ಲಾಲ್‌ಬಾಗಲ್ಲಿ ನೋಡಬನ್ನಿ ಗೋಲ್‌ಗ‌ುಂಬಜ್‌


Team Udayavani, Jan 19, 2017, 12:20 PM IST

lalabag.jpg

ಬೆಂಗಳೂರು: ಜಗತ್ಪ್ರಸಿದ್ಧ ಗೋಲ್‌ಗ‌ುಂಬಜ್‌ನ್ನು ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಈ ಬಾರಿಯ ಗಣರಾಜ್ಯೋತ್ಸವದಲ್ಲಿ ನೋಡುವ ಅವಕಾಶ ಲಭ್ಯವಾಗಲಿದೆ!. ಹೌದು, ಗೋಲ್‌ಗ‌ುಂಬಜ್‌  ವಾಸ್ತುಶಿಲ್ಪದ ಪ್ರತಿಕೃತಿಯಾಗಿ ನಿರ್ಮಾಣ ವಾಗಿರುವ ಪುಷ್ಪಗುಮ್ಮಟ ಈ ಬಾರಿಯ ಫ‌ಲಪುಷ್ಪ ಪ್ರದರ್ಶನದ ಪ್ರಧಾನ ಆಕರ್ಷಣೆಯಾಗಲಿದೆ. 

ಗೋಲ್‌ಗ‌ುಂಬಜ್‌ ಮಾದರಿಯನ್ನು ಚಚ್ಚೌಕವಾಗಿ ನಾಲ್ಕು ಕಡೆ 30 ಅಡಿ ಅಗಲ ಹಾಗೂ ಒಟ್ಟಾರೆ 30 ಅಡಿ ಎತ್ತರದ ವಿಸ್ತೀರ್ಣದಲ್ಲಿ ಸುಮಾರು 4 ಲಕ್ಷ ಕೆಂಪು, ಬಿಳಿ, ಕೇಸರಿ ಹಾಗೂ ಹಳದಿ ಬಣ್ಣಗಳ ಗುಲಾಬಿ ಹೂಗಳಿಂದ ರೋಸ್‌ಗುಂಬಜ್‌ ನಿರ್ಮಿಸಲಾಗಿದೆ. ಈ ಪುಷ್ಪ ಸ್ಮಾರಕದ ಮುಂದೆ ಸುಂದರ ಉದ್ಯಾನವೊಂದು ನಿರ್ಮಾಣಗೊಳ್ಳಲಿರುವುದು ವಿಶೇಷ. ಏಳು ದಿನಗಳ ಕಾಲ 32 ನುರಿತ ನೌಕರರಿಂದ ರೂಪಗೊಂಡು, 52 ಜನ ಪುಷ್ಪ ಪರಿಣಿತರ ಪರಿಶ್ರಮದಿಂದ ವಿಕನಗೊಳ್ಳುವ ರೋಜ್‌ಗುಂಬಜ್‌ ನೋಡುಗರನ್ನು ಸೆಳೆಯಲಿವೆ. 

ಆರ್ಕಿಡ್ಸ್‌ ಪುಷ್ಪಗಳ ಸಂಭ್ರಮ: ಸಮುದ್ರಮಟ್ಟದಿಂದ ಐದು ಸಾವಿರ ಅಡಿಗಿಂತಲೂ ಎತ್ತರದಲ್ಲಿರುವ ಕಡು ಶೀತ ಪ್ರದೇಶಗಳಲ್ಲಿ ಮಾತ್ರ ಬೆಳೆಯುವ ಸಿಕ್ಕಿಂ ರಾಜ್ಯದ ಸಿಂಬಿಡಿಯಂ ಆರ್ಕಿಡ್ಸ್‌ ಪುಷ್ಪಗಳ ಪ್ರದರ್ಶನವೂ ಈ ಫ‌ಲಪುಷ್ಪ ಪ್ರದರ್ಶನದಲ್ಲಿದೆ. ಸುಮಾರು 1.5 ಅಡಿ ಉದ್ದದ ಆಕರ್ಷಕ ಹೂಗೊಂಚಲುಗಳನ್ನು ಈ ಸಿಂಬಿಡಿಯಂ (ಸೀತಾಳೆ)ಆರ್ಕಿಡ್ಸ್‌ ಬಿಡಲಿದ್ದು, ಅತ್ಯಾಕರ್ಷಕವಾಗಿರುತ್ತವೆ. 250ಕ್ಕೂ ಹೆಚ್ಚು ಅತ್ಯಾಕರ್ಷಕ ಅಪರೂಪದ ಸಿಂಬಿಡಿಯಂ ಆರ್ಕಿಡ್ಸ್‌ ಪುಷ್ಪಗಳನ್ನು ಬೃಹತ್‌ ಬಿದಿರಿನ ವಿನ್ಯಾಸದ ಮೇಲೆ ವಿಶೇಷವಾಗಿ ಸಿಂಗರಿಸಿ ಪ್ರದರ್ಶಿಸಲಾಗುತ್ತಿದೆ. 

ವರ್ಟಿಕಲ್‌ ಗಾರ್ಡನ್‌: ಬೆಂಗಳೂರಿನ ಭಾಗ್ಯಲಕ್ಷ್ಮಿ ಫಾರಂ ಮತ್ತು ನರ್ಸರಿ ಸಂಸ್ಥೆಯು ಸುಮಾರು 35 ಸಾವಿರ ವಿವಿಧ ವರ್ಣಗಳ ಪುಷ್ಪಗಳು ಮತ್ತು ಅತ್ಯಾಕರ್ಷಕ ಎಲೆ ಜಾತಿಯ ಗಿಡಗಳನ್ನು ಬಳಸಿಕೊಂಡು 1750 ಚದರಡಿ ಪ್ರದೇಶದಲ್ಲಿ ಗಾಜಿನ ಮನೆಯ ಎಡಭಾಗದ ಪ್ರಾಂಗಣದಲ್ಲಿ 37 ಅಡಿ ಉದ್ದ, 15 ಅಡಿ ಅಗಲ ಹಾಗೂ 12 ಅಡಿ ಎತ್ತರದ ಲಂಬೋದ್ಯಾನ ಭವನದ ಮಾದರಿ ಮನೆಯೊಂದನ್ನು ಸುಮಾರು 45 ಲಕ್ಷ ರೂ.ಗಳ ವೆಚ್ಚದಲ್ಲಿ ವಿಶೇಷವಾಗಿ ನಿರ್ಮಿಸಿ ಪ್ರದರ್ಶಿಸುತ್ತಿರುವುದು ಇದೇ ಮೊದಲು. 

ಹೂವಿನಿಂದ ಅರಳುವ ವಿವಿಧ ಪಾತರಗಿತ್ತಿಗಳ ಪ್ರತಿರೂಪ, ಶೀತವಲಯದ ಪುಷ್ಪಗಳ ಪ್ರದಶ°, ಬಿಎಸ್‌ಎಫ್ ಯೋಧರ ಬ್ಯಾಂಡ್‌, ಮದ್ರಾಸ್‌ ಎಂಜಿನಿಯರಿಂಗ್‌ ಗ್ರೂಪ್‌ ಬ್ಯಾಂಡ್‌ ವಾದನ ಹಿಮ್ಮೇಳ, ಕೆಎಸ್‌ಆರ್‌ಪಿ ಬ್ಯಾಂಡ್‌ ಹಿಮ್ಮೇಳ ನಡೆಯಲಿದೆ. ದೇಶ ವಿದೇಶಗಳ ವಿಶೇಷ ಬಗೆಯ ಸೇವಂತಿಗೆ ಹೂಗಳ ಜೋಡಣೆ, ನರ್ಸರಿಮೆನ್‌ ಕೋಆಪರೇಟಿವ್‌ ಸೊಸೈಟಿಯಿಂದ ಹೂಗಳ ಪ್ರದರ್ಶನ, ಗಾಜಿನ ಮನೆಯ ನಾಲ್ಕು ಮೂಲೆಗಳಲ್ಲಿ ಹೂವಿನ ಪಿರಮಿಡ್‌, ತೂಗುವ ಹೂಗಳ ಚೆಲುವು, ಹೊಸಹೊಸ ಹೂಗಳ ಒಸಗೆ ಮತ್ತು ಗಾಜಿನಮನೆಯ ಒಳಾಂಗಣಕ್ಕೆ ತಂಪು ನೀಡುವ ಫಾಗರ್ಸ್‌ ಅಳವಡಿಕೆ ಪುಷ್ಪ ಪ್ರದರ್ಶದಲ್ಲಿ ಈ ಬಾರಿ ಕಂಡು ಬರುವ ವಿಶೇಷಗಳಾಗಿವೆ. 

ಹೊರಾಂಗಣ ವಿಶೇಷ: ಹುಲ್ಲುಹಾಸಿನ ಮೇಲೆ ಆಕರ್ಷಕ ಪೊಟೊನಿಯಾ ಹೂಗಳಿಂದ ಬೃಹತ್‌ ಹೂವಿನ ಜಲಪಾತ, ಕುಂಡದಲ್ಲಿ ಬೆಳೆದ ಹೂಗಳಿಂದ ರೂಪಿತವಾದ ನವಿಲಿನ ಪ್ರತಿರೂಪ, ಪ್ಲೋರಲ್‌ ಹಾರ್ಟ್‌ ಪರ್‌ಗೊಲಾಗಳು, ತೂಗು ಪುಷ್ಪಗಳು, ಬೆಳಗ್ಗೆ 10ರಿಂದ 12 ಹಾಗೂ ಮಧ್ಯಾಹ್ನ 3ರಿಂದ 6ಗಂಟೆಯವರೆಗೆ ಹಾಡುಗಾರಿಕೆ ಹಾಗೂ ಇತರ ಸಾಂಸ್ಕೃತಿಕ ಕಾರ್ಯಕ್ರಮ. ಡಾ.ಎಂ.ಎಚ್‌.ಮರಿಗೌಡ ಅವರು ನಡೆದು ಬಂದ ಹಾದಿ ಮತ್ತು ಸಾಧನೆ ಕುರಿತ ಬೃಹತ್‌ ಕುಠೀರ, ಲಾಲ್‌ಬಾಗ್‌ ತರಬೇತಿ ಕೇಂದ್ರದಿಂದ ಮಿನಿ ಲ್ಯಾಂಡ್‌ ಸ್ಕೇಪ್‌ ಮಾಡೆಲ್‌ಗ‌ಳು, ಸಸ್ಯಪ್ರೇಮಿಗಳಿಗಾಗಿ ಸಸ್ಯ ಸಂತೆ ನಡೆಯಲಿದೆ. 

ಮುನ್ನೆಚ್ಚರಿಕೆ ಕ್ರಮ: ಕಳೆದ ತಿಂಗಳು ಬಾಲಕ ಮೃತಪಟ್ಟ ಘಟನೆ ಹಿನ್ನೆಲೆಯಲ್ಲಿ ಉದ್ಯಾನದೆಲ್ಲೆಡೆ ಇರುವ ಕಲ್ಲು ಕಂಬಗಳ ಪರಿಶೀಲನೆ ನಡೆಸಲಾಗಿದೆ. 67 ಕಂಬಗಳು ಅಸುರಕ್ಷಿತವಾಗಿರುವುದು ಕಂಡುಬಂದಿದ್ದು, ಅವುಗಳ ದುರಸ್ಥಿ ಮಾಡಲಾಗಿದೆ.  ಲಾಲ್‌ಬಾಗ್‌ ಎಲ್ಲೆಡೆ 90ಕ್ಕೂ ಹೆಚ್ಚು ನಾಯಿಗಳಿವೆ. ಅವುಗಳಿಗೆ ವ್ಯಾಕ್ಸಿನೇಷನ್‌ ಮಾಡಲಾಗಿದೆ. ಗಿಡ, ಮರಗಳು ಹೆಚ್ಚಾಗಿರುವ ಉದ್ಯಾನವನ ಇದಾಗಿರುವುದರಿಂದ ಹಾವುಗಳು  ಕೂಡ ಇವೆ. ಹಾವು ಕಡಿತಕ್ಕೆ ಔಷಧ ವ್ಯವಸ್ಥೆ ಮಾಡಲಾಗಿದೆ. ಪಾರ್ಕಿನ ನಾಲ್ಕು ದ್ವಾರದಲ್ಲೂ ಆ್ಯಂಬುಲೆನ್ಸ್‌ ವ್ಯವಸ್ಥೆ ಮಾಡಲಾಗಿದೆ.  

ವಾಹನ ನಿಲುಗಡೆ ವ್ಯವಸ್ಥೆ: ಫ‌ಲಪುಷ್ಪ ಪ್ರದರ್ಶನ ವೇಳೆ ಲಾಲ್‌ಬಾಗ್‌ಗೆ ವಾಹನ ಪ್ರವೇಶ ನಿಷೇಧಿಸಲಾಗಿದೆ. ಆದರೆ ಶಾಂತಿನಗರ ಬಸ್‌ನಿಲ್ದಾಣದಲ್ಲಿರುವ ಬಹುಮಹಡಿ ವಾಹನ ನಿಲ್ದಾಣದಲ್ಲಿ ನಿಲುಗಡೆ ಮಾಡಬಹುದು. ಜೆ.ಸಿ.ರಸ್ತೆಯಿಂದ ಬರುವ ವಾಹನಗಳು ಜೆ.ಸಿ.ರಸ್ತೆಯ ಮಯೂರ ರೆಸ್ಟೋರೆಂಟ್‌ ಬಳಿ ಇರುವ ಬಿಬಿಎಂಪಿ ಬಹುಮಹಡಿ ವಾಹನ ನಿಲ್ದಾಣ ಮತ್ತು ಲಾಲ್‌ಬಾಗ್‌ ಮುಖ್ಯ ಪ್ರವೇಶದ್ವಾರ ಮತ್ತು ಜೋಡಿ ರಸ್ತೆ ಪ್ರವೇಶ ದ್ವಾರಗಳ ನಡುವೆ ಇರುವ ಆಲ್‌ ಅಮೀನ್‌ ಕಾಲೇಜು ಮೈದಾನದಲ್ಲಿ ದ್ವಿಚಕ್ರ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ ಎಂದರು.

ನಾಳೆ ಫ‌ಲಪುಷ್ಪ ಪ್ರದರ್ಶನ ಉದ್ಘಾಟನೆ
ಬೆಂಗಳೂರು:
ತೋಟಗಾರಿಕೆ ಇಲಾಖೆ, ಮೈಸೂರು ಉದ್ಯಾನಕಲಾ ಸಂಘ ಸಹಯೋಗದಲ್ಲಿ ಜ.20ರಂದು ಬೆಳಗ್ಗೆ 11ಕ್ಕೆ ಲಾಲ್‌ಬಾಗ್‌ನ ಗಾಜಿನ ಮನೆಯಲ್ಲಿ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿರುವ ಫ‌ಲಪುಷ್ಪ ಪ್ರದರ್ಶನ ಉದ್ಘಾಟನೆ ನಡೆಯಲಿದೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ತೋಟಗಾರಿಕೆ ಇಲಾಖೆ ಆಯುಕ್ತ ಪ್ರಭಾಶ್‌ಚಂದ್ರ ರೇ, ತೋಟಗಾರಿಕೆ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಫ‌ಲಪುಷ್ಪ ಪ್ರದರ್ಶನ ಉದ್ಘಾಟಿಸುವರು. ಶಾಸಕ ಆರ್‌.ವಿ.ದೇವರಾಜ್‌ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಕೇಂದ್ರ ಸಚಿವ ಅನಂತಕುಮಾರ್‌, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌, ಮೇಯರ್‌ ಪದ್ಮಾವತಿ, ಬಿಬಿಎಂಪಿ ವಿರೋಧಪಕ್ಷದ ನಾಯಕ ಉದಯ್‌ ಶಂಕರ್‌, ಬಿಬಿಎಂಪಿ ಸದಸ್ಯೆ ವಾಣಿ ವಿ.ರಾವ್‌, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ರಾಜೀವ್‌ಚಾವ್ಲಾ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಜ.21ರಂದು ಇಕೆಬಾನ, ಪುಷ್ಪಭಾರತಿ, ತರಕಾರಿ ಕೆತ್ತನೆ, ಡಚ್‌ ಹೂವಿನ ಜೋಡಣೆ, ಒಣಹೂವಿನ ಜೋಡಣೆ, ಥಾಯ್‌-ಆರ್ಟ್‌, ಜಾನೂರ್‌ ಮತ್ತು ಕುಬj ಮರಗಳ ಪ್ರದರ್ಶನ ಉದ್ಘಾಟನೆ ನಡೆಯಲಿದೆ. ಅಂದು ಮಧ್ಯಾಹ್ನ 1ಕ್ಕೆ ಡಾ.ಎಂ.ಎಚ್‌.ಮರಿಗೌಡ ಸ್ಮಾರಕ ಭವನದಲ್ಲಿ ಕವಯತ್ರಿ ಲತಾರಾಜಶೇಖರ್‌ ಉದ್ಘಾಟಿಸುವರು. ವಿಶೇಷ ಆಹ್ವಾನಿತರಾಗಿ ಲಾಲ್‌ಬಾಗ್‌ ಅಭಿವೃದ್ಧಿಗೆ ಶ್ರಮಿಸಿದ ಕೃಂಬಿಗಲ್‌ ಅವರ ಮರಿಮಗಳು ಜರ್ಮನಿಯ ಅಲಿಯಾ ಫೆಲ್ಪ್ ಗಾರ್ಡಿನರ್‌ ಕೃಂಬಿಗಲ್‌ ಪಾಲ್ಗೊಳ್ಳಲಿದ್ದಾರೆ ಎಂದರು. 

ಹೂದೋಟಗಳು, ತರಕಾರಿ ತೋಟ, ತಾರಸಿ ತೋಟಗಳು, ಉದ್ಯಾನವನ ಸ್ಪರ್ಧೆಗಳು, ಗಾಜಿನ ಮನೆಯ ಪ್ರದರ್ಶಿಕೆಗಳು ಹಾಗೂ ಇಕೆಬಾನ, ಪುಷ್ಪಭಾರತಿ, ತರಕಾರಿ ಕೆತ್ತನೆ, ಬೋನ್ಸಾಯ್‌ ಗಿಡಗಳ ಪ್ರದರ್ಶನ, ಡಚ್‌ ಹೂವಿನ ಜೋಡಣೆ ಇತ್ಯಾದಿ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಜ.25ರಂದು ಮಧ್ಯಾಹ್ನ 3ಕ್ಕೆ ಡಾ.ಎಂ.ಎಚ್‌.ಮರಿಗೌಡ ಸ್ಮಾರಕ ಭವನದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ತಿಳಿಸಿದರು.

ಜನ್ಮ ಶತಮಾನೋತ್ಸವ: ತೋಟಗಾರಿಕೆ ಪಿತಾಮಹ ಡಾ.ಎಂ.ಎಚ್‌.ಮರಿಗೌಡ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮ ಜ.23ರಂದು ಮಧ್ಯಾಹ್ನ 2ಕ್ಕೆ ಲಾಲ್‌ಬಾಗ್‌ನ ತೋಟಗಾರಿಕೆ ಮಾಹಿತಿ ಕೇಂದ್ರದಲ್ಲಿ ನಡೆಯಲಿದೆ. ಮೈಸೂರು ಮಹಾರಾಜ ಎಚ್‌.ಎಚ್‌.ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌, ಮಹಾರಾಣಿ ಎಚ್‌.ಎಚ್‌.ತ್ರಿಷಿಕಾ ಕುಮಾರಿ ಒಡೆಯರ್‌ ಉದ್ಘಾಟಿಸುವರು ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮೈಸೂರು ಉದ್ಯಾನಕಲಾ ಸಂಘದ ಉಪಾಧ್ಯಕ್ಷ ಶ್ರೀಕಂಠಯ್ಯ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಜಗದೀಶ್‌, ಡಿಸಿಪಿ (ದಕ್ಷಿಣ) ಶರಣಪ್ಪ, ಉಪ ನಿರ್ದೇಶಕ ಚಂದ್ರಶೇಖರ್‌ ಇದ್ದರು.

ಟಿಕೆಟ್‌ ದರ
ಸಾಮಾನ್ಯ ದಿನಗಳಲ್ಲಿ ದೊಡ್ಡವರಿಗೆ 50 ರೂ. ಹಾಗೂ ರಜಾ ದಿನಗಳಲ್ಲಿ 60 ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಮಕ್ಕಳಿಗೆ 20 ರೂ. ಶುಲ್ಕ ನಿಗದಿ ಮಾಡಲಾಗಿದೆ. ಸರ್ಕಾರ ಮತ್ತು ಖಾಸಗಿ ಶಾಲಾ ಮಕ್ಕಳಿಗೆ 20, 23, 24, 25 ಹಾಗೂ 27ರಂದು ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.

ಸ್ವೈಪಿಂಗ್‌ ಯಂತ್ರ
ನೋಟ್‌ ಬಂದ್‌ನಿಂದ ಆಗಿರುವ ತೊಂದರೆ ಹಿನ್ನೆಲೆಯಲ್ಲಿ ಪ್ರದರ್ಶನದಲ್ಲಿ ಗ್ರಾಹಕರಿಗೆ ಅನುಕೂಲವಾಗುವಂತೆ ಸುಮಾರು 9 ಸ್ವೈಪಿಂಗ್‌ ಯಂತ್ರಗಳನ್ನು ಬಳಕೆ ಮಾಡಲಾಗುತ್ತಿದೆ. ಇದರಿಂದ ಕಾರ್ಡುಗಳ ಮೂಲಕವೂ ಗಿಡಗಳನ್ನು ಖರೀದಿ ಮಾಡಬಹುದು. ಹಾಪ್‌ಕಾಮ್ಸ್‌ ಗಳಲ್ಲೂ ಈ ಯಂತ್ರಗಳಿದ್ದು, ಹಣ್ಣು, ಪಾನಿಯ ಖರೀದಿಗೆ ನೆರವಾಗಲಿದೆ.

ಟಾಪ್ ನ್ಯೂಸ್

arrested

16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನ ಮಂಜೂರು

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನ ಮಂಜೂರು

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Test Cricket; After Rohit, now Virat..: What is in ‘that’ message sent by BCCI?

Test Cricket; ರೋಹಿತ್‌ ಆಯ್ತು, ಈಗ ವಿರಾಟ್..:‌ ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?

Gangolli: ಪಂಚಾಯತ್‌ನೊಳಗೆ ನಮಾಜ್‌; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ

Gangolli: ಪಂಚಾಯತ್‌ನೊಳಗೆ ನಮಾಜ್‌; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ

Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ

Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ

Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ

Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ

Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು

Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು

Ayurvedic Doctor: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದ ಆಯುರ್ವೇದಿಕ್‌ ವೈದ್ಯ…

Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್‌ ವೈದ್ಯ

3

Bengaluru:ಬೈಕ್ ಶೋರೂಂನಲ್ಲಿ ಬೆಂಕಿ ಅವಘಡ; ಸುಟ್ಟು ಹೋದ 50ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

arrested

16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನ ಮಂಜೂರು

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನ ಮಂಜೂರು

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

ಗದಗ: ಮಾವು ಬಂಪರ್‌ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ

ಗದಗ: ಮಾವು ಬಂಪರ್‌ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.