ವಿದ್ಯಾಭವನದಲ್ಲಿ ಗೊಂಬೆಗಳ ನೋಡ ಬನ್ನಿ
Team Udayavani, Oct 11, 2018, 11:55 AM IST
ಬೆಂಗಳೂರು: ಅಶೋಕ ವನದಲ್ಲಿರುವ ಸೀತೆ, ಜಾನಕಿಗಾಗಿ ಕಾಡುಮೇಡು ಅಲೆಯುತ್ತಿರುವ ರಾಮ ಲಕ್ಷ್ಮಣ, ಲಂಕೆಗೆ ಹಾರಲು ಸಿದ್ಧವಾಗಿರುವ ಹನುಮಂತ, ಹತ್ತು ತಲೆಗಳ ರಾವಣೇಶ್ವರ..! ಇವರೆಲ್ಲನೆಲ್ಲಾ ನೋಡಲು ಬನ್ನಿ… ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾಭವನಕ್ಕೆ.
ನವರಾತ್ರಿ ಅಂಗವಾಗಿ ಭಾರತೀಯ ವಿದ್ಯಾಭವನದಲ್ಲಿ ಹಮ್ಮಿಕೊಳ್ಳಲಾಗಿರುವ ದಸರಾ ಗೊಂಬೆ ಹಬ್ಬದಲ್ಲಿ ರಾಮಾಯಣ ಮತ್ತು ಮಹಾಭಾರತಕ್ಕೆ ಸಂಬಂಧಿಸಿದ ಗೊಂಬೆಗಳನ್ನು ಕುಳ್ಳಿರಿಸಲಾಗಿದೆ. ಅ.16ರವರೆಗೂ ಪ್ರದರ್ಶನ ನಡೆಯಲಿದ್ದು, ಬೆಳಗ್ಗೆ 11 ರಿಂದ ಸಂಜೆ 6ರವರೆಗೂ ಪ್ರದರ್ಶನ ತೆರೆದಿರುತ್ತದೆ. ಉಚಿತ ಪ್ರವೇಶ ಕಲ್ಪಿಸಲಾಗಿದೆ.
ಪ್ರಭಾವಳಿ ಹೊಂದಿರುವ ಪಟ್ಟದ ಗೊಂಬೆಗಳು ಬರುವವರನ್ನು ಸ್ವಾಗತಿಸುತ್ತಿದ್ದರೆ, ಒಳಗೆ ಹೋದ ಕೂಡಲೇ ಮೈಸೂರಿನ ಚಾಮುಂಡೇಶ್ವರಿಯೇ ಭಾರತೀಯ ವಿದ್ಯಾಭವನದಲ್ಲಿ ಪ್ರತಿಷ್ಠಾಪನೆಯಾದಂತೆ ಕಾಣುತ್ತದೆ ದೇವಿ ವಿಗ್ರಹ. ಅಕ್ಕ ಪಕ್ಕದಲ್ಲಿರುವ ಕಂಚಿನ ಶಾರದೆ ಮತ್ತು ನಟರಾಜ ವಿಗ್ರಹಗಳು ಭಕ್ತಿ ಭಾವ ಮೂಡಿಸುತ್ತವೆ. ಪ್ರತಿ ಎರಡು ದಿನಕ್ಕೊಮೆಯಂತೆ ದೇವಿ ವಿಗ್ರಹದ ಅಲಂಕಾರ ಬದಲಾಯಿಸಲಾಗುವುದು.
ರಾಜಸ್ಥಾನಿ ಗೊಂಬೆಗಳು ಸಂಗೀತ ನೃತ್ಯ ಲೋಕ ತೆರೆದಿಟ್ಟರೆ, ಮಣ್ಣಿನ ಗೊಂಬೆಗಳು ಹಿಂದಿನ ಕಾಲದಲ್ಲಿದ್ದ ಮಾರುಕಟ್ಟೆ ವ್ಯವಸ್ಥೆಯನ್ನು ಅನಾವರಣಗೊಳಿಸುತ್ತವೆ. ಒಂದೆಡೆ ಶೆಟ್ಟಿ ದಂಪತಿ ಗೊಂಬೆಗಳು ಚನ್ನೆಮಣೆ ಆಡುತ್ತಿದ್ದಾರೆ, ಇನ್ನೊಂದೆಡೆ ವ್ಯಾಪಾರಿ ವರ್ಗದ ದಂಪತಿ ಗೊಂಬೆಗಳು ಪ್ರವಾಸಕ್ಕೆ ಹೊರಟಂತೆ ಕಾಣುತ್ತವೆ. ಕಮ್ಮಾರ, ಚಮ್ಮಾರ, ಕುಂಬಾರ, ತರಕಾರಿ ಮಾರುವವ.. ಹೀಗೆ ಹಳ್ಳಿಯಲ್ಲಿದ್ದಂತಹ ಇಡೀ ಮಾರುಕಟ್ಟೆಯ ಚಿತ್ರಣವನ್ನು ಕಣ್ಮುಂದೆ ತಂದಿಡುವ ಗೊಂಬೆಗಳು ನೋಡುಗರ ಮನಸೆಳೆಯಲಿವೆ.
ಕೃಷ್ಣನ ದಶಾವತಾರ, ಕೃಷ್ಣನನ್ನು ಆರಾಧಿಸುವ ಭಕ್ತರ ವರ್ಗ, ವಾಸುಕಿ ಕೃಷ್ಣನನ್ನು ಹೊತ್ತು ಪ್ರವಾಹದ ಯಮುನಾ ನದಿ ದಾಟುತ್ತಿರುವುದು, ತಾಯಿ ಯಶೋಧೆ ಕೃಷ್ಣನಿಗೆ ಬೆಣ್ಣೆ ತಿನ್ನಿಸುತ್ತಿರುವುದು ಹೀಗೆ ಕೃಷ್ಣನ ಲೀಲೆಗಳನ್ನು ಸಾರುವ ಗೊಂಬೆಗಳ ಪ್ರದರ್ಶನ ಮಕ್ಕಳನ್ನು ಆಕರ್ಷಿಸಲಿವೆ. ಅಂಬಾರಿ ಹೊತ್ತಿರುವ ಆನೆ, ಚಾಮುಂಡಿ, ನಂದಿನಿ, ಗಣಪತಿ ಪೂಜೆ, ರಾಮ ಕೃಷ್ಣನ ಮೂರ್ತಿಗಳು ಉತ್ತರ ಮತ್ತು ದಕ್ಷಿಣ ಭಾರತದ ನವರಾತ್ರಿ ವೈಭೋಗವನ್ನು ಸಾರಿ ಹೇಳುತ್ತಿದ್ದವು. ಈ ಗೊಂಬೆಗಳ ಮಧ್ಯದಲ್ಲಿ ಕುಳಿತಿರುವ ಲಕ್ಷ್ಮೀ ವಿಗ್ರಹ ದಸರ ಗೊಂಬೆ ಹಬ್ಬದ ಪ್ರಮುಖ ಆಕರ್ಷಣೆಯಾಗಿದೆ.
ಇವೆಲ್ಲವನ್ನೂ ನೋಡಿ ಮುಗಿಸುತ್ತಿದ್ದಂತೆ ಎದುರಿಗೆ ಧುತ್ತನೆ 10 ತಲೆಗಳ ರಾವಣ ಪ್ರತ್ಯಕ್ಷನಾಗಿ ಬಿಡುತ್ತಾನೆ. ಅವನೊಂದಿಗೆ ಅವನ ತಂಗಿ ಶೂರ್ಪನಖೀಯನ್ನು ನೋಡಿ ಬೆಚ್ಚಿ ಬೀಳುವುದೊಂತು ನಿಜ. ಅಲ್ಲದೆ ಅಶೋಕವನದಲ್ಲಿ ರಾಮನಿಗಾಗಿ ಕಾಯುತ್ತಿರುವ ಸೀತೆ ಹಾಗೂ ಅವಳ ಅಕ್ಕಪಕ್ಕದಲ್ಲಿ ಕುಳ್ಳಿರಿಸಲಾದ ರಾಮ ಲಕ್ಷ್ಮಣನನ್ನು ಕಂಡು ಮರುಕವೂ ಉಂಟಾಗಲಿದೆ. ಇದೆಲ್ಲರ ನಡುವೆ ಗಮನ ಸೆಳೆಯಲಿದೆ ಕಿತ್ತಳೆ ಬಣ್ಣದ ಹನುಮಂತನ ಗೊಂಬೆ.
ಸೂತ್ರದ ಗೊಂಬೆಗಳಲ್ಲಿ ರಾಮಾಯಣ ಕಂಡು ಪುಳಕಿತರಾದ ನೀವು ಸಲಾಕಿ ಗೊಂಬೆಗಳಲ್ಲಿ ಮೂಡಿದ ನರಕದವಧೆ ನೋಡಿ ಅಚ್ಚರಿಪಡಲಿದ್ದಿರಿ. ಗಣಪತಿ, ಪಾಂಡುರಂಗ, ಪದ್ಮಾವತಿ, ಕೃಷ್ಣ ಹಾಗೂ ಅತಿಸುಂದರಿಯಾದ ಸತ್ಯಭಾಮ, ಪಟ್ಟದ ಗೊಂಬೆಗಳನ್ನು ಕಂಡು ಮೈಸೂರು ದಸರ ಭಾರತೀಯ ವಿದ್ಯಾಭವನದಲ್ಲಿಯೇ ನಡೆಯುತ್ತಿದೆಯೇನೊ ಅಂತ ಅನಿಸಿದರೆ ಆಶರ್ಯವಿಲ್ಲ.
ನವರಾತ್ರಿ ಎಂದರೆ ಮೊದಲು ನೆನಪಾಗುವುದೇ ಗೊಂಬೆಗಳ ಸಾಲು ಸಾಲು. ಪ್ರತೀ ಮನೆಯಲ್ಲೂ ಅಲಂಕಾರವಾಗಿ ಗೊಂಬೆ ಇಡುವುದು ಮತ್ತು ಮಕ್ಕಳೆಲ್ಲಾ ಒಟ್ಟಾಗಿ ಸೇರಿ ಗೊಂಬೆ ಪೂಜೆ ಮಾಡುವುದು ದಸರೆಯ ಪದ್ಧತಿ. ಈ ನಮ್ಮ ಪರಂಪರೆಯನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಜವಾಬ್ದಾರಿ ಈಗೀನ ಪೀಳಿಗೆ ಮೇಲಿದೆ.
ಗಿರೀಜಾ ಲೋಕೇಶ್, ನಟಿ.
ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯನ್ನು ತಿಳಿಸಿ ಕೊಡುವ ಅಗತ್ಯವಿದೆ. ಸಿಲಿಕಾನ್ ಸಿಟಿಯಲ್ಲಿ ನವರಾತ್ರಿ ಗೊಂಬೆ ಕುರಿಸುವ ಸಂಪ್ರದಾಯವೇ ಮರೆಯಾಗುತ್ತಿದೆ. ಹೀಗಾಗಿ ಭಾರತೀಯ ವಿದ್ಯಾಭವನದಲ್ಲಿ ಕಳೆದ 9 ವರ್ಷಗಳಿಂದ
ವಿವಿಧ ಪರಿಕಲ್ಪನೆಯನ್ನಿಟ್ಟುಕೊಂಡು ಗೊಂಬೆಗಳನ್ನು ಕುಳ್ಳಿರಿಸಲಾಗುತ್ತಿದೆ. ಈ ಬಾರಿ ಚಾಮುಂಡೇಶ್ವರಿ ವಿಗ್ರಹ
ಪ್ರತಿಷ್ಠಾಪಿಸಿರುವುದು ವಿಶೇಷವಾಗಿದೆ.
ಎಚ್.ಎನ್.ಸುರೇಶ್, ಭಾರತೀಯ ವಿದ್ಯಾಭವನ ನಿರ್ದೇಶಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಸುರಂಗ ರಸ್ತೆ ಕಾಮಗಾರಿಗೆ ಭಾರತ-ಚೀನಾ ಸಂಬಂಧ ಅಡ್ಡಿ!
Fraud: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೆಸರಲ್ಲಿ ಇಬ್ಬರಿಗೆ 93 ಲಕ್ಷ ರೂ. ವಂಚನೆ
Digital arrest: ವೃದ್ಧೆಗೆ ಡಿಜಿಟಲ್ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್ ವಂಚಕ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
MUST WATCH
ಹೊಸ ಸೇರ್ಪಡೆ
Kharge: ಬೆಂಗಳೂರಿಗೆ ಬಂದು ನನ್ನ ಜತೆ ಚರ್ಚೆಗೆ ನಿಲ್ಲಿ: ಪ್ರಧಾನಿ ಮೋದಿಗೆ ಖರ್ಗೆ ಸವಾಲು
IPL Mega Auction: ನ.24 ಮತ್ತು 25 ಜೆಡ್ಡಾದಲ್ಲಿ ಐಪಿಎಲ್ ಹರಾಜು
Gautam Adani: ಯುಪಿಎ ಅವಧಿಯಲ್ಲಿ ರಾಹುಲ್ ಭೇಟಿಗೆ ಯತ್ನಿಸಿದ್ದರೇ ಅದಾನಿ?
Sharad Pawar: ಚುನಾವಣಾ ರಾಜಕೀಯ ನಿವೃತ್ತಿ ಸುಳಿವು ನೀಡಿದ ಎನ್‌ಸಿಪಿ ವರಿಷ್ಠ ಶರದ್
Somy Ali: ಸುಶಾಂತ್‌ರದ್ದು ಕೊಲೆ, ಶವಪರೀಕ್ಷೆ ವರದಿ ಬದಲು: ನಟಿ ಸೋಮಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.