ರಾತ್ರಿ ಮನೆಗೆ ಬಾ! ಯುವಕನ ಪರದಾಟ,ಬಂಧನ;ಪೀಣ್ಯದಲ್ಲಿ ನಡೆದಿದ್ದೇನು?
Team Udayavani, Jul 12, 2017, 11:48 AM IST
ಬೆಂಗಳೂರು: ಪೀಣ್ಯದಲ್ಲಿ ಒಡಿಶಾ ಮೂಲದ ಯುವತಿಯೊಬ್ಬಳು ಯುವಕನೊಬ್ಬನನ್ನು ಮನೆಗೆ ಕರೆದು ಸಂಬಂಧಿಕರು ಬಂದಾಗ ದೌರ್ಜನ್ಯ ಎಸಗುತ್ತಿದ್ದಾನೆ ಎಂದು ಡ್ರಾಮಾ ಮಾಡಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ವಾರದಿಂದ ಪರಿಚಯಗೊಂಡಿದ್ದ ಲೇಸರ್ ಕಟ್ಟಿಂಗ್ ಕಾರ್ಖಾನೆಯ ಉದ್ಯೋಗಿ, ಪೂನಾ ಮೂಲದ ಯುವಕನನ್ನು ತಡರಾತ್ರಿ ಮನೆಗೆ ಕರೆಸಿಕೊಂಡಿದ್ದಾಳೆ. ಇಬ್ಬರು ಏಕಾಂತದಲ್ಲಿದ್ದಾಗ ಶಿವಪೂಜೆಯಲ್ಲಿ ಕರಡಿ ಬಿಟ್ಟಂತೆ ಯಾವುದೇ ಪೂರ್ವ ಸೂಚನೆಯಿಲ್ಲದೆ ಯುವತಿಯ ಚಿಕ್ಕಮ್ಮ ಬಂದಿದ್ದಾರೆ.
ದಿಕ್ಕು ತೋಚದ ಯುವತಿ ಈತ ನನ್ನ ಮೇಲೆ ದೌರ್ಜನ್ಯ ಎಸಗುತ್ತಿದ್ದಾನೆ. ಅತ್ಯಾಚಾರಕ್ಕೆ ಯತ್ನಿಸುತ್ತಿದ್ದಾನೆ,ವಾರದಿಂದ ಫಾಲೋ ಮಾಡುತ್ತಿದ್ದಾನೆ ಎಂದು ಕಥೆ ಕಟ್ಟಿದ್ದಾಳೆ. ಇಷ್ಟರಲ್ಲಾಗಲೆ ಚಿಕ್ಕಮ್ಮ ಬೊಬ್ಬೆ ಹಾಕಿದ್ದು ನೆರೆ ಹೊರೆಯವರು ಜಮಾಯಿಸಿದ್ದಾರೆ.
ಯಾವುದಕ್ಕೋ ಬಂದು ಇನ್ನೇನೊ ಆದುದರಿಂದ ಕಂಗಾಲಾದ ಯುವಕ ದಿಕ್ಕು ತೋಚದೆ ಸ್ಥಳದಿಂದ ಪರಾರಿಯಾಗಿದ್ದಾನೆ. ಅಷ್ಟರಲ್ಲಾಗಲೇ ಯುವತಿ ಸಂಬಂಧಿಕರೊಂದಿಗೆ ಠಾಣೆಗೆ ತೆರಳಿ ದೂರನ್ನೂ ನೀಡಿದ್ದಾಳೆ.
ಗಂಭೀರವಾಗಿ ಪರಿಗಣಿಸಿದ ಪೀಣ್ಯ ಪೊಲೀಸರು ಕಾರ್ಯಾಚರಣೆ ನಡೆಸಿ ಯುವಕನನ್ನು ಬಂಧಿಸಿ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಯುವತಿಯ ಬಣ್ಣ ಬಯಲಾಗಿದ್ದು , ಆಕೆಯೆ ಮನೆಗೆ ಕರೆದಿದ್ದು, ಸಂಬಂಧಿ ಬಂದಾಗ ನಾಟಕಮಾಡಿದ್ದಾಳೆ ಎಂದಿದ್ದಾನೆ. ಈ ವಿಚಾರವನ್ನು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Egg Thrown: “ಮೊಟ್ಟೆ ಅಟ್ಯಾಕ್’ ಚಿತ್ರದ ರಚನೆ, ನಿರ್ಮಾಣ ಸ್ವತಃ ಅವರದ್ದೇ: ಕುಸುಮಾ
New Products KMF: ಮಾರುಕಟ್ಟೆಗೆ ಬಂತು “ನಂದಿನಿ’ ಇಡ್ಲಿ, ದೋಸೆ ಹಿಟ್ಟು
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
Varthur Prakash: ವರ್ತೂರು ಪ್ರಕಾಶ್‌ಗೆ 3 ತಾಸು ಗ್ರಿಲ್, 38 ಪ್ರಶ್ನೆ!
Blackmail: ಸ್ನೇಹಿತೆಯ ವಿಡಿಯೋ, ಫೋಟೋ ಇಟ್ಟುಕೊಂಡು ಹಣಕ್ಕೆ ಬ್ಲ್ಯಾಕ್‌ಮೇಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.