ಬಾಡಿಗೆ ವಾಹನದಲ್ಲಿ ಬಂದು ದರೋಡೆ; ಆರೋಪಿಗಳ ಸೆರೆ
Team Udayavani, Jul 17, 2018, 12:10 PM IST
ಬೆಂಗಳೂರು: ಬಾಡಿಗೆಗೆ ಪಡೆದ “ಜೂಮ್’ ಕಾರಿನಲ್ಲಿ ಬಂದು ದರೋಡೆ ಮಾಡುತ್ತಿದ್ದ 7 ಮಂದಿಯ ತಂಡವನ್ನು ರಾಜಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಧುಸೂದನ್ ಗೌಡ (22), ಹರೀಶ್ (20), ಅಭಿಷೇಕ್ (20), ಪ್ರಕಾಶ್ (20), ಪ್ರವೀಣ್ (20), ರಾಹುಲ… (21), ಕಿಶೋರ್ (18) ಬಂಧಿತರು.
ಸುಲಿಗೆ ಮಾಡಿದ ಮೊಬೈಲ್‌ನಲ್ಲಿ ಜೂಮ್ ಕಾರು ಬುಕ್‌ಮಾಡಿ, ಬಳಿಕ ಅದೇ ಕಾರಿನಲ್ಲಿ ತೆರಳಿ ದರೋಡೆ ಮಾಡುತ್ತಿದ್ದರು. ಬಂಧಿತರಿಂದ 2 ಜೂಮ್ ಕಾರುಗಳು, 7 ಮೊಬೈಲ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು, ತಡರಾತ್ರಿ ನಗರದ ವಿವಿಧೆಡೆ ಒಟ್ಟಿಗೇ ಓಡಾಟ ನಡೆಸಿ ಒಂಟಿಯಾಗಿ ಸಂಚರಿಸುವವರನ್ನು
ಗುರಿಯಾಗಿಸಿಕೊಂಡು ದರೋಡೆ ಮಾಡುತ್ತಿದ್ದರು. ತಮ್ಮ ಚಾಲನಾ ಪರವಾನಗಿ ತೋರಿಸಿ ಬೇಕಾದ ಕಾರನ್ನು ಬಾಡಿಗೆಗೆ ತೆಗೆದುಕೊಂಡು ಹೋಗುತ್ತಿದ್ದರು. ನಂತರ ದರೋಡೆ ಮಾಡಿದ ಮೊಬೈಲ್‌ನ ಸಿಮ್‌ಕಾರ್ಡ್ ಎಸೆದು, ಹೊಸ ಮೊಬೈಲ್‌ನಿಂದ ಮತ್ತೂಂದು ಜೂಮ್ ಕಾರು ಬುಕ್ ಮಾಡಿ ಕೃತ್ಯ ಎಸಗುತ್ತಿದ್ದರು.
ಸಿಸಿಟಿವಿ ಕ್ಯಾಮೆರಾ ಕೊಟ್ಟ ಸುಳಿವು: ಕೆಲ ದಿನಗಳ ಹಿಂದೆ ಟೆಕ್ಕಿಯೊಬ್ಬರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಸುಕಿನ 4 ಗಂಟೆ ಸುಮಾರಿಗೆ ರಾಜಾಜಿನಗರಕ್ಕೆ ಬಸ್‌ನಲ್ಲಿ ಬಂದಿದ್ದು, ಮನೆಗೆ ನಡೆದುಕೊಂಡು ಹೋಗುತ್ತಿದ್ದರು.
ಈ ವೇಳೆ ಅಡ್ಡಗಟ್ಟಿದ ಆರೋಪಿಗಳು ವಿಳಾಸ ಕೇಳುವ ನೆಪದಲ್ಲಿ 3 ಸಾವಿರ ನಗದು ಹಾಗೂ ಮೊಬೈಲ್ ದರೋಡೆ
ಮಾಡಿ ಪರಾರಿಯಾಗಿದ್ದರು. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ರಾಜಾಜಿನಗರ ಪೊಲೀಸರು ಸ್ಥಳೀಯ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದಾಗ ಆರೋಪಿಗಳ ಸುಳಿವು ಪತ್ತೆಯಾಗಿತ್ತು. ಈ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Malpe: ಕಿನ್ನಿಮೂಲ್ಕಿ; ನಿಲ್ಲಿಸಲಾಗಿದ್ದ ಬುಲೆಟ್ ಕಳವು
Maharashtra: ಬಿಜೆಪಿ ನಾಯಕಿ ನವನೀತ್ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್ ದಾಖಲು
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು
Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.