ಟು-ಸ್ಟ್ರೋಕ್ ಗುಜರಿ ಗೊಂದಲ!
Team Udayavani, Jun 22, 2018, 11:44 AM IST
ಬೆಂಗಳೂರು: ನಗರದಲ್ಲಿರುವ “ಟು-ಸ್ಟ್ರೋಕ್’ ಆಟೋಗಳನ್ನು ಗುಜರಿಗೆ ಹಾಕುವ ವಿಚಾರದಲ್ಲಿ ಈಗ ಸ್ವತಃ ಸಾರಿಗೆ ಇಲಾಖೆ ಗೊಂದಲಕ್ಕೆ ಸಿಲುಕಿದೆ! ವಾಯುಮಾಲಿನ್ಯಕ್ಕೆ ಕಾರಣವಾಗುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿನ ಎಲ್ಲ “ಟು-ಸ್ಟ್ರೋಕ್’ ಆಟೋಗಳನ್ನು ರದ್ದುಗೊಳಿಸಿ, “4 ಸ್ಟ್ರೋಕ್’ ಆಟೋ ಖರೀದಿಸಲು ತಲಾ 30 ಸಾವಿರ ರೂ. ಸಹಾಯಧನ ನೀಡುವಂತೆ ಕಳೆದ ವರ್ಷ ಸರ್ಕಾರ ಆದೇಶ ಹೊರಡಿಸಿತ್ತು.
ಈ ಸಂಬಂಧ 30 ಕೋಟಿ ರೂ. ಕೂಡ ಬಿಡುಗಡೆ ಮಾಡಲಾಗಿತ್ತು. ಆದರೆ, ಈ ಸಬ್ಸಿಡಿ ಹಣದಲ್ಲಿ ಈವರೆಗೆ ಒಂದೇ ಒಂದು ಪೈಸೆ ಖರ್ಚಾಗದೆ, ಸರ್ಕಾರಕ್ಕೆ ವಾಪಸ್ ಹೋಗಿದೆ. ಹಾಗಾಗಿ, ಇದನ್ನು ಮುಂದುವರಿಸಬೇಕೋ ಅಥವಾ ಬೇಡವೋ ಎಂಬ ಬಗ್ಗೆ ಗೊಂದಲ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಸಮ್ಮಿಶ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ಗುಜರಿಗೆ ಹಾಕಲು ಒಬ್ಬ ಆಟೋ ಮಾಲೀಕ ಕೂಡ ಮುಂದೆ ಬರುತ್ತಿಲ್ಲ.
ಕಳೆದ ವರ್ಷ ಹಣಕಾಸು ಇಲಾಖೆಯಿಂದ ಬಂದ ಸಬ್ಸಿಡಿ ಹಣ ಕೂಡ ವಾಪಸ್ ಹೋಗಿದೆ. ಹಾಗಾಗಿ, ಉದ್ದೇಶಿತ ಟು-ಸ್ಟ್ರೋಕ್ ರದ್ದುಗೊಳಿಸುವ ನೀತಿಯಲ್ಲಿ ಸ್ವಲ್ಪ ಮಾರ್ಪಾಡು ಮಾಡುವ ಅವಶ್ಯಕತೆ ಇದೆ. ಗುಜರಿಗೆ ಹಾಕುವ ಬದಲಿಗೆ, ಪರಿವರ್ತನೆ (ಅಂದರೆ ನಗರ ಬಿಟ್ಟು ಹೊರಗಡೆ ಮಾರಾಟ ಮಾಡಿ, 4 ಸ್ಟ್ರೋಕ್ ಆಟೋ ಖರೀದಿಸುವುದು) ಮಾಡಬಹುದು
ಅಥವಾ ಸಬ್ಸಿಡಿ ಮೊತ್ತವನ್ನು ಹೆಚ್ಚಿಸಬಹುದು ಎಂದು ಅಭಿಪ್ರಾಯಪಟ್ಟಿದೆ. ಬಜೆಟ್ ಪೂರ್ವಭಾವಿ ಸಭೆಯಲ್ಲೂ ಈ ಕುರಿತು ಸಾರಿಗೆ ಸಚಿವರ ಗಮನ ಸೆಳೆಯಲಾಗುವುದು. ಆದರೆ, ಬಜೆಟ್ ಮಂಡನೆ ನಂತರ ಈ ಬಗ್ಗೆ ಸರ್ಕಾರದ ನಿಲುವು ಗೊತ್ತಾಗಲಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಎರಡಂಕಿಯೂ ದಾಟಿಲ್ಲ: ನಗರದಲ್ಲಿರುವ ಎಲ್ಲ 20 ಸಾವಿರ “ಟು-ಸ್ಟ್ರೋಕ್’ ಆಟೋಗಳನ್ನು ಸಾðéಪ್ ಮಾಡುವಂತೆ ಕಳೆದ ವರ್ಷ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಅದರಂತೆ ಪೀಣ್ಯ, ಗೊರಗುಂಟೆಪಾಳ್ಯ, ನೆಲಮಂಗಲದಲ್ಲಿ ಗುಜರಿ ಘಟಕಗಳನ್ನು ಸ್ಥಾಪಿಸಿ, ಬಜಾಜ್, ಟಿವಿಎಸ್ ಮತ್ತು ಪಯಾಗಿಯೊ ಸೇರಿದಂತೆ ಮೂರು ಕಂಪನಿಗಳಿಗೆ ಗುತ್ತಿಗೆ ನೀಡಲಾಗಿತ್ತು.
ಅಲ್ಲದೆ, ಮೊದಲ ವರ್ಷದಲ್ಲೇ 10 ಸಾವಿರ ಟು-ಸ್ಟ್ರೋಕ್ ಆಟೋಗಳನ್ನು ಗುಜರಿಗೆ ಸೇರಿಸುವ ಗುರಿ ಹೊಂದಲಾಗಿತ್ತು. ಆದರೆ, ಒಂದು ವರ್ಷದಲ್ಲಿ ಸಾಪ್ ಮಾಡಿದ ಆಟೋಗಳ ಸಂಖ್ಯೆ ಎರಡಂಕಿಯೂ ದಾಟಿಲ್ಲ! ಹೀಗಿರುವಾಗ ಗುಜರಿ ಸೇರದ ಆಟೋಗಳ ವಿರುದ್ಧ ಕಾರ್ಯಾಚರಣೆ ಕಷ್ಟ ಎಂದು ಉನ್ನತ ಅಧಿಕಾರಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
2010ರಿಂದ ಟು-ಸ್ಟ್ರೋಕ್ ಆಟೋಗಳ ವಿರುದ್ಧ ಕೂಗು ಕೇಳಿಬರುತ್ತಿದ್ದು, 2011ರಿಂದಲೇ ಈ ಮಾದರಿಯ ಆಟೋಗಳನ್ನು ನಗರದಿಂದ ಹೊರಗೆ ಹಾಕಿ, 4 ಸ್ಟ್ರೋಕ್ ಆಟೋಗಳನ್ನು ಖರೀದಿಗೆ ಸಬ್ಸಿಡಿ ನೀಡುವ ಯೋಜನೆ ಜಾರಿಗೊಳಿಸಲಾಯಿತು. ಆರಂಭದಲ್ಲಿ ಈ ಸಬ್ಸಿಡಿ ಮೊತ್ತ 10 ಸಾವಿರ ರೂ. ಇತ್ತು.
ನಂತರದಲ್ಲಿ 15 ಸಾವಿರ ರೂ., ಈಗ 30 ಸಾವಿರ ರೂ. ನಿಗದಿಪಡಿಸಲಾಗಿದೆ. 2011ರಿಂದ 2017ರವರೆಗೆ ಸುಮಾರು 5 ಸಾವಿರ ಟು-ಸ್ಟ್ರೋಕ್ ಆಟೋಗಳನ್ನು 4 ಸ್ಟ್ರೋಕ್‌ಗೆ ಪರಿವರ್ತಿಸಲಾಗಿದೆ. ಸಂಪೂರ್ಣ ಗುಜರಿಗೆ ಹಾಕುವಂತೆ ಆದೇಶ ಹೊರಡಿಸಿದ ನಂತರದಿಂದ ಯಾರೂ ಮುಂದೆ ಬರುತ್ತಿಲ್ಲ.
ಗುಜರಿಗೆ ಹಾಕಿದ್ರೆ ಹೊಟ್ಟೆಪಾಡೇನು?: ದುಡಿಮೆಗೆ ಇರುವ ಏಕೈಕ ಮೂಲವಾದ ಆಟೋಗಳನ್ನು ಗುಜರಿಗೆ ಹಾಕಿದರೆ ಕುಟುಂಬದ ಹೊಟ್ಟೆ ಪಾಡೇನು? ಈಗ ಆಟೋಗಳ ಬೆಲೆ ಎಷ್ಟಿದೆ ಅಂತಾ ನಿಮಗೆ ಗೊತ್ತಿದೆಯಾ? ಹೆಚ್ಚುವರಿ ಜಿಎಸ್‌ಟಿ ಹೇರಿಕೆಯಿಂದಾಗಿ ಚಾಲಕರು ಆಟೋ ರೇಟು ಕೇಳಿಯೇ ಕುಸಿದು ಬೀಳುತ್ತಿ¨ªಾರೆ. ಹೀಗಿರುವಾಗ ಆಟೋಗಳನ್ನು ಗುಜರಿಗೆ ಹಾಕಿ ಎಂದರೆ ಏನರ್ಥ?
ಅಷ್ಟಕ್ಕೂ ಬೆಂಗಳೂರಲ್ಲಿ ಆಟೋಗಳನನು ಹೊರತುಪಡಿಸಿ ಬೇರೆ ಯಾವ ವಾಹನಗಳಿಂದಲೂ ಮಾಲಿನ್ಯ ಆಗುತ್ತಿಲ್ಲವೇ? ಯಾವ ವಾಹನವೂ ಹೆಚ್ಚು ಹೊಗೆ ಬಿಡುವುದೇ ಇಲ್ಲವೇ? ಬೇರೆ ವಾಹನಗಳಿಗಿಲ್ಲದ ನೀತಿ ಆಟೋಗಳಿಗೇ ಏಕೆ ಎಂದು ಅಖೀಲ ಕರ್ನಾಟಕ ರಾಜ್ಯ ಆಟೋ ಚಾಲಕರ ಕ್ಷೇಮಾಭಿವೃದ್ಧಿ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಮೊಹಮ್ಮದ್ ಅಬಾrಸ್ ಪ್ರಶ್ನಿಸುತ್ತಾರೆ.
ಕಳೆದ ವರ್ಷ ಟು-ಸ್ಟ್ರೋಕ್ ಆಟೋಗಳನ್ನು ಗುಜರಿಗೆ ಹಾಕುವ ಕಾರ್ಯಕ್ರಮಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಬಾರಿ ಮುಂದುವರಿಸುವ ಬಗ್ಗೆ ಹಲವು ಗೊಂದಲಗಳಿವೆ. ಈ ಹಿನ್ನೆಲೆಯಲ್ಲಿ ಸಾರಿಗೆ ಸಚಿವರೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು. ಪರಿವರ್ತನೆ ಅಥವಾ ಸಬ್ಸಿಡಿ ಮೊತ್ತ ಹೆಚ್ಚಳ ಒಳಗೊಂಡಂತೆ ಹಲವು ಆಯ್ಕೆಗಳು ಇಲಾಖೆ ಮುಂದಿವೆ. ಅವೆಲ್ಲವುಗಳ ಬಗ್ಗೆ ವೈಜ್ಞಾನಿಕವಾಗಿ ಪರಿಶೀಲಿಸಿ, ಕ್ರಮ ಕೈಗೊಳ್ಳಲಾಗುವುದು.
-ನವೀನ್‌ರಾಜ್ ಸಿಂಗ್, ಆಯುಕ್ತರು, ಸಾರಿಗೆ ಇಲಾಖೆ
* ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
India: ಸಂವಿಧಾನದ ಕುರಿತಾಗಿ ಶೈಕ್ಷಣಿಕ ನೆಲೆಯಲ್ಲಿ ಚಿಂತನ ಮಂಥನ ನಡೆಯಬೇಕು?
Video: ಮದುವೆ ಸಂಭ್ರಮದ ಖುಷಿಯಲ್ಲಿ ಪಟಾಕಿ ಸಿಡಿಸಲು ಹೋಗಿ ಕಾರೇ ಸುಟ್ಟಿತು
MGM: ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜು; ಅಮೃತ ಮಹೋತ್ಸವ
SMAT T20: 28 ಎಸೆತದಲ್ಲಿ ಶತಕ ಬಾರಿಸಿ T20ಯಲ್ಲಿ ದಾಖಲೆ ಬರೆದ ಇಂಡಿಯನ್ ಬ್ಯಾಟರ್
Jewelry Clean Tips: ಮನೆಯಲ್ಲೇ ಆಭರಣಗಳನ್ನು ಈ ರೀತಿಯಾಗಿ ಸ್ವಚ್ಛಗೊಳಿಸಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.