ಅನಾಥ ಮಗುವಿಗೆ ಹಾಲುಣಿಸಿ ತಾಯಿಯಾದ ಕಾನ್‌ಸ್ಟೆಬಲ್
Team Udayavani, Jan 18, 2019, 6:05 AM IST
ಬೆಂಗಳೂರು: ಎರಡು ದಿನ ಹಿಂದಷ್ಟೇ ಜನಿಸಿದ ಹೆಣ್ಣು ಮಗುವಿಗೆ ಹಾಲುಣಿಸಿದ ಪೇದೆಯೊಬ್ಬರು ಅನಾಥ ಮಗುವಿಗೆ ತಾಯಿಯಾದ ಪ್ರಸಂಗ ನಡೆದಿದೆ. ಯಲಹಂಕ ಪೊಲೀಸ್ ಠಾಣೆಯ ಸಂಗೀತಾ ಎಸ್. ಹಲಿಮನಿ ಅವರ ಈ ಕಾರ್ಯಕ್ಕೆ ಹಿರಿಯ ಅಧಿಕಾರಿಗಳಿಂದ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಜಿಕೆವಿಕೆ ಕ್ಯಾಂಪಸ್‌ನಲ್ಲಿ ಜ.16ರಂದು ಮುಂಜಾನೆ ಸುತ್ತಿದ ಬಟ್ಟೆಯಲ್ಲಿ ರಸ್ತೆ ಬದಿ ನವಜಾತ ಶಿಶುವನ್ನು ಬಿಸಾಡಿರುವ ಬಗ್ಗೆ ಮಾಹಿತಿ ತಿಳಿದು ನಾಗರಿಕ ಸೇವಾ ಪಡೆ ಸಿಬ್ಬಂದಿ ಹಾಗೂ ಪೊಲೀಸರು ಮಗುವನ್ನು ರಕ್ಷಿಸಿ, ಯಲಹಂಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ಮಗುವಿಗೆ ಹಾಲಿನ ಅವಶ್ಯಕತೆಯಿತ್ತು.
ಹೀಗಾಗಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಪೇದೆ ಸಂಗೀತಾ, ಮಗುವಿಗೆ ಹಾಲುಣಿದ್ದಾರೆ. ಬಳಿಕ ತಾಯಿಯಾಗಿ ಕೆಲಕಾಲ ಆರೈಕೆ ಮಾಡಿದ್ದಾರೆ. ಚಿಕಿತ್ಸೆ ಬಳಿಕ ಮಗುವನ್ನು ವಾಣಿವಿಲಾಸ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಸದ್ಯ ಮಗುವಿಗೆ ಸೆಪ್ಟಿಕೇಮಿಯಾ ಸೋಂಕಿನ ಚಿಕತ್ಸೆ ನೀಡಲಾಗುತ್ತಿದ್ದು, 24 ಗಂಟೆ ಪರಿವೀಕ್ಷಣೆಯಲ್ಲಿ ಇರಿಸಲಾಗಿದೆ ಎಂದು ವೈದ್ಯರು ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.