250 ಗ್ರಾಮಗಳಿಗೆ ನಿರಂತರ ವಿದ್ಯುತ್: ಶಾಸಕ
Team Udayavani, Dec 21, 2017, 2:57 PM IST
ಮಾಲೂರು: ತಾಲೂಕಿನ 250 ಗ್ರಾಮಗಳಿಗೆ ನಿರಂತರವಾಗಿ ಮೂರು ಪೇಸ್‌ಗಳಲ್ಲಿ ವಿದ್ಯುತ್ ಪೂರೈಸುವ 14.96 ಕೋಟಿ ರೂ.ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಶಾಸಕ ಕೆ.ಎಸ್. ಮಂಜುನಾಥಗೌಡ ತಿಳಿಸಿದರು. ಪಟ್ಟಣದ ಬೆಸ್ಕಾಂನ 255 ಕೆ.ವಿ. ಉಪ ಕೇಂದ್ರದಲ್ಲಿ ತಾಲೂಕಿನ ಚೊಕ್ಕಂಡಹಳ್ಳಿ ಪೀಡರ್ ಗೆ ಚಾಲನೆ ನೀಡಿ ಮಾತನಾಡಿದರು. ತಾಲೂಕಿನಲ್ಲಿ 250 ಹಳ್ಳಿಗಳಿಗೆ ನಿರಂತರವಾಗಿ ದಿನದ 24 ತಾಸುಗಳ ಕಾಲ 3 ಪೇಸ್ ವಿದ್ಯುತ್ ಪೂರೈಸುವ ನಿಟ್ಟಿನಲ್ಲಿ ಪ್ರಥಮ ಹಂತದ ಕಾಮಗಾರಿ ಪೂರ್ಣಗೊಂಡಿದ್ದು, ಮೂರನೇ ಹಂತದ ಕಾಮಗಾರಿ ಆರಂಭವಾಗಿರುವ ಚೊಕ್ಕಂಡಹಳ್ಳಿಯ ಪೀಡರ್ ಅನ್ನು 5.91 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಳಿಸಿದೆ ಎಂದರು.
ಚೊಕ್ಕಂಡಹಳ್ಳಿ ಪೀಡರ್ ವ್ಯಾಪ್ತಿಯ ಹಳ್ಳಿಗಳಾದ ಹಾರೋಹಳ್ಳಿ, ಅಬ್ಬೇನಹಳ್ಳಿ, ತಂಬಿಹಳ್ಳಿ, ಕಂಬೀಪುರ, ಸುಣ್ಣಕಲ್ಲು, ಬಾರ್ಲಿ, ಕಣವೇನಹಳ್ಳಿ, ಕೊರಚನೂರು, ಚೊಕ್ಕಂಡಹಳ್ಳಿ, ಮಡಿವಾಳ, ಹೆಡಗಿನಬೆಲೆ, ಬೆಳ್ಳಾವಿ, ದಿನ್ನೂರು, ಇರಬನಹಳ್ಳಿ, ಹನುಮನಾಯಕನಹಳ್ಳಿ, ಯಶವಂತಪುರ, ಕಾಡದೇನಹಳ್ಳಿ ಲಕ್ಕೇನಹಳ್ಳಿ, ನಲ್ಲಪ್ಪನಹಳ್ಳಿ, ಪಿಚ್ಚಗುಂಟ್ರಹಳ್ಳಿ ಸೇರಿದಂತೆ ಒಟ್ಟು 20 ಗ್ರಾಮಗಳಿಗೆ ದಿನದ 24 ತಾಸುಗಳ ಕಾಲ 3 ಪೇಸ್‌ನಲ್ಲಿ ಗೃಹ ಬಳಕೆ, ಅಂಗಡಿ, ಸಣ್ಣ ಕೈಗಾರಿಕೆ, ಫ್ಲೋರ್‌ಮಿಲ್, ಕುಡಿಯುವ ನೀರಿನ ಕೊಳವೆ ಬಾವಿಗಳಿಗೆ ನಿರಂತರವಾಗಿ ವಿದ್ಯುತ್ ಪೂರೈಸಲಾಗುವುದು ಎಂದರು. ಸಂದರ್ಭದಲ್ಲಿ ಜಿಪಂ ಸದಸ್ಯೆ ಗೀತಮ್ಮ, ಪುರಸಭಾಧ್ಯಕ್ಷ ರಾಮಮೂರ್ತಿ, ಸದಸ್ಯ ಮುರಳೀಧರ, ತಾಪಂ ಸದಸ್ಯ ಶ್ರೀನಾಥ್, ಸದಾನಂದ, ಎಪಿಎಂಸಿ ಸದಸ್ಯ ಚಂದ್ರಶೇಖರ್, ತೊರ್ನಹಳ್ಳಿ ಗ್ರಾಪಂ ಉಪಾಧ್ಯಕ್ಷ ಕೃಷ್ಣಪ್ಪ, ಜೆಡಿಎಸ್ ನಗರಾಧ್ಯಕ್ಷ ಟಿ.ರಾಮಚಂದ್ರ, ವಕೀಲ ಅಂಜಿನಪ್ಪ, ಬೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವಿ.ಚಲಪತಿ, ಕಾರ್ಯನಿರ್ವಹಕ ಎಂಜಿನಿಯರ್ ಕಾಂತರೆಡ್ಡಿ, ಉಪಕೇಂದ್ರದ ಇಇ ಪ್ರಕಾಶ್, ಕಾಮಗಾರಿ ಇಇ ವೆಂಕಟೇಶಪ್ಪ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mandya:ಹಲವು ರೋಗ ನಿವಾರಕ ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ
C.T. Ravi ಅವರನ್ನು ತತ್ ಕ್ಷಣ ಬಿಡುಗಡೆ ಮಾಡಿ: ಹೈಕೋರ್ಟ್ ಆದೇಶ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Mandya: ಹಲವು ಪವಾಡಗಳ ಕ್ಷೇತ್ರ ಶ್ರೀಕಾಲಭೈರವೇಶ್ವರ; ಚಿಕ್ಕರಸಿಕೆರೆ ನಡೆದಾಡುವ ದೈವ
NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.