ಬ್ರಹ್ಮಾಂಡ ಕಾಣಲು ಚಿತ್ರಕಲಾ ಪರಿಷತ್‌ಗೆ ಬನ್ನಿ
Team Udayavani, Dec 4, 2018, 11:58 AM IST
ಬೆಂಗಳೂರು: ಬ್ರಹ್ಮಾಂಡದ ಪರಿಕಲ್ಪನೆ ಕಾಣಬೇಕಿದ್ದರೆ ಚಿತ್ರಕಲಾ ಪರಿಷತ್‌ಗೆ ಬನ್ನಿ.. ಅಣುವಿನಿಂದ ಅಖಂಡ ಪರಿಕಲ್ಪನೆಯಲ್ಲಿ ಮೂಡಿಸಿದ ಚಿತ್ರಕಲಾ ಪ್ರದರ್ಶನದಲ್ಲಿ ಶಾಂತಿಯ ಬುದ್ಧನಿದ್ದಾನೆ, ಬದುಕಿನ ಭೋರ್ಗರೆತವನ್ನು ಬಿಂಬಿಸುವ ಸಮುದ್ರವಿದೆ, ಭರವಸೆ ಇಲ್ಲದಾಗ ಕೈ ಹಿಡಿದು ಆಸರೆಯ ಮೂಡಿಸುವ ಕಲ್ಪನೆಯ ಕಲಾಕೃತಿಗಳಿವೆ.
ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಸೋಮವಾರದಿಂದ ಆರಂಭವಾಗಿರುವ ಚರಿತ ದಾಸಪ್ಪ ಅವರ ಬ್ರಹ್ಮಾಂಡ ಶೀರ್ಷಿಕೆಯಡಿಯ ಚಿತ್ರಕಲಾ ಪ್ರದರ್ಶನದಲ್ಲಿ ಬದುಕಿನ ಬಿಂಬ ತೋರುವ ಚಿತ್ರಗಳಿವೆ. ಡಿ.9ರವರೆಗೂ ಚಿತ್ರಕಲಾ ಪ್ರದರ್ಶನ ನಡೆಲಿದೆ. ಅಣುವಿನಿಂದ ಆಕಾಶದೆತ್ತರಕ್ಕೆ ಬೆಳೆಯುವ ಈ ಬದುಕಿನಲ್ಲಿ ಎಲ್ಲವೂ ತಾತ್ಕಲಿಕವೆಂದು ತೋರಿಸುವ ಚಿತ್ರಗಳೂ ಇವೆ.
ಪ್ರಕೃತಿ ಮಾತ್ರ ಜೀವಂತ ಶಾಶ್ವತ ಎಂದೆನ್ನಿಸುವ ಕಲಾಕೃತಿಗಳೂ ಇವೆ. ಮನುಷ್ಯನ ಅಭಿವೃದ್ಧಿಯಲ್ಲಿ ನರಳುವ ಪ್ರಕೃತಿಯ ಚಿತ್ರ ನಮ್ಮಲ್ಲಿ ಒಂದು ಬಗೆಯ ವಿಷಾದ ಭಾವ ಮೂಡಿಸಿದರೆ, ಕಾನಸಿರಿಯ ಮಧ್ಯದಲ್ಲಿ ಅಡಗಿ ಕುಳಿತ ಸೂರ್ಯನ ಚಿತ್ರ ಮನದ ಸಂತಸಕ್ಕೆ ಕಾರಣವಾಗುತ್ತದೆ. ಅಶೋಕಸ್ತಂಭದ ಸುತ್ತ ಹಾರುವ ಕೇಸರಿ, ಕೆಂಪು, ಹಳದಿ ಹಕ್ಕಿಗಳ ಚಿತ್ರ ಸ್ವಾತಂತ್ರ್ಯದ ಸಂಕೇತದಂತೆ ಕಾಣುತ್ತಿದ್ದಾರೆ.
ಯಾವುದೋ ಬಂಧನದಲ್ಲಿ ಸಿಕ್ಕಂತಹ ಹುಡುಗಿಯ ಚಿತ್ರ ದಾಸ್ಯದ ಸಂಕೇತದಂತೆ ತೋರುತ್ತದೆ. ಸೇಬಿನಲ್ಲಿ ಆಡುತ್ತಿರುವ ಹಾವು, ಹಸಿರು ಸಿಂಚನದಲ್ಲಿ ಅರಳಿದ ಮೊಗ್ಗು, ಕಾದಾಡುತ್ತಿರುವ ಟಗರುಗಳು ಒಂದಾದ ಚಿತ್ರ, ಪರ್ವತರೋಹಣ ಮಾಡುತ್ತಿರುವ ಯುವಕ, ಕಾಡಿನಲ್ಲಿ ತುಂಟಾಟವಾಡುತ್ತಿರುವ ಪ್ರಾಣಿ, ತಿಳಿನೀಲ ಆಕಾಶ, ಶ್ವೇತವರ್ಣದ ಅಶ್ವಗಳು, ನೀಲಿ ಬಣ್ಣದ ಹಕ್ಕಿಗಳ ಚಿತ್ರಗಳು ಮನಸ್ಸಿಗೆ ಮೂದ ನೀಡಲಿವೆ.
ಮಿಂಚು, ಗುಡುಗು-ಸಿಡಿಲಿನ ಆರ್ಭಟದ ನಡುವೆ ಸುರಿಯುತ್ತಿರುವ ಮಳೆಯ ಚಿತ್ರ ಬದುಕಿನ ಸಂಷರ್ಘಗಳ ಪ್ರತೀಕವಾಗಿದೆ. ಅದರ ಪಕ್ಕದಲ್ಲಿಯೇ ಇರುವ ಶಾಂತಿದೂತನ ಚಿತ್ರ ಸಂಘರ್ಷ ಸಂಕಟಗಳೆಲ್ಲಾ ತಾತ್ಕಲಿಕ ಎಂಬಂತೆ ಕಾಣುತ್ತದೆ. ನಂತರ ಕಾಣುವ ಬುದ್ಧನ ಚಿತ್ರ ಒಂದು ಬಗೆಯ ನೆಮ್ಮದಿ ನೀಡಲಿದೆ.
ಬದುಕಿನ ಹೋರಾಟಗಳನ್ನು ಮುಗಿಸಿ ತಣ್ಣಗೆ ಹರಿಯುತ್ತಿರುವ ನದಿಯ ದಂಡೆ ಮೇಲೆ ಕುಳಿತಿರುವ ಹುಡುಗಿಯ ಚಿತ್ರ ಜೀವನದ ಭರವಸೆ ಕಳೆದಂತೆ ಕಾಣುತ್ತದೆ. ನಂತರ ಕಾಣುವ ಅರಳಿನಿಂತ ಗುಲಾಬಿ ಹೂವುಗಳ ಚಿತ್ರ ಬದುಕಿನ ವಸಂತಕಾಲದಂತೆ ಬಿಂಬಿತವಾಗುತ್ತದೆ.
ಚಿತ್ರಕಲಾ ಪ್ರದರ್ಶನ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷೆ ಪ್ರೊ.ಎಂ.ಜೆ.ಕಮಲಾಕ್ಷಿ, ಕಲಾ ಇತಿಹಾಸಕಾರ ಸುರೇಶ ಜಯರಾಮ, ವಿಮರ್ಶಕ ಎಸ್.ಆರ್.ವಿಜಯಶಂಕರ್ ಮತ್ತಿತರರು ಹಾಜರಿದ್ದರು.
ಎಚ್.ಸಿ.ದಾಸಪ್ಪ ಮತ್ತು ಯಶೋಧರ ದಾಸಪ್ಪ ಅವರು ಸಾರ್ವಜನಿಕ ಜೀವನದಲ್ಲಿ ಅನೇಕ ಕೊಡುಗೆ ನೀಡಿದ್ದಾರೆ. ಅವರ ಮೊಮ್ಮಗಳು ಚಿತ್ರಕಲೆಯ ಮೂಲಕ ಸಮಾಜಕ್ಕೆ ಸ್ಪೂರ್ತಿ ತುಂಬುತ್ತಿದ್ದಾರೆ.
-ಚೀರಂಜೀವಿ ಸಿಂಗ್, ನಿವೃತ್ತ ಐಎಎಸ್ ಅಧಿಕಾರಿ.
ಮನಸ್ಸಿನ ಭಾವನೆಗಳನ್ನು ಅಭಿವ್ಯಕ್ತಗೊಳಿಸುವ ಕಲೆ ಎಲ್ಲರನ್ನು ಒಮ್ಮೆಲೆ ಸೆರೆಹಿಡಿಯಲಿದೆ. ಚರಿತ ದಾಸಪ್ಪ ಅವರ ಕಲಾಕೃತಿಗಳ ಪರಿಕಲ್ಪನೆ ಅದ್ಭುತವಾಗಿದೆ. ಬ್ರಹ್ಮಾಂಡ ಪರಿಕಲ್ಪನೆಯಲ್ಲಿ ಶಾಶ್ವತದಿಂದ ತಾತ್ಕಲಿಕದವರೆಗೆ ಬದುಕಿನ ಆಯಾಮಗಳನ್ನು ಬಿಡಿಸಿಟ್ಟಿದ್ದಾರೆ.
-ಡಾ.ಬಿ.ಎಲ್.ಶಂಕರ್, ಕರ್ನಾಟಕ ಚಿತ್ರಕಲಾ ಪರಿಷತ್‌ನ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.