![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
Team Udayavani, Jan 28, 2024, 1:09 PM IST
ಬೆಂಗಳೂರು: ಕಿರುಕುಳ ನೀಡಿದ ಆರೋಪದಲ್ಲಿ ಜೈಲಿಗೆ ಕಳುಹಿಸಿದ್ದ ಮಾಜಿ ಪ್ರೇಯಸಿ ವಿರುದ್ಧ ಯುವಕನೊಬ್ಬ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.
ಆರ್.ಆರ್.ನಗರ ನಿವಾಸಿ ಶೆರ್ವಿನ್(24) ಎಂಬಾತ ನೀಡಿದ ದೂರಿನ ಮೇರೆಗೆ ಕೋಣನಕುಂಟೆ ನಿವಾಸಿ ಸಿಂಧೂರಿ ಮಾನೆ(34), ಆಕೆಯ ಪತಿ ಭಂಟ ಮಂಜುನಾಥ್(44), ಸ್ನೇಹಿತ ಸಾಗರ್ ಮಾಘನಹಳ್ಳಿ(33) ಎಂಬವರ ವಿರುದ್ಧ ರಾಜರಾಜೇಶ್ವರಿನಗರ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಶೆರ್ವಿನ್‌ಗೆ ಒಂದೂವರೆ ವರ್ಷದ ಹಿಂದೆ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುವ ಟೆಕಿ ಸಿಂಧೂರಿ ಮಾನೆ ಎಂಬಾಕೆ ಪರಿಚಯವಾಗಿದ್ದು, ಇಬ್ಬರು ಅನೈತಿಕ ಸಂಬಂಧ ಹೊಂದಿದ್ದರು. ಕೆಲ ದಿನಗಳ ಹಿಂದೆ ಸಿಂಧೂರಿ 20 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ಶೆರ್ವಿನ್ ಆಕೆಯಿಂದ ಅಂತರ ಕಾಯ್ದುಕೊಂಡಿದ್ದ.
ಆಗ ಸಿಂಧೂರಿ, “ನಮ್ಮಿಬ್ಬರ ವಿಚಾರವನ್ನು ಮನೆಯವರಿಗೆ ಹೇಳುತ್ತೇನೆ. ನಿನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುತ್ತೇನೆ’ ಎಂದು ಬೆದರಿಕೆ ಹಾಕಿದ್ದರು. ಜತೆಗೆ ಆಕೆಯ ಸ್ನೇಹಿತ ಸಾಗರ್ ಮಾಘನಹಳ್ಳಿ ಕೂಡ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ. ಅಲ್ಲದೆ, ಈ ವಿಚಾರಗಳನ್ನು ಸಿಂಧೂರಿ ಪತಿ ಮಂಜುನಾಥ್‌ಗೆ ತಿಳಿಸಿದಾಗ, ಆತ ಕೂಡ ಸಿಂಧೂರಿ ಕೇಳಿದಷ್ಟು ಹಣ ಕೊಡು, ಇಲ್ಲವಾದರೆ ನಿನ್ನನ್ನು ಸಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ ಎಂದು ಶೆರ್ವಿನ್ ದೂರಿನಲ್ಲಿ ಉಲ್ಲೇಖೀಸಿದ್ದಾರೆ.
ಇದರೊಂದಿಗೆ ಆರೋಪಿಗಳು 2023ರ ಸೆ.19ರಿಂದ ಅ.31ರವರೆಗೆ ತನ್ನ ಬಳಿಯಿದ್ದ ಚಿನ್ನಾಭರಣಗಳನ್ನು ಅಡಮಾನವಿರಿಸಿ 2 ಲಕ್ಷ ರೂ. ಪಡೆದುಕೊಂಡಿದ್ದಾರೆ. ಬಳಿಕ ಬಾಕಿ 18 ಲಕ್ಷ ರೂ. ಕೊಡಬೇಕು ಎಂದು ತನ್ನ ಮನೆಗೆ ನುಗ್ಗಿ ಧಮ್ಕಿ ಹಾಕಿದ್ದರು. ಆದರೆ, ಆಕೆಯೇ ತನ್ನ ವಿರುದ್ಧ ಕೋಣನಕುಂಟೆ ಠಾಣೆಯಲ್ಲಿ ದೂರು ದಾಖಲಿಸಿ, ಜೈಲಿಗೆ ಕಳುಹಿಸಿದ್ದರು.
ಇದೀಗ ಜೈಲಿನಿಂದ ಬಿಡುಗಡೆಯಾಗಿ ಆರ್.ಆರ್. ನಗರದ ಪಿಜಿಯಲ್ಲಿ ವಾಸವಾಗಿದ್ದೆ. ಆದರೆ. ಅಲ್ಲಿಗೂ ಆರೋಪಿಗಳು ಬಂದು ಬಾಕಿ 18 ಲಕ್ಷ ರೂ. ಕೊಡಬೇಕು. ಇಲ್ಲವಾದರೆ ಸುಳ್ಳುಕೇಸು ದಾಖಲಿಸು ತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ಶೆರ್ವಿನ್ ದೂರಿನಲ್ಲಿ ಆರೋಪಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಸಿಂಧೂರಿಯಿಂದ ದೂರು, ಶೆರ್ವಿನ್‌ಗೆ ಜೈಲು:
ಈ ಹಿಂದೆ ಸಿಂಧೂರಿ ಕೂಡ ಶೆರ್ವಿನ್ ದೂರು ನೀಡಿ ಜೈಲಿಗೆ ಕಳುಹಿಸಿದ್ದಳು. ಆತನ ಜತೆ ಆತ್ಮೀಯತೆ ಇದ್ದದ್ದು ನಿಜ. ಆತನ ವರ್ತನೆ ಯಿಂದ ಬೇಸರಗೊಂಡು ದೂರವಾಗಿದ್ದೆ. ಆದರೆ, ಆತ ಕಂಪನಿ, ಮನೆ ಬಳಿ ಬಂದು ಮತ್ತೂಮ್ಮೆ ಆತ್ಮೀಯತೆ ಮುಂದುವರಿಸು ವಂತೆ ಪೀಡಿಸಿದ್ದಾನೆ. ಜತೆಗೆ ನಮ್ಮಿಬ್ಬರ ಖಾಸಗಿ ಫೋಟೋಗಳನ್ನು ವೈರಲ್ ಮಾಡು ವುದಾಗಿ ಬೆದರಿಕೆ ಹಾಕಿದ್ದ’ ಎಂದು ಆರೋ ಪಿಸಿ ಕೋಣನಕುಂಟೆ ಠಾಣೆಗೆ ಸಿಂಧೂರಿ ದೂರು ನೀಡಿದ್ದರು. ಈ ದೂರು ಆಧರಿಸಿ ಶೆರ್ವಿನ್‌ನನ್ನು ಬಂಧಿಸಲಾಗಿತ್ತು ಎಂದು ಪೊಲೀಸರು ಹೇಳಿದರು.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.