ಕಾನೂನು ಹೋರಾಟದ ಲೆಕ್ಕಾಚಾರ
Team Udayavani, Jan 16, 2019, 2:45 AM IST
ಬೆಂಗಳೂರು: ಬಿಜೆಪಿಯ ಆಪರೇಷನ್ ಕಮಲಕ್ಕೆ ಪ್ರತಿತಂತ್ರ ಹೂಡಲು ಕಾಂಗ್ರೆಸ್ ನಾಯ ಕರು ಮಂಗಳವಾರ ಇಡೀ ದಿನ ಕಾರ್ಯತಂತ್ರ ಹೆಣೆಯುವಲ್ಲಿ ನಿರತರಾಗಿದ್ದು, ಆಪರೇಷನ್ ಕಮಲ ತಂತ್ರಕ್ಕೆ ಪ್ರತಿಯಾಗಿ ಆಪರೇಷನ್ ಹಸ್ತ ಕಾರ್ಯತಂತ್ರ ರೂಪಿಸುವುದು. ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದರೆ ಸರ್ಕಾರದ ಅಸ್ಥಿತ್ವಕ್ಕೆ ಧಕ್ಕೆ ಬಾರದಂತೆ ಹೋರಾಟ ಮಾಡುವುದು ಹಾಗೂ ಪಕ್ಷದ ಅತೃಪ್ತ ಶಾಸಕರನ್ನು ಸಂಪರ್ಕದಲ್ಲಿಟ್ಟುಕೊಳ್ಳುವ ಕುರಿತು ಯೋಜನೆ ರೂಪಿಸಿದ್ದಾರೆಂದು ತಿಳಿದು ಬಂದಿದೆ.
ಇಬ್ಬರು ಪಕ್ಷೇತರ ಶಾಸಕರು ಬೆಂಬಲ ವಾಪಸ್ ಪಡೆದಿರುವುದರಿಂದ ಸದ್ಯಕ್ಕೆ ಸರ್ಕಾರಕ್ಕೆ ಯಾವುದೇ ರೀತಿಯ ತೊಂದರೆಯಿಲ್ಲ. ಒಂದು ವೇಳೆ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದರೆ, ಅವರ ರಾಜೀನಾಮೆ ಅಂಗೀಕಾರ ವಾಗದಂತೆ ನೋಡಿಕೊಳ್ಳಲು ಬೇಕಾದ ತಂತ್ರ ಗಾರಿಕೆ ಕುರಿತು ಚರ್ಚೆ ನಡೆಸಿದ್ದಾರೆಂದು ತಿಳಿದು ಬಂದಿದೆ.
ಬಿಜೆಪಿಯವರೊಂದಿಗೆ ಗುರುತಿಸಿಕೊಂಡಿ ರುವ ನಾಲ್ವರು ಕಾಂಗ್ರೆಸ್ ಶಾಸಕರು ರಾಜೀ ನಾಮೆ ನೀಡಿದರೆ, ಅವರ ವಿರುದ್ಧ ಸಭಾಧ್ಯಕ್ಷ ರಮೇಶ್ ಕುಮಾರ್‌ಗೆ ದೂರು ನೀಡುವ ಕುರಿತು ಚರ್ಚೆ ನಡೆಸಿದ್ದಾರೆ. ಬಿಜೆಪಿಯವರು ಆಪ ರೇಷನ್ ಕಮಲ ಮಾಡುತ್ತಿರುವ ಬಗ್ಗೆ ಇರುವ ಪೂರಕ ದಾಖಲೆಗಳನ್ನು ನೀಡಿ, ಶಾಸಕರ ರಾಜೀ ನಾಮೆಯನ್ನು ಅಂಗೀಕರಿಸದಂತೆ ಮನವಿ ಮಾಡುವ ಸಾಧ್ಯತೆ ಇದೆ.
ಶಾಸಕರ ರಾಜೀನಾಮೆ ಹಿಂದೆ ಹಣಕಾಸಿನ ವ್ಯವಹಾರ ನಡೆದಿದೆ ಎಂದು ದೂರು ನೀಡಿ ಈ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇದೇ ರೀತಿಯ ಪ್ರಕ್ರಿಯೆಯಲ್ಲಿ ಕಾಲ ಹರಣ ಮಾಡುವುದು ಕೂಡ ಸರ್ಕಾರ ಉಳಿಸಿಕೊಳ್ಳುವ ಕಾರ್ಯ ತಂತ್ರದ ಒಂದು ಭಾಗವಾಗಿದೆ ಎಂದು ಹೇಳಲಾಗುತ್ತಿದೆ.
ಸಭಾಧ್ಯಕ್ಷ ರಮೇಶ್ ಕುಮಾರ್ ರಾಜೀನಾಮೆ ಅಂಗೀಕರಿಸದಿದ್ದರೆ, ಶಾಸಕರು ರಾಜ್ಯಪಾಲರ ಬಳಿ ತೆರಳಿ ಹಾಲಿ ಸರ್ಕಾರ ಪಕ್ಷದ ಶಾಸಕರ ವಿಶ್ವಾಸ ಕಳೆದುಕೊಂಡಿದೆ ಎಂದು ಬಿಜೆಪಿ ಯವರು ರಾಜ್ಯಪಾಲರ ಬಳಿ ದೂರು ನೀಡಿದರೆ, ರಾಜ್ಯಪಾಲರು ರಾಜ್ಯ ಸರ್ಕಾರಕ್ಕೆ ಬಹುಮತ ಸಾಬೀತುಪಡಿಸುವಂತೆ ಸೂಚಿಸಿದರೂ, ಶಾಸಕರ ರಾಜೀನಾಮೆ ಅಂಗೀಕಾರವಾಗದೇ ಇರುವು ದರಿಂದ ಅವರಿಗೂ ವಿಪ್ ಜಾರಿ ಮಾಡಿ ಬಹುಮತ ಸಾಬೀತು ಪಡಿಸುವಲ್ಲಿ ಕಡ್ಡಾಯ ವಾಗಿ ಹಾಜರಿರುವಂತೆ ಸೂಚಿಸುವುದು. ಒಂದು ವೇಳೆ ಶಾಸಕರು ಸದನಕ್ಕೆ ಹಾಜರಾಗದೇ ಇದ್ದರೆ, ಅವರನ್ನು ಪಕ್ಷದ ಶಿಸ್ತು ಉಲ್ಲಂಘನೆ ಹಿನ್ನೆಲೆಯಲ್ಲಿ ಆರು ವರ್ಷಗಳ ಕಾಲ ಅಮಾನತು ಮಾಡುವಂತೆ ಸಭಾಧ್ಯಕ್ಷರಿಗೆ ಮನವಿ ಮಾಡುವ ಕುರಿ ತಂತೆಯೂ ನಾಯಕರು ಕಾರ್ಯತಂತ್ರ ಹೆಣೆದಿದ್ದಾರೆ ಎನ್ನಲಾಗಿದೆ.
ಇದೆಲ್ಲ ಬೆಳವಣಿಗೆ ನಡೆಯಲು ಕನಿಷ್ಠ ಹದಿ ನೈದರಿಂದ ಇಪ್ಪತ್ತು ದಿನ ಸಮಯ ತೆಗೆದು ಕೊಳ್ಳುವುದರಿಂದ ಅಷ್ಟರೊಳಗೆ ಹರಿಯಾಣದ ಗುರುಗಾಂವ್‌ನಲ್ಲಿರುವ ಬಿಜೆಪಿ ಶಾಸಕರು ರಾಜ್ಯಕ್ಕೆ ವಾಪಸ್ ಆಗಿರುತ್ತಾರೆ. ಆ ಸಂದರ್ಭದಲ್ಲಿ ಬಿಜೆಪಿ ಬಗ್ಗೆ ಬೇಸರಗೊಂಡು ಕಾಂಗ್ರೆಸ್ ಬಗ್ಗೆ ಒಲವು ಹೊಂದಿರುವ ಬಿಜೆಪಿ ಶಾಸಕರನ್ನು ಪಕ್ಷಕ್ಕೆ ಆಹ್ವಾನಿಸಿ ಆಪರೇಷನ್ ಹಸ್ತ ಮಾಡುವ ಬಗ್ಗೆಯೂ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ.
ಬಿಜೆಪಿ ಶಾಸಕರ ಸಂಪರ್ಕಕ್ಕೆ ಪ್ರಯತ್ನ: ಬಿಜೆಪಿಯಲ್ಲಿ ಬೇಸರಗೊಂಡಿರುವ ಶಾಸಕರನ್ನು ಕಾಂಗ್ರೆಸ್‌ಗೆ ಸೆಳೆಯುವ ಪ್ರಯತ್ನವನ್ನು ಕಾಂಗ್ರೆಸ್ ನಾಯಕರು ಆರಂಭಿಸಿದ್ದಾರೆಂದು ತಿಳಿದು ಬಂದಿದೆ. ಗೋವಿಂದರಾಜ್‌ನಗರ ಶಾಸಕ ವಿ. ಸೋಮಣ್ಣ, ಮೈಸೂರಿನ ಚಾಮರಾಜ ಕ್ಷೇತ್ರದ ಶಾಸಕ ನಾಗೇಂದ್ರ, ನಂಜನಗೂಡು ಶಾಸಕ ಹರ್ಷವರ್ಧನ, ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್, ಹಿರಿಯೂರು ಶಾಸಕಿ ಆರ್. ಪೂರ್ಣಿಮಾ ಅವರನ್ನು ಸಂಪರ್ಕಿಸಲು ರಾಜ್ಯ ಕಾಂಗ್ರೆಸ್ ನಾಯಕರು ಪ್ರಯತ್ನಿಸಿದ್ದಾರೆಂದು ತಿಳಿದು ಬಂದಿದೆ. ಆದರೆ, ಬಿಜೆಪಿಯ ಎಲ್ಲ ಶಾಸಕರು ಗುರುಗ್ರಾಮದಲ್ಲಿ ವಾಸ್ತವ್ಯ ಹೂಡಿರು ವುದರಿಂದ ಬೇರೆಯವರ ಸಂಪರ್ಕಕ್ಕೆ ಸಿಗದಂತೆ ಎಲ್ಲರ ಮೊಬೈಲ್ ಫೋನ್‌ಗಳನ್ನು ಸ್ವಿಚ್ಆಫ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಮಂಗಳವಾರ ರಾಜ್ಯ ಕಾಂಗ್ರೆಸ್ ನಾಯಕರಿಗೆ ಬಿಜೆಪಿ ಶಾಸಕರ ಸಂಪರ್ಕ ಸಾಧ್ಯವಾಗಿಲ್ಲ.
ಗೊಂದಲ: ಬುಧವಾರ ಸಂಜೆಯೊಳಗೆ ಶಾಸ ಕರನ್ನು ಬೆಂಗಳೂರಿಗೆ ಕರೆಯಿಸಿ ರೆಸಾರ್ಟ್‌ಗೆ ಕಳುಹಿಸಲು ತೀರ್ಮಾನಿಸಲಾಗಿದೆಯಾ ದರೂ ಎಲ್ಲ ಶಾಸಕರನ್ನು ಒಂದೆಡೆ ಸೇರಿಸಲು ಪ್ರಯತ್ನಿಸಿ ಕೆಲವು ಶಾಸಕರು ಆಗಮಿಸದೇ ಇದ್ದರೆ ನಾವೇ ಅಧಿಕೃತ ಸಂಖ್ಯೆ ಬಹಿರಂಗಪಡಿಸಿ ದಂತಾಗುತ್ತದೆ. ಅದರ ಬದಲು ಅವರ ಕ್ಷೇತ್ರದಲ್ಲಿಯೇ ಇದ್ದರೂ ಎಲ್ಲ ಶಾಸಕರ ಜತೆಗೆ ನಿರಂತರ ಸಂಪರ್ಕದಲ್ಲಿಟ್ಟು ಕೊಂಡು ಇರುವುದು ಉತ್ತಮ ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎನ್ನಲಾಗಿದೆ. ಹೀಗಾಗಿ, ಬುಧವಾರ ಬೆಳಗ್ಗೆ ಈ ಬಗ್ಗೆ ಸ್ಪಷ್ಟ ನಿರ್ಧಾರವಾಗಲಿದೆ. ಜನವರಿ 18 ರಂದು ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ್ ಅವರ ಅಧಿಕಾರ ಸ್ವೀಕಾರ ಕಾರ್ಯಕ್ರಮ ಇರುವುದರಿಂದ ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಜನವರಿ 16 ರಂದೇ ಎಲ್ಲ ಶಾಸಕರು ಬೆಂಗಳೂರಿಗೆ ಆಗಮಿಸುವಂತೆ ಸೂಚಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.