ಸಮಗ್ರ ಅಭಿವೃದ್ಧಿ ಹೊಣೆ ನನ್ನದು: ಪ್ರಿಯಕೃಷ್ಣ
Team Udayavani, May 3, 2023, 9:43 AM IST
ಬೆಂಗಳೂರು: “ನೀರಿನ ಪೈಪ್‌ಗಳಿವೆ; ಆದರೆ, ಅದರಲ್ಲಿ ನೀರೇ ಬರುತ್ತಿಲ್ಲ. ರಸ್ತೆಗಳಿದ್ದರೂ ಸದಾ ಕಾಮಗಾರಿ ಪ್ರಗತಿಯಲ್ಲಿರುತ್ತದೆ. ನೀವು ಗೆದ್ದುಬಂದರೆ ಈ ಸಮಸ್ಯೆಗಳೇ ಇರುವುದಿಲ್ಲ…’ – ಗೋವಿಂದರಾಜನಗರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಕೃಷ್ಣ ಮಂಗಳವಾರ ಶಿವಾನಂದನಗರಕ್ಕೆ ಭೇಟಿ ನೀಡಿದಾಗ, ಅಲ್ಲಿನ ಮತದಾರರಿಂದ ಕೇಳಿಬಂದ ಹಾರೈಕೆಗಳಿವು.
ಪ್ರಿಯದರ್ಶಿನಿ, ದಾಸರಹಳ್ಳಿ, ರಾಜಾಜಿನಗರ 6ನೇ ಬ್ಲಾಕ್ ಸೇರಿದಂತೆ ಹಲವು ಕಡೆಗಳಲ್ಲಿ ಮತದಾರರು ನೀರು, ರಸ್ತೆ ಮತ್ತಿತರ ಸಮಸ್ಯೆಗಳನ್ನು ಪ್ರಿಯಕೃಷ್ಣ ಅವರ ಮುಂದೆ ಹೇಳಿಕೊಂಡರು. ವರ್ಷಗಳಿಂದ ಈ ತೊಂದರೆ ಎದುರಿಸು ತ್ತಿದ್ದು, ಇವುಗಳಿಗೆ ತಾವು (ಪ್ರಿಯಕೃಷ್ಣ ಅವರನ್ನು ಉದ್ದೇಶಿಸಿ) ಪರಿಹಾರ ಕಲ್ಪಿಸು ತ್ತೀರಿ ಎಂಬ ನಂಬಿಕೆ ಇದೆ. ಹಾಗಾಗಿ, ತಮ್ಮನ್ನೇ ಬೆಂಬಲಿಸುವುದಾಗಿ ಹೇಳುತ್ತಿರುವುದು ಕಂಡುಬಂತು. ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ಶಾಸಕ ಪ್ರಿಯಕೃಷ್ಣ, “ಕ್ಷೇತ್ರದ ಸಮಗ್ರ ಅಭಿವೃದ್ಧಿ ಹೊಣೆ ನನ್ನದು. ನೀರು, ರಸ್ತೆ ಮಾತ್ರವಲ್ಲ; ಅಂಡರ್‌ಪಾಸ್, ಸಿಸಿ ಕ್ಯಾಮೆರಾ ಅಳವಡಿಕೆ, ಗ್ರಂಥಾಲಯ ನಿರ್ಮಾಣ, ಪಂಚಶೀಲನಗರದ ಖಾತಾ ನೀಡುವಿಕೆ ಮತ್ತಿತರ ಪ್ರಮುಖ ಕಾರ್ಯಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳಬೇಕಿದೆ. ತಾವು ಕೈಜೋಡಿಸಿದರೆ ಮಾತ್ರ ಇದೆಲ್ಲವೂ ಸಾಧ್ಯವಾಗುತ್ತದೆ’ ಎಂದು ಮನವಿ ಮಾಡಿದರು.
ಅಭಿವೃದ್ಧಿ ಎನ್ನುವುದು ಕೆಲವೆಡೆ ಮರೀಚಿಕೆಯಾಗಿದೆ. ಒಂದು ಕಣ್ಣಿಗೆ ಬೆಣ್ಣೆ ಮತ್ತೂಂದು ಕಣ್ಣಿಗೆ ಸುಣ್ಣ ಬಳಿಯಲಾಗಿದೆ. ಮುಂಬರುವ ದಿನಗಳಲ್ಲಿ ಇದಾವುದಕ್ಕೂ ಅವಕಾಶ ಇರುವುದಿಲ್ಲ. ಸಮಗ್ರ ಅಭಿವೃದ್ಧಿ ಮೂಲಮಂತ್ರ ಆಗಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ಇದರಿಂದ ಸಾಕಷ್ಟು ಅನುದಾನ ಕೂಡ ಕ್ಷೇತ್ರಕ್ಕೆ ದೊರೆಯುವ ವಿಶ್ವಾಸ ಇದೆ ಎಂದೂ ಪ್ರಿಯಕೃಷ್ಣ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಯುವತಿ ಜೊತೆ ಅಸಭ್ಯ ವರ್ತನೆ: ಮ್ಯಾನೇಜರ್, ಮತ್ತಿಬ್ಬರ ಮೇಲೆ ಕೇಸ್
Bengaluru: 3 ತಿಂಗಳ ಹಿಂದಷ್ಟೇ ವಿವಾಹ ಆಗಿದ್ದ ಚಿನ್ನಾಭರಣ ವ್ಯಾಪಾರಿ ಆತ್ಮಹತ್ಯೆ
Bengaluru: 40000 ರೂ. ಲಂಚ ಸ್ವೀಕರಿಸುವಾಗ ಎಎಸ್‌ಐ ಸೇರಿ ಇಬ್ಬರು ಲೋಕಾ ಬಲೆಗೆ
Bengaluru: ಸೆಂಟ್ರಿಂಗ್ ಮರಗಳು ಬಿದ್ದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಸಾವು
Bengaluru: ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಸಹೋದರಿಯರ ಬಲಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!
Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
Jammu and Kashmir: ಕಮರಿಗೆ ಬಿದ್ದ ವಾಹನ; ಕನಿಷ್ಠ ನಾಲ್ವರು ಸಾವು
Manipal ಪಾಯ್ಸನ್ ಇನ್‌ಫಾರ್ಮೇಶನ್ ಸೆಂಟರ್; ಸಮುದಾಯಕ್ಕೊಂದು ಉಪಕಾರಿ ಸೇವೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.