ರಾಜಧಾನಿ ಹಸಿರಾಗಿಸಲು ಮುಂದಡಿ
Team Udayavani, Apr 4, 2017, 11:23 AM IST
ಬೆಂಗಳೂರು: ನಗರದಲ್ಲಿ ಹಸಿರು ಪರಿಸರ ಹೆಚ್ಚಿಸುವ ಮತ್ತು ಅಪಾಯ ಸ್ಥಿತಿಯಲ್ಲಿರುವ ಮರಗಳು ಧರೆಗುರುಳಿ ಸಂಭವಿಸುತ್ತಿದ್ದ ಅನಾಹುತಗಳ ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪರಿಸರ ತಜ್ಞ ಡಾ.ಎ.ಎನ್. ಯಲ್ಲಪ್ಪ ರೆಡ್ಡಿ ಅವರು ಸಲ್ಲಿಸಿದ್ದ ಶಿಫಾರಸುಗಳ ವರದಿಯನ್ನು ಕೊನೆಗೂ ಜಾರಿಗೊಳಿಸಲು ಪಾಲಿಕೆ ಮುಂದಾಗಿದೆ. ನಗರದ ವಾತಾವರಣ ಹಾಗೂ ಮಣ್ಣಿನ ಫಲವತ್ತತೆಗೆ ಅನುಗುಣವಾಗಿ ಎಂಥ ಮರ ಗಿಡಗಳನ್ನು ನೆಡಬೇಕು.
ಅತಿಹೆಚ್ಚು ವಾಯು ಮಾಲಿನ್ಯ ಹಾಗೂ ಶಬ್ದ ಮಾಲಿನ್ಯ ಉಂಟಾಗುವ ಪ್ರದೇಶಗಳಲ್ಲಿ ಎಂತಹ ಪ್ರಬೇಧದ ಗಿಡಗಳನ್ನು ಹಾಕಬೇಕು ಎಂಬುದರ ಕುರಿತು ಸಮಗ್ರ ಅಧ್ಯಯನ ನಡೆಸಿದ್ದ ಯಲ್ಲಪ್ಪರೆಡ್ಡಿ ಸಮಿತಿ ನಗರದಲ್ಲಿ ದೇಶಿಯ ಗಿಡಿಗಳು ಸೇರಿದಂತೆ 250 ಪ್ರಬೇಧದ ಗಿಡಿಗಳನ್ನು ಸೂಚಿಸಿ ವರದಿಯನ್ನು ಸಲ್ಲಿಕೆ ಮಾಡಿತ್ತು. ವರದಿ ಸಲ್ಲಿಕೆಯಾಗಿ 15 ವರ್ಷಗಳು ಕಳೆದರೂ ಈವರೆಗೆ ವರದಿಯಲ್ಲಿನ ಶಿಫಾರಸುಗಳನ್ನು ಅನುಷ್ಠಾನಗೊಳಿಸಲು ಪಾಲಿಕೆಯ ಅಧಿಕಾರಿಗಳು ಮುಂದಾಗಿರಲಿಲ್ಲ.
ಆದರೆ, ಬಿಬಿಎಂಪಿಯ 2017-18ನೇ ಸಾಲಿನ ಬಜೆಟ್‌ನಲ್ಲಿ ಯಲ್ಲಪ್ಪ ರೆಡ್ಡಿ ವರದಿಯ ಕುರಿತು ಉಲ್ಲೇಖೀಸಿರುವ ತೆರಿಗೆ ಮತ್ತು ಆಸ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ.ಗುಣಶೇಖರ್ ಪರಿಸರ ಸಂರಕ್ಷಣೆ ಹಾಗೂ ಸಸಿಗಳನ್ನು ಕಾಪಾಡಲು ಮತ್ತು ನಗರದಲ್ಲಿ ಮರಗಳಿಂದ ಅನಾಹುತ ಉಂಟಾಗದಂತೆ ಎಚ್ಚರ ವಹಿಸಲು ವರದಿಯಲ್ಲಿನ ಅಂಶಗಳನ್ನು ಅನುಷ್ಠಾನಧಿಗೊಳಿ ಸುವುದಾಗಿ ತಿಳಿಸಿದ್ದರು. ಅದರಂತೆ ಶಿಫಾರಸು ಜಾರಿ ಕಾರ್ಯಕ್ಕೆ ಚಾಲನೆ ದೊರೆತಂತಾಗಿದೆ.
ಯಲ್ಲಪ್ಪರೆಡ್ಡಿ ವರದಿಯಲ್ಲಿನ ಕೆಲ ಅಂಶಗಳು: ಗುಲ್ ಮೊಹರ್, ಸ್ವತೋಡಿಯಾ, ಆಕಾಶ ಮಲ್ಲಿಗೆಯಂಥ ಮರಗಳು ನೋಡಲು ಆಕರ್ಷಕವಾಗಿದ್ದರೂ ಸಾಧಾರಣ ಗಾಳಿ, ಮಳೆಗೆ ಉರುಳಿ ಬೀಳುತ್ತವೆ. ನೈಸರ್ಗಿಕವಾಗಿ ಈ ಮರಗಳ ಸ್ವರೂಪವೇ ಹೀಗಿದ್ದು, ಹಗುರ ಮರಗಳೆನಿಸಿವೆ. 30-40 ವರ್ಷಗಳ ಹಿಂದೆ ಬಡಾವಣೆಗಳ ನಿರ್ಮಾಣ ವೇಳೆ ಸೌಂದರ್ಯ ಹೆಚ್ಚಿಸುವ ಕಾರಣಕ್ಕೆ ರಸ್ತೆ ಬದಿ ಹೂ ಬಿಡುವ ಗಿಡಗಳನ್ನು ನೆಡಲಾಗಿತ್ತು. ಅವು ಈಗ ಮಳೆ ಮತ್ತು ಗಾಳಿ ಸಂದರ್ಭದಲ್ಲಿ ಧರೆಗುರುಳುತ್ತಿವೆ. ಹೀಗಾಗಿ, ಇವುಗಳನ್ನು ಮತ್ತೆ ನೆಡಿಸಬಾರದು ಎಂದು ತಿಳಿಸಲಾಗಿದೆ.
ಕೊಂಬೆಗಳಿಗೆ ಕತ್ತರಿ ಸರಿಯಲ್ಲ: ಕೊಂಬೆಗಳನ್ನು ಅವೈಜ್ಞಾನಿಕವಾಗಿ ಕಡಿಯುವುದೂ ಕೂಡ ಮರ ದುರ್ಬಲಗೊಳ್ಳಲು ಕಾರಣವಾಗುತ್ತದೆ. ಜಲಮಂಡಳಿ, ಬೆಸ್ಕಾಂ, ಕೆಪಿಟಿಸಿಎಲ್, ಒಎಫ್ಸಿ ಸಂಸ್ಥೆಗಳು ರಸ್ತೆ ಅಗೆಯುವುದರಿಂದ ಮರದ ಬೇರುಗಳು ಸಡಿಲಗೊಳ್ಳುತ್ತವೆ. ಇದರಿಂದ ಮರ ಕ್ರಮೇಣ ಒಂದು ಬದಿಗೆ ವಾಲಿಕೊಳ್ಳುತ್ತದೆ ಎಂದು ವರದಿಯಲ್ಲಿದೆ.
ಎಂ.ಆರ್.ಶ್ರೀನಿವಾಸಮೂರ್ತಿ ಪಾಲಿಕೆಯ ಆಯುಕ್ತರಾಗಿದ್ದ ವೇಳೆ ನಗರಕ್ಕೆ ಸೂಕ್ತ ಸಸಿಗಳ ಬಗ್ಗೆ ವರದಿ ನೀಡುವಂತೆ ಕೋರಿದ್ದರು. ಅದರಂತೆ ನಗರದ ವಾತಾವರಣಕ್ಕೆ ಸೂಕ್ತವಾದ ಸುಮಾರು 250ಕ್ಕೂ ಹೆಚ್ಚು ಪ್ರಬೇಧದ ಸ್ಥಳೀಯ ಸಸಿಗಳ ಕುರಿತು ವರದಿ ಸಲ್ಲಿಸಲಾಗಿತ್ತು. ಆದರೆ, ವರದಿ ನೀಡಿ ಹಲವು ವರ್ಷಗಳು ಕಳೆದರೂ ಪಾಲಿಕೆ ಜಾರಿಗೊಳಿಸಿಲ್ಲ.
-ಎ.ಎನ್.ಯಲ್ಲಪ್ಪರೆಡ್ಡಿ, ಪರಿಸರ ತಜ್ಞ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.