ನಮ್ಮನ್ನೇ ದೂರವಿಟ್ಟ ಕಾಂಗ್ರೆಸ್‌ನವರು, ರಾಜ್ಯದ ಒಕ್ಕಲಿಗರ ಉದ್ಧಾರ ಮಾಡುತ್ತಾರಾ?: ಸುಧಾಕರ್
Team Udayavani, Oct 29, 2020, 9:26 PM IST
ಬೆಂಗಳೂರು: ಸ್ವತಃ ಒಕ್ಕಲಿಗರಾದ ನಮ್ಮನ್ನೇ ಸರಿಯಾಗಿ ನೋಡಿಕೊಳ್ಳದ ಕಾಂಗ್ರೆಸ್ ಪಕ್ಷ, ರಾಜ್ಯದ ಒಕ್ಕಲಿಗರನ್ನು ಉದ್ದಾರ ಮಾಡಲು ಸಾಧ್ಯವೇ? ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿರುಗೇಟು ನೀಡಿದ್ದಾರೆ.
ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ಪರವಾಗಿ ಲಗ್ಗೆರೆ ಹಾಗೂ ಕೊಟ್ಟಿಗೆಪಾಳ್ಯ ವಾರ್ಡ್‌ಗಳಲ್ಲಿ ಬುಧವಾರ ಉಪಚುನಾವಣೆ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಕಳೆದ ಒಂದು ವಾರದಿಂದ ಕಾಂಗ್ರೆಸ್ ನ ಹಲವು ನಾಯಕರು ‘ದಮ್ ಇರಬೇಕು’, ‘ಕರುಣಾ ರಸ’ ಎಂಬಿತ್ಯಾದಿ ಹೇಳಿಕೆ ನೀಡುತ್ತಿರುವುದನ್ನು ಗಮನಿಸಿದ್ದೇನೆ. ಒಬ್ಬ ರಾಜಕಾರಣಿ, ಆಡಳಿತಗಾರನಿಗೆ ದಯೆ, ದೂರದೃಷ್ಟಿ, ದಕ್ಷತೆ ಇರಬೇಕೇ ಹೊರತು ದಮ್ ಅಲ್ಲ. ಈ ಮೂರು ಗುಣ ಮುನಿರತ್ನ ಅವರಲ್ಲಿದೆ. ಅವರು ಕರುಣಾಮಯಿ ರೀತಿಯಲ್ಲಿ ನಡೆದುಕೊಂಡಿದ್ದಾರೆ. ಕೋವಿಡ್ ನಂತಹ ಸಂಕಷ್ಟದಲ್ಲಿ, ಸರ್ಕಾರದಷ್ಟೇ ದಕ್ಷತೆಯಿಂದ ಸ್ವತಃ ಮನೆ ಮನೆಗೂ ತೆರಳಿ, ಮನೆ ಮಗನಂತೆ ಅಗತ್ಯ ವಸ್ತುಗಳ ಪೂರೈಕೆ ಮಾಡಿ, ಜನರ ಕಷ್ಟ ಆಲಿಸಿದ್ದಾರೆ. ಕೆಲವರು ಚುನಾವಣೆ ಸಂದರ್ಭದಲ್ಲಿ ಮಾತ್ರ ಬಂದು ಭಾಷಣ ಮಾಡುತ್ತಾರೆ. ಚುನಾವಣೆ ಬಳಿಕ ಇವರಾರೂ ನಿಮ್ಮ ಕಷ್ಟಕ್ಕಾಗುವುದಿಲ್ಲ. ಮುನಿರತ್ನ ಮಾತ್ರವೇ ನಿಮ್ಮ ಜೊತೆ ಇರುತ್ತಾರೆ ಎಂದರು.
ಮುನಿರತ್ನ ಎಷ್ಟು ಮತಗಳ ಅಂತರದಲ್ಲಿ ಗೆಲುವು ಸಾಧಿಸುತ್ತಾರೆ ಎಂಬುದಷ್ಟೇ ನಿಗೂಢವಾಗಿದೆ ಹೊರತು ಅವರ ಸೋಲು ಗೆಲುವಲ್ಲ. ಈ ಉಪ ಚುನಾವಣೆಯಲ್ಲಿ ಮೊದಲ ಸ್ಥಾನ ಈಗಾಗಲೇ ಘೋಷಣೆಯಾಗಿದೆ. ಕೇವಲ ಎರಡೂ ಮತ್ತು ಮೂರನೇ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿದೆ ಎಂದರು.
ನಾನು ಮತ್ತು ಗೋಪಾಲಯ್ಯ ಒಕ್ಕಗಲಿಗರೆ ಅಲ್ಲವೆ, ನಮ್ಮನ್ನು ಚೆನ್ನಾಗಿ ನೋಡಿಕೊಂಡಿದ್ದರೆ ನಾವೇಕೆ ಇಲ್ಲಿಗೆ ಬರುತ್ತಿದ್ದೆವು? ಪಕ್ಷದಲ್ಲಿದ್ದ ನಮ್ಮನ್ನೇ ಸರಿಯಾಗಿ ನೋಡಿಕೊಳ್ಳದ ಇವರು ಇಡೀ ಕ್ಷೇತ್ರದ, ರಾಜ್ಯದ ಒಕ್ಕಲಿಗರ ಉದ್ಧಾರ ಮಾಡಲು ಸಾಧ್ಯವಾ? ಇವರು ಸ್ವಾರ್ಥಕ್ಕಾಗಿ ಜಾತಿ ಮಾತನಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ವೈಯಕ್ತಿಕ ಆಸೆ- ಆಕಾಂಕ್ಷೆಗಾಗಿ ನಾವು ಕಾಂಗ್ರೆಸ್ ಪಕ್ಷ ಬಿಡಲಿಲ್ಲ. ಮುನಿರತ್ನ ಅವರಿಗೆ ಹಣದ ಅವಶ್ಯಕತೆ ಇದೆಯಾ? ಕಾರ್ಪೋರೇಟರ್, ಶಾಸಕರಾಗಿ ರಾಜರಾಜೇಶ್ವರಿ ಕ್ಷೇತ್ರದ ಅಭಿವೃದ್ಧಿ ಮಾಡಿದ್ದಾರೆ. ಕಾಂಗ್ರೆಸ್‌ನವರೇ ಎರಡು ಬಾರಿ ಮುನಿರತ್ನ ಅವರಿಗೆ ಟಿಕೆಟ್ ನೀಡಿದ್ದಾರೆ, ಆಗ ಮುನಿರತ್ನ ಅವರ ಜಾತಿ, ಕೆಟ್ಟತನ ಕಾಣಲಿಲ್ಲ, ಬಿಜೆಪಿ ಸೇರಿದ ಕೂಡಲೇ ದೈವರಾಗಿದ್ದ ಇವರು ದೆವ್ವವಾಗಿ ಕಾಣುತ್ತಿದ್ದಾರಾ? ಕಾಂಗ್ರೆಸ್ ಅವರ ಬೇಜವಾಬ್ದಾರಿ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಹೇಳಿದರು.
ರಾಜರಾಜೇಶ್ವರಿ ಕ್ಷೇತ್ರದಲ್ಲಿ ನಿಜವಾದ ಕುರುಕ್ಷೇತ್ರ ನಡೆಯುತ್ತಿದೆ. ಸತ್ಯ- ಅಸತ್ಯದ ನಡುವೆ ಸಂಗ್ರಾಮ ಏರ್ಪಟ್ಟಿದೆ. ಇಲ್ಲಿನ ಜನರು ಸತ್ಯವನ್ನು ಗೆಲ್ಲಿಸಬೇಕು. ಮುನಿರತ್ನ ಅವರು ಸ್ವಾಭಿಮಾನಕ್ಕೆ ಕಟ್ಟುಬಿದ್ದವರು. ಶಾಸಕರಿಗೆ ಸಿಗಬೇಕಾದ ಮಾನ್ಯತೆ ಸಿಗದೇ ಇದ್ದಾಗ, ಅಧಿಕಾರವನ್ನೂ ಲೆಕ್ಕಿಸದೇ ರಾಜೀನಾಮೆ ನೀಡಿದವರು. ಇವರ ಗೆಲುವು ಜನಗಳ ಗೆಲುವು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.