ಹಸಿದವರಿಗೆ ಅನ್ನ ನೀಡಲು ಕಮ್ಯೂನಿಟಿ ಫ್ರಿಡ್ಜ್
Team Udayavani, Oct 14, 2019, 3:05 AM IST
ಬೆಂಗಳೂರು: “ತುತ್ತು ಅನ್ನಕ್ಕಾಗಿ ಅಂಗಾಲಾಚುವ ಜನ ಒಂದಡೆ ಇದ್ದರೆ, ತಿಂದು ತೇಗಿ ಸಾಕಾದ ಮೇಲೆ ಅನ್ನ ಚೆಲ್ಲುವ ಜನ ಮತ್ತೂಂಡೆ ಇದ್ದಾರೆ. ಆದರೆ, ಒಂದು ತುತ್ತು ಅನ್ನವೂ ನಿರುಪಯುಕ್ತವಾಗದೇ ಹಸಿದ ಹೊಟ್ಟೆಗೆ ಹೋಗಬೇಕು ಎಂಬ ಕಲ್ಪನೆಯೊಂದಿಗೆ ಸ್ವಯಂ ಸೇವಾ ಸಂಸ್ಥೆಯೊಂದು ನಗರದಲ್ಲಿ ಕೆಲಸ ಮಾಡುತ್ತಿದೆ.
“ಜನ ಹಸಿದಿದ್ದಾರೆ ಆಹಾರ ಪಾದರ್ಥಗಳನ್ನು ಕಸದ ಬುಟ್ಟಿಗೆ ಹಾಕಬೇಡಿ’ ಎಂಬ ಘೋಷ ವಾಕ್ಯದೊಂದಿಗೆ “ಇಸ್ಲಾಮಿ ಮಾಹಿತಿ ಕೇಂದ್ರ’ ಹಾಗೂ “365 ಸ್ಟೈಲೀಸ್’ ಸ್ವಯಂ ಸೇವಾ ಸಂಸ್ಥೆ ಜಂಟಿಯಾಗಿ ಅಭಿಯಾನ ಆರಂಭಿಸಿವೆ. ಹೋಟೆಲ್, ಮದುವೆ ಇನ್ನಿತರ ಸಭೆ-ಸಮಾರಂಭಗಳಲ್ಲಿ ಉಳಿಯುವ ಆಹಾರ ಪದಾರ್ಥಗಳನ್ನು ಸಂಗ್ರಹಿಸಿ ದೊಡ್ಡ-ದೊಡ್ಡ ಫ್ರಿಡ್ಜ್ಗಳಲ್ಲಿ ಸಂರಕ್ಷಿಸಿ ಅದನ್ನು ಅವಶ್ಯಕತೆ ಇರುವವರಿಗೆ ಪೂರೈಸುವುದು ಈ ಅಭಿಯಾನದ ಉದ್ದೇಶ.
“ಸಮುದಾಯ ಫ್ರಿಡ್ಜ್’ ಹೆಸರಲ್ಲಿ ಹೋಟೆಲ್, ಶಾದಿಮಹಲ್ ಸೇರಿದಂತೆ ಊಟದ ವ್ಯವಸ್ಥೆ ಮಾಡುವ ಸಭೆ-ಸಮಾರಂಭ ನಡೆಯುವ ಕೇಂದ್ರಗಳ ಮುಂಭಾಗದಲ್ಲಿ ಈ ಸ್ವಯಂಸೇವಾ ಸಂಸ್ಥೆಯವರು ದಾನಿಗಳಿಂದ ದೇಣಿಗೆ ಪಡೆದು ಫ್ರಿಡ್ಜ್ಗಳನ್ನು ಖರೀದಿಸಿ ಇಡುತ್ತಾರೆ. ಹೋಟೆಲ್‌ಗೆ ಊಟ ಮಾಡಲು ಬರುವವರು ತಾವು ಊಟ ಮಾಡಿದ ಬಳಿಕ ಉಳಿದ ಆಹಾರ ಪದಾರ್ಥಗಳನ್ನು ಚೆಲ್ಲದೇ ಫ್ರಿಡ್ಜ್ನಲ್ಲಿ ಇಡಬೇಕು.
ಅದೇ ರೀತಿ ಹೊಟೇಲ್‌ನವರು ಸಹ ತಮ್ಮಲ್ಲಿ ಉಳಿದ ಆಹಾರ ಪದಾರ್ಥಗಳನ್ನು ಈ ಫ್ರಿಡ್ಜ್ಗಳಲ್ಲಿ ಇಡುತ್ತಾರೆ. ಮದುವೆ ಇನ್ನಿತರ ಸಮಾರಂಭದಲ್ಲಿ ಉಳಿಯುವ ಊಟವನ್ನು ಸಹ ಕಮ್ಯೂನಿಟಿ ಫ್ರಿಡ್ಜ್ಗಳಲ್ಲಿ ಇರಿಸಲಾಗುತ್ತದೆ. ಈ ಫ್ರಿಡ್ಜ್ಗಳಲ್ಲಿ ಇರಿಸಲಾಗುವ ಆಹಾರ ಪದಾರ್ಥಗಳನ್ನು ಮತ್ತೂಬ್ಬರು ತಿನ್ನಲು ಯೋಗ್ಯವಾಗುವ ರೀತಿಯಲ್ಲಿ ಸ್ವಚ್ಛಗೊಳಿಸಿ ಇಡಲಾಗುತ್ತದೆ. ಸಮುದಾಯ ಫ್ರಿಡ್ಜ್ಗಳ ಬಗ್ಗೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರಕಟಣೆ ಹೊರಡಿಸಲಾಗುತ್ತದೆ. ಅಲ್ಲದೇ ಸಾಮಾಜಿಕ ಜಾಲತಾಣಗಳ ಮೂಲಕವೂ ಪ್ರಚಾರ ಮಾಡಲಾಗುತ್ತದೆ.
ಈಗಾಗಲೇ ನಗರದಲ್ಲಿ ಹಲವು ಕಡೆ ಈ ಸಮುದಾಯ ಫ್ರಿಡ್ಜ್ಗಳನ್ನು ಇಡಲಾಗಿದ್ದು, ಭಾನುವಾರ ಕಲಾಸಿಪಾಳ್ಯ ಮುಖರಸ್ತೆಯ ಕಬಾಬ್ ಮ್ಯಾಜಿಕ್ ಹೋಟೆಲ್ ಮುಂದೆ ಹೊಸದಾಗಿ ಫ್ರಿಡ್ಜ್ ಇರಿಸಲಾಯಿತು. ಚಿಕ್ಕಪೇಟೆ ಶಾಸಕ ಡಾ. ಉದಯ ಗರುಡಾಚಾರ್ ಇದಕ್ಕೆ ಚಾಲನೆ ನೀಡಿದರು. ಶಾಸಕ ಎನ್.ಎ. ಹ್ಯಾರಿಸ್, ಪಾಲಿಕೆ ಸದಸ್ಯೆ ಪ್ರತಿಭಾ ಧನರಾಜ್ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.