ಸಾಲದ ಹೊರೆ ಹೇರಿದ್ದೇ ಕಾಂಗ್ರೆಸ್ ಸಾಧನೆ
Team Udayavani, Mar 17, 2018, 6:30 AM IST
ಬೆಂಗಳೂರು: ಕಾಂಗ್ರೆಸ್ ಸರ್ಕಾರ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಸಂಪೂರ್ಣ ಹದಗೆಡಿಸಿದ್ದು, ಪ್ರತಿಯೊಬ್ಬ ಕನ್ನಡಿಗನ ಮೇಲೆ 46 ಸಾವಿರ ರೂ. ಸಾಲದ ಹೊರೆ ಹೊರಿಸುವ ಪರಿಸ್ಥಿತಿಗೆ ತಂದೊಡ್ಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ.
ಶುಕ್ರವಾರ ಬ್ರೇಕಿಂಗ್ ನ್ಯೂಸ್ ನೀಡುವುದಾಗಿ ಹೇಳಿ ಅದರಂತೆ ಸಾಮಾಜಿಕ ಜಾಲ ತಾಣದಲ್ಲಿ ವಿಡಿಯೋ ಬಿಡುಗಡೆ ಮಾಡಿರುವ ಅವರು, ಸಿಎಂ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಮೇಲೆ ನೀಡಿದ ಭರವಸೆಗಳೆಲ್ಲವೂ ಸುಳ್ಳು ಎಂಬುದು 5 ವರ್ಷದಲ್ಲಿ ಜಗಜ್ಜಾಹೀರಾಗಿದೆ. ಪ್ರತಿ ಕನ್ನಡಿಗನ ಮೇಲೆ 46 ಸಾವಿರರೂ. ಸಾಲದ ಹೊರೆ ಹೊರಿಸಿರುವುದಲ್ಲದೆ, ಕೈಗಾರಿಕೆ, ಸೇವಾ ಕ್ಷೇತ್ರ ಮತ್ತಿತರ ಕ್ಷೇತ್ರಗಳಲ್ಲಿ ಅಭಿವೃದಿಟಛಿ ಕುಂಠಿತವಾಗಿದೆ. ಅತ್ಯಂತ ಪ್ರಮುಖವಾದ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಅನುದಾನ ಕಡಿಮೆಗೊಳಿಸುವ ಮೂಲಕ ನಾಡಿನ ಜನರ ನಂಬಿಕೆ ಮತ್ತು ವಿಶ್ವಾಸಕ್ಕೆ ದ್ರೋಹ ಬಗೆದಿದ್ದಾರೆ ಎಂದು ಹೇಳಿದ್ದಾರೆ.
ಕೇಂದ್ರದಲ್ಲಿ ಪ್ರಧಾನಿ ಮೋದಿ ಸರ್ಕಾರದ ಜತೆಗೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಜನರ ಸಮಸ್ಯೆಗಳನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಬಿಎಸ್‌ವೈ ಪ್ರಸ್ತಾಪಿಸಿದ ಅಂಶಗಳು
– ಸಿದ್ಧರಾಮಯ್ಯ ಸರ್ಕಾರದಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ ಕುಸಿತ ಕಂಡಿದೆ.2013-14ರಲ್ಲಿ ಶೇ. 10.5ರಷ್ಟಿದ್ದ ಆರ್ಥಿಕ ಬೆಳವಣಿಗೆ 2017-18ನೇ ಸಾಲಿನಲ್ಲಿ ಶೇ. 6.9ಕ್ಕೆ ಇಳಿದಿದೆ. ಜಿಎಸ್‌ಡಿಪಿ ಶೇ. 68.44ರಿಂದ ಶೇ.55.37ಕ್ಕೆ ಕುಸಿತ ಕಂಡಿದೆ. ತಲಾ ಆದಾಯ ಬೆಳವಣಿಗೆ ಶೇ. 81.92ರಿಂದ ಶೇ. 70.61ಕ್ಕೆ ಬಂದಿದೆ.
– ಶಿಕ್ಷಣ ಕ್ಷೇತ್ರಕ್ಕೆ 2013-14ರಲ್ಲಿ ಬಜೆಟ್ ಗಾತ್ರದ ಶೇ.14.96ರಷ್ಟನ್ನು ಶಿಕ್ಷಣ ಕ್ಷೇತ್ರಕ್ಕೆ ಒದಗಿಸಿದರೆ, 2017-18ರಲ್ಲಿ ಶೇ. 10.14ಷ್ಟು ಮಾತ್ರ ಒದಗಿಸಲಾಗಿದೆ. ಪ್ರೌಢಶಾಲೆ, ಪಿಯು ಮತ್ತು ಪದವಿ ಕಾಲೇಜುಗಳಲ್ಲಿ ನೋಂದಣಿ ಪ್ರಮಾಣದಲ್ಲೂ ಇಳಿಮುಖವಾಗಿದೆ.
– ಆರೋಗ್ಯ ಕ್ಷೇತ್ರಕ್ಕೆ 2013-14ರಲ್ಲಿ ಬಜೆಟ್ ಮೊತ್ತದ ಶೇ.3.7ರಷ್ಟು ಅನುದಾನ ಒದಗಿಸಿದ್ದರೆ 2017-18ರಲ್ಲಿ ಅದು ಶೇ. 3.47ಕ್ಕೆ ಕುಸಿದಿದೆ. ಇದರ ಪರಿಣಾಮ ಪ್ರತಿ 1ಲಕ್ಷ ಮಂದಿಗೆ ಇರುವ ಆಸ್ಪತ್ರೆಗಳ ಪ್ರಮಾಣ 112 ರಿಂದ 80ಕ್ಕೆ ಇಳಿಮುಖವಾಗಿದೆ.
– ರಾಜ್ಯದಲ್ಲಿ ಸಾಲದ ಮೊತ್ತ ದ್ವಿಗುಣವಾಗಿದ್ದು 2013-14ರಲ್ಲಿ 1.39 ಲಕ್ಷ ಕೋಟಿ ರೂ. ಇದ್ದ ಸಾಲ 2018-19ನೇ ಸಾಲಿಗೆ 2.86 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಹೆಚ್ಚು ಬಡ್ಡಿ ದರದ ಸಾಲದ ಪ್ರಮಾಣ ಒಟ್ಟು ಸಾಲದ ಶೇ. 59 ರಷ್ಟಿದ್ದುದು ಈಗ ಶೇ. 71ಕ್ಕೆ ಏರಿಕೆಯಾಗಿದೆ.
– ಕೈಗಾರಿಕಾ ಕ್ಷೇತ್ರದ ಬೆಳವಣಿಗೆ 2012-13ನೇ ಸಾಲಿನಲ್ಲಿ ಶೇ.8.4 ರಷ್ಟಿದ್ದುದು 2016-17ನೇ ಸಾಲಿನಲ್ಲಿ ಶೇ. 4.8ಕ್ಕೆ ಮತ್ತು ಸೇವಾ ಕ್ಷೇತ್ರದ ಬೆಳವಣಿಗೆ ಶೇ. 19 ಇದ್ದುದು ಪ್ರಸ್ತುತ ಶೇ. 11.2ಕ್ಕೆ ಕುಸಿದಿದೆ.
– ಹೈ-ಕ ಅಭಿವೃದ್ಧಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು ಆ ಭಾಗದ ಐದು ಜಿಲ್ಲೆಗಳು ಮತ್ತು ಇತರ ಭಾಗದ ಜಿಲ್ಲೆಗಳ ಆದಾಯ ಅಂತರ ಹೆಚ್ಚಾಗಿದೆ. ಐದು ಜಿಲ್ಲೆಗಳ ತಲಾ ಆದಾಯ 4.09ರಷ್ಟು ಭಾರಿ ಪ್ರಮಾಣದಲ್ಲಿ ಇಳಿಮುಖವಾಗಿದೆ.
ಬ್ರೇಕಿಂಗ್‌ಗೆ ಕಾಂಗ್ರೆಸ್ ವ್ಯಂಗ್ಯ
ಬೆಂಗಳೂರು: ಬ್ರೇಕಿಂಗ್ ನ್ಯೂಸ್ ನೀಡುವುದಾಗಿ ಟ್ವೀಟ್ ಮಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಬಗ್ಗೆ ಕಾಂಗ್ರೆಸ್ ಟ್ವೀಟರ್ ಮೂಲಕ ವ್ಯಂಗ್ಯವಾಡಿದೆ.
ಶುಕ್ರವಾರ ಸಂಜೆ ಐದು ಗಂಟೆಯಾದರೂ ಯಾವುದೇ ಸುದ್ದಿ ಬ್ರೇಕ್ ಮಾಡದಿದ್ದಾಗ ಕಾಂಗ್ರೆಸ್ ಟ್ವೀಟರ್ ಮೂಲಕ ವಚನ ಭ್ರಷ್ಟ ಯಡಿಯೂರಪ್ಪ, ಅವರ ಮಾತನ್ನೇ ಸರಿಯಾದ ಸಮಯಕ್ಕೆ ನಡೆಸಲಾಗದವರು ಜನರ ಮಾತು ಹಾಗೂ ನಿರೀಕ್ಷೆಗಳನ್ನು ಹೇಗೆ ನಡೆಸಿಕೊಡುವರು ಎಂದು ಟ್ವೀಟ್ ಮೂಲಕ ಪ್ರಶ್ನಿಸಿದೆ. ಇಷ್ಟೇ ಅಲ್ಲದೇ ಯಡಿಯೂರಪ್ಪ ಅವರ ರಾಜಕೀಯ ನಡೆಯ ಬಗ್ಗೆ
ವಿಡಿಯೋ ಅಪ್‌ಲೋಡ್ ಮಾಡಿದ್ದು, ಯಡಿಯೂರಪ್ಪ ಹೇಳಿರುವ ಸುಳ್ಳುಗಳ ಪೇಪರ್ ಕಟ್ಟಿಂಗ್ ಹಾಕಲಾಗಿದೆ. ಕೆಜೆಪಿಯಲ್ಲಿದ್ದಾಗ ಯಾವುದೇ ಕಾರಣಕ್ಕೂ ಬಿಜೆಪಿ ಸೇರುವುದಿಲ್ಲ ಎಂದು ಹೇಳಿದ್ದು, ನಂತರ ಬಿಜೆಪಿ ಸೇರಿದ್ದು, ಮೊದಲು ಲಿಂಗಾಯತ ಪ್ರತ್ಯೇಕ ಧರ್ಮ ಬೇಕು ಎಂದು ಒತ್ತಾಯಿಸಿ, ಈಗ ಪ್ರತ್ಯೇಕ ಧರ್ಮ ಬೇಡಿಕೆಯಿಂದ ಹಿಂದೆ ಸರಿದಿದ್ದು, ಮಹದಾಯಿ ವಿಚಾರದಲ್ಲಿ ಯಡಿಯೂರಪ್ಪ
ನಡೆದುಕೊಂಡಿದ್ದು ಕೊನೆಗೆ ಜೈಲಿಗೆ ಹೋಗುತ್ತಾರೆ ಎನ್ನುವುದನ್ನು ವಿಡಿಯೋ ಮೂಲಕ ಯಡಿಯೂರಪ್ಪ ಬ್ರೇಕಿಂಗ್‌ಗೆ ಕೆಪಿಸಿಸಿ ವ್ಯಂಗ್ಯವಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ
ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
Renukaswamy Case:ಬೆನ್ನು ನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?
Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್
Belagavi: ಸಿಪಿಐ ಕಿರುಕುಳ ಆರೋಪ; ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ
Mandya: ಬಹುಮಾನ ಗೆದ್ದ ಹಳ್ಳಿಕಾರ್ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!
Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ
Udupi; ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಡಿ.1 ರಂದು ದೀಪೋತ್ಸವ
ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.