ಸಹಕಾರ ಸಂಯುಕ್ತ ತತ್ವ ರಾಜಕೀಯ ಕೈಪಿಡಿ ಆಗಲಿ
Team Udayavani, Jan 23, 2019, 6:27 AM IST
ಬೆಂಗಳೂರು: ರಾಜ್ಯಗಳ ಸಂಯುಕ್ತ ಒಕ್ಕೂಟವಾಗಿದ್ದರೂ ಒಳ ಆಡಳಿತದಲ್ಲಿ ಸ್ವತಂತ್ರವಾಗಿರುವ “ಸಹಕಾರ ಸಂಯುಕ್ತತತ್ವ’ ದೇಶದ ರಾಜಕಾರಣ ಮತ್ತು ಆಡಳಿತಕ್ಕೆ ರಾಜಕೀಯ ಕೈಪಿಡಿಯಾದರೆ ಅದು ಭವಿಷ್ಯದಲ್ಲಿ ಭಾರತದ ಏಕತೆ, ಸಮಗ್ರತೆ ಮತ್ತು ಸಾಮಾಜಿಕ ಹಾಗು ಆರ್ಥಿಕ ಸುಸ್ಥಿರ ಬೆಳವಣಿಗೆಗೆ ಕಿಲಿಕೈ ಆಗಬಹುದು ಎಂದು ಮಾಜಿ ಉಪ ರಾಷ್ಟ್ರಪತಿ ಹಮಿದ್ ಅನ್ಸಾರಿ ಅಭಿಪ್ರಾಯಪಟ್ಟಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಯ ಮೇಲುಸ್ತುವಾರಿಯಲ್ಲಿ ಸಮೃದ್ಧ್ ಭಾರತ್ ಹಾಗೂ ರಾಷ್ಟ್ರೀಯ ಖಾಸಗಿ ಸುದ್ದಿ ವಾಹಿನಿಯೊಂದರ ಸಹಯೋಗದಲ್ಲಿ ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಲಾಗಿದ್ದ ಎರಡು ದಿನಗಳ “ಸಮಾನತೆ ಅನ್ವೇಷಣೆ: ಸಂವಿಧಾನದ ಸಂಭಾಷಣೆಗಳು’ ರಾಷ್ಟ್ರ ಮಟ್ಟದ ಕಾರ್ಯಕ್ರಮದಲ್ಲಿ ಮೊದಲ ದಿನ ಅವರು ಉದ್ಘಾಟನಾ ಭಾಷಣ ಮಾಡಿದರು.
“ನಮ್ಮ ದೇಶ ಇಂದು ಅಭಿವೃದ್ಧಿಯ ಈ ಹಂತ ತಲುಪಿದ್ದರೆ ಅದಕ್ಕೆ ಹಿಂದೆ ಆಡಳಿತ ನಡೆಸಿದ ರಾಜಕೀಯ ಮುತ್ಸದ್ದಿಗಳು ಕಾರಣ. ಆಗ ರಾಷ್ಟ್ರೀಯ ಗುರಿಗಳು ಮತ್ತು ಉದ್ದೇಶಗಳಿಗೆ ರಾಜಕೀಯ ಪಕ್ಷಗಳು ಹಾಗೂ ಒಕ್ಕೂಟ ಅಂಗಗಳು ಗೌರವಿಸುತ್ತಿದ್ದವು ಎಂದರು.
ದೇಶದ ಒಕ್ಕೂಟ ವ್ಯವಸ್ಥೆ ಯಶಸ್ವಿ ಮತ್ತು ಪರಿಣಾಮಕಾರಿಯಾಗಿ ಸಾಗಬೇಕಾದರೆ ವಿವಿಧ ರಾಜ್ಯಗಳ ನಡುವಿನ ನದಿ ನೀರು ಹಂಚಿಕೆ ವಿವಾದಗಳನ್ನು ಶೀಘ್ರ, ಶಾಶ್ವತವಾಗಿ ಬಗೆಹರಿಸಿಕೊಳ್ಳಬೇಕು. ಆದರೆ, ಯಾವುದೇ ನ್ಯಾಯಾಧಿಕರಣ, ಉನ್ನತ ನ್ಯಾಯಾಲಯಗಳ ತೀರ್ಪು ಹಾಗೂ ರಾಜಕೀಯ ಸಂಧಾನ ಪ್ರಕ್ರಿಯೆಗಳು ನಿರೀಕ್ಷಿತ ಫಲ ನೀಡುತ್ತಿಲ್ಲ ಎಂದು ಅನ್ಸಾರಿ ವಿಷಾದ ವ್ಯಕ್ತಪಡಿಸಿದರು.
“ಅಂತರ್‌ರಾಜ್ಯ ಪರಿಷತ್ತು’: ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ನಡುವಿನ ಆಡಳಿತಾತ್ಮಕ ಸಂಬಂಧಗಳು, ವಿವಾದ ಹಾಗೂ ವ್ಯಾಜ್ಯಗಳ ಇತ್ಯರ್ಥಕ್ಕೆ ಸಂವಿಧಾನದ ಪರಿಚ್ಛೇದ 263ರಡಿ ಸರ್ಕಾರಿಯಾ ಆಯೋಗ “ಅಂತರ್‌ರಾಜ್ಯ ಪರಿಷತ್ತು’ ಸ್ಥಾಪನೆಗೆ ಶಿಫಾರಸು ಮಾಡಿತ್ತು.
ಅದರಂತೆ ಅದು 1990ಕ್ಕೆ ಅಸ್ತಿತ್ವಕ್ಕೆ ಬಂದಿತು. ಕಳೆದ 29 ವರ್ಷಗಳಲ್ಲಿ 12 ಬಾರಿ ಮಾತ್ರ ಅದರ ಸಭೆ ನಡೆದಿದೆ. ಕೊನೆಯ ಸಭೆ 2016ರಲ್ಲಿ ನಡೆದಿದೆ. ನಿಯಮಿತವಾಗಿ ಸಭೆ ನಡೆಸಬೇಕು ಮತ್ತು ಸಭೆಯ ಮಹತ್ವದ ನಿರ್ಣಯಗಳನ್ನು ಸಾರ್ವಜನಿಕರಿಂದ ಗೌಪ್ಯವಾಗಿ ಇಡಬಾರದು ಎಂಬ ಆಯೋಗದ ಶಿಫಾರಸು ಪಾಲಿಸಬೇಕು ಎಂದು ಅವರು ಪ್ರತಿಪಾದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.