ಕಂಠೀರವದಲ್ಲಿ ಸಿಎಂ ಆಗಿ ಪ್ರಮಾಣ!
Team Udayavani, Apr 28, 2018, 11:39 AM IST
ನೆಲಮಂಗಲ: “ಬರುವ ಮೇ 17 ಅಥವಾ 18ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಲಕ್ಷಾಂತರ ಕಾರ್ಯಕರ್ತರು, ಸಾರ್ವಜನಿಕರ ಸಮ್ಮುಖದಲ್ಲಿ ನಾನು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತೇನೆ,’ ಎಂದು ಮಾಜಿ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ನೆಲಮಂಗಲ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಪ್ರಚಾರದ ಅಂಗವಾಗಿ ಪಟ್ಟಣದ ಐಟಿಐ ಕಾಲೇಜು ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಹಿರಂಗ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ರಾಜ್ಯದಲ್ಲಿ 150 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾ ಧಿಸಲಿದೆ. ಕಾರ್ಯಕರ್ತರು ಮತದಾರರ ಮನೆಮನೆಗೂ ತೆರಳಿ ಪ್ರಧಾನಿ ಅವರ ಅಭಿವೃದ್ಧಿ ಕಾರ್ಯ ಮತ್ತು ಚಿಂತನೆಗಳೊಂದಿಗೆ ಬಿಜೆಪಿ ಅಧಿಕಾರದ ಅವ ಧಿಯಲ್ಲಿ ರಾಜ್ಯ ಕಂಡ ಅಭಿವೃದ್ಧಿಯನ್ನು ಮನವರಿಕೆ ಮಾಡಿಕೊಡಿ ಎಂದು ಕರೆ ನೀಡಿದರು.
ಮೆಟ್ರೋ ಭರವಸೆ: ಬಿಜೆಪಿ ಅ ಧಿಕಾರಕ್ಕೆ ಬಂದ ಕೂಡಲೇ ನೆಲಮಂಗಲ ಕ್ಷೇತ್ರಕ್ಕೆ ಮೆಟ್ರೋ ರೈಲು ಸೇವೆಯನ್ನು ವಿಸ್ತರಿಸಲಾಗುವುದು. ತಾಲೂಕಿಗೆ ಶಾಶ್ವತ ನೀರಾವರಿ ವ್ಯವಸ್ಥೆಯೊಂದಿಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸಿಕೊಡಲಾಗುತ್ತದೆ. ಸುಸಜ್ಜಿತ ಬಸ್‌ನಿಲ್ದಾಣ ಮೊದಲ ಆದ್ಯತೆಯಾಗಿದ್ದು ಸೋಂಪುರದಲ್ಲಿ ಇಂಡಸ್ಟ್ರಿಯಲ್ ಪಾರ್ಕ್, ವಿಜ್ಞಾನ ಪಾರ್ಕ್‌ಗೆ ಒತ್ತು ನೀಡಲಾಗುತ್ತದೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾ ಣಿಕವಾಗಿ ಸಹಕರಿಸುವ ಭರವಸೆ ನೀಡಿದರು.
ಭ್ರಷ್ಟಾಚಾರ ಮುಚ್ಚಿಹಾಕಿದ್ದಾರೆ: ಕಾಂಗ್ರೆಸ್ ಸರ್ಕಾರ ಲೋಕಾಯುಕ್ತ ಸಂಸ್ಥೆ ರದ್ದುಮಾಡಿ ಎಸಿಬಿ ಮೂಲಕ ತಮ್ಮ ಸಂಪುಟ ಸಹೋದ್ಯೋಗಿಗಳ ಹಗರಣ ಭ್ರಷ್ಟಾಚಾರ ಮುಚ್ಚಿಹಾಕಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಪರಿಶಿಷ್ಟ ಜಾತಿ ಪಂಗಡದ ಜನರ ಮೇಲೆ ದೌರ್ಜನ್ಯ, ದಬ್ಟಾ ಳಿಕೆ ನಡೆಯುತ್ತಿದ್ದರೂ ಯಾವುದೇ ಕ್ರಮ ವಹಿಸದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಕೊನೆಯ ಕಾಂಗ್ರೆಸ್ ಮುಖ್ಯಮಂತ್ರಿ ಸಿದ್ದರಾಮಯ್ಯ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂ ಧಿಗೆ ಅವರು ರಾಜ್ಯಕ್ಕೆ ಹೆಚ್ಚು ಬಂದು ಹೋದಷ್ಟು ನಮಗೆ ಲಾಭ ಹೆಚ್ಚಾಗುತ್ತದೆ.
ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಬಾದಾಮಿಗೆ ಪಲಾ ಯನ ಮಾಡಿದ್ದಾರೆ. ಬಾದಾಮಿ ಮತ್ತು ಚಾಮುಂಡೇಶ್ವರಿ ಕ್ಷೇತ್ರಗಳ ಲ್ಲಿಯೂ ಸಿಎಂ ಸೋಲು ಖಚಿತ. ನಾನು ಅ ಧಿಕಾರಕ್ಕೆ ಬಂದು 24 ಗಂಟೆಯಲ್ಲಿ ಎಸಿಬಿ ರದ್ದುಪಡಿಸಿ ಲೋಕಾಯುಕ್ತ ಬಲಪಡಿ ಸುತ್ತೇನೆ. ದಲಿತರ ಕುರಿತಾಗಿ ಮಾತನಾಡಲು ಕಾಂಗ್ರೆಸ್‌ನವರಿಗೆ ಹಕ್ಕಿಲ್ಲ. ಅವರನ್ನು ಕೇವಲ ವೋಟ್‌ಬ್ಯಾಂಕ್ ಮಾಡಿಕೊಂಡಿದ್ದಾರೆ ಎಂದು ಬಿಎಸ್‌ವೈ ಟೀಕಿಸಿದರು.
ಬಿಜೆಪಿ ಹಿಂದುಳಿದ ಘಟಕದ ರಾಜ್ಯಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಮಾತನಾಡಿ, ಅನ್ನಭಾಗ್ಯದ ಹೆಸರಲ್ಲಿ ಕನ್ನಭಾಗ್ಯ ಮಾಡಿದ ಸಿಎಂ ಸಿದ್ದರಾಮಯ್ಯ ದುರಾಡಳಿತದ ಪರಮಾವಧಿ ತಲುಪಿದ್ದಾರೆ. ರಾಜ್ಯದ ಪ್ರತಿಯೊಬ್ಬ ಪ್ರಜೆಯ ಮೇಲೆ 28,770 ರೂ.ಗಳ ಸಾಲದ ಹೊರೆ ಹೊರಿಸಿರುವುದು ಅವರ ಸಾಧನೆಗಳಲ್ಲಿ ಒಂದಾಗಿದೆ ಎಂದು ಆರೋಪಿಸಿದರು.
ಸೇರ್ಪಡೆ: ಪುರಸಭೆ ಮಾಜಿ ಅಧ್ಯಕ್ಷ ಆರ್.ಉಮಾಶಂಕರ್, ಅರಿಶಿನಕುಂಟೆ ಗ್ರಾಪಂ ಮಾಜಿ ಉಪಾಧ್ಯಕ್ಷ ಅಂಜನಮೂರ್ತಿ ಸೇರಿ ದಂತೆ ನೂರಾರು ಕಾರ್ಯಕರ್ತರು ಬಿಜೆಪಿ ಸೇರ್ಪಡೆಗೊಂಡರು. ಈ ವೇಳೆ ನಿವೃತ್ತ ಜಿಲ್ಲಾ ಧಿಕಾರಿ ಸೋಮಶೇಖರ್, ನೆಲಮಂಗಲ ಯೋಜನಾ ಪ್ರಾಧಿ ಕಾರದ ಮಾಜಿ ಅಧ್ಯಕ್ಷ ಎಸ್.ಮಲ್ಲಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ರಾಜಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣಪ್ಪ, ತಾಲೂಕು ಅಧ್ಯಕ್ಷ ಎಚ್.ಕೆ.ಲೋಕೇಶ್,
ಕಾರ್ಯದರ್ಶಿ ಎಂ.ಎಂ.ಗೌಡ, ಹಾಲು ಪ್ರಕೋಷ್ಟದ ಜಿಲ್ಲಾ ಧ್ಯಕ್ಷ ತೀರ್ಥೇಶ್, ಒಬಿಸಿ ತಾಲೂಕು ಅಧ್ಯಕ್ಷ ಚಿಕ್ಕಹನುಮಯ್ಯ, ಟೌನ್‌ಅಧ್ಯಕ್ಷ ಎನ್.ಗಣೇಶ್, ರಾಜ್ಯಕಾರ್ಯಕಾರಿಣಿ ಸದಸ್ಯ ಸತೀಶ್, ಜಿಪಂ ಸದಸ್ಯ ನಂಜುಂಡಯ್ಯ, ತಾಪಂ ಸದಸ್ಯ ಪ್ರಕಾಶ್ ಮಾದೇನಳ್ಳಿ, ಪುರಸಭೆ ಸದಸ್ಯ ಕೇಶವ ಮೂರ್ತಿ, ಪಕ್ಷದ ಮುಖಂಡ ರಾದ ಬೈರೇ ಗೌಡ್ರು, ಅನ್ನದಾನಯ್ಯ, ರಾಜಮ್ಮ, ಅನಿತಾ, ಸುಬ್ರಮಣಿ, ಮುರಾ ರಯ್ಯ, ಮಾರಗೊಂಡ ನಳ್ಳಿ ರಮೇಶ್, ಶಿವಕುಮಾರ್ ಇನ್ನಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮಾವನ ಮಗನ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ
Road mishap: ಗೂಡ್ಸ್ ವಾಹನಕ್ಕೆ ದ್ವಿಚಕ್ರ ವಾಹನ ಡಿಕ್ಕಿ; ಸಿಎಆರ್ ಕಾನ್‌ಸ್ಟೇಬಲ್ ಸಾವು
Bengaluru: ಸ್ನೇಹಿತನ ಅಪ್ರಾಪ್ತ ಪುತ್ರಿ ಮೇಲೆ ರೇಪ್ ಮಾಡಿ ಗರ್ಭಿಣಿ ಮಾಡಿದ್ದ ಅಪರಾಧಿ
Bengaluru: ಅಕ್ಕನ ಬುದ್ಧಿಮಾಂದ್ಯ ಮಗಳ ಮೇಲೆಯೇ ಸತತ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕ
Bengaluru: ಬಸ್ ಚಾಲಕನ ಮೇಲೆ ಹಲ್ಲೆಗೆ ಯತ್ನ; ಮೆಕ್ಯಾನಿಕ್ ಬಂಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.