ಅಡುಗೆ ಎಣ್ಣೆ ಬೇಕಾಬಿಟ್ಟಿ ಬೆಲೆಗೆ ಮಾರಾಟ
Team Udayavani, Mar 10, 2022, 11:55 AM IST
ಬೆಂಗಳೂರು: ಉಕ್ರೇನ್ ಹಾಗೂ ರಷ್ಯಾಯುದ್ಧಸಂಘರ್ಷದ ಹಿನ್ನೆಲೆಯಲ್ಲಿ ಸೂರ್ಯಕಾಂತಿ ಅಡುಗೆ ಎಣ್ಣೆಯ ಕೃತಕ ಅಭಾವ ಸೃಷ್ಟಿಯಾಗಿದ್ದು, ಮುಂದಿನದಿನಗಳಲ್ಲಿ ಗ್ರಾಹಕರಿಗೆ ಮತ್ತಷ್ಟು ಹೊರೆಯಾಗುವಸಾಧ್ಯತೆಯಿದ್ದು ಮತ್ತೂಂದೆಡೆ ಬೆಲೆ ಹೆಚ್ಚಳದ ಬಿಸಿ ಹಿನ್ನೆಲೆಯಲ್ಲಿ ಎಣ್ಣೆ ಖರೀದಿ ಪ್ರಮಾಣದಲ್ಲಿಯೂ ಇಳಿಕೆಯಾಗಿದೆ.
ಕೆಲವು ಸೂಪರ್ ಮಾರ್ಕೆಟ್‌ಗಳಲ್ಲಿ , ಬಿಗ್ ಮಾರ್ಕೆಟ್ ಮತ್ತು ಸ್ಮಾರ್ಟ್ ಪಾಯಿಂಟ್ ಸೇರಿದಂತೆ ಮತ್ತಿತತರ ದೊಡ್ಡ ದೊಡ್ಡ ಮಾರುಕಟ್ಟೆಯಲ್ಲಿಸೂರ್ಯಕಾಂತಿ ಅಡುಗೆ ಎಣ್ಣೆ ತಮಗೆ ತೋಚಿದಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಅಲ್ಲದೆ ಕೆಲವಡೆ ಖರೀದಿಗೆ ಮಿತಿ ಅಳವಡಿಸಲಾಗಿದೆ.
ಉದಾಹರಣೆಗೆ 1ಲೀ. ಬೆಲೆಯ ಧಾರಾ ರಿಫಿನ್ಡ್ ಸನ್‌ಫ್ಲವರ್ ಆಯಿಲ್ ಉತ್ಪನ್ನವನ್ನು ಸೂಪರ್‌ಮಾರ್ಕೆಟ್‌ನಲ್ಲಿ 190ರೂ.ಗೆ ಮಾರಾಟ ಮಾಡಲಾಯಿತು. ಅದೇ ಉತ್ಪನ್ನ ಬಿಗ್ ಮಾರ್ಟ್ ಮತ್ತು ಸ್ಮಾರ್ಟ್ ಪಾಯಿಂಟ್‌ಗಳಲ್ಲಿ 230ರೂ.ವರೆಗೆ ದರ ಇತ್ತು. ಕೆಲ ಮಾರ್ಟ್‌ಗಳಲ್ಲಿ ಫಾರ್ಚೂನ್‌ಆಯಿಲ್ ಪ್ರತಿ ಲೀಟರ್‌ಗೆ ಕೆಲವು ಕೆಡೆಗಳಲ್ಲಿ 150 ರೂ. ಗೆ ಮಾರಾಟವಾದರೆ ಇನ್ನೂ ಕೆಲವು ಮಳಿಗೆಗಳಲ್ಲಿ195ರೂ. ವರೆಗೂ ಖರೀದಿಯಾಯಿತು. ಸಫಲ್, ಜೆಮಿನಿ, ರುಚಿಗೋಲ್ಡ್, ಫ್ರೀಡಂ ಆಯಿಲ್, ಸನ್‌ಡ್ರಾಫ್ ಸೇರಿದಂತೆ ಮತ್ತಿತತರ ಅಡುಗೆ ಎಣ್ಣೆ ಪೌಂಚ್‌ಮೇಲೆ ವಿವಿಧ ರೀತಿಯ ಬೆಲೆ ಹಾಕಿ ಮಾರಾಟಮಾಡಲಾಗುತ್ತಿದೆ ಎಂದು ಜೆಪಿ ನಗರದ ಶ್ರೀನಿವಾಸಯ್ಯತಿಳಿಸಿದರು ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಎಣ್ಣೆ ಗಿರಣಿಗಳು ಸಂಪೂರ್ಣ ಸ್ಥಗಿತ: ಯುದ್ಧದ ಹಿನ್ನೆಲೆಯಲ್ಲಿ ಉಕ್ರೇನ್‌ನಲ್ಲಿ ಎಣ್ಣೆ ಉತ್ಪಾದನೆ ಮಾಡುವ ಗಿರಣಿಗಳು ತಮ್ಮ ಕಾರ್ಯವನ್ನು ಸಂಪೂರ್ಣ ಸ್ಥಗಿತಗೊಳಿಸಿವೆ. ಜೀವ ಉಳಿದರೆ ಸಾಕು ಎಂಬ ಪರಿಸ್ಥಿತಿಅಲ್ಲಿದೆ ಜತೆಗೆ ಆ ಭಾಗದಿಂದ ಖಾದ್ಯ ತೈಲ ಉತ್ಪನ್ನಗಳನ್ನುಹೊತ್ತು ಸಮುದ್ರ ಮಾರ್ಗದಲ್ಲಿ ಬರಬೇಕಾಗಿದ್ದ ಹಡಗುಸಂಚಾರದಲ್ಲಿ ಕೂಡ ವಿಳಂಬ ಉಂಟಾಗಿದೆ ಎಂದುಹೋಲ್‌ಸೆಲ್ ಅಡುಗೆ ಎಣ್ಣೆ ವ್ಯಾಪಾರಿಗಳು ಮಾಹಿತಿ ನೀಡಿದರು.
ಈಗಾಗಲೇ ಅಡುಗೆ ಎಣ್ಣೆ ಬೆಲೆ ಹಿಂದೆಂದೂ ಕಾಣದಷ್ಟು ಗರಿಷ್ಠ ಮಟ್ಟತಲುಪಿದೆ. ಪ್ರತಿ ಕೆ.ಜಿ. ಗೆ 210 ರೂ.ಆಗಿರುವುದು ಅಚ್ಚರಿ ಮೂಡಿಸಿದೆ. ಜತೆಗೆದಾಸ್ತಾನು ಕೂಡ ಇಲ್ಲ. ಕೆಲವು ಅಡುಗೆ ಎಣ್ಣೆಮಾರಾಟಗಾರರು ಲೀ.ಗೆ 300 ರೂ.ವರೆಗೆತಲುಪಬಹುದು ಎಂಬ ಉದ್ದೇಶದಿಂದ ತಮ್ಮಗೋದಾಮುಗಳಲ್ಲಿ ಅಡುಗೆ ಎಣ್ಣೆಯನ್ನುಅಕ್ರಮ ದಾಸ್ತಾನು ಮಾಡಿದ್ದು ತಕ್ಷಣ ಸರ್ಕಾರಈ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ. – ಪಿ.ಸಿ.ರಾವ್, ಹೋಟೆಲ್ಗಳ ಸಂಘದ ಅಧ್ಯಕ್ಷ
ದಿನದಿಂದ ದಿನಕ್ಕೆ ಅಡುಗೆ ಎಣ್ಣೆ ಬೆಲೆ ಏರುತ್ತಿದೆ. ಜನಸಾಮಾನ್ಯರು ದುಡಿದಹಣವೆಲ್ಲಾ ದಿನಸಿ ಪದಾರ್ಥಗಳಿಗೆ ಕೊಟ್ಟರೆ,ಜೀವನ ನಡೆಸುವುದು ಕಷ್ಟ. ಅಡುಗೆ ಎಣ್ಣೆದಿನಂಪ್ರತಿ ಬಳಸುವ ಪದಾರ್ಥವಾಗಿದೆ.ಸುಮಾರು 30ರಿಂದ 40ರೂ. ದಿಢೀರ್‌ಏರಿಕೆಯಾಗಿರುವುದರಿಂದ ಎರಡು ಚಮಚ ಬಳಸುವಲ್ಲಿ ಒಂದು ಚಮಚ ಎಣ್ಣೆಯನ್ನುಬಳಸುತ್ತೇವೆ. – ಸಾನಿಯಾ, ಗ್ರಾಹಕರು
ದಿನಸಿ ಪದಾರ್ಥಗಳಲ್ಲಿ ಸಾಮಾನ್ಯವಾಗಿ ಬೆಲೆ ಏರಿಳಿತವಾಗುತ್ತಿರುತ್ತದೆ. ಆದರೆ, ಕಳೆದ ವಾರದಿಂದ ಸುಮಾರು ಶೇ.20 ಏರಿಕೆಯಾಗಿದೆ. ಸೂರ್ಯಕಾಂತಿ ಎಣ್ಣೆಯನ್ನುಮೊದಲು ಐದು ಲೀಟರ್‌ನ ಕ್ಯಾನ್‌ತೆಗೆದುಕೊಳ್ಳುತ್ತಿದ್ದವರು ಈಗ 1-2 ಲೀ. ಪ್ಯಾಕ್ ಖರೀದಿಗೆ ಇಳಿದಿದ್ದಾರೆ. –ಮಹಮ್ಮದ್ ಇಕ್ಬಾ, ದಿನಸಿ ಅಂಗಡಿ ಮಾಲೀಕ
–ದೇವೇಶ ಸೂರಗುಪ್ಪ/ಭಾರತಿ ಸಜ್ಜನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.