೀಸರನ್ನು ಅಮಾನತುಗೊಳಿಸಿದ ಚುನಾವಣ ಆಯೋಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.