ಕಾಫಿ ಬದಲಿಗೆ ಬಂದಿದೆ ಜಾಫಿ!
Team Udayavani, May 29, 2019, 8:48 AM IST
ಬೆಂಗಳೂರು: ನಿಮಗೆ ಕಾಫಿ ಗೊತ್ತು. ಆದರೆ, ‘ಜಾಫಿ’ ಗೊತ್ತಾ? ಇಂತಹದ್ದೊಂದು ಪಾನೀಯ ಮಾರುಕಟ್ಟೆಗೆ ಬಂದಿದೆ. ಇದು ಕಾಫಿಯ ರುಚಿಗೆ ಅತ್ಯಂತ ಸನಿಹವಾಗಿದ್ದು, ಆರೋಗ್ಯಕ್ಕೂ ಉತ್ತಮ!
ಕಾಫಿ ಬೀಜಗಳನ್ನು ಪುಡಿ ಮಾಡಿ, ಅದರ ಪುಡಿಯಿಂದ ಕಾಫಿ ತಯಾರಿಸಲಾಗುತ್ತಿದೆ. ಅದೇ ರೀತಿ, ಹಲಸಿನ ಬೀಜಗಳನ್ನು ಪುಡಿ ಮಾಡಿ, ಅದರಿಂದ ತಯಾರಿಸಿದ ಪಾನೀಯವೇ ‘ಜಾಫಿ’. ರೈತರು, ಯುವಕರನ್ನು ಒಳಗೊಂಡ ಪರಿವರ್ತನ ಟ್ರಸ್ಟ್ ಎಂಬ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಇದನ್ನು ಅಭಿವೃದ್ಧಿಪಡಿಸಿದೆ. ಈ ಉಪ ಉತ್ಪನ್ನದ ಮೂಲಕ ಹಲಸಿಗೆ ಹೊಸ ರೂಪ ನೀಡಲಾಗಿದ್ದು, ಇದು ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯಗೊಳ್ಳುತ್ತಿದೆ.
‘ಹಲಸಿನ ಬೀಜಗಳಿಂದ ‘ಜಾಫಿ’ ಪಾನೀಯವನ್ನು ಅಭಿವೃದ್ಧಿಪಡಿಸಿದ್ದು ದೇಶದಲ್ಲಿ ಇದೇ ಮೊದಲು. ಹಲಸಿನ ಬೀಜಗಳನ್ನು ಒಣಗಿಸಿ, ಹುರಿದು ವೈಜ್ಞಾನಿಕವಾಗಿ ಈ ಜಾಫಿಯನ್ನು ತಯಾರಿಸಲಾಗಿದೆ. ಇದರಲ್ಲಿ ನಾರಿನ ಅಂಶ, ಪ್ರೊಟೀನ್, ಕಾರ್ಬೋಹೈಡ್ರೆಟ್‌ಗಳು, ಮಧುಮೇಹ ರೋಗಕ್ಕೆ ಮಾರಕವಾದ ಗ್ಲುಟೆನ್ ಮತ್ತು ಕೇಸಿನ್ ಅಂಶಗಳಿಂದ ಮುಕ್ತವಾಗಿದೆ. ಹಾಗಾಗಿ, ಉತ್ತಮ ಆರೋಗ್ಯಕ್ಕೆ ಹೇಳಿಮಾಡಿಸಿದ್ದಾಗಿದೆ. ಜತೆಗೆ ರುಚಿಯೂ ಇದೆ’ ಎಂದು ಪರಿವರ್ತನ ಟ್ರಸ್ಟ್‌ನ ಶಿವಣ್ಣ ‘ಉದಯವಾಣಿ’ಗೆ ತಿಳಿಸಿದರು.
ಏನು ಉಪಯೋಗ?: ಜಾಫಿಗೆ ಹಸಿವನ್ನು ನಿಯಂತ್ರಿಸುವ ಸಾಮರ್ಥ್ಯ ಇದೆ. ದಿನಕ್ಕೆ ಮೂರ್‍ನಾಲ್ಕು ಬಾರಿ ಸೇವಿಸಿದರೂ ಗ್ಯಾಸ್ಟ್ರಿಕ್‌ನಂತಹ ಸಮಸ್ಯೆಗಳು ಇರುವುದಿಲ್ಲ. ಆದ್ದರಿಂದ ಬೆಳಿಗ್ಗೆ ಎದ್ದಾಕ್ಷಣ ‘ಜಾಫಿ’ ಹೀರುವುದು ಸೂಕ್ತ ಎಂದ ಅವರು, ತಿಂಗಳಿಗೆ 50 ಮಂದಿ ಈ ಜಾಫಿ ಪುಡಿಯನ್ನು ಖರೀದಿಸುತ್ತಿದ್ದಾರೆ. ಔಟ್ಲೆಟ್‌ಗಳಿಗೆ ನಾನು ಕೊಡುವುದಿಲ್ಲ. ನೇರವಾಗಿ ಗ್ರಾಹಕರಿಗೆ ತಲುಪಿಸುತ್ತೇನೆ. 100 ಗ್ರಾಂಗೆ 90 ರೂ. ಆಗುತ್ತದೆ. ಯುವಕರು ಮತ್ತು ವೃದ್ಧರಿಂದ ಹೆಚ್ಚು ಬೇಡಿಕೆ ಬರುತ್ತಿದೆ ಎಂದು 65 ವರ್ಷದ ಶಿವಣ್ಣ ಮಾಹಿತಿ ನೀಡಿದರು.
ಇದಲ್ಲದೆ, ಹಲಸಿನ ಬೀಜಗಳ ಪುಡಿಯನ್ನು ಸೌಂದರ್ಯವರ್ಧಕವಾಗಿಯೂ ಬಳಸಲು ಅವಕಾಶ ಇದೆ. ಈ ನಿಟ್ಟಿನಲ್ಲಿ ಹಲಸಿನ ಪೌಡರ್ ತಯಾರಿಸಲಾಗಿದೆ. ಇದನ್ನು ರಾತ್ರಿ ಹಾಲಿನಲ್ಲಿ ಮಿಶ್ರಣ ಮಾಡುವುದರಿಂದ ಕೂದಲು ಉದುರುವುದಿಲ್ಲ. ಬೆಳಿಗ್ಗೆ ಸ್ನಾನಕ್ಕೂ ಮುನ್ನ ಮೊಸರಿನಲ್ಲಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಕಲೆಗಳು ಮಾಯವಾಗುತ್ತವೆ. ಜತೆಗೆ ಹಲಸಿನ ಬೀಜಗಳಿಂದ ಸಾಂಬಾರು ಪೌಡರ್ ಕೂಡ ತಯಾರಿಸಲಾಗಿದೆ. ಈ ಮೌಲ್ಯವರ್ಧಿತ ಉತ್ಪನ್ನಗಳಿಂದ ರೈತರಿಗೂ ಅನುಕೂಲ ಆಗಿದ್ದು, ಅವರ ಆದಾಯದಲ್ಲಿ ಸಾಕಷ್ಟು ಏರಿಕೆ ಕಂಡುಬಂದಿದೆ ಎಂದು ಅವರು ವಿವರಿಸಿದರು.
ಹಲಸಿನ ಬಜ್ಜಿ!:
● ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಯುವತಿ ಜೊತೆ ಅಸಭ್ಯ ವರ್ತನೆ: ಮ್ಯಾನೇಜರ್, ಮತ್ತಿಬ್ಬರ ಮೇಲೆ ಕೇಸ್
Bengaluru: 3 ತಿಂಗಳ ಹಿಂದಷ್ಟೇ ವಿವಾಹ ಆಗಿದ್ದ ಚಿನ್ನಾಭರಣ ವ್ಯಾಪಾರಿ ಆತ್ಮಹತ್ಯೆ
Bengaluru: 40000 ರೂ. ಲಂಚ ಸ್ವೀಕರಿಸುವಾಗ ಎಎಸ್‌ಐ ಸೇರಿ ಇಬ್ಬರು ಲೋಕಾ ಬಲೆಗೆ
Bengaluru: ಸೆಂಟ್ರಿಂಗ್ ಮರಗಳು ಬಿದ್ದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಸಾವು
Bengaluru: ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಸಹೋದರಿಯರ ಬಲಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.