ಕಲ್ಯಾಣಕ್ಕೂ ಕೊರೊನಾ ಸೋಂಕು!


Team Udayavani, Mar 12, 2020, 3:10 AM IST

kalyanakku

ಬೆಂಗಳೂರು: ಸಾಮಾನ್ಯವಾಗಿ ಮದುವೆಗೆ ತುದಿಗಾಲಲ್ಲಿ ನಿಂತಿರುತ್ತಾರೆ. ಆದರೆ, ನಗರದಲ್ಲಿ ವಿವಾಹವಾಗಲು ವಧು-ವರರು ಸದ್ಯಕ್ಕೆ ಬೇಡ, ಮುಂದೆ ನೋಡೋಣ ಎಂದು ರಾಗ ತೆಗೆಯುವ ಮೂಲಕ ಹಿಂದೇಟು ಹಾಕುತ್ತಿದ್ದಾರೆ. ಕೆಲವರು ಧೈರ್ಯ ಮಾಡಿ ಮುಂದೆ ಬಂದರೂ, ಅದಕ್ಕೆ ಸಾಕ್ಷಿಯಾಗಲು ಜನ ಬರುತ್ತಿಲ್ಲ! ಇದು ಕೊರೊನಾ ವೈರಸ್‌ ಎಫೆಕ್ಟ್.

ಹೌದು, ಕೊರೊನಾ ವೈರಸ್‌ ಬಿಸಿ ಈಗ ನಗರದ ಕೆಲವು ಕಲ್ಯಾಣ ಮಂಟಪಗಳು, ಪಾರ್ಟಿ ಹಾಲ್‌ಗ‌ಳಿಗೂ ತಟ್ಟಿದೆ. ಹಾಗಾಗಿ, ಮದುವೆ ಸೀಜನ್‌ನಲ್ಲೂ ಅವು ಗ್ರಾಹಕರ ಕೊರತೆಯನ್ನು ಎದುರಿಸುತ್ತಿವೆ. ಇದರ ಪರಿಣಾಮ ವ್ಯಾಪಾರದ ಮೇಲಾಗುತ್ತಿದ್ದು, ಶೇ.20ರಿಂದ 25ರಷ್ಟು ಕುಸಿತ ಕಂಡುಬಂದಿದೆ. ಏಪ್ರಿಲ್‌-ಮೇನಲ್ಲಿ ಕೂಡ ಇದೇ ಪರಿಸ್ಥಿತಿ ಮುಂದುವರಿಯುವ ಆತಂಕ ಈ ಉದ್ಯಮವನ್ನು ಕಾಡುತ್ತಿದೆ.

ವ್ಯಾಪಾರದಲ್ಲಿ ಖೋತಾ ಆಗಲು ಮುಹೂರ್ತದ ದಿನಗಳು ಕಡಿಮೆ ಇರುವುದು ಒಂದು ಕಾರಣವಾಗಿದ್ದರೆ, ಅದಕ್ಕಿಂತ ಪ್ರಮುಖ ಕಾರಣ ಕೊರೊನಾ ವೈರಸ್‌ ಆಗಿದೆ. ಮಾರ್ಚ್‌-ಮೇವರೆಗೆ ಮದುವೆ ಸೀಜನ್‌. ನಗರದಲ್ಲಿ ನೋಂದಾಯಿತ ಸುಮಾರು 350ಕ್ಕೂ ಅಧಿಕ ಕಲ್ಯಾಣ ಮಂಟಪಗಳಿದ್ದು, ಅಲ್ಲೆಲ್ಲಾ ಸಾಮಾನ್ಯವಾಗಿ ಈ ಅವಧಿಯಲ್ಲಿ ಎಲ್ಲವೂ ಹೌಸ್‌ಫ‌ುಲ್‌ ಆಗಿರುತ್ತವೆ.

ಆದರೆ, ಈ ಬಾರಿ ವಿಶೇಷವಾಗಿ ಏಪ್ರಿಲ್‌ನಲ್ಲಿ ತುಂಬಾ ಕಡಿಮೆ ಬುಕಿಂಗ್‌ ಆಗಿವೆ. ಈಗಾಗಲೇ ಬುಕಿಂಗ್‌ ಮಾಡಿದ್ದರೂ, ಕೆಲವರು ಕಾರ್ಯಕ್ರಮವನ್ನು ಮುಂದೂಡಬಹುದಾ ಅಥವಾ ರದ್ದುಮಾಡಬಹುದಾ ಎಂದು ಕೇಳುತ್ತಿದ್ದಾರೆ. ಇದಕ್ಕೆ ವೈರಸ್‌ ಭೀತಿ ಮಾತ್ರವಲ್ಲ; ವಧು ಅಥವಾ ವರ ವಿದೇಶಗಳಲ್ಲಿ ನೆಲೆಸಿರುತ್ತಾರೆ. ಅವರು ಈಗಿರುವ ಸ್ಥಿತಿಯಲ್ಲಿ ಬರುವುದು ಕಷ್ಟಸಾಧ್ಯ. ಈ ಹಿನ್ನೆಲೆಯಲ್ಲಿ ತುಸು ಹಿನ್ನಡೆ ಆಗಿದೆ ಎಂದು ಕಲ್ಯಾಣ ಮಂಟಪಗಳ ವ್ಯವಸ್ಥಾಪಕರುಗಳು ವಿಶ್ಲೇಷಿಸುತ್ತಾರೆ.

ರದ್ದತಿಗೆ ಮನವಿ ಮಾಡ್ತಿದ್ದಾರೆ: ಮಾರ್ಚ್‌ ಕೊನೆಯ ವಾರದಲ್ಲಿ ಮದುವೆ ಬುಕಿಂಗ್‌ ಆಗಿತ್ತು. ಆದರೆ, ಈಗ ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ರದ್ದುಮಾಡಬಹುದಾ ಎಂದು ಕೇಳುತ್ತಿದ್ದಾರೆ. ಟೇಬಲ್‌ ಬುಕಿಂಗ್‌ ವ್ಯವಸ್ಥೆ ಕೂಡ ನಮ್ಮಲ್ಲಿದೆ. ಅಲ್ಲಿ ವೀಕೆಂಡ್‌ನ‌ಲ್ಲಿ 20-25 ಬುಕಿಂಗ್‌ ಆಗುತ್ತವೆ. ಆದರೆ, ಕಳೆದೆರಡು ವಾರಾಂತ್ಯಗ ಳಲ್ಲಿ ಕೇವಲ 10ರಿಂದ 15 ಬುಕಿಂಗ್‌ ಆಗಿವೆ. ಸ್ಯಾನಿ ಟೈಸರ್‌ ಒದಗಿಸುವುದು, ರಾಸಾಯನಿಕ ದ್ರವ್ಯದಿಂದ ಸ್ವತ್ಛವಾಗಿಡುವುದು ಮತ್ತಿತರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರೂ, ಜನರಲ್ಲಿ ಆತಂಕ ಮನೆ ಮಾಡಿದೆ. ಆದ್ದರಿಂದ ಕಳೆದ ವರ್ಷಕ್ಕೆ ಹೋಲಿಸಿದರೆ, ವ್ಯಾಪಾರ ತುಂಬಾ ಮಂಕಾಗಿದೆ ಎಂದು ಕೊತ್ತನೂರಿನ ಬಾಲನ್‌ ಫಾರ್ಮ್ ಕನ್ವೆನನ್‌ ಸೆಂಟರ್‌ನ ಪ್ರಸಾದ್‌ ತಿಳಿಸಿದರು.

“ಈ ವೈರಸ್‌ನ ಬಿಸಿ ಏಪ್ರಿಲ್‌ನಲ್ಲಿ ನಮಗೆ ಜೋರಾಗಿ ತಟ್ಟಿದೆ. ನಾವು ಏಪ್ರಿಲ್‌ ಬುಕಿಂಗ್‌ ಮಾಡಿಕೊಳ್ಳಲು ಶುರು ಮಾಡಿದ್ದು ಎರಡು ತಿಂಗಳ ಈಚೆಗೆ. ಏಪ್ರಿಲ್‌ನಲ್ಲಿ ಸಾಮಾನ್ಯವಾಗಿ ತುಂಬಾ ಬ್ಯುಸಿ ಆಗಿರುತ್ತದೆ. ಆದರೆ, ಆ ತಿಂಗಳಲ್ಲಿ ಕೇವಲ 9 ಕಾರ್ಯಕ್ರಮಗಳಿಗೆ ಮಂಟಪ ಕಾಯ್ದಿರಿಸಲ್ಪಟ್ಟಿದೆ. ಕಳೆದ ವರ್ಷ ಅದೇ ಅವಧಿಯಲ್ಲಿ 20ಕ್ಕೂ ಅಧಿಕ ಬುಕಿಂಗ್‌ ಆಗಿದ್ದವು. ಕೊರೊನಾ ವೈರಸ್‌ನಿಂದ ಈ ಕುಸಿತ ಆಗಿದೆ’ ಎಂದು ಬಸವನಗುಡಿಯ ಗಂಜಂ ಮಂಟಪದ ವ್ಯವಸ್ಥಾಪಕ ಎಸ್‌. ಸುನೀಲ್‌ ಮಾಹಿತಿ ನೀಡಿದರು.

ನಿರೀಕ್ಷೆಯಂತೆ ಜನ ಸೇರುವುದೇ ಅನುಮಾನ: ನಮ್ಮಲ್ಲಿ ಮಾರ್ಚ್‌ನಲ್ಲಿ 25 ದಿನ ಮದುವೆ ಮತ್ತಿತರ ಸಮಾರಂಭಗಳಿಗೆ ಕಲ್ಯಾಣ ಮಂಟಪ ಕಾಯ್ದಿರಿಸಲ್ಪ ಟ್ಟಿದೆ. ಈ ಪೈಕಿ ಮಾರ್ಚ್‌ 21ರ ಮದುವೆ ಸಮಾರಂಭ ನಡೆಯುವುದು ತುಸು ಅನುಮಾನ. ಏಕೆಂದರೆ, ವರ ಅಮೆರಿಕದಲ್ಲಿರುವುದರಿಂದ ಕೊರೊನಾ ವೈರಸ್‌ನಿಂದಾಗಿ ಇಲ್ಲಿಗೆ ಬರುವುದು ಅಸಾಧ್ಯ ಎನ್ನಲಾಗುತ್ತಿದೆ ಎಂದೂ ಅವರು ಸ್ಪಷ್ಟಪಡಿಸಿದರು.

ನಗರದಲ್ಲಿ ಕೆಲವು ಕೊರೊನಾ ವೈರಸ್‌ ಪ್ರಕರಣಗಳು ದೃಢಪಟ್ಟಿದ್ದರಿಂದ ನಿರೀಕ್ಷಿತ ಮಟ್ಟದಲ್ಲಿ ಮದುವೆ, ಸೀಮಂತ, ಹುಟ್ಟುಹಬ್ಬ ಮತ್ತಿತರ ಸಮಾರಂಭಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಜನ ಬರುತ್ತಿಲ್ಲ. ಈ ಮೊದಲು 500 ಜನರಿಗೆ ಊಟದ ವ್ಯವಸ್ಥೆಗೆ ಗ್ರಾಹಕರು ಬುಕಿಂಗ್‌ ಮಾಡಿರುತ್ತಾರೆ. ಈಗ ಆ ಸಂಖ್ಯೆಯನ್ನು 200-300ಕ್ಕೆ ಸೀಮಿತಗೊಳಿಸುವಂತೆ ಕೋರುತ್ತಿದ್ದಾರೆ. ಅನಿವಾರ್ಯ ಪರಿಸ್ಥಿತಿ ಇರುವುದರಿಂದ ನಾವೂ ಗ್ರಾಹಕರಿಗೆ ಸ್ಪಂದಿಸಬೇಕಾಗಿದೆ. ಇದಲ್ಲದೆ, ರೆಸ್ಟೋರೆಂಟ್‌ಗೆ ಬರುವ ಎಂದಿನ ಗ್ರಾಹಕರ ಸಂಖ್ಯೆ ಕಡಿಮೆ ಆಗಿದೆ. ಇದೆಲ್ಲದರಿಂದ ವ್ಯಾಪಾರ ಮಂಕಾಗಿದೆ. ಇನ್ನೂ ಯಾವುದೇ ಕರೆಗಳು ಬಂದಿಲ್ಲ ಎಂದು ಪೈ ವಿಸ್ತಾ ಕನ್ವೆನನ್‌ ಹಾಲ್‌ನ ಸೀತಾರಾಂ ಶೆಟ್ಟಿ ವಿವರಿಸಿದರು.

ಗುಣಪಡಿಸಲಿದೆ ದೇಶೀ ಔಷಧ – ಸ್ವಾಮೀಜಿ: ಕೊರೊನಾ ವೈರಸ್‌ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆ ಆಗಿದ್ದು, ಗುಣಮಟ್ಟದ ದೇಶೀ ಔಷಧಿಗಳಿಂದಲೇ ಕಾಯಿಲೆ ಗುಣಪಡಿಸಬಹುದಾಗಿದೆ ಎಂದು ಸಿದ್ದಲಿಂಗೇಶ್ವರ ಯೋಗವನ ಬೆಟ್ಟಗಳು ಸೇವಾ ಸಂಸ್ಥೆಯ ಸಂಸ್ಥಾಪಕ ಕಪರ್ದಿ ಸಿದ್ದಲಿಂಗೇಶ್ವರ ಸ್ವಾಮೀಜಿ ತಿಳಿಸಿದರು. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗೆ ದೇಶಿಯ ಗುಣಮಟ್ಟದ ಚಿಕಿತ್ಸೆಗಳಿವೆ. ಕೊರೊನಾ ಕೂಡ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಯೇ ಆಗಿದ್ದು ಹೆಚ್ಚು ಆತಂಕಪಡಬೇಕಿಲ್ಲ ಎಂದರು. ಬಿಲ್ವಪತ್ರೆ, ತುಳಸಿ, ಬೇವಿನ ಎಲೆಗಳನ್ನು ಸಮಾನ ಪ್ರಮಾಣದಲ್ಲಿ ನೆರಳಲ್ಲಿ ಒಣಗಿಸಿ ಪುಡಿ ಮಾಡಿ 2 ಚಿಟಿಕೆ ಪ್ರಮಾಣದಲ್ಲಿ ಬೆಳಗ್ಗೆ ಸಂಜೆ ನಾಲಿಗೆ ಕೆಳಗೆ ಇಟ್ಟುಕೊಳ್ಳಬೇಕು. ಇದರಿಂದ ರೋಗಿಗಳು ಚೇತರಿಸಿಕೊಳ್ಳುವ ಜತೆಗೆ ಶೀಘ್ರವಾಗಿ ಗುಣಮುಖರಾಗುತ್ತಾರೆ ಎಂದು ತಿಳಿಸಿದರು.

ವದಂತಿ ತಡೆಗೆ ಆ್ಯಪ್‌: ಕೊರೊನಾ ಛಾಯೆ ಆವರಿಸಿರುವ ಹಿನ್ನೆಲೆಯಲ್ಲಿ ರೋಗಗಳ ಬಗ್ಗೆ ಸಾರ್ವಜನಿಕರ ಆತಂಕ ದೂರ ಮಾಡುವ ದೃಷ್ಟಿಯಿಂದ ಪಾಲಿಕೆ ಆರೋಗ್ಯಕ್ಕೆ ಸಂಬಂಧಿಸಿದ ಪಬ್ಲಿಕ್‌ ಹೆಲ್ತ್‌ ಎಪಿಡಮಲಾಜಿಕಲ್‌ ಇನ್ಫರ್ಮೇಷನ್‌ ಸೆಲ್‌ (ಪಿಎಚ್‌ಇಐಸಿ) ಮೊಬೈಲ್‌ ಆಪ್‌ ಬಿಡುಗಡೆ ಮಾಡಲು ಪಾಲಿಕೆ ಮುಂದಾಗಿದೆ. ಕೊರೊನಾ, ಕಾಲರಾ ಸೇರಿದಂತೆ ಹಲವು ರೋಗ ಗಳ ಬಗ್ಗೆ ವೈದ್ಯರು ಎಷ್ಟೇ ಜಾಗೃತಿ ಮೂಡಿಸಿದರೂ ವದಂತಿಗಳನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ಯಾವ ರೋಗಕ್ಕೆ ಏನು ಮುಂಜಾಗ್ರತಾ ಕ್ರಮಗಳ ಬಗ್ಗೆಯೂ ಸಾರ್ವಜನಿಕರಲ್ಲಿ ಗೊಂದಲ ಗಳಿವೆ. ಹೀಗಾಗಿ, ಜಾಗೃತಿ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿ ನೀಡಲು ಪಾಲಿಕೆ ಪಿಎಚ್‌ಇಐಸಿ ಆ್ಯಪ್‌ ಬಿಡುಗಡೆ ಮಾಡಲು ನಿರ್ಧರಿಸಿದೆ.

ಈ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಪಾಲಿಕೆ ಮುಖ್ಯ ಆರೋಗ್ಯಾಧಿಕಾರಿ ವಿಜಯೇಂದ್ರ, ಪಾಲಿಕೆಯಿಂದ ಪಿಎಚ್‌ಇಐಸಿ ಆ್ಯಪ್‌ ಬಿಡುಗಡೆ ಮಾಡುವ ನಿಟ್ಟಿನಲ್ಲಿ ಸಿದ್ಧತೆ ನಡೆಸಲಾಗುತ್ತಿದೆ. ನಗರದಲ್ಲಿ ದಾಖಲಾಗುತ್ತಿರುವ ಸಾಂಕ್ರಾಮಿಕ ರೋಗಗಳ ಮಾಹಿತಿಯನ್ನು ಪಾಲಿಕೆ ಆಸ್ಪತ್ರೆಗಳು ಹಾಗೂ ಖಾಸಗಿ ಆಸ್ಪತ್ರೆಗಳಿಂದ ವರದಿ ತೆಗೆದು ಕೊಂಡು ಒಂದೆಡೆ ಕಲೆ ಹಾಕಲಾಗುತ್ತಿದೆ. ವಾರ್ಡ್‌ ವಾರು ವಿಂಗಡಿಸಿ ಆಯಾ ವಾರ್ಡ್‌ಗಳ ಆರೋಗ್ಯಾ ಧಿ ಕಾರಿಗಳಿಗೆ ರವಾನಿಸಲಾಗುತ್ತಿದ್ದು, ಇದಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಆರೋಗ್ಯಾಧಿಕಾರಿಗಳೂ ವರದಿ ನೀಡುತ್ತಿದ್ದಾರೆ. ಈ ಮಾಹಿತಿ ಬಿಬಿಎಂಪಿಯ ಪಿಎಚ್‌ಇಐಸಿ ಆ್ಯಪ್‌ನಲ್ಲಿ ದಾಖಲಾಗಲಿದೆ ಎಂದರು.

ಏಪ್ರಿಲ್‌ಗೆ ಬಿಡುಗಡೆ: ಪಿಎಚ್‌ಇಐಸಿ ಆ್ಯಪ್‌ ಏಪ್ರಿಲ್‌ ಆರಂಭದಲ್ಲಿ ಬಿಡುಗಡೆ ಆಗಲಿದೆ. ಸಾರ್ವಜನಿಕರು ಆಪ್‌ ಡೌನ್ಲೋಡ್‌ ಮಾಡಿಕೊಂಡು, ತಮ್ಮ ಸುತ್ತಲಿನ ಪ್ರದೇಶದಲ್ಲಿರುವ ರೋಗಗಳ ಬಗ್ಗೆ ಇದರ ಮೂಲಕ ಪಡೆಯಬಹುದು. ಅಲ್ಲದೆ, ಯಾವ ರೀತಿ ಈ ಕಾಯಿಲೆಯಿಂದ ರಕ್ಷಿಸಿಕೊಳ್ಳಬಹುದು ಎನ್ನುವ ಬಗ್ಗೆಯೂ ಆ್ಯಪ್‌ನಲ್ಲಿ ಮಾಹಿತಿ ಸಿಗಲಿದೆ. ಸೋಂಕಿತ ಪ್ರದೇಶದಿಂದ ದೂರ ಇದ್ದು, ಮುನ್ನೆಚ್ಚರಿಕಾ ಕ್ರಮಕೈಗೊಳ್ಳಲು ಆ್ಯಪ್‌ ಸಹಕಾರಿಯಾಗಲಿದ ಎಂದು ಆರೋಗ್ಯಾಧಿಕಾರಿ ವಿಜಯೇಂದ್ರ ಹೇಳಿದರು.

ಹೀಗಿದೆ ಸೋಂಕಿತರ ಆರೈಕೆ: ಕೊರೊನಾ ಸೋಂಕಿತರ ತೀವ್ರ ರೀತಿಯಲ್ಲಿ ಬಳಲುತ್ತಿದ್ದು, ಕ್ಷಣ ಕ್ಷಣಕ್ಕೂ ಆತಂಕದ ವಾತಾವರಣ ಆಸ್ಪತ್ರೆಯಲ್ಲಿದೆ ಎಂಬುದು ಅನೇಕರ ಕಲ್ಪನೆಯಲ್ಲಿದ್ದು, ಇದಕ್ಕೆ ವಿರುದ್ಧವಾದ ಹಾಗೂ ರೋಗಿಗಳಿಗೆ ಅನುಕೂಲಕರ ವಾತಾವರಣ ಸೋಂಕಿತರ ಚಿಕಿತ್ಸಾ ಕೇಂದ್ರದಲ್ಲಿದೆ. ನಗರದ ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲಿಯೇ ನಾಲ್ಕು ಕೊರೊನಾ ಸೋಂಕಿತರಿಗೂ ಚಿಕಿತ್ಸೆ ನೀಡಲಾಗುತ್ತಿದ್ದು, ಯಾವ ರೋಗಿಯ ಸ್ಥಿತಿಯು ತೀರಾ ಗಂಭೀರವಾಗಿಲ್ಲ.

ಎಲ್ಲರೂ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಶೀಘ್ರವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಆಸ್ಪತ್ರೆಯ ಕೊರೊನಾ ಚಿಕಿತ್ಸಾ ಘಟಕದಲ್ಲಿ ಮಹಿಳಾ ಹಾಗೂ ಪುರುಷ ಪ್ರತ್ಯೇಕ ಕೊಠಡಿಗಳಿವೆ. ಜತೆಗೆ ಶಂಕಿತರ ಕೊಠಡಿ ಪ್ರತ್ಯೇಕವಾಗಿದೆ. ಇನ್ನು ಈ ಸೊಂಕಿತರ ಪೈಕಿ ಟೆಕ್ಕಿ ಹೆಂಡತಿ ಹಾಗೂ ಮಗಳಿಗೆ ಯಾವುದೇ ರೋಗ ಲಕ್ಷಣಗಳು ಇಲ್ಲ. ಸಾಮಾನ್ಯರಂತೆ ಇದ್ದು, ವಾರ್ಡ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಇವರಿಗೆ ಆಸ್ಪತ್ರೆಯಲ್ಲಿ ಇತರೆ ರೋಗಿಗಳಿಗೆ ನೀಡುವಂತೆ ಊಟವನ್ನು ನೀಡಲಾಗುತ್ತಿದೆ.

ಉಳಿದಂತೆ 47 ವರ್ಷದ ಟೆಕ್ಕಿಗೆ ಜ್ವರದ ಜತೆಗೆ ಅಧಿಕ ರಕ್ತದೊತ್ತಡ ಹಾಗೂ ಮಧುಮೇಹ ಹೆಚ್ಚಾಗಿದ್ದು, ವೈದ್ಯರು ಚಿಕಿತ್ಸೆ ಬಳಿಕ ಅತೋಟಿಗೆ ಬಂದಿದೆ. ಮತ್ತೂಬ್ಬ 50 ವರ್ಷದ ಟೆಕ್ಕಿಗೆ ಜ್ವರ ಸೇರಿದಂತೆ ಇತರೆ ಸಮಸ್ಯೆ ಇದ್ದು, ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಈ ಎಲ್ಲಾ ಸೋಂಕಿತರಿಗೆ ನಾಲ್ಕು ದಿನದ ಬಳಿಕ ಪರೀಕ್ಷೆ ಮತ್ತೂಮ್ಮೆ ಸೋಂಕು ಪರೀಕ್ಷೆ ಮಾಡಿ ವರದಿ ನೆಗೆಟಿವ್‌ ಬಂದ ನಂತರ ಮನೆಗೆ ಕಳುಹಿಸಲಾಗುತ್ತದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

* ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Instagram provides clues to finding suspect who had been on the run for 9 years

Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್

21-cancer

Bengaluru: ಪ್ರತಿವರ್ಷ 500 ಮಕಳಲ್ಲಿ ಕ್ಯಾನ್ಸರ್‌ ಪತ್ತೆ !

20-metro

Metro: ಮರುಪರಿಷ್ಕರಣೆ: ತಪ್ಪದ ಮೆಟ್ರೋ ದರ ಗೊಂದಲ

19-bng

Bengaluru: 1.84 ಲಕ್ಷ ಬೀದಿ ನಾಯಿಗಳಿಗೆ ಸಂಯುಕ್ತ ಲಸಿಕೆ

18-bng

Bengaluru: ಇಂಧನ, ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.