ಕಾನ್‌ಕಾರ್ಡ್ ಲಕ್ಸೆಪೊಲಿಸ್ ವಸತಿ ನಿರ್ಮಾಣ ಆರಂಭ
Team Udayavani, Mar 26, 2019, 12:21 PM IST
ಬೆಂಗಳೂರು: ನಗರದ ರಿಯಲ್ ಎಸ್ಟೇಟ್ ಸಂಸ್ಥೆ ಕಾನ್‌ಕಾರ್ಡ್ ಗ್ರೂಪ್, ಪ್ರಸ್ತುತ ಬಸವನಗುಡಿ ರಸ್ತೆಯಲ್ಲಿ ಕಾನ್‌ಕಾರ್ಡ್ ಲಕ್ಸೆಪೊಲಿಸ್ ಎಂಬ ವಿಲಾಸಿ ವಸತಿ ಯೋಜನೆಯ ನಿರ್ಮಾಣ ಕಾರ್ಯವನ್ನು ಆರಂಭಿಸಿದೆ.
ಐಷಾರಾಮಿ ಕೋಣೆಗಳು, ಸೂಕ್ಷ್ಮ ವಿನ್ಯಾಸಗಳು, ದೊಡ್ಡ ಕಿಟಕಿಗಳ, ಅಲೆಕ್ಸಾ ಎನೆಬಲ್ಡ್ ಆಗಿರುವ ಸ್ಮಾರ್ಟ್ ಮನೆಗಳು ಇದಾಗಲಿವೆ. ಜತೆಗೆ ಇದರಲ್ಲಿ ವಾಯ್ಸ ಎನೆಬಲ್ಡ್ ಲೈಟ್ ಮತ್ತು ಅಪ್ಲೈಯನ್ಸ್ ಆಟೋಮೇಷನ್ ವ್ಯವಸ್ಥೆ ಇರಲಿದೆ.
ರೂಫ್‌ಟಾಪ್ ಇನ್ಫಿನಿಟಿ ಪೂಲ್ ಮತ್ತು ಡೆಕ್, ಮಿನಿ ಥಿಯೇಟರ್, ಮಕ್ಕಳಿಗಾಗಿ ಆಟದ ಪ್ರದೇಶವುಳ್ಳ ವಿಲಾಸಿ ಮನೆಗಳು ನಿರ್ಮಾಣವಾಗಲಿವೆ. ಕೇವಲ ಅರಮನೆಗಳಂತೆ ಇರದೆ ಪ್ರತಿ ಭಾಗದಲ್ಲೂ ಸೊಗಸು ಹಾಗೂ ವೈಭವದ ಸ್ಪರ್ಶ ಒಳಗೊಂಡಿರುತ್ತವೆ ಎಂದು ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಕ್ರಾಂತಿ ಅಲ್ಲಾಡಿ ತಿಳಿಸಿದ್ದಾರೆ.
ಬುಲ್ ಟೆಂಪಲ್ ರಸ್ತೆಯಲ್ಲಿರುವ ಈ ಮನೆಗಳು ನಿರ್ದಿಷ್ಟ ಬೆಲೆಯಲ್ಲಿ ಲಭಿಸಲಿದ್ದು, ಪ್ರಸ್ತುತ ವಿಲಾಸಿ ವಸತಿಗಳ ತೆರಿಗೆ ಶೇ.12ರಿಂದ ಶೇ.5ಕ್ಕೆ ಇಳಿಸಿರುವುದರಿಂದ ಗ್ರಾಹಕರಿಗೆ ಅನುಕೂಲವಾಗಿದೆ.
ಸಮೀಪದಲ್ಲಿ ಅತ್ಯುತ್ತಮ ಶೈಕ್ಷಣಿಕ ಸಂಸ್ಥೆಗಳು, ಶಾಪಿಂಗ್ ಸೆಂಟರ್‌ಗಳು ಶೃಂಗೇರಿ ಶಂಕರಮಠ ಇದ್ದು, 17 ಅಂತಸ್ತುಗಳ 50 ಮನೆಗಳ ಲಕ್ಸೆಪೊಲಿಸ್ ಯೋಜನೆ ನಾಲ್ಕು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ವಿವರಗಳು www.concordegroup.in ಗೆ ಭೇಟಿ ನೀಡಬಹುದು ಎಂದು ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
Maharashtra Polls: ಪ್ರಾಣ ಬೆದರಿಕೆ ನಡುವೆ ಮತ ಹಾಕಿ ಫೋಟೋ ತೆಗೆಸಿದ ಸಲ್ಮಾನ್!
Aircel-Maxis Case: ಏರ್‌ಸೆಲ್-ಮ್ಯಾಕ್ಸಿಸ್ ಕೇಸಿನಲ್ಲಿ ಚಿದಂಬರಂ ವಿರುದ್ಧ ವಿಚಾರಣೆ ತಡೆ
Bhagyanagar: ಹೈದರಾಬಾದ್ ಅಲ್ಲ, ಭಾಗ್ಯನಗರ: ಆರೆಸ್ಸೆಸ್ ಮತ್ತೆ ಹಕ್ಕೊತ್ತಾಯ
Exit Poll: ಮಹಾರಾಷ್ಟ್ರ: ಬಿಜೆಪಿ ನೇತೃತ್ವಕ್ಕೆ ಮತ್ತೆ ಅಧಿಕಾರ, ಜಾರ್ಖಂಡ್‌ನಲ್ಲಿ ಪೈಪೋಟಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.